ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋ ಆಗಿರುವ ಕಿಚ್ಚ ಸುದೀಪ್ ಅವರು ನಮ್ಮೆಲ್ಲರ ಫೇವರೆಟ್. ಕಿಚ್ಚನ ಸಿನಿಮಾಗಳು, ಅವರು ನಿರೂಪಣೆ ಮಾಡುವ ಶೋ ಅಂದ್ರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಸುದೀಪ್ ಅವರು ಎಲ್ಲರಿಗೂ ಅಷ್ಟು ಅಚ್ಚುಮೆಚ್ಚು. ಕಿಚ್ಚ 2 ದಶಕದಿಂದ ಚಿತ್ರರಂಗದಲ್ಲಿದ್ದಾರೆ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಡೀ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲಿ ಮತ್ತು ಹೊರ ದೇಶಗಳಲ್ಲಿ ಕೂಡ ಸುದೀಪ್ ಅವರಿಗೆ ಅಭಿಮಾನಿ ಬಳಗ ಇದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿರುವವರು ನಟ ಸುದೀಪ್. ಸುದೀಪ್ ಅವರು ಮಾತ್ರವಲ್ಲ ಅವರ ಕುಟುಂಬದಲ್ಲಿ ಸುದೀಪ್ ಅವರ ಮಗಳು ಸಹ ತಂದೆಯ ಹಾಗೆ ಮೀಡಿಯಾದಲ್ಲಿ ಎಲ್ಲರ ಎದುರು ಧೈರ್ಯವಾಗಿ ಮಾತನಾಡುವ ಹುಡುಗಿ. ತಂದೆಯ ಹಾಗೆ ಸಾನ್ವಿ ಅವರಿಗೆ ಸಹ ಜನಪ್ರಿಯತೆ ಇದೆ.

ಸಾನ್ವಿ ಸುದೀಪ್ ಹೈದರಾಬಾದ್ ನಲ್ಲಿ ಸಿನಿಮಾಗೆ ಸಂಬಂಧಿಸಿದ ಕಲಿಕೆಯನ್ನೇ ಸ್ಟಡಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಾನ್ವಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡೋದು ಪಕ್ಕಾ ಎನ್ನುವ ಮಾತೊಂದು ಕೇಳಿಬಂದಿತ್ತು. ಈಗಾಗಲೇ ಸಿಂಗರ್ ಆಗಿ ಕೆಲವು ಬಾರಿ ಸಾನ್ವಿ ಸುದೀಪ್ ಅವರು ಹಾಡಿದ್ದಾರೆ. ಸುದೀಪ್ ಅವರ ಸಹೋದರಿಯ ಮಗ ಸಂಚಿತ್ ಸಂಜೀವ್ ಅವರ ಜಿಮ್ಮಿ ಸಿನಿಮಾದ ಫಸ್ಟ್ ಟೀಸರ್ ಗೆ ಹಾಡಿದ್ದು ಸಾನ್ವಿ ಸುದೀಪ್ ಅವರೇ. ಹಲವು ಬಾರಿ ತಂದೆಯ ಜೊತೆಯಲ್ಲಿ ಸಾನ್ವಿ ಹಾಡಿದ್ದಿದೆ. ಇನ್ನು ಇತ್ತೀಚೆಗೆ ಜೀಕನ್ನಡ ವಾಹಿನಿಯ ಸರಿಗಮಪ ವೇದಿಕೆಯ ಮೇಲೆ ತಂದೆಗಾಗಿ ಪರ್ಫಾರ್ಮ್ ಮಾಡಿದ್ದರು. ಸಾನ್ವಿ ಸುದೀಪ್ ಹಲವು ಸಾರಿ ಸೋಷಿಯಲ್ ಮೀಡಿಯಾದಲ್ಲಿ ತಾವು ಹಾಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಸಾನ್ವಿ ಧ್ವನಿಗೆ ಅಭಿಮಾನಿಗಳಿಂದ ಮೆಚ್ಚುಗೆ ಕೂಡ ವ್ಯಕ್ತವಾಗಿದೆ.

ಸಾನ್ವಿ ಸಿಂಗರ್ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎನ್ನುವ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆದರೆ ಸಾನ್ವಿ ಅವರು ನಟಿಯಾಗಿ ಚಿತ್ರರಂಗಕ್ಕೆ ಬರಬಹುದು ಎನ್ನುವ ಮುನ್ಸೂಚನೆ ನೀಡಿದ್ದಾರೆ. ಇತ್ತೀಚೆಗೆ ಸಾನ್ವಿ ಅವರು ಒಂದು ಪಾಡ್ ಕಾಸ್ಟ್ ನಲ್ಲಿ ಪಾಲ್ಗೊಂಡಿದ್ದಾರೆ. ಜಿನಲ್ ಮೋದಿ ಎನ್ನುವವರ ಪಾಡ್ ಕಾಸ್ಟ್ ಇಂಟರ್ವ್ಯೂ ನಲ್ಲಿ ಸಾನ್ವಿ ಸುದೀಪ್ ಭಾಗಿಯಾಗಿದ್ದು ಅನೇಕ ವಿಚಾರಗಳ ಬಗ್ಗೆ ಈ ಶೋನಲ್ಲಿ ಮಾತನಾಡಿದ್ದಾರೆ. ಚಿತ್ರರಂಗದ ಬಗ್ಗೆ ತಮ್ಮ ತಂದೆಯ ಬಗ್ಗೆ ಸಹ ಬಹಳಷ್ಟು ಮಾತುಗಳನ್ನಾಡಿದ್ದು, ಅದೆಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಂಕರ್ ಜಿನಲ್, ರಾಕಿಂಗ್ ಸ್ಟಾರ್ ಯಶ್ ಅವರ ಬಗ್ಗೆ ಸಾನ್ವಿಗೆ ಪ್ರಶ್ನೆ ಕೇಳಿದ್ದಾರೆ. ಯಶ್ ಅವರನ್ನು ಭೇಟಿ ಮಾಡಿದ್ದೀರಾ ಎಂದು ಕೇಳಿದ್ದಕ್ಕೆ ಸಾನ್ವಿ ಉತ್ತರ ಕೊಟ್ಟಿದ್ದಾರೆ..
“ಯಶ್ ಅವರು ಬಹಳ ಒಳ್ಳೆಯ ನಟ. ಅವರಿಗೆ ತಮ್ಮನ್ನು ತಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ಳಬೇಕು ಎನ್ನುವುದು ಗೊತ್ತಿದೆ. ಕೆಜಿಎಫ್ ಇಂದ ಟಾಕ್ಸಿಕ್ ಸಿನಿಮಾ ನಡುವೆ ತುಂಬಾ ಗ್ಯಾಪ್ ಇದ್ದರೂ ಅಭಿಮಾನಿಗಳಿಗೋಸ್ಕರ ಏನು ಮಾಡಬೇಕು ಎಂದು ಅವರಿಗೆ ಗೊತ್ತಿದೆ..” ಎಂದಿದ್ದಾರೆ. ನಂತರ ಆ ಆಂಕರ್ ಯಶ್ ಅವರ ಮೇಲೆ ನಿಮಗೆ ಕ್ರಶ್ ಇತ್ತಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟ ಸಾನ್ವಿ, “ತಂದೆಯ ಫ್ರೆಂಡ್ ಮೇಲೆ ಹೇಗೆ ಕ್ರಶ್ ಆಗುತ್ತೆ? ಅವರು ನನ್ನ ಬರ್ತ್ ಡೇ ಗೆ ಬರ್ತಾ ಇದ್ರು ಅವರ ಜೊತೆಗೆ ನಾನು ಆಟ ಆಡಿದ್ದೀನಿ. ನನಗೆ ಅವರ ಮೇಲೆ ಕ್ರಶ್ ಇಲ್ಲ. ಅಲ್ಲು ಅರ್ಜುನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಮೇಲೆ ಮಾತ್ರ ನನಗೆ ಕ್ರಶ್ ಇರೋದು..” ಎಂದು ಹೇಳಿದ್ದಾರೆ. ಸಾನ್ವಿಯ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಇದಷ್ಟೇ ಅಲ್ಲದೇ ಇನ್ನು ಅನೇಕ ವಿಚಾರಗಳ ಬಗ್ಗೆ ಸಾನ್ವಿ ಸುದೀಪ್ ಮಾತನಾಡಿದ್ದು, ಸಲ್ಮಾನ್ ಖಾನ್ ಅವರ ಜೊತೆಗೆ ಸಮಯ ಕಳೆದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ದಬಾಂಗ್ 3 ಸಿನಿಮಾದಲ್ಲಿ ಸುದೀಪ್ ಅವರು ನಟಿಸಿದ್ದಾರೆ. ಆ ಸಿನಿಮಾ ಇಂದ ಸುದೀಪ್ ಅವರಿಗೆ ಸಲ್ಮಾನ್ ಖಾನ್ ಅವರ ಜೊತೆಗೆ ಒಳ್ಳೆಯ ಸ್ನೇಹವಿದೆ. ಸಲ್ಮಾನ್ ಖಾನ್ ಅವರಿಗೂ ಸುದೀಪ್ ಅವರನ್ನು ಕಂಡರೆ ಪ್ರೀತಿ, ಗೌರವ ಎಲ್ಲವೂ ಇದೆ. ಎಲ್ಲರೂ ಹೀಗೆ ಒಳ್ಳೆಯ ಫ್ರೆಂಡ್ಸ್ ಆಗಿರುವ ಕಾರಣ, ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ನಲ್ಲಿ ಸಾನ್ವಿ ಅವರು 3 ದಿವಸ ಇದ್ದರಂತೆ. ಸುದೀಪ್ ಅವರ ಫ್ಯಾಮಿಲಿ ಸಲ್ಮಾನ್ ಖಾನ್ ಅವರ ಫಾರ್ಮ್ ಹೌಸ್ ನಲ್ಲಿ ಮೂರು ದಿವಸ ಕಾಲ ಕಳೆದಿದ್ದರು. ತಮ್ಮ ಜೀವನದ ಅತ್ಯಮೂಲ್ಯವಾದ ಕ್ಷಣಗಳಲ್ಲಿ ಇದು ಪ್ರಮುಖವಾದದ್ದು ಇಂದು ಹೇಳಿದ್ದಾರೆ ಸಾನ್ವಿ.
ಇನ್ನು ತಂದೆ ಸುದೀಪ್ ಅವರ ಮ್ಯಾಕ್ಸ್ ಸಿನಿಮಾದಲ್ಲಿ ಕೂಡ ಸಾನ್ವಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಹಾಗಾಗಿ ಸಾನ್ವಿ ಅವರು ತಂದೆಯ ಹಾಗೆ ಚಿತ್ರರಂಗಕ್ಕೆ ಬರುತ್ತಾರಾ ಎನ್ನುವ ಪ್ರಶ್ನೆಯೊಂದು ಜನರಲ್ಲಿದೆ, ಅದಕ್ಕೆಲ್ಲಾ ಉತ್ತರ ಕೊಟ್ಟಿರುವ ಸಾನ್ವಿ ಅವರು, ಚಿತ್ರರಂಗಕ್ಕೆ ಬರುವುದಾಗಿ ತಿಳಿಸಿದ್ದಾರೆ. ತಂದೆಯ ಹಾಗೆ ಸಾನ್ವಿ ಕೂಡ ಖಡಕ್ ಪಾತ್ರದಲ್ಲಿ ಬರುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಸಾನ್ವಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ತಂದೆಯ ಜೊತೆಗಿರುವ ಹಲವು ಫೋಟೋಸ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ, ಹಲವು ವಿಚಾರಗಳ ಬಗ್ಗೆ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದಲೂ ಸಾನ್ವಿ ಅನೇಕ ಬಾರಿ ಚರ್ಚೆಗೆ ಒಳಪಟ್ಟಿದ್ದಾರೆ.

ಇತ್ತೀಚೆಗೆ ಸಾನ್ವಿ ಸುದೀಪ್ ತಮ್ಮ ಅಜ್ಜಿಯ ಸೀರೆ ಧರಿಸಿಕೊಂಡು, ಫೋಟೋಸ್ ಶೇರ್ ಮಾಡಿದ್ದರು. ಕಿಚ್ಚನ ಮಗಳನ್ನು ನೋಡಿದ ನೆಟ್ಟಿಗರು ಬಹಳ ಸಂತೋಷಪಟ್ಟಿದ್ದರು. ಇನ್ನು ಸುದೀಪ್ ಅವರಿಗೆ ಮಗಳು ಸಾನ್ವಿ ಅಂದ್ರೆ ಬಹಳ ಪ್ರೀತಿ. ಹಲವು ಬಾರಿ ಮಗಳ ಬಗ್ಗೆ ಸಂತೋಷದಿಂದ, ಹೆಮ್ಮೆಯಿಂದ ಮಾತನಾಡಿದ್ದಾರೆ. ಮನೆಯಲ್ಲಿ ತಾವು ಮತ್ತು ಮಗಳು ಒಂದು ಟೀಮ್ ಎಂದು ಕೂಡ ಹೇಳಿದ್ದರು. ಸರಿಗಮಪ ವೇದಿಕೆಯಲ್ಲಿ ಸುದೀಪ್ ಅವರಿಗೆ ಸರ್ಪ್ರೈಸ್ ನೀಡಿ ಸಾನ್ವಿ ಅವರು ವೇದಿಕೆಯ ಮೇಲೆ ಹಾಡೊಂದನ್ನು ಹಾಡಿದಾಗ, ಕಿಚ್ಚ ಭಾವುಕರಾಗಿ ಹೆಮ್ಮೆಯಿಂದ ಕಣ್ಣೀರು ಹಾಕಿದ್ದರು. ಮಗಳ ಮೇಲೆ ಸುದೀಪ್ ಅವರಿಗೆ ಬಹಳ ಪ್ರೀತಿ ಇದೆ. ಸಾನ್ವಿ ಅವರನ್ನು ಯಾವ ರೀತಿ ಚಿತ್ರರಂಗಕ್ಕೆ ಪರಿಚಯ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.



