ಸಿನಿಮಾ ರಂಗ ಅನ್ನುವುದು ಮಾಯಾಲೋಕ. ಅಲ್ಲಿನ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರ ನಡುವೆ ಉತ್ತಮ ಸಂಬಂಧ ಇರುತ್ತದೆ. ಆದರೆ ಕೆಲವೊಮ್ಮೆ ಒಳ್ಳೆಯ ಸಂಬಂಧ ಕೆಲವೊಬ್ಬರನ್ನು ಮುಜುಗರಕ್ಕೆ ತಳ್ಳಿವಂತಹ ಪರಿಸ್ಥಿತಿ ತಂದೊಡ್ಡುತ್ತದೆ. ಸದ್ಯ, ಅಂತಹದ್ದೊಂದು ಘಟನೆ ನಡೆದಿದ್ದು, ಪ್ರಿಯಾಂಕ ಚೋಪ್ರ ಸಹೋದರಿಗೆ ನಿರ್ದೇಶಕನೊಬ್ಬ ಜನರೆದುರೇ ಕಿಸ್ ಮಾಡಿದ್ದು ಈ ವಿಡಿಯೋ ವೈರಲ್ ಆಗಿದೆ.
ತೆಲುಗು ಚಿತ್ರರಂಗದಲ್ಲಿ ನಂದಮೂರಿ ಬಾಲಕೃಷ್ಣ, ಗೋಪಿಚಂದ್ ಮತ್ತು ಸಾಯಿ ಧರಮ್ ತೇಜ್ ಮುಂತಾದ ಕಲಾವಿದರೊಂದಿಗೆ ಕೆಲಸ ಮಾಡಿರುವ ನಿರ್ದೇಶಕ ರವಿ ಕುಮಾರ್ ಚೌಧರಿ ಇತ್ತೀಚೆಗೆ ತಮ್ಮ ಸಿನಿಮಾದ ಪ್ರಚಾರದ ವೇಳೆ ನಟಿಯನ್ನು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ. ರವಿ ಕುಮಾರ್ ಚೌಧರಿ ನಿರ್ದೇಶನದ ರಾಜ್ ತರುಣ್ ಮತ್ತು ಮನ್ನಾರಾ ಚೋಪ್ರಾ ಅಭಿನಯದ ʼತಿರಗಪದರ ಸಾಮಿʼ ರಿಲೀಸ್ ಗೆ ರೆಡಿಯಾಗಿದೆ. ಇತ್ತೀಚೆಗೆ ಸಿನಿಮಾದ ಟೀಸರ್ ಕೂಡ ರಿಲೀಸ್ ಆಗಿದೆ.
ಸಿನಿಮಾದ ಪ್ರಚಾರದ ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರ ಸೋದರ ಸಂಬಂಧಿ ನಟಿ ಮನ್ನಾರಾ ಚೋಪ್ರಾ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿದ್ದಾರೆ. ಪ್ರಚಾರದ ವೇಳೆ ಮಾಧ್ಯಮಗಳ ಮುಂದೆ ಫೋಟೋಗಳಿಗೆ ಪೋಸ್ ಕೊಡುವ ವೇಳೆ ನಿರ್ದೇಶಕರು ನಟಿಯನ್ನು ಆತ್ಮೀಯವಾಗಿ ಹಿಡಿದು, ಇದ್ದಕ್ಕಿದ್ದಂತೆ ಅವರ ಕೆನ್ನೆಗೆ ಮುತ್ತು ಕೊಟ್ಟಿದ್ದಾರೆ. ಇದಕ್ಕೆ ತಕ್ಷಣ ಕಸಿವಿಸಿಗೊಂಡ ನಟಿ ಮನ್ನಾರ ಪ್ರತಿಕ್ರಿಯೆ ನೀಡದೆ ಆಶ್ಚರ್ಯಗೊಂಡು ಸ್ಮೈಲ್ ಕೊಟ್ಟು ಸಮ್ಮುನ್ನಾಗಿದ್ದಾರೆ.
ಈ ಘಟನೆಯ ನಂತರ ನಿರ್ದೇಶಕ ನಟಿಗೆ ಕಿಸ್ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಕೆಂಡಾಮಂಡಲವಾಗಿದ್ದಾರೆ. ಕೆಲವರು, ‘ಇದೊಂದು ಲೈಂಗಿಕ ಕಿರುಕುಳ’ ಎಂದರೆ. ಮತ್ತೆ ಕೆಲವರು, ‘ನಿರ್ದೇಶಕನಿಗೆ ಮಾನ ಮರ್ಯಾದೆ ಇಲ್ಲವೆ. ಮಗಳ ವಯಸ್ಸಿನ ನಟಿಗೆ ಸಾರ್ವಜನಿಕರ ಎದುರು ಮುತ್ತು ಕೊಡುವುದು ಎಷ್ಟು ಸರಿ’ ಎಂದೆಲ್ಲ ಕಮೆಂಟ್ ಹಾಕಿ ನಿರ್ದೇಶಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗುತ್ತಿದೆ.



