ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ನಂಬರ್ ಒನ್ ಸ್ಥಾನ ಪಡೆದಿರುವ ಶೋ ಎಂದರೆ ಅದು ನಮ್ಮ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋ. ಬಿಗ್ ಬಾಸ್ ಸೀಸನ್ ಕನ್ನಡ ಸೀಸನ್ 12 ಜಾಲಿವುಡ್ ಮಾಡಿದ ಎಡವಟ್ಟಿನಿಂದ ತಾತ್ಕಾಲಿಕವಾಗಿ ವಿರಾಮ ತೆಗೆದುಕೊಂಡಿದ್ದು ಆದರೆ ಈ ಸಣ್ಣ ವಿರಾಮದೊಂದಿಗೆ ಬಿಗ್ ಬಾಸ್ ಹೊಸ ಹುರುಪಿನಿಂದ ಮರು ಪ್ರಾರಂಭವಾಗಿದೆ. ಬಿಗ್ ಬಾಸ್ ಮನೆಗೆ ಆಗಮಿಸಿದ್ದ ಒಟ್ಟು ಸ್ಪರ್ಧಿಗಳ ಪೈಕಿ ಮೊದಲನೇ ವಾರದಲ್ಲಿ ಅಮಿತ್ ಮತ್ತು ಕರಿಬಸಯ್ಯ ಇಬ್ಬರು ಎಲಿಮಿನೇಟ್ ಆಗಿದ್ದು ಸದ್ಯ 17 ಸ್ಪರ್ಧಿಗಳು ಬಿಗ್ ಬಾಸ್ ನಲ್ಲಿ ಇದ್ದಾರೆ.

17 ಸ್ಪರ್ಧಿಗಳಲ್ಲಿ ತಮ್ಮ ಅತ್ಯಂತ ಡಿಫ್ರೆಂಟ್ ವ್ಯಕ್ತಿತ್ವದ ಮೂಲಕ ಗಮನಸೆಳೆದಿರುವವರು ನೇರ ನುಡಿ ಮೂಲಕ ಹೆಸರುವಾಸಿಯಾಗಿರುವ ಅಶ್ವಿನಿ ಗೌಡ. ಘಟ್ಟಗಿತ್ತಿ ದಿಟ್ಟತನದ ಹೆಣ್ಣು ಮಗಳು ಎಂತಹ ಸಂದರ್ಭದಲ್ಲಿ ಕೂಡ ತನ್ನತನವನ್ನು ಬಿಟ್ಟು ಕೊಡದೆ ತನ್ನ ಆಟವನ್ನು ಆಡುವ ಮೂಲಕ ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.
ತಪ್ಪೇನಿಸಿದ ಕಡೆ, ತಪ್ಪೆಂದು ಸ್ವಲ್ಪ ರಫ್ ಆಗಿ ಹೇಳುವ ಮೂಲಕ ಉಳಿದ ಸ್ಪರ್ಧೆಗಳಿಗೆ ವಿಲನ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಗೌಡ ಬಿಗ್ ಬಾಸ್ ಶೋಗೆ ಕಾಲಿಟ್ಟಾಗಿನಿಂದ ಅವರ ಜೀವನದ ಎಲ್ಲಾ ಕುತೂಹಲಕಾರಿ ಕಥೆಗಳು ಸಂಗತಿಗಳು ಹೊರ ಬರುತ್ತಿವೆ. ಅಶ್ವಿನಿ ರವರ ಮದುವೆ ವಿಚ್ಛೇದನ ಮತ್ತು ಸಿನಿಮಾ ಕ್ಷೇತ್ರಕ್ಕೆ ಪಾದರ್ಪಣ ಹೇಗಾಯಿತು ಹೀಗೆ ಎಲ್ಲಾ ರೀತಿಯ ವಿಷಯಗಳು ಚರ್ಚೆಯಾಗುತ್ತಿವೆ . ಇದೇ ಸಂದರ್ಭದಲ್ಲಿ ಡ್ಯಾನ್ ಕಿಂಗ್ ರಾಜರವರ ಜೊತೆ ಅಶ್ವಿನಿ ಗೌಡರವರ ಹೆಸರು ತಲುಪು ಹಾಕಿಕೊಂಡಿದ್ದ ಸಂಗತಿಯನ್ನು ರಿವಿಲ್ ಮಾಡಿದ್ದಾರೆ.

ಬಿಗ್ ಬಾಸ್ ಗೆ ಕಾಲಿಡುತ್ತಿದ್ದಂತೆಯೇ ಎಲ್ಲಾ ವಿವಾದಗಳು ಒಂದಾದಾರ ಮೇಲೊಂದರಂತೆ, ಪುನಃ ಕಾಣಿಸಿಕೊಳ್ಳುತ್ತಿವೆ ಅಶ್ವಿನಿ ಗೌಡರವರು ರೋಘು ರಾವ್ ಯುಟ್ಯೂಬ್ ಚಾನೆಲ್ ಗೆ ನೀಡಿದ್ದ ಸಂದರ್ಶನ ಒಂದರಲ್ಲಿ ಸ್ವತಃ ಅಶ್ವಿನಿ ಗೌಡರ ಈ ವಿವಾದವನ್ನು ನೆನಪಿಸಿಕೊಂಡಿದ್ದರು. ವಿನೋದ್ ರಾಜ್ ಮತ್ತು ತಮ್ಮ ಹೆಸರು ಹೇಗೆ ತಳುಕು ಹಾಕಿಕೊಂಡಿತ್ತು ಮತ್ತೆ ಅವರಿಬ್ಬರ ಜೊತೆಗಿನ ಫೋಟೋ ಗಳ ಬಗ್ಗೆ ಕೂಡ ಈ ಸಂದರ್ಶನದಲ್ಲಿ ಕ್ಲಾರಿಟಿ ನೀಡಿದ್ದರು.
ಜೊತೆಗೆ ಕೇವಲ 17 ವರ್ಷಕ್ಕೆ ಮದುವೆಯಾದ ಅಶ್ವಿನಿ ರವರು ಕೆಲವು ವರ್ಷಗಳ ನಂತರ ಹೊಂದಾಣಿಕೆಯಾಗದೆ ಪರಸ್ಪರ ಒಪ್ಪಿಗೆ ಮೇರೆಗೆ ಬೇರೆ ಬೇರೆಯಾದರು. ಮಗುವಿಗೆ ಎಂಟು ತಿಂಗಳಾಗಿತ್ತು ಅಂತಹ ಸಂದರ್ಭದಲ್ಲಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದಾಗಿ ಶೇಷಾದ್ರಿಪುರಂನಲ್ಲಿ ಇರುವಂತಹ ಇನ್ಸ್ಟಿಟ್ಯೂಟ್ ನಲ್ಲಿ ಫಿಲಂ ಡೈರೆಕ್ಷನ್ ಕೋರ್ಸ್ಗೆ ಸೇರಿಕೊಂಡರು ಅಲ್ಲಿ 40 ಜನ ಹುಡುಗರು ಇವರೊಬ್ಬರೇ ಮಹಿಳೆ ಹೀಗೆ ಅಲ್ಲಿಂದಲೇ ಅವರ ಸಿನಿಮಾ ಪಯಣ ಪ್ರಾರಂಭವಾಯಿತು. ಇಬ್ಬರು ಬೇರೆಯಾದರೂ ಕೂಡ ಅವರಿಬ್ಬರ ಕುಟುಂಬಕ್ಕೆ ಮಗನೇ ಸೇತುವೆಯಂತಿದ್ದಾನೆ ನಾನು ನನ್ನ ಮಗನನ್ನು ತುಂಬಾ ಪ್ರೀತಿ ಮಾಡುತ್ತೇನೆ ತನಗೆಂತಲೂ ತಂದೆ ಮಗ ಇಬ್ಬರೂ ಕೂಡ ತುಂಬಾ ಒಳ್ಳೆಯ ಸ್ನೇಹಿತರಾಗಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ ನನ್ನ ಮಗನನ್ನು ಸಿನಿಮಾಕ್ಕೆ ಕರೆದಿರುವ ಯಾವುದೇ ರೀತಿಯ ಪ್ರಯತ್ನ ಕೂಡ ನನಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿ ಇರುವವರ ಮೇಲೆ ಒಂದಲ್ಲ ಒಂದು ರೀತಿಯ ವಿವಾದಗಳು ಅಂಟಿಕೊಳ್ಳುತ್ತಾ ಇರುವುದು ಸರ್ವೇಸಾಮಾನ್ಯ ಈ ರೀತಿಯ ವಿವಾದಗಳಲ್ಲಿ ಇವರ ಹೆಸರು ವಿನೋದ್ ರಾಜ್ ಅವರ ಹೆಸರಿನ ಜೊತೆಗೊಂಡಿದ್ದ ವಿವಾದಗಳಲ್ಲಿ ಇದು ಕೂಡ ಒಂದು.
ಅಶ್ವಿನಿ ಗೌಡ ಸಿನಿಮಾ ರಂಗಕ್ಕೆ ಕಾಲಿಡುತ್ತಿದ್ದಂತೆ ವಿವಾದಗಳ ಸಾಲು ಸಾಲಾಗಿ ಸೃಷ್ಟಿಯಾಯಿತು ಅವರ ನಟಿಸಿದ ಮೊದಲನೇ ಸಿನಿಮಾ ಮೂರನೇ ಕ್ಲಾಸ್ ಮಂಜದಲ್ಲಿ ಬೋರ್ಡ್ ಪಾತ್ರವನ್ನು ಮಾಡಿದ್ದರು ಹಲವಾರು ಟೀಕೆಗಳಿಗೆ ವಿವಾದಗಳಿಗೆ ಗುರಿಯಾದರು. ಅಂತಹ ಸಂದರ್ಭದಲ್ಲಿ ಕೂಡ ಅವರ ಕುಟುಂಬ ಅವರ ತಂದೆ ತಾಯಿ ಅವರಿಗೆ ಬೆಂಬಲವನ್ನ ನೀಡಿದ್ದರಂತೆ. ನಟರಾದರೂ ನಟಿಯಾದರೂ ಕೂಡ ಅವರ ಮನೆಯವರ ಬೆಂಬಲವಿದ್ದಾಗ ಮಾತ್ರ ಸಿನಿಮಾ ಕ್ಷೇತ್ರದಲ್ಲಿ ಬೆಳೆಯಲು ಮುಂದುವರಿಯಲು ಸಾಧ್ಯ ಹೀಗಾಗಿ ತನ್ನ ತಂದೆ ತಾಯಿ ಕುಟುಂಬದವರಿಗೆ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.



