ಕನ್ನಡ ಕಿರುತೆರೆಯಲ್ಲಿ ಹೊಸ ಕ್ರೇಜ್ ಸೃಷ್ಟಿಸಿದ ನಾಯಕರಲ್ಲಿ ಕಿರಣ್ ರಾಜ್ ಸಹ ಒಬ್ಬರು. ಕನ್ನಡತಿ ಧಾರಾವಾಹಿ ಬರುತ್ತಿದ್ದ ವೇಳೆ, ಇವರ ಹರ್ಷ ಪಾತ್ರಕ್ಕೆ ಎಷ್ಟು ಕ್ರೇಜ್ ಇತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಹರ್ಷನ ಮೇಲೆ ಎಲ್ಲಾ ಹುಡುಗಿಯರಿಗೂ ಕ್ರಶ್ ಇತ್ತು. ತಮಗೆ ಹರ್ಷನಂಥ ಬಾಯ್ ಫ್ರೆಂಡ್ ಬೇಕು ಎಂದು ಬಯಸುತ್ತಿದ್ದರು. ಕಿರಣ್ ರಾಜ್ ಅವರ ಕೆರಿಯರ್ ನ ಮೇಜರ್ ಹೈಲೈಟ್ ಅಂದ್ರೆ ಕನ್ನಡತಿ ಧಾರಾವಾಹಿ ಅಂತ ಹೇಳಬಹುದು. ಅವರಿಗೆ ದೊಡ್ಡ ಮಟ್ಟದಲ್ಲಿ ಜನರ ಪ್ರೀತಿಯನ್ನ ತಂದುಕೊಟ್ಟ ಧಾರಾವಾಹಿ ಕನ್ನಡತಿ. ಈ ಧಾರಾವಾಹಿ ನಂತರ ದೊಡ್ಡ ಗ್ಯಾಪ್, ಬ್ರೇಕ್ ಪಡೆದಿರುವ ಹರ್ಷ ಅವರು ಈಗ ಕರ್ಣ ಧಾರಾವಾಹಿ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ನಿನ್ನೆಯಿಂದ ಈ ಧಾರವಾಹಿ ಪ್ರಸಾರ ಅಗಬೇಕಿತ್ತು. ಆದರೆ ಕರ್ಣ ಧಾರಾವಾಹಿಗೆ ತಡೆಯಾಜ್ಞೆ ತಂದಿದೆ ಮತ್ತೊಂದು ಧಾರಾವಾಹಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬಂದ ಆಲ್ ಟೈಮ್ ಬೆಸ್ಟ್ ಹಾಗೂ ಫೇವರೆಟ್ ಧಾರಾವಾಹಿಗಳ ಸಾಲಿಗೆ ಸೇರೋದು ಕನ್ನಡತಿ ಧಾರಾವಾಹಿ. ಭುವಿ ಅಲಿಯಾಸ್ ಭುವನೇಶ್ವರಿ ಪಾತ್ರದಲ್ಲಿ ರಂಜನಿ ರಾಘವನ್ ಅವರು, ಅಮ್ಮಮ್ಮ ಪಾತ್ರದಲ್ಲಿ ಚಿತ್ಕಾಳಾ ಬಿರಾದಾರ್ ಅವರು, ಹರ್ಷ ಆಗಿ ಕಿರಣ್ ರಾಜ್ ಅವರು. ಈ ಮೂವರ ಅಭಿನಯ, ಆ ಕಥೆ ಸಾಗುತ್ತಿದ್ದ ರೀತಿ ಎಲ್ಲವೂ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಒಳ್ಳೆಯ ಟಿಆರ್ಪಿ ರೇಟಿಂಗ್ ತಂದುಕೊಡುವುದು ಮಾತ್ರವಲ್ಲ, ಜನಪ್ರಿಯತೆಯಲ್ಲಿ ಜನರ ಪ್ರೀತಿ ಗಳಿಸುವಲ್ಲಿ ಕೂಡ ಅಷ್ಟೇ ಮುಂದಿತ್ತು. ಹರ್ಷ ಪಾತ್ರದ ವೈಖರಿ, ಆ ಸ್ಟೈಲ್ ಎಲ್ಲವೂ ಬಿಂದಾಸ್. ಹೀರೋ ಆಗಿಯೇ ಕಿರಣ್ ರಾಜ್ ಇದ್ರು ಎಂದು ಹೇಳಿದರು ತಪ್ಪಲ್ಲ. ಹೀಗೆ ಹಲವು ಕಾರಣಕ್ಕೆ ಕನ್ನಡತಿ ಧಾರವಾಹಿ ಜನರ ಮನಸ್ಸಲ್ಲಿ ಇವತ್ತಿಗೂ ಅಚ್ಚಳಿಯದೇ ಉಳಿದಿದೆ.
ಕನ್ನಡತಿ ಬಳಿಕ ಕಿರಣ್ ರಾಜ್ ಅವರು ಸಿನಿಮಾಗಳಲ್ಲಿ ಕೂಡ ನಟಿಸಿದರು. ಸಿನಿಮಾ ಇಂದ ಒಳ್ಳೆಯ ಹೆಸರು ಸಿಕ್ಕರೂ ಸಹ, ಕಿರಣ್ ರಾಜ್ ಅವರ ಫ್ಯಾನ್ಸ್ ಕಾಯುತ್ತಾ ಇದ್ದದ್ದು, ಅವರ ಸೀರಿಯಲ್ ಕಂಬ್ಯಾಕ್ ಗಾಗಿ. ಕಿರಣ್ ರಾಜ್ ಅವರು ಜೀಕನ್ನಡ ವಾಹಿನಿಯ ಕರ್ಣ ಧಾರಾವಾಹಿಯ ಮೂಲಕ ಕಂಬ್ಯಾಕ್ ಮಾಡುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ಶ್ರುತಿ ನಾಯ್ಡು ಅವರ ಪ್ರೊಡಕ್ಷನ್ ವತಿಯಿಂದ ಮೂಡಿಬರುತ್ತಿರುವ ಧಾರಾವಾಹಿ ಆಗಿದೆ. ಹಾಗಾಗಿ ಧಾರಾವಾಹಿಯ ಬಗ್ಗೆ ಇರುವ ನಿರೀಕ್ಷೆ ಕೂಡ ಜಾಸ್ತಿಯೇ ಇದೆ. ಇನ್ನು ಕಿರಣ್ ರಾಜ್ ಅವರು ಈ ಧಾರಾವಾಹಿಯ ಡಾಕ್ಟರ್ ಕರ್ಣ ಆಗಿ ಕಾಣಿಸಿಕೊಳ್ಳಲಿದ್ದಾರೆ. ನಾಗಾಭರಣ ಅವರು ಕಿರಣ್ ರಾಜ್ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳು ಎಂದರೆ ಅದು ಮಹಿಳೆಯ ಪಾತ್ರದ ಮೇಲೆ ಕೇಂದ್ರಿತವಾಗಿರುತ್ತದೆ. ಧಾರಾವಾಹಿಯ ಹೆಸರು ಕೂಡ ಮಹಿಳೆಗೆ ಹೋಲುವ ಹಾಗೆ ಇರುತ್ತದೆ.

ಪುರುಷ ಪ್ರಧಾನ ಧಾರಾವಾಹಿಗಳು ಬರುವುದು ತುಂಬಾ ಕಡಿಮೆ. ಇದೀಗ ಕರ್ಣ ಧಾರಾವಾಹಿಯ ಮೂಲಕ ಈ ಟ್ರೆಂಡ್ ಚೇಂಜ್ ಆಗುತ್ತಿದೆ. ಧಾರಾವಾಹಿಯ ಟೈಟಲ್ ನಾಯಕನ ಹೆಸರಿನಲ್ಲಿದೆ. ಇನ್ನು ಈ ಟೀಸರ್ ನೋಡಿದಾಗ ಗೊತ್ತಾಗಿದ್ದು, ಕರ್ಣ ಸ್ವಾರ್ಥವಿಲ್ಲದ ಒಳ್ಳೆಯ ಮನಸ್ಸಿನ ಹುಡುಗ. ಆದರೆ ಮನೆಯಲ್ಲಿ ಕರ್ಣನ ತಂದೆ ಮಗನನ್ನು ಮನೆಗೆ ಸೇರಿದವನು ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿ ಎಲ್ಲರು ಕೂಡ ಕರ್ಣನನ್ನು ಮನೆಕೆಲಸದವನ ಹಾಗೆ ಕಾಣುತ್ತಾರೆ. ಆದರೆ ಇದೆಲ್ಲವನ್ನು ನಗುತ್ತಲೇ ಸ್ವೀಕರಿಸುವ ಹುಡುಗ ಕರ್ಣ, ತನ್ನ ಫ್ಯಾಮಿಲಿಯನ್ನು ಬಿಟ್ಟುಕೊಡುವುದಿಲ್ಲ.. ಡಾಕ್ಟರ್ ಆಗಿ ಹೆಸರು ಮಾಡಿರುವ ಕರ್ಣನಿಗೆ, ಫ್ಯಾಮಿಲಿನೇ ಇಲ್ಲ, ತನಗೆ ಅವಾರ್ಡ್ ಬಂದಾಗ, ಆ ಅವಾರ್ಡ್ ಅನ್ನು ಮನೆಯವರು ಅರ್ಪಿಸುವುದಾಗಿ ಹೇಳುತ್ತಾನೆ. ನಾಯಕನಿಗೆ ಪ್ರಾಮುಖ್ಯತೆ ಇರುವ ಈ ಪಾತ್ರ ಕಿರಣ್ ರಾಜ್ ಅವರಿಗೆ ಚೆನ್ನಾಗಿ ಒಪ್ಪುತ್ತದೆ ಅಂತಿದ್ದಾರೆ ಅಭಿಮಾನಿಗಳು.
ಕಿರಣ್ ರಾಜ್ ಅವರಿಗೆ ಇಬ್ಬರು ನಾಯಕಿಯರು ಈ ಧಾರಾವಾಹಿಯಲ್ಲಿ ನಟಿಸುತ್ತಾರೆ ಎನ್ನಲಾಗಿತ್ತು. ಭವ್ಯ ಗೌಡ ಮತ್ತು ನಮ್ರತಾ ಗೌಡ. ಇವರಿಬ್ಬರು ಕೂಡ ಬಿಗ್ ಬಾಸ್ ಇಂದ ಫೇಮಸ್ ಆದವರು. ಭವ್ಯ ಗೌಡ ನಿಧಿ ಪಾತ್ರದಲ್ಲಿ, ನಮ್ರತಾ ಗೌಡ ನಿತ್ಯ ಪಾತ್ರದಲ್ಲಿ. ಇಬ್ಬರೂ ಅಕ್ಕ ತಂಗಿಯಾಗಿ ನಟಿಸುತ್ತಾರೆ ಎನ್ನಲಾಗಿತ್ತು. ಇಬ್ಬರ ಪಾತ್ರದ ಪ್ರೊಮೋಗಳು ಕೂಡ ಜನರಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿತ್ತು. ಇನ್ನೇನು ನಿನ್ನೆ ಇಂದಲೇ ಧಾರಾವಾಹಿ ಶುರುಗಾಗಬೇಕಿತ್ತು, ಆದರೆ ಲಾಂಚ್ ಆಗಬೇಕಿದ್ದ ದಿನವೇ ಕರ್ಣ ಧಾರಾವಾಹಿ ಲಾಂಚ್ ಆಗಿಲ್ಲ, ಪ್ರಸಾರ ಆಗುವ ದಿನ ಮುಂದಕ್ಕೆ ಹೋಗಿದೆ. ಇದರಿಂದ ಅಭಿಮಾನಿಗಳಿಗೆ ಬಹಳ ಬೇಸರ ಆಗಿದೆ. ನಿನ್ನೆ ಒಂದು ವಿಡಿಯೋ ಮಾಡಿ ಕಿರಣ್ ರಾಜ್ ಅವರು ಎಲ್ಲರಿಗೂ ಕ್ಷಮೆ ಕೇಳಿದ್ದಾರೆ. ಆದರೆ ಇಲ್ಲಿ ಸಮಸ್ಯೆ ಆಗಿರುವುದು ನಾಯಕಿ ಭವ್ಯ ಗೌಡ ಅವರಿಂದ ಎನ್ನಲಾಗಿದೆ.

ಹೌದು, ಭವ್ಯ ಗೌಡ ಅವರು ಈ ಧಾರಾವಾಹಿಯ ನಾಯಕಿ. ಇವರು ಬಿಗ್ ಬಾಸ್ ಸ್ಪರ್ಧಿಯಾಗಿದ್ದರು, ಆ ಶೋ ಬಳಿಕ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಭವ್ಯ ಗೌಡ ಅವರು ನಟಿಸಬೇಕಿತ್ತು. ಆದರೆ ಅದು ಆಗಲಿಲ್ಲ. ಆ ವಾಹಿನಿಯ ಜೊತೆಗೆ ಭವ್ಯ ಗೌಡ ಅವರ ಅಗ್ರಿಮೆಂಟ್ ಇರುತ್ತದೆ, ಅದರಲ್ಲಿ ಕೆಲವು ಕಂಡೀಶನ್ ಗಳು ಕೋಡ್ಸ್ ಇರುತ್ತದೆ. ಅದು ಮುಗಿಯದೇ ಹೋದರೆ ಮತ್ತೊಂದು ವಾಹಿನಿಗೆ ಇವರು ಕೆಲಸ ಮಾಡುವ ಹಾಗಿಲ್ಲ. ಆದರೆ ಭವ್ಯ ಗೌಡ ಈಗ ಬೇರೆ ವಾಹಿನಿಯಲ್ಲಿ ಕೆಲಸ ಮಾಡಿರುವುದಕ್ಕೆ ಕೋರ್ಟ್ ಇಂದ ತಡೆಯಾಜ್ಞೆ ಬಂದಿದೆ. ಇತ್ತ ಜೀಕನ್ನಡ ವಾಹಿನಿ ಭವ್ಯ ಗೌಡ ಇದ್ದ ಪ್ರೊಮೋಗಳು ಫೋಟೋಗಳು ಎಲ್ಲವನ್ನು ಸಹ ಸೋಷಿಯಲ್ ಮೀಡಿಯಾ ಇಂದ ಡಿಲೀಟ್ ಮಾಡಿದ್ದಾರೆ. ಇನ್ನು ಭವ್ಯ ಗೌಡ ಕೂಡ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ ಇಂದ ಕರ್ಣ ಅಪ್ಡೇಟ್ ಗಳನ್ನು ಡಿಲೀಟ್ ಮಾಡಿದ್ದಾರೆ.
ಜೀಕನ್ನಡ ಇವರನ್ನೇ ನಾಯಕಿಯಾಗಿ ಮುಂದುವರೆಸಿಕೊಂಡು ಹೋಗುತ್ತಾ? ಅಥವಾ ಹೊಸ ನಾಯಕಿಯನ್ನು ಕರೆತರುತ್ತಾ ಎಂದು ಕಾದು ನೋಡಬೇಕಿದೆ. ನಿರ್ಮಾಪಕಿಯಾದ ಶ್ರುತಿ ನಾಯ್ಡು ಅವರಿಗೆ ಇದರಿಂದ ಬಹಳ ನಷ್ಟ ಆಗಿದೆ. ಹಾಗಾಗಿ ಇದೆಲ್ಲವೂ ಯಾವ ರೀತಿ ಸರಿ ಹೋಗುತ್ತದೆ? ಕರ್ಣ ಯಾವಾಗ ವಾಪಸ್ ಬರುತ್ತಾನೆ ಎಂದು ಕಾದು ನೋಡಬೇಕಿದೆ. ಕಿರಣ್ ರಾಜ್ ಅವರ ಫ್ಯಾನ್ಸ್ ಗೆ ಇದರಿಂದ ಬಹಳ ಬೇಸರ ಅಂತೂ ಆಗಿದ್ದು, ಭವ್ಯ ಗೌಡ ಇಂದ ಧಾರಾವಾಹಿಗೆ ತಡೆಯಾಜ್ಞೆ ಬಂದಿದೆ.



