ಕನ್ನಡದ ಮೇರು ನಟ ಅನಂತ್ ನಾಗ್ ಅವರಿಗೆ ನಮ್ಮ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿದೆ. ಕೆಲವು ದಿನಗಳ ಹಿಂದೆಯಷ್ಟೇ ಪದ್ಮ ಪ್ರಶಸ್ತಿಗಳ ವಿಜೇತರ ಪಟ್ಟಿ ಬಿಡುಗಡೆ ಆದಾಗ ಅದರಲ್ಲಿ ಅನಂತ್ ನಾಗ್ ಅವರ ಹೆಸರಿತ್ತು, ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದು ಪ್ರಶಸ್ತಿ ಆಗಿರುವ ಪದ್ಮಭೂಷಣ ಪ್ರಶಸ್ತಿಯನ್ನು ಅನಂತ್ ನಾಗ್ ಅವರಿಗೆ ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ, ಅದ್ಭುತ ಕಲಾವಿದ ಅನಂತ್ ನಾಗ್ ಅವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ನಿಜಕ್ಕೂ ಸಂತೋಷ ಪಡಬೇಕಾದ ವಿಷಯ. ಅನಂತ್ ನಾಗ್ ಅವರಿಗೆ ಪ್ರಶಸ್ತಿ ಬಂದ ನಂತರ ಕನ್ನಡದ ಹಲವು ಕಲಾವಿದರು ಅವರಿಗೆ ವಿಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡರು.

ಯಶ್ ಅವರಿಂದ ಹಿಡಿದು, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಎಲ್ಲರೂ ಕೂಡ ಅನಂತ್ ನಾಗ್ ಅವರಿಗೆ ವಿಶ್ ಮಾಡಿ ಪೋಸ್ಟ್ ಮಾಡಿದರು. ಆದರೆ ಕನ್ನಡದ ಸೀನಿಯರ್ ನಟಿಯರಾದ ನಟಿ ಸುಧಾರಾಣಿ ಹಾಗೂ ನಟಿ ಮಾಳವಿಕಾ ಅವಿನಾಶ್ ಇವರಿಬ್ಬರು ಸಹ ನೇರವಾಗಿ ಅನಂತ್ ನಾಗ್ ಅವರನ್ನು ಭೇಟಿ ಮಾಡಿ, ಅವರಿಗೆ ಗೌರವ ಸಲ್ಲಿಸಿ, ಅವರೊಡನೆ ಒಂದಷ್ಟು ಸಮಯ ಕಳೆದಿದ್ದಾರೆ. ಈ ಸುಸಂದರ್ಭದಲ್ಲಿ ಅನಂತ್ ನಾಗ್ ಅವರೊಡನೆ ಕಳೆದ ಸಮಯ ಮತ್ತು ಈ ಹಿಂದೆ ಅವರ ಮಗಳ ಮದುವೆಯಲ್ಲಿ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಅವರೊಡನೆ ಕಳೆದ ಸಮಯವನ್ನು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಸುಧಾರಾಣಿ ಅವರು ಮೆಲುಕು ಹಾಕಿದ್ದಾರೆ. ಅನಂತ್ ನಾಗ್ ಅವರ ಬಗ್ಗೆ ಹೆಚ್ಚು ವಿಚಾರಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

ಆ ಪೋಸ್ಟ್ ನಲ್ಲಿ ಏನು ಬರೆಯಲಾಗಿದೆ ಎಂದು ನೋಡುವುದಾದರೆ.. “1981 ರಲ್ಲಿ, ಅನುಪಮಾ ಸಿನಿಮಾದಲ್ಲಿ ಅನಂತ್ ನಾಗ್ Sir ಜೊತೆ ಬಾಲನಟಿಯಾಗಿ ತೆರೆಹಂಚಿಕೊಂಡಾಗಿನಿಂದ ಇಲ್ಲಿಯವರೆಗೂ ಅವರೊಡನೆ ಒಳ್ಳೇ ಒಡನಾಟ ಇದೆ. ಅವರನ್ನ ಭೇಟಿ ಮಾಡೋಕೆ ಕಾರಣವೇ ಬೇಕಿಲ್ಲ, ಪ್ರತಿ ಸಾರಿ ಭೇಟಿ ಮಾಡಿ ಮಾತನಾಡಿದಾಗ it’ll be a Different Experience. ಕಲಿಯೋದು ಬಹಳ ಇರತ್ತೆ, ಸದಾ ನೆನಪಲ್ಲಿ ಉಳಿಯುವಂಥ ಕ್ಷಣಗಳಾಗಿರತ್ತೆ. ಇತ್ತೀಚೆಗೆ ಅನಂತ್ ನಾಗ್ Sir ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರೋ ವಿಚಾರ ಕೇಳಿ ತುಂಬಾ ಖುಷಿಯಾಯ್ತು. ಅವರು ಪ್ರಶಸ್ತಿ ಸ್ವೀಕರಿಸೋದನ್ನ ಪ್ರತ್ಯಕ್ಷವಾಗಿ ನೋಡೋಕಾಗಲ್ಲ, ಆದರೆ ಅಂಥ ಮೇರು ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯ ಜೊತೆ ಸಮಯ ಕಳೆಯೋ ಅವಕಾಶ ಅವರ ಸ್ವಗೃಹದಲ್ಲೇ ಸಿಗತ್ತೆ ಅಂದ್ರೆ ಬಿಡೋಕಾಗತ್ತಾ? ನಾನು ಮತ್ತು ಮಾಳವಿಕಾ ಅವಿನಾಶ್ ಇಬ್ಬರೂ ಅನಂತ್ ನಾಗ್ Sir ಅವರನ್ನ ಭೇಟಿ ಮಾಡಿ 2 ಗಂಟೆಗಳ ಕಾಲ ಅವರ ಜೊತೆ ಸಮಯ ಕಳೆದ್ವಿ..
ಯಾವಾಗಲೂ ಮಾತಾಡೋ ಹಾಗೆ ಹಲವಾರು ವಿಷಯಗಳ ಬಗ್ಗೆ ಮಾತಾಡಿದ್ರು, ತಿಳ್ಕೊಳ್ಳೋ ವಿಚಾರಗಳು ಬೇಕಾದಷ್ಟಿತ್ತು. ಅವರ ಜೊತೆ ಕೂತು ಅವರ ಮಾತುಗಳನ್ನ ಕೇಳ್ತಿದ್ರೆ ಅವರ Energy ನೋಡಿ ನಮಗೆ Energy ಮತ್ತು Positivity ಬರತ್ತೆ. ಜೊತೆಗೆ ಅವರ ಸುಂದರವಾದ ಕುಟುಂಬ, ಗಾಯತ್ರಿ ಅವರು ಹಾಗೂ ಅವರ ಮಗಳು ಅದಿತಿ. ನನ್ನ ಮಗಳು ನಿಧಿಗೆ, ಅದಿತಿ Role Model ಆಗಿರಬೇಕು ಅಂತ ನಾನು ಯಾವಾಗಲೂ ಹೇಳ್ತಾ ಇದ್ದೆ. ಅದಿತಿ ಮದುವೆಗೆ ಹೋಗಿದ್ದ ನೆನಪುಗಳಿರಬಹುದು ಅಥವಾ ಅವರ ಮನೆಗೆ ಗಣಪತಿ ಹಬ್ಬಕ್ಕೆ ಹೋಗಿದ್ದ ನೆನಪುಗಳು ಇದೆಲ್ಲವನ್ನು ಅವರ ಕುಟುಂಬದ ಜೊತೆ ಕೂತು ಮೆಲುಕು ಹಾಕೋ ಅವಕಾಶ ಸಿಕ್ತು. ಅನಂತ್ ನಾಗ್ Sir ಜೊತೆ ಏಳೆಂಟು ಸಿನಿಮಾಗಳಲ್ಲಿ ನಟಿಸಿ, ಅವರೊಡನೆ ಸಮಯ ಕಳೆದಂಥ ಅನುಭವ, ಅವರಿಂದ ಕಲಿತದ್ದು ಸಾಕಷ್ಟಿದೆ…

ಅದೆಲ್ಲವನ್ನ ಮುಂದೆ ನನ್ನ YouTube Channel ನಲ್ಲಿ ಹಂಚಿಕೊಳ್ತೀನಿ. ಮತ್ತೊಮ್ಮೆ ಅಭಿನಂದನೆಗಳು ಅನಂತ್ ನಾಗ್ Sir. ಇನ್ನಷ್ಟು ಉನ್ನತ ಪ್ರಶಸ್ತಿ, ಪುರಸ್ಕಾರ ಮತ್ತು ಗೌರವ ನಿಮ್ಮನ್ನು ಅರಸಿ ಬರಲಿ. ಕನ್ನಡ ಚಿತ್ರರಂಗಕ್ಕೆ ನೀವು ಸಲ್ಲಿಸಿರುವ ಸೇವೆ ಭಾರತಾದ್ಯಂತ ಪಸರಿಸಲಿ..” ಎಂದು ನಟಿ ಸುಧಾರಾಣಿ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸುಧಾರಾಣಿ ಅವರು, ಮಾಳವಿಕಾ ಅವರು ಹಾಗೂ ಶ್ರುತಿ ಅವರು ಹಲವು ಬಾರಿ ಕನ್ನಡದ ಹಿರಿಯ ಕಲಾವಿದರನ್ನು ಭೇಟಿ ಮಾಡಿ, ಅವರೊಡನೆ ಸಮಯ ಕಳೆಯುವುದನ್ನು ನೋಡಿದ್ದೇವೆ. ಈ ರೀತಿ ಮಾಡಿದರೆ, ಆ ಹಿರಿಯರಿಗೆ ಗೌರವ ಸೂಚಿಸುವುದರ ಜೊತೆಗೆ ನಿಮ್ಮೊಡನೆ ನಾವಿದ್ದೇವೆ ಎಂದು ಭರವಸೆ ತುಂಬಿದ ಹಾಗೂ ಆಗುತ್ತದೆ. ಕನ್ನಡದ ಈ ಕಲಾವಿದೆಯರಿಗೆ ಒಳ್ಳೆಯದಾಗಲಿ. ಈ ಒಳ್ಳೆಯ ಕೆಲಸಗಳು ಇದೇ ರೀತಿ ಮುಂದುವರೆಯಲಿ.



