ಬಿಗ್ ಬಾಸ್ ಶೋ ನ ಈ ಸೀಸನ್ ಸ್ವಾಭಿಮಾನಿಯಾಗಿ ಬಂದಿದ್ದೀನಿ, ಸ್ವಾಭಿಮಾನಿಯಾಗೆ ಇರ್ತೀನಿ ಎಂದು ಅದೇ ರೀತಿ ನಡೆದುಕೊಂಡ ಸ್ಪರ್ಧಿ ಮೋಕ್ಷಿತಾ ಪೈ. ಇವರು ಬಿಗ್ ಬಾಸ್ ಟ್ರೋಫಿಗೆ ಬಹಳ ಹತ್ತಿರ ಬಂದು ಎಲಿಮಿನೇಟ್ ಆದ ಸ್ಪರ್ಧಿ. ಮೋಕ್ಷಿತಾ ಈ ಬಾರಿ ಗೆಲ್ಲಬೇಕು ಎಂದು ಅವರ ಎಲ್ಲಾ ಅಭಿಮಾನಿಗಳು ಅಂದುಕೊಂಡಿದ್ದರು, ಕಳೆದ ವರ್ಷ ಸಂಗೀತ ಶೃಂಗೇರಿ ಅವರು ಗೆಲ್ಲಬೇಕು ಎಂದು ಜನರ ಸಪೋರ್ಟ್ ಇದ್ದ ಹಾಗೆ, ಈ ವರ್ಷ ಮೋಕ್ಷಿತಾ ಗೆಲ್ಲಬೇಕು ಎನ್ನುವ ಆಸೆ ಎಲ್ಲರಿಗೂ ಇತ್ತು. ಆದರೆ ಆಸೆಗಳು ಆಸೆಯಾಗಿಯೇ ಉಳಿದು ಹೋಗಿದೆ. ಮೋಕ್ಷಿತಾ ಅವರು 4ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿ ಹೊರಬಂದರು. ಬಿಗ್ ಬಾಸ್ ಮನೆಯ ಒಳಗಿದ್ದಾಗ ಇವರ ಬಗ್ಗೆ ಕೆಲವು ಆರೋಪ ಕೇಳಿ ಬಂದಿತ್ತು. ಅದೆಲ್ಲದಕ್ಕೂ ಹೊರಗಡೆ ಬಂದ ನಂತರ ಉತ್ತರ ಕೊಟ್ಟಿದ್ದಾರೆ ಮೋಕ್ಷಿತಾ.
ಮೋಕ್ಷಿತಾ ಅವರು ಬಿಗ್ ಬಾಸ್ ಗಿಂತ ಮೊದಲು ಹೆಚ್ಚು ಜನಪ್ರಿಯವಾಗಿದ್ದು ಪಾರು ಧಾರಾವಾಹಿಯ ಮೂಲಕ. ಪಾರು ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು, ಹೆಚ್ಚು ಜನಪ್ರಿಯತೆಯನ್ನು ನೀಡಿತ್ತು. ಈ ಧಾರಾವಾಹಿ ಮುಗಿದ ಕೆಲ ದಿನಕ್ಕೆ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಗೆ ಬಂದರು. ಇವರ ಬಿಗ್ ಬಾಸ್ ಮನೆಯ ಪ್ರಯಾಣದಲ್ಲಿ ಮೋಕ್ಷಿತಾ ಅವರು ಸ್ವಾಭಿಮಾನಿ, ಯಾರ ವಿಷಯಕ್ಕೂ ಹೋಗುವುದಿಲ್ಲ, ಸ್ವಾಭಿಮಾನ ಬಿಟ್ಟುಕೊಡೋ ಮಾತೇ ಇಲ್ಲ ಎಂದು ಇದ್ದವರು. ಅದೇ ರೀತಿ ಕೊನೆಯ ವರೆಗು ಇದ್ದರು. ನೇರವಾಗಿ ಮಾತನಾಡುತ್ತಾ, ತಮ್ಮ ನಿಲುವನ್ನು ತಿಳಿಸುತ್ತಿದ್ದ ಹುಡುಗಿ ಮೋಕ್ಷಿತಾ. ಇದೇ ಕಾರಣಕ್ಕೆ ಜನರಿಗೂ ಬಹಳ ಇಷ್ಟವಾಗಿದ್ದರು. ಬಿಗ್ ಬಾಸ್ ಇಂದ ಮೋಕ್ಷಿತಾ ಅವರ ಫ್ಯಾನ್ ಬೇಸ್ ಇನ್ನು ಹೆಚ್ಚಾಗಿಯೇ ಇದೆ.

ಬಿಗ್ ಬಾಸ್ ಗೆ ಹೋದ ಸ್ಪರ್ಧಿಗಳ ಬಗ್ಗೆ ಕೆಲವೊಮ್ಮೆ ನೆಗಟಿವ್ ಪ್ರಚಾರ ಕೂಡ ಆಗುತ್ತದೆ. ಮೋಕ್ಷಿತಾ ಅವರ ವಿಚಾರದಲ್ಲಿ ಆಗಿದ್ದು ಕೂಡ ಇದೆ. ಮೋಕ್ಷಿತಾ ಅವರ ಹಳೆಯ ಕೇಸ್ ಬಗ್ಗೆ ಸುದ್ದಿಗಳನ್ನು ಹೊರತೆಗೆದು, ಆಕೆಯನ್ನು ಮಕ್ಕಳ ಕಳ್ಳಿ ಎಂದು ಹೇಳಲಾಗಿತ್ತು. ಒಳಗಡೆ ಇದ್ದು ಸ್ವಾಭಿಮಾನಿ ಅಂತಾರೆ, ಮಾಡಿರೋ ಕೆಲಸ ಇಂಥದ್ದು ಎಂದು ಮೋಕ್ಷಿತಾ ಅವರನ್ನು ಹಲವು ಟ್ರೋಲ್ ಪೇಜ್ ಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಟ್ರೋಲ್ ಆದ ವೇಳೆ ಕೆಲವರು ಮೋಕ್ಷಿತಾ ಅವರ ಪರವಾಗಿ ನಿಂತಿದ್ದು ನಿಜ. ಈ ಘಟನೆಗಳಿಂದ ಮೋಕ್ಷಿತಾ ಅವರ ಫ್ಯಾಮಿಲಿಗೆ ಸಹ ಬಹಳ ನೋವಾಗಿದೆ. ಈಗ ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದು, ಈ ಟ್ರೋಲ್ ಗಳಿಗೆ ಉತ್ತರ ನೀಡಿದ್ದಾರೆ. ಮೋಕ್ಷಿತಾ ಅವರು ಈ ಹಳೆಯ ಕೇಸ್ ಬಗ್ಗೆ ಹೇಳಿರುವುದು ಏನು ಎಂದರೆ..
ಬಿಗ್ ಬಾಸ್ ಇಂದ ಹೊರಗಡೆ ಬಂದ ಬಳಿಕ ಸ್ಪರ್ಧಿಗಳು ಇಂಟರ್ವ್ಯೂ ಗಳಲ್ಲಿ ಹಾಗೂ ಇನ್ನಿತರ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗುತ್ತಾರೆ. ಬಿಡುವಿಲ್ಲದೆ ಅವುಗಳಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹಾಗೆ ಸಂದರ್ಶನಗಳಿಗೆ ಹೋದಾಗ ಅನೇಕ ವಿಚಾರಗಳ ಬಗ್ಗೆ ಪ್ರಶ್ನೆ ಕೇಳುವುದು ಕಾಮನ್. ಅದೇ ರೀತಿ ಮೋಕ್ಷಿತಾ ಅವರಿಗೆ ಒಂದು ಸಂದರ್ಶನದಲ್ಲಿ ಮಕ್ಕಳ ಕಳ್ಳಿ ಅನ್ನೋ ಆರೋಪದ ಬಗ್ಗೆ ಪ್ರತಿಕ್ರಿಯೆ ಕೊಡುವುದಕ್ಕೆ ಕೇಳಿದ್ದು ಆ ವಿಷಯದ ಬಗ್ಗೆ ಮೋಕ್ಷಿತಾ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಏನು ಎಂದು ನೋಡುವುದಾದರೆ.. “ಆ ವಿಷಯಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಜೀವನದಲ್ಲಿ ಆ ಕೇಸ್ ಒಂದು ಮುಗಿದು ಹೋದ ಅಧ್ಯಾಯ ಅಷ್ಟೇ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಒಂದಲ್ಲ ಒಂದು ಕಾರಣಕ್ಕೆ ತಾವು ಮಾಡದೆ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ..

ನನ್ನ ಜೀವನದಲ್ಲೂ ಅದೇ ರೀತಿ ನಡೆದು ಹೋದ ಘಟನೆ ಇದು. ಇನ್ನೊಬ್ಬ ವ್ಯಕ್ತಿಯ ಹಾಳು ಮಾಡುವಂಥ ಕೆಲಸ ಮಾಡುವುದಕ್ಕಿಂತ ಮೊದಲು ನೂರು ಸಾರಿ ಯೋಚನೆ ಮಾಡಬೇಕು..” ಎಂದು ಹೇಳಿದ್ದಾರೆ ಮೋಕ್ಷಿತಾ. ಈ ಮೂಲಕ ತಮ್ಮ ಬಗ್ಗೆ ಬಂದ ಆರೋಪದ ಬಗ್ಗೆ ಮೋಕ್ಷಿತಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಷಯಗಳು ವೈರಲ್ ಆಗುತ್ತಿದ್ದ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಸಂಗೀತ ಶೃಂಗೇರಿ ಸಹ ಮೋಕ್ಷಿತಾ ಪರವಾಗಿ ಬ್ಯಾಟಿಂಗ್ ಮಾಡಿದ್ದರು, ಒಳಗಡೆ ಇದ್ದು ಚೆನ್ನಾಗಿ ಆಡುತ್ತಿದ್ದಾರೆ ಎನ್ನುವ ವೇಳೆ ಇಂಥ ಸುದ್ದಿಗಳೆಲ್ಲಾ ವೈರಲ್ ಆಗುತ್ತದೆ, ಈ ರೀತಿ ಆದಾಗ ನಾವು ಇದೆಲ್ಲಾ ಬೇಕು ಎಂದೇ ನಡೆಯುತ್ತಿದೆಯಾ ಎನ್ನುವುದನ್ನು ವಿಚಾರ ಮಾಡಬೇಕು. ಇಂಥ ರೂಮರ್ ಗಳನ್ನು ನಂಬುವುದಕ್ಕೆ ಹೋಗಬಾರದು ಎಂದು ಸಂಗೀತ ಶೃಂಗೇರಿ ಮೋಕ್ಷಿತಾ ಅವರ ಪರವಾಗಿ ನಿಂತಿದ್ದಾರೆ.
ಇನ್ನು ಬಿಗ್ ಬಾಸ್ ಫಿನಾಲೆ ವರೆಗು ತಲುಪಿದ್ದ ಮೋಕ್ಷಿತಾ, ಈಗ ಹೆಚ್ಚಿನ ಸಮಯವನ್ನು ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದಾರೆ. ಬೇರೆ ಸ್ಪರ್ಧಿಗಳು ಪಾರ್ಟಿ ಮಾಡಿ ಎಂಜಾಯ್ ಮಾಡುತ್ತಿದ್ದಾರೆ. ಆದರೆ ಮೋಕ್ಷಿತಾ ಅವರು ಆ ರೀತಿ ಇಲ್ಲ. ಮನೆಯಲ್ಲಿ ಸರಳವಾಗಿ ತಂದೆ ತಾಯಿ ತಮ್ಮ ಹಾಗೂ ಕುಟುಂಬದ ಜೊತೆಗೆ ಕೇಕ್ ಕಟ್ ಮಾಡಿ, ತಮ್ಮ ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಇವರಿಗೆ ಕುಟುಂಬವೇ ಎಲ್ಲಾ. ಇನ್ನು 4ನೇ ಸ್ಥಾನಕ್ಕೆ ತಲುಪಿದ್ದಕ್ಕೆ ಸಿಕ್ಕಿರುವ 2 ಲಕ್ಷ ರೂಪಾಯಿ ಪ್ರೈಜ್ ಮನಿಯನ್ನು ತಮ್ಮನ ಹೆಸರಿನಲ್ಲಿ ಅಂಗವಿಕಲರ ಆಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಈ ಹುಡುಗಿಗೆ ಎಷ್ಟು ಒಳ್ಳೆಯ ಗುಣ ಇದೆ ಎನ್ನುವುದು ಗೊತ್ತಾಗುತ್ತಿದೆ. ಮೋಕ್ಷಿತಾ ಅವರು ನಿಜಕ್ಕೂ ಚಿನ್ನದಂಥ ಗುಣ ಇರುವ ಹುಡುಗಿಯೇ ಸರಿ..

ಹಾಗೆಯೇ ಇವರ ತಮ್ಮನ ಆರೋಗ್ಯವನ್ನು ನೋಡಿಕೊಳ್ಳುವ ಸಲುವಾಗಿ ಹಣದ ಅವಶ್ಯಕತೆ ಇರುವ ಕಾರಣ, ಮುಂದೆ ಬರುವ ಯಾವುದೇ ಅವಕಾಶವನ್ನು ರಿಜೆಕ್ಟ್ ಮಾಡುವುದಿಲ್ಲ ಎಂದು ನಿರ್ಧರಿಸಿದ್ದಾರಂತೆ ಮೋಕ್ಷಿತಾ. ಅವಕಾಶ ಸಿಕ್ಕರೆ ಸಿನಿಮಾಗಳಲ್ಲಿ ಸಹ ನಟಿಸಬೇಕು ಎನ್ನುವುದು ಇವರ ಆಸೆ. ಕಿರುತೆರೆಯಲ್ಲಿ ಮೊದಲು ನಟಿಸಿದ ಕಾರಣ ಕಿರುತೆರೆಯಲ್ಲಿ ಇನ್ನು ಒಳ್ಳೆಯ ಪ್ರಾಜೆಕ್ಟ್ ಗಳಲ್ಲಿ ನಟಿಸಬೇಕು, ಒಳ್ಳೆಯ ಪಾತ್ರಗಳಲ್ಲಿ ಅಭಿನಯಿಸಬೇಕು ಎನ್ನುವ ಆಸೆ ಇವರಿಗೆ. ಬಿಗ್ ಬಾಸ್ ಶೋ ನಲ್ಲಿ ಮೊದಲ ಸ್ಥಾನಕ್ಕೆ ಬಂದು ಗೆಲ್ಲುವುದಕ್ಕೆ ಸಾಧ್ಯ ಆಗದೇ ಹೋದರು ಸಹ ಮೋಕ್ಷಿತಾ ಅವರು ಕೋಟ್ಯಾಂತರ ಜನರ ಮನಸ್ಸನ್ನು ಈಗಾಗಲೇ ಗೆದ್ದಿದ್ದಾರೆ. ಅದಕ್ಕಿಂತ ದೊಡ್ಡ ಗೆಲುವು ಇನ್ನೇನಿದೆ ಹೇಳಿ