ಚಿತ್ರರಂಗದಲ್ಲಿ ಹಲವು ಕಲಾವಿದರು ಎಂಟ್ರಿ ಕೊಡುತ್ತಾರೆ, ಆದರೆ ಎಲ್ಲರಿಗೂ ಕೂಡ ಯಶಸ್ಸು ಸಿಗುವುದಿಲ್ಲ. ಯಶಸ್ಸು ಕೈಹಿಡಿಯಬೇಕು ಎಂದರೆ ಟ್ಯಾಲೆಂಟ್ ಜೊತೆಗೆ ಅದೃಷ್ಟ ಕೂಡ ಇರಬೇಕು. ಇದೇ ಕಾರಣಕ್ಕೆ ಹಲವರಲ್ಲಿ ಬಹಳ ನಟನೆಯ ಸಾಮರ್ಥ್ಯ ಇದ್ದರೂ ಸಹ ಯಶಸ್ಸು ಸಿಗುವುದಿಲ್ಲ. ಹಾಗೆಯೇ ಪಾತ್ರಗಳ ಆಯ್ಕೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಇನ್ನು ಒಂದು ಸಿನಿಮಾ ಅಂತ ಬಂದಾಗ ಅಲ್ಲಿ ಹೀರೋ, ಹೀರೊಯಿನ್ ಅಥವಾ ವಿಲ್ಲನ್ ಈ ಮೂರು ಪಾತ್ರಗಳು ಮಾತ್ರ ಮುಖ್ಯವಲ್ಲ, ಒಂದು ಸಿನಿಮಾದಲ್ಲಿ ಎಷ್ಟೇ ಆಕ್ಷನ್ ಸೀಕ್ವೆನ್ಸ್ ಗಳು ಇದ್ದರೂ, ರೋಮ್ಯಾಂಟಿಕ್ ಹಾಡುಗಳು ಇದ್ದರೂ ಕಾಮಿಡಿ ಇಲ್ಲ ಅಂದ್ರೆ ಬೋರ್ ಆಗಿಬಿಡುತ್ತದೆ..

ಹೌದು, ಹಾಸ್ಯನಟರು ಒಂದು ಸಿನಿಮಾಗೆ ಬಹಳ ಮುಖ್ಯ. ಆದರೆ ಎಲ್ಲಾ ಹಾಸ್ಯನಟರಿಗೂ ಯಶಸ್ಸು ಸಿಗೋದಿಲ್ಲ, ಎಲ್ಲರಿಗು ಅಷ್ಟೊಂದು ಅವಕಾಶಗಳು ಸಿಗೋದಿಲ್ಲ. ಕೆಲವೇ ಕೆಲವರು ಮಾತ್ರ ಹಾಸ್ಯ ನಟರಾಗಿ ಜನರಿಗೆ ತುಂಬಾ ಇಶ್ಟವಾಗುತ್ತಾರೆ. ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಯೋಗಿ ಬಾಬು ಅವರು ಇದೇ ಸಾಲಿಗೆ ಸೇರಿದವರು. ಇವರು ಬಹಳ ಕಷ್ಟಪಟ್ಟು ಬೆಳೆದು, ಇಂದು ಸ್ಟಾರ್ ಕಾಮಿಡಿಯನ್ ಆಗಿದ್ದಾರೆ. ಹಾಲಿವುಡ್ ನಲ್ಲಿ ಕೂಡ ನಟಿಸುತ್ತಿದ್ದಾರೆ ಎನ್ನುವುದು ಆಶ್ಚರ್ಯದ ವಿಚಾರ. ಯೋಗಿ ಬಾಬು ಅವರು ಒಂದು ಸಣ್ಣ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಜರ್ನಿ ಶುರು ಮಾಡಿದರು. ಮುಂದೆ ಇವರು ಅಮೀರ್ ಅವರ ಯೋಗಿ ಸಿನಿಮಾದಲ್ಲಿ ನಟಿಸಿದರು.
ಈ ಸಿನಿಮಾ ಇಂದಲೇ ಯೋಗಿ ಬಾಬು ಎನ್ನುವ ಹೆಸರು ಬಂದಿತು. ಯೋಗಿ ಬಾಬು ಅವರು ಆರಂಭದ ದಿನಗಳಲ್ಲಿ ಒಂದು ಹೊತ್ತಿನ ಊಟಕ್ಕೆ ಕೂಡ ಕಷ್ಟಪಟ್ಟಿದ್ದಾರೆ. ಇವರ ಮುಖ ಮತ್ತು ಕೂದಲನ್ನು ನೋಡಿ ಅನೇಕ ಜನರು ಟೀಕೆ ಮಾಡಿದ್ದು ಇದೆ. ಆದರೆ ಅವರಿಗೆ ಅದೇ ಪ್ಲಸ್ ಪಾಯಿಂಟ್ ಆಯಿತು ಎಂದರೂ ತಪ್ಪಲ್ಲ. ಒಂದೊಂದೇ ಸಿನಿಮಾ ಅವಕಾಷ ಪಡೆದು, ಉತ್ತಮವಾಗಿ ನಟಿಸಿದ ಯೋಗಿ ಬಾಬು ಅವರು, ಸ್ಟಾರ್ ಹೀರೋಗಳ ಸಿನಿಮಾದಲ್ಲಿ ನಟಿಸುವ ಅವಕಾಶವನ್ನು ಸಹ ಪಡೆದರು. ಸೂಪರ್ ಸ್ಟಾರ್ ರಜನಿಕಾಂತ್, ನಟ ಸೂರ್ಯ, ವಿಜಯ್, ಜಯಂ ರವಿ, ಕಾರ್ತಿ ಸೇರಿದಂತೆ ತಮಿಳಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!

ಕಾಮಿಡಿಯನ್ ಆಗಿ ಮಾತ್ರವಲ್ಲದೆ ಹೀರೋ ಆಗಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನಿಷ್ಠ ಎಂದರು ಒಂದು ವರ್ಷಕ್ಕೆ 10 ಸಿನಿಮಾಗಳಲ್ಲಿ ನಟಿಸುತ್ತಾರೆ ಯೋಗಿ ಬಾಬು. ಹೀರೋ ಆಗಿ ನಟಿಸುವುದಕ್ಕೆ ಇವರಿಗೆ ಹೆಚ್ಚು ಆಫರ್ ಗಳು ಇದ್ದರೂ ಸಹ, ವರ್ಷಕ್ಕೆ ಒಂದು ಸಿನಿಮಾದಲ್ಲಿ ಮಾತ್ರ ಹೀರೋ ಆಗಿ ನಟಿಸಿ, ಇನ್ನುಳಿದ ಸಿನಿಮಾಗಳಲ್ಲಿ ಕಾಮಿಡಿಯನ್ ಆಗಿ ಮುಂದುವರೆಯಬೇಕು ಎಂದು ನಿರ್ಧಾರ ಮಾಡಿದ್ದಾರೆ. ಈಗಾಗಲೇ ಇವರು ಹೀರೋ ಆಗಿ ನಟಿಸಿರುವ ಸಿನಿಮಾ ಬಿಡುಗಡೆ ಆಗಿ, ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇನ್ನು ಸಂಭಾವನೆ ವಿಷಯದಲ್ಲಿ ಸಹ ಭಾರಿ ಮೊತ್ತವೆ ಪಡೆಯುತ್ತಾರೆ ಯೋಗಿ ಬಾಬು.
ಕಾಮಿಡಿಯನ್ ಆಗಿ ನಟಿಸುವ ಸಿನಿಮಾಗೆ ದಿನಕ್ಕೆ 10 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರಂತೆ. ಇನ್ನು ಹೀರೋ ಆಗಿ ನಟಿಸುವ ಸಿನಿಮಾಗೆ ನಿರ್ಮಾಪಕರು 3 ರಿಂದ 5 ಕೋಟಿ ಸಂಭಾವನೆ ಕೊಡುವುದಕ್ಕೆ ಕೂಡ ತಯಾರಾಗಿದ್ದಾರಂತೆ. ಈ ರೀತಿಯಲ್ಲಿ ಪ್ರಸ್ತುತ ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ಆಗಿದ್ದಾರೆ. ನಟ ಶಾರುಖ್ ಖಾನ್ ಅವರ ಜೊತೆಗೆ ಕೂಡ ತೆರೆ ಹಂಚಿಕೊಂಡಿದ್ದಾರೆ. ಇನ್ನು ಹಾಲಿವುಡ್ ಸಿನಿಮಾ ಒಂದರಲ್ಲಿ ಕೂಡ ನಟಿಸಿದ್ದಾರೆ. ಒಬ್ಬ ವ್ಯಕ್ತಿ ಬೆಳೆಯುವುದಕ್ಕೆ ಆಕಾರ, ಸೌಂದರ್ಯ ಇದ್ಯಾವುದು ಮುಖ್ಯ ಅಲ್ಲ, ಟ್ಯಾಲೆಂಟ್ ಮತ್ತು ಅದೃಷ್ಟ ಇದ್ದರೆ ಸಾಕು ಎಂದು ಯೋಗಿ ಬಾಬು ಅವರು ತೋರಿಸಿಕೊಟ್ಟಿದ್ದಾರೆ.



