ಡೆವಿಲ್ ಚಿತ್ರದ ಎರಡನೇ ಹಾಡು ಒಂದೇ ಒಂದು ಸಲ ಸೋತು ಬಿಡು ನೀ ಒಂದೇ ಒಂದು ಮಾತು ಆಡದೆ ಹಾಡಿನಲ್ಲಿ ಹೊಸ ಫೀಲ್ ಇದೆ. ಡ್ಯುಯೆಟ್ ಹಾಡು ಇದಾಗಿದೆ. ಆದರೆ, ಇಲ್ಲಿ ಮಾಸ್ ಎನರ್ಜಿ ಇದೆ. ದರ್ಶನ್ ಫ್ಯಾನ್ಸ್ ಇಷ್ಟಪಡೋ ರೀತಿನೇ ಇದೆ. ರಚನಾ ರೈ ಮೈಮಾಟಕ್ಕೆ ಫಿದಾ ಆಗಿದ್ದಾರೆ ಪಡ್ಡೆ ಹೈಕಳು.
ದರ್ಶನ್ ಹಾಗೂ ರಚನಾ ರೈ ನಟನೆಯ ‘ಡೆವಿಲ್’ ಚಿತ್ರದ 2ನೇ ಹಾಡು ‘ಒಂದೇ ಒಂದು ಸಲ’ ಎಂದು ಶುರುವಾಗುವ ರೊಮ್ಯಾಂಟಿಕ್ ಸಾಂಗ್ ಸಖತ್ ಸದ್ದು ಮಾಡ್ತಿದೆ , ಅಭಿಮಾನಿಗಳ ಮನಗೆದ್ದಿದೆ, ವಿದೇಶದ ಸುಂದರ ಲೊಕೇಶನ್ಗಳಲ್ಲಿ ಸಾಂಗ್ ಶೂಟ್ ಮಾಡಿದ್ದಾರೆ. ದರ್ಶನ್ ಜೊತೆ ನಾಯಕಿ ರಚನಾ ರೈ ಸಿಕ್ಕಾಪಟ್ಟೆ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ.

‘ಡೆವಿಲ್’ ಸಿನಿಮಾ ಡಿಸೆಂಬರ್ 12ಕ್ಕ ತೆರೆಗೆ ಬರಲಿದೆ. ಸದ್ಯ ಸಾಂಗ್ ಹಿಟ್ ಆಗಿರುವ ಬಗ್ಗೆ ನಟಿ ರಚನಾ ರೈ ಟ್ವೀಟ್ ಮಾಡಿದ್ದಾರೆ. ದರ್ಶನ್ ಅವರೊಟ್ಟಿಗೆ ನಟಿಸಿದ, ಹಾಡಿನಲ್ಲಿ ಕಾಣಿಸಿಕೊಂಡ ಬಗ್ಗೆ ನೆನಪಿಸಿಕೊಂಡಿದ್ದಾರೆ. “ದರ್ಶನ್ ಸರ್, ನಿಮ್ಮಂತಹ ಸೂಪರ್ಸ್ಟಾರ್ ಜೊತೆ ಕೆಲಸ ಮಾಡುವುದು ಸಂಪೂರ್ಣ ಆಶೀರ್ವಾದ. ಸೆಟ್ನಲ್ಲಿ ಪ್ರತಿ ದಿನವೂ ನಿಮ್ಮ ಗಮನ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆಯನ್ನು ನೋಡುವುದು ಒಂದು ಪಾಠವಾಗಿತ್ತು. ಕ್ಯಾಮೆರಾ ಹಿಂದೆ ನಿಮ್ಮ ಕಾಳಜಿ, ಪ್ರೀತಿ ಮರೆಯೋಕೆ ಸಾಧ್ಯವಿಲ್ಲ. ನಾನು ಕಂಡ ಅದ್ಭುತ ವ್ಯಕ್ತಿಗಳಲ್ಲಿ ನೀವು ಒಬ್ಬರು. ನನ್ನ ಅದ್ಭುತ ಸಹನಟರಾಗಿದ್ದಕ್ಕೆ ಧನ್ಯವಾದಗಳು” ಎಂದು ರಚನಾ ರೈ ಬರೆದುಕೊಂಡಿದ್ದಾರೆ.

Sir,Working alongside a SuperStar like you has been an absolute blessings Every single day on set has been a lesson watching you focus, your patience and your unwavering dedication, effortless way of bringing a scene to lifeBeyond camera it’s your warmth and kindness that leave the biggest mark .Truly one of the kindest souls I’ve ever come across.Thank you for not just being an amazing co-star and even more incredible humanYou’re the Best !! The beach shoot was no joke ,scorching sun, sunburns tan and tricky weather and those long shoots at beach …hahaha but who knew surviving sun,sand,wild weather could look this amazing This song truly holds my heart To the amazing crew,your hard work dedication and passion behind the camera made this song magical #TheDevil To everyone that’s been sending love to our song…We’re grateful for all the love &support that you’re sending our way feeling all the love for our song !Thank you so much I love you all with my whole heart
ಬೀಚ್ ಶೂಟಿಂಗ್ ತಮಾಷೆಯಾಗಿರಲಿಲ್ಲ, ಸುಡುವ ಸೂರ್ಯ, ಬಿಸಿಲಿನ ಬೇಗೆಯ, ಸನ್ ಬರ್ನ್, ಕಠಿಣ ಹವಾಮಾನ ಸತತ ಚಿತ್ರೀಕರಣ. ನಿಜಕ್ಕೂ ನೀವು ಅದ್ಭುತ. ಹಹಹ.. ಆದರೆ ಸೂರ್ಯ, ಮರಳು, ಆ ಹವಾಮಾನದಲ್ಲಿ ಚಿತ್ರೀಕರಿಸಿದ ಹಾಡು ಇಷ್ಟು ಅದ್ಭುತವಾಗಿರುತ್ತದೆ ಎಂದುಕೊಂಡಿರಲಿಲ್ಲ, ನಿಜಕ್ಕೂ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಅದ್ಭುತ ತಂಡಕ್ಕೆ, ನಿಮ್ಮ ಕಠಿಣ ಪರಿಶ್ರಮ ಸಮರ್ಪಣೆ ಮತ್ತು ಕ್ಯಾಮೆರಾದ ಹಿಂದಿನ ಉತ್ಸಾಹ ಈ ಹಾಡನ್ನು ಮಾಂತ್ರಿಕಗೊಳಿಸಿದೆ. ‘ಡೆವಿಲ್’ ಚಿತ್ರದ ನಮ್ಮ ಹಾಡನ್ನು ಮೆಚ್ಚಿಕೊಂಡ ಎಲ್ಲರಿಗೂ ಕೃತಜ್ಞರಾಗಿರುತ್ತೇವೆ” ಎಂದು ರಚನಾ ವಿವರಿಸಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತದ ‘ಒಂದೇ ಒಂದು ಸಲ’ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಹಾಡಿಗೆ ದನಿಯಾಗಿದ್ದಾರೆ. ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಸಂತು ಮಾಸ್ಟರ್ ಸಾಂಗ್ ಕೊರಿಯೋಗ್ರಫಿ, ಸುಧಾಕರ್ ರಾಜ್ ತಮ್ಮ ಕ್ಯಾಮರಾದಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ



