ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಕಾಮಿಡಿ ಟೈಮ್ ಶೋ ಒಂದು ರೀತಿಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ ಶೋ ಎಂದು ಹೇಳಿದ ತಪ್ಪಲ್ಲ. ಗಣೇಶ್ ಅವರು ಇಡೀ ಕರ್ನಾಟಕದ ಜನತೆಯನ್ನೇ ತಲುಪಿದ್ದು ಈ ಶೋ ಇಂದ. ಗಣೇಶ್ ಅವರು ಇಂದು ಗೋಲ್ಡನ್ ಸ್ಟೇಟ್ ಆಗಿ ಹೆಸರು ಮಾಡಿ, ಕನ್ನಡದ ಟಾಪ್ ಹೀರೋಗಳಲ್ಲಿ ಒಬ್ಬರು ಎಂದು ಹೆಸರು ಮಾಡಿದ್ದಾರೆ. ಇವರೊಡನೆ ಇನ್ನೊಬ್ಬರು ನಟಿ ಕೂಡ ನಿರೂಪಣೆ ಮಾಡುತ್ತಿದ್ದರು. ಆ ನಟಿ ಸಹ ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಾಗೆಯೇ ಕಿರುತೆರೆಯಲ್ಲಿ ಸಹ ಸ್ಟಾರ್ ಆಗಿದ್ದಾರೆ..ಈ ನಟಿ ಯಾರು? ಇಂದು ಇವರು ಯಾವ ಧಾರಾವಾಹಿಯಲ್ಲಿ ನಟಿಸಿದ್ದಾರೆ? ಯಾವೆಲ್ಲಾ ಶೋಗಳನ್ನು ಮಾಡಿದ್ದಾರೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ… ನೀವು ಕೂಡ ಇವರನ್ನು ಹಲವು ಶೋಗಳಲ್ಲಿ ನೋಡಿ ಇಷ್ಟ ಪಟ್ಟಿರುತ್ತೀರಿ..

ಗಣೇಶ್ ಅವರು ಕೆಲವು ಧಾರಾವಾಹಿಗಳಲ್ಲಿ ನಟಿಸಿದ ಬಳಿಕ ಅವರಿಗೆ ಸಿಕ್ಕಿದ್ದು ಕಾಮಿಡಿ ಟೈಮ್ ಶೋ ನಿರೂಪಣೆ ಮಾಡುವ ಅವಕಾಶ. ಅವರೊಡನೆ ನಿರೂಪಣೆ ಮಾಡಿದ್ದು ನಟಿ ಸುಜಾತ ಅವರು. ನೆನಪಿದ್ದಾರ ಈ ನಟಿ? ಸುಜಾತ ಅವರು ಸಹ ಗಣೇಶ್ ಅವರೊಡನೆ ಬಹಳ ಚೆನ್ನಾಗಿ ನಿರೂಪಣೆ ಮಾಡುತ್ತಿದ್ದರು. ಸುಜಾತ ಅವರು ಈ ಶೋಗೆ ಬಂದಿದ್ದು ಹೇಗೆ ಎಂದರೆ.. ಸುಜಾತ ಅವರಿಗೆ ಚಿತ್ರರಂಗದಲ್ಲಿ ಯಾರ ಪರಿಚಯ ಕೂಡ ಇರಲಿಲ್ಲ. ಸುಜಾತ ಅವರ ಫ್ರೆಂಡ್ ಒಬ್ಬರು ಧಾರಾವಾಹಿಯಲ್ಲಿ ನಟಿಸಿದ್ದರು, ಅವರ ಪೇಮೆಂಟ್ ಚೆಕ್ ಅನ್ನು ಕಲೆಕ್ಟ್ ಮಾಡಲು ಹೋಗಿದ್ದ ಸುಜಾತ ಅವರಿಗೆ, ಅಲ್ಲಿದ್ದವರು ಆಡಿಷನ್ ನಲ್ಲಿ ಪಾಲ್ಗೊಳ್ಳಲು ಹೇಳಿದರಂತೆ, ಆಗ ಸುಜಾತ ಅವರು ನಾನು ಬಂದಿದ್ದು ಬೇರೆ ಕೆಲಸಕ್ಕೆ ಎಂದು ಹೇಳಿದರಂತೆ.
ಅದರಲ್ಲೇನು ಟ್ರೈ ಮಾಡಿ ಎಂದಾಗ, ಸುಜಾತ ಅವರಿಗೆ ಮೇಕಪ್ ಹಾಕಿ, ಕ್ಯಾಮೆರಾ ಮುಂದೆ ನಿಲ್ಲಿಸಿ, 5 ನಿಮಿಷ ನಿಮ್ಮ ಬಗ್ಗೆ ಮಾತನಾಡಿ ಹೇಳಿದರಂತೆ. ಆಗ ಮಾತನಾಡುವುದಕ್ಕೆ ಶುರು ಮಾಡಿದ ಸುಜಾತ ಅವರು ಹಿಂದಿರುಗಿ ನೋಡಿದ್ದೆ ಇಲ್ಲ. ಸುಜಾತ ಅವರು ನಂತರ ಒಂದು ಲೈವ್ ಶೋ ಮಾಡಿದರು, ಬಳಿಕ ಅವರಿಗೆ ಕಾಮಿಡಿ ಟೈಮ್ ಶೋ ನಿರೂಪಣೆ ಮಾಡುವ ಅವಕಾಶ ಸಿಕ್ಕಿತು. ಈ ಶೋನಲ್ಲಿ ಗಣೇಶ್ ಅವರೊಡನೆ ನಿರೂಪಣೆ ಮಾಡಿ, ಇವರು ಕೂಡ ಬಹಳ ಫೇಮಸ್ ಆಗಿದ್ದರು. ಸುಜಾತ ಅವರು ಹೇಳುವ ಹಾಗೆ, ಇಂಡಸ್ಟ್ರಿ ಯಲ್ಲಿ ಅವರ ಬೆಸ್ಟ್ ಫ್ರೆಂಡ್ ಗಣೇಶ್ ಅವರು. ಇವತ್ತಿಗೂ ಗಣೇಶ್ ಅವರೊಡನೆ, ಫ್ರೆಂಡ್ಶಿಪ್ ಅದೇ ರೀತಿ ಇದೆಯಂತೆ. ಕೆಲ ವರ್ಷಗಳ ಹಿಂದೆ ಗಣೇಶ್ ಅವರ ಮಗಳ ಜೊತೆಗೆ ನಿಮ್ಮ ತಂದೆ ಬಹಳ ಕಷ್ಟ ಪಟ್ಟಿದ್ದಾರೆ ಎಂದು ಹೇಳಿದಾಗ, ಗಣೇಶ್ ಅವರ ಮಗಳು ಕಣ್ಣೀರು ಹಾಕಿದ್ದರಂತೆ.

ಈ ರೀತಿ ಗಣೇಶ್ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಸುಜಾತ ಅವರು. ಇನ್ನು ಸುಜಾತ ಅವರಿಗೆ ಕಾಮಿಡಿ ಟೈಮ್ ನಂತರ ನಾಕು ತಂತಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು, ಆ ಧಾರಾವಾಹಿಯಿಂದ ಹೆಸರು ಮತ್ತು ಜನಪ್ರಿಯತೆ ಸಿಕ್ಕಿತ್ತು, ಈ ಧಾರಾವಾಹಿ ಬರೋಬ್ಬರಿ 7 ವರ್ಷಗಳ ಕಾಲ ಪ್ರಸಾರ ಆಗಿತ್ತಂತೆ. ಹಾಗೆಯೇ ಮನೆಯೊಂದು ಮೂರು ಬಾಗಿಲು, ಬದುಕು, ಮುಗಿಲು ಸೇರಿದಂತೆ ಲೆಕ್ಕವಿಲ್ಲದಷ್ಟು ಧಾರಾವಾಹಿಗಳಲ್ಲಿ ಸುಜಾತ ಅವರು ನಟಿಸಿದ್ದಾರೆ. ಕಿರುತೆರೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಇದೆ. ಸುಜಾತ ಅವರು ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಸಹ ನಟಿಸಿದ್ದಾರೆ. ಇನ್ನು ಹಲವು ರೇಡಿಯೋ ಸ್ಟೇಶನ್ ಗಳಲ್ಲಿ ರೇಡಿಯೋ ಜಾಕಿ ಆಗಿ ಕೂಡ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಸುಜಾತ ಅವರು ಈಗಲೂ ಕಿರುತೆರೆಯಲ್ಲಿ ಆಕ್ಟಿವ್.
ಪ್ರಸ್ತುತ ಇವರು ಕಲರ್ಸ್ ಕನ್ನಡ ವಾಹಿನಿಯ ಭಾರ್ಗವಿ ಎಲ್.ಎಲ್.ಬಿ ಮತ್ತು ಅವನು ಮತ್ತು ಶ್ರಾವಣಿ ಈ ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಸುಜಾತ ಅವರು ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿದ್ದರು, ಆ ಧಾರಾವಾಹಿ ಇವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತು. ಹೀರೋ ಗೆ ಅತ್ತೆ ಪಾತ್ರದಲ್ಲಿ ನಟಿಸಿದ್ದರು, ಅವರಿಬ್ಬರ ಕಾಂಬಿನೇಷನ್ ಜನರಿಗೆ ಬಹಳ ಇಷ್ಟವಾಗಿತ್ತು. ಈ ಕಾರಣಕ್ಕೆ ಅವನು ಮತ್ತೆ ಶ್ರಾವಣಿ ಧಾರಾವಾಹಿಯ ರೀಪ್ಲೇಸ್ಮೆಂಟ್ ಕ್ಯಾರೆಕ್ಟರ್ ಗೆ ಸುಜಾತ ಅವರನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಇನ್ನು ಸುಜಾತ ಅವರು ಭಾರ್ಗವಿ ಎಲ್.ಎಲ್.ಬಿ ಧಾರಾವಾಹಿಯಲ್ಲಿ ಸಹ ಒಳ್ಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡು ಕೂಡ ನೆಗಟಿವ್ ಆದ ಪಾತ್ರಗಳಾಗಿದೆ. ಸುಜಾತ ಅವರು ನೆಗಟಿವ್ ಮತ್ತು ಪಾಸಿಟಿವ್ ಎರಡು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನು ಸುಜಾತ ಅವರು ಹಲವು ಶೋಗಳನ್ನು ನಿರೂಪಣೆ ಮಾಡಿದ್ದಾರೆ, ಹಲವು ಲೈವ್ ಶೋಗಳನ್ನು ನಡೆಸಿಕೊಟ್ಟಿದ್ದಾರೆ, ಬಹಳಷ್ಟು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಸೂಪರ್ ಹಿಟ್ ರೇಡಿಯೋ ಕಾರ್ಯಕ್ರಮಗಳನ್ನು ಸಹ ನಿರೂಪಣೆ ಮಾಡಿದ್ದಾರೆ. ಸುಜಾತ ಅವರು ತಮ್ಮ ಪತಿ ಅಕ್ಷಯ್ ಅವರ ಜೊತೆಗೆ ಕಲರ್ಸ್ ಕನ್ನಡದ ರಾಜ ರಾಣಿ ಶೋನಲ್ಲಿ ಸಹ ಪಾರ್ಟಿಸಿಪೇಟ್ ಮಾಡಿದ್ದರು. ಇವರು ಕಿರುತೆರೆಗೆ ಬಂದು 25 ವರ್ಷ ಕಳೆದಿದೆ. ಇವರು ಪಟಪಟ ಎಂದು ಅರಳು ಹುರಿದ ಹಾಗೆ ಮಾತನಾಡುವ ಕಾರಣಕ್ಕೆ ಜನರಿಗೆ ಹೆಚ್ಚು ಇಷ್ಟವಾಗಿತ್ತು. ಇದಷ್ಟೇ ಅಲ್ಲ ಸುಜಾತ ಅವರು ಬಿಗ್ ಬಾಸ್ ಶೋ ಗೆ ಸಹ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ರಾಧಾ ರಮಣ ಧಾರಾವಾಹಿ ಮುಗಿಯುತ್ತಿದ್ದ ಹಾಗೆಯೇ ಇವರು ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟಿದ್ದರು.
ಆದರೆ ಬಿಗ್ ಬಾಸ್ ಶೋನಲ್ಲಿ ಇವರು ಹೆಚ್ಚು ಸಮಯ ಇರಲಿಲ್ಲ. ಕೆಲವೇ ವಾರಗಳಲ್ಲಿ ಕಾಲಿಗೆ ಇಂಜೂರಿ ಆದ ಕಾರಣ ಎಲಿಮಿನೇಟ್ ಆಗಿ ಹೊರಗಡೆ ಬರಬೇಕಾಯಿತು. ಆದರೆ ಸುಜಾತ ಅವರು ಬಹಳ ಇಷ್ಟಪಟ್ಟು ವೀಕೆಂಡ್ ಎಪಿಸೋಡ್ ಗಳ ವೇಳೆಗೆ ಹೋಗುತ್ತಿದ್ದರಂತೆ. ಈಗ ಇವರು ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರಿಗೆ ಅವಕಾಶಗಳು ಕಡಿಮೆ ಆಗಿಲ್ಲ. ಅಂದು ಕಾಮಿಡಿ ಟೈಮ್ ಶೋನಲ್ಲಿ ಶುರುವಾದ ಇವರ ಕೆರಿಯರ್, ಇಂದು ಕಿರುತೆರೆಯಲ್ಲಿ ಇಷ್ಟು ದೊಡ್ಡದಾಗಿ ಹೆಸರು ಮಾಡಿ, ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಮುಂದೆ ಇವರಿಗೆ ಇನ್ನು ಒಳ್ಳೆಯ ಅವಕಾಶಗಳು ಸಿಗಲಿ ಎಂದು ನಾವು ಸಹ ವಿಶ್ ಮಾಡೋಣ..



