ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಜಾನ್ವಿ ‘ದೇವರ: ಭಾಗ 1’ ನಲ್ಲಿ ಜೂನಿಯರ್ ಎನ್ಟಿಆರ್ ಜೊತೆ ನಟಿಸುವ ಮೂಲಕ ದಕ್ಷಿಣ ಚಿತ್ರರಂಗ ಪ್ರವೇಶಿಸಿದರು. ಪ್ರಸ್ತುತ ರಾಮ್ ಚರಣ್ ನಟನೆಯ ʼಆರ್ಸಿ 16ʼ ಶೂಟಿಂಗ್ಗಾಗಿ ಹೈದರಾಬಾದ್ನಲ್ಲಿದ್ದಾರೆ. ಈ ಸಮಯದಲ್ಲಿ ಜಾನ್ವಿ ಮಧುರಾನಗರದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದರು. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ವಿರಾಮ ತೆಗೆದುಕೊಂಡು, ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು ಮತ್ತು ವಿಶೇಷ ಪೂಜೆಯನ್ನು ಸಹ ಮಾಡಿದರು. ಸದ್ಯ ಜಾನ್ವಿ ಪೂಜೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
#Bollywood star Janhvi Kapoor recently visited Hyderabad’s Sri Anjaneya Swamy Temple in Madhuranagar to perform a special pooja. #JanhviKapoor #Hyderabad #TempleVisit pic.twitter.com/vA79oov2qc
— Glint Insights Media (@GlintInsights) November 7, 2024
ವಿಶೇಷ ಪೂಜೆ
ಗುರುವಾರ ಜಾನ್ವಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತಿರುವುದನ್ನು ಕಾಣಬಹುದು. ಓರ್ವ ಮಹಿಳೆ ಮತ್ತು ಪುಟ್ಟ ಹುಡುಗಿ ಸಹ ಜಾನ್ವಿಯೊಂದಿಗೆ ಕುಳಿತಿರುವುದು ಕಂಡುಬರುತ್ತದೆ. ಹಾಗೆಯೇ ಪುರೋಹಿತರು ಪೂಜೆ ಮತ್ತು ಮಂತ್ರಗಳನ್ನು ಪಠಿಸುತ್ತಿರುವುದನ್ನು ಕಾಣಬಹುದು. ಮಾಹಿತಿ ಪ್ರಕಾರ, ಜಾನ್ವಿ ಸುಮಾರು ಅರ್ಧ ಗಂಟೆ ದೇವಸ್ಥಾನದಲ್ಲಿ ಕುಳಿತು ಪೂಜೆ ನೆರವೇರಿಸಿದರು. ಈ ವೇಳೆ ಬುಚ್ಚಿ ಬಾಬು ಸಾನಾ ಕೂಡ ಅವರೊಂದಿಗೆ ಪೂಜೆ ಮಾಡುತ್ತಿರುವುದು ಕಂಡುಬಂದಿದೆ.
ಭಾಗ 2 ರಲ್ಲಿ ನಟಿಸಲಿರುವ ಜಾನ್ವಿ
ಸಿನಿ ಪ್ರಿಯರಿಗೆ ತಿಳಿದಿರುವಂತೆ ಜಾನ್ವಿ ಇತ್ತೀಚೆಗೆ ‘ದೇವರ ಭಾಗ 1’ ನಲ್ಲಿ ಕಾಣಿಸಿಕೊಂಡರು. ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ಜೂನಿಯರ್ ಎನ್ ಟಿಆರ್ ಜೊತೆ ತೆರೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಜಾನ್ವಿಯ ಪಾತ್ರವು ತುಂಬಾ ಚಿಕ್ಕದಾಗಿದೆ. ವರದಿಗಳ ಪ್ರಕಾರ ಭಾಗ 2 ರಲ್ಲಿ ಸಹ ಜಾನ್ವಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅಲಿ ಖಾನ್, ಪ್ರಕಾಶ್ ರಾಜ್, ಶ್ರೀಕಾಂತ್ ಮೇಕಾ, ಟಾಮ್ ಶೈನ್ ಚಾಕೊ ಮತ್ತು ನಾರಾಯಣ್ ಈ ಚಿತ್ರದಲ್ಲಿ ಇದ್ದಾರೆ. ಚಿತ್ರದಲ್ಲಿ ಜೂನಿಯರ್ ಎನ್ ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯುತ್ತಿದೆ ಶೂಟಿಂಗ್
ದೇವರ ನಂತರ ಜಾನ್ವಿ ಮತ್ತೊಂದು ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಚಿತ್ರದ ಹೆಸರನ್ನು ನಿರ್ಧರಿಸಿಲ್ಲ. ಈ ಕಾರಣಕ್ಕಾಗಿ ಇದನ್ನು ಪ್ರಸ್ತುತ RC16 ಎಂದು ಹೆಸರಿಸಲಾಗಿದೆ. ಈ ಚಿತ್ರದಲ್ಲಿ ರಾಮ್ ಚರಣ್ ಜೊತೆ ನಟಿ ಕಾಣಿಸಿಕೊಳ್ಳಲಿದ್ದಾರೆ. ಈ ಜೋಡಿಯನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಸದ್ಯ ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ.