ಕನ್ನಡ ಕಿರುತೆರೆಯ ನಟಿ ರಂಜನಿ ರಾಘವನ್ ಅವರು ಈಗ ಮನರಂಜನಾ ಮಾಧ್ಯಮದ ಹಲವು ಆಯಾಮಗಳಲ್ಲಿ ಪ್ರಯೋಗ ಮಾಡುವುದಕ್ಕೆ ಶುರು ಮಾಡಿದ್ದಾರೆ. ನಟಿಯಾಗಿದ್ದ ಇವರು ಈಗ ನಿರ್ದೇಶಕೀಯಾಗಿದ್ದಾರೆ. ಢಿ ಢಿ ಢಿಕ್ಕಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಈ ಸಿನಿಮಾದ ಪ್ರೊಮೋಷನ್ ಗಳಲ್ಲಿ ಹೆಚ್ಚು ನಿರತರಾಗಿದ್ದಾರೆ ರಂಜನಿ ಅವರು. ರಂಜನಿ ಅವರು ತಮ್ಮ ಕೆರಿಯರ್ ನಲ್ಲಿ ಇನ್ನು ಎತ್ತರಕ್ಕೆ ಬೆಳೆಯುತ್ತಿದ್ದಾರೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಇದರ ಜೊತೆಗೆ ರಂಜನಿ ಅವರು ಇತ್ತೀಚೆಗೆ ತಾವು ಪ್ರೀತಿ ಮಾಡುತ್ತಿರುವ ಹುಡುಗನ ಬಗ್ಗೆ ತಿಳಿಸಿ, ಶೀಘ್ರದಲ್ಲೇ ಮದುವೆ ಆಗುವುದಾಗಿ ಹಿಂಟ್ ಕೂಡ ನೀಡಿದರು. ಇನ್ನು ರಂಜನಿ ಅವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್. ರಂಜನಿ ಅವರೇ ನೀಡಿರುವ ಮಾಹಿತಿ ಇದು..

ರಂಜನಿ ಅವರು ಎಷ್ಟು ಚೆನ್ನಾಗಿ ಕನ್ನಡ ಮಾತಾಡ್ತಾರೆ, ಅವರಿಗೆ ಕನ್ನಡದ ಬಗ್ಗೆ ಎಷ್ಟು ಗೌರವ ಪ್ರೀತಿ ಇದೆ ಎಂದು ನಮಗೆಲ್ಲಾ ಗೊತ್ತೇ ಇದೆ. ಕನ್ನಡತಿ ಧಾರಾವಾಹಿಯ ಮೂಲಕ ರಂಜನಿ ಅವರು ಮನೆಮಾತಾದರು, ಆ ಧಾರಾವಾಹಿಯ ಪ್ರತಿ ಸಂಚಿಕೆಯ ಕೊನೆಯಲ್ಲಿ ಅವರು ಹೇಳಿಕೊಡುತ್ತಿದ್ದ ಕನ್ನಡ ಪಾಠ ಎಲ್ಲರ ಮೆಚ್ಚುಗೆ ಗಳಿಸಿತ್ತು. ಪ್ರತಿದಿನ ಒಂದು ಕನ್ನಡ ಪದದ ಬಗ್ಗೆ ರಂಜನಿ ಅವರು ತಿಳಿಸುತ್ತಿದ್ದರು. ಹಾಗೆಯೇ ಧಾರಾವಾಹಿಯಲ್ಲಿ ಇವರು ಮಾತನಾಡುವ ಸ್ಪಷ್ಟವಾದ ಕನ್ನಡ ಸಹ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಕನ್ನಡದ ಬಗ್ಗೆ ಇರುವ ಪ್ರೀತಿ ಹೇಗಿದೆ ಅಂದ್ರೆ ರಂಜನಿ ಅವರು ಕನ್ನಡದಲ್ಲಿ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಕತೆ ಡಬ್ಬಿ ಮತ್ತು ಸ್ವೈಪ್ ರೈಟ್. ಒಂದು ಕಾದಂಬರಿ, ಒಂದು ಸಣ್ಣ ಕಥೆಗಳ ಪುಸ್ತಕ. ಹೀಗೆ ರಂಜನಿ ರಾಘವನ್ ಅವರಿಗೆ ಕನ್ನಡ ಪ್ರೇಮ ತುಂಬಾ ಇದೆ.
ರಂಜನಿ ಅವರು ಕಿರುತೆರೆಯಲ್ಲಿ ನಟಿಯಾಗಿ ಮಿಂಚಿದರು, ಆಕಾಶ ದೀಪ, ಪುಟ್ಟಗೌರಿ ಮದುವೆ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದರು. ಈ ಮೂರು ಧಾರಾವಾಹಿಗಳು ಕೂಡ ಸೂಪರ್ ಹಿಟ್ ಆದವು, ಇವರ ಅಭಿನಯ ಮತ್ತು ಆ ಕಥೆ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಯಿತು. ಸ್ಯಾಂಡಲ್ ವುಡ್ ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದು ಆಗಿದೆ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಸಿನಿಮಾದಲ್ಲಿ ರಂಜನಿ ರಾಘವನ್ ಅವರು ದಿಗಂತ್ ಅವರಿಗೆ ನಾಯಕಿಯಾಗಿ ನಟಿಸಿದರು. ಈ ಸಿನಿಮಾ ಬಳಿಕ ರಂಜನಿ ಅವರು ಒಂದು ಬ್ರೇಕ್ ಪಡೆದು ಈಗ ತೆರೆ ಮುಂದೆ ಅಲ್ಲದೇ, ತೆರೆ ಹಿಂದೆ ನಿರ್ದೇಶಕಿಯಾಗಿ ಕೆಲಸ ಶುರು ಮಾಡಿದ್ದಾರೆ. ಇವರು ನಿರ್ದೇಶನ ಮಾಡುತ್ತಿರುವ ಸಿನಿಮಾ ಹೆಸರು ಢಿ ಢಿ ಢಿಕ್ಕಿ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಸಿನಿನ ಆಗಿದೆ. ಸಿನಿಮಾ ಮೇಲೆ ಭಾರಿ ನಿರೀಕ್ಷೆ ಕೂಡ ಇದೆ.

ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಅವರು ನಾಯಕನಾಗಿ ನಟಿಸುತ್ತಿದ್ದು, ಗೋಲ್ಡನ್ ಸ್ಟಾರ್ ಗಣೇಶ್ ಅವರ ಮಗ ಢಿ ಢಿ ಢಿಕ್ಕಿ ಸಿನಿಮಾ ಮೂಲಕ ಬಾಲನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾನೆ. ಮೊದಲ ಸಿನಿಮಾಗೆ ಬಹಳ ವಿಶೇಷವಾದ ಕಾನ್ಸೆಪ್ಟ್ ಅನ್ನೇ ಇಟ್ಟುಕೊಂಡಿದ್ದಾರೆ ರಂಜನಿ ಅವರು. ಇವರ ಸಿನಿಮಾಗೆ ಭಾರತ ಚಿತ್ರರಂಗದ ಮಾಂತ್ರಿಕ ಸಂಗೀತ ನಿರ್ದೇಶಕ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ, ಇದು ಎಂಥಾ ಒಳ್ಳೇ ವಿಷಯ ಅಲ್ವಾ… ಇನ್ನು ರಂಜನಿ ಅವರು ವೈಯಕ್ತಿಕ ಜೀವನದಲ್ಲಿ ಕೂಡ ಮುಂದಿನ ಹಂತಕ್ಕೆ ಹೋಗುವುದಕ್ಕೆ ಸಿದ್ಧವಾಗಿದ್ದಾರೆ. ಇತ್ತಿಚೆಗೆ ತಾವು ಪ್ರೀತಿ ಮಾಡುತ್ತಿರುವ ಹುಡುಗನ ಜೊತೆಗಿರುವ ಫೋಟೋ ಶೇರ್ ಮಾಡಿಕೊಂಡಿದ್ದರು. ರಂಜನಿ ಅವರು ಲವ್ ಮ್ಯಾರೇಜ್ ಆಗಲಿದ್ದಾರೆ, ಇವರ ಲವ್ ಸ್ಟೋರಿ ಶುರುವಾಗಿದ್ದು ಹೇಗೆ ಗೊತ್ತಾ? ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ..
ಇತ್ತೀಚೆಗೆ ರಂಜನಿ ರಾಘವನ್ ಅವರು ಆರ್.ಜೆ ರಾಜೇಶ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಸಂದರ್ಶನ ನೀಡಿದ್ದು, ಅದರಲ್ಲಿ ಮಾತನಾಡಿದ್ದಾರೆ. ರಂಜನಿ ಅವರು ಮದುವೆ ಆಗಲಿರುವ ಹುಡುಗನ ಹೆಸರು ಸಾಗರ್. ಇವರಿಬ್ಬರು ಪಿಯುಸಿ ಸಮಯದಿಂದ ಫ್ರೆಂಡ್ಸ್, ಒಂದೇ ಕ್ಲಾಸ್ ನಲ್ಲಿ ಓದಿದವರು, ಒಂದೇ ಏರಿಯಾದಲ್ಲಿ ಬೆಳೆದವರು. ಒಳ್ಳೆ ಫ್ರೆಂಡ್ಸ್ ಆಗಿದ್ದರೂ ಸಹ ತಮ್ಮಿಬ್ಬರ ನಡುವೆ ಫ್ರೆಂಡ್ಶಿಪ್ ಗಿಂತ ಹೆಚ್ಚಿನ ಬಾಂಧವ್ಯ ಇದೆ ಎಂದು ಅನ್ನಿಸಿತ್ತಂತೆ. ಒಂದು ಸಾರಿ ಮೆಸೇಜ್ ನಲ್ಲಿ ಪ್ರೊಪೋಸ್ ಮಾಡಿದ್ದರಂತೆ ಸಾಗರ್, ಅದು ಪ್ರಾಂಕ್ ಮೆಸೇಜ್ ಆಗಿತ್ತು, ಹಾಗಿದ್ದರೂ ಸಹ ರಂಜನಿ ಅವರು ಐ ಲವ್ ಯೂ ಟು ಎಂದೆಲ್ಲ ಮೆಸೇಜ್ ಮಾಡಿದ್ದರಂತೆ. ಆಮೇಲೆ ಇಬ್ಬರು ಸ್ವಲ್ಪ ದೂರದಲ್ಲೇ ಇದ್ದರಂತೆ. ಬಳಿಕ ರಂಜನಿ ಅವರ ಕೆರಿಯರ್ ಶುರುವಾಗಿತ್ತು, ಅವರು ಕೆರಿಯರ್ ನಲ್ಲಿ ಬ್ಯುಸಿ ಆಗಿದ್ದರು.

ನಂತರ ಎಂ.ಬಿ.ಎ ಮಾಡೋ ವೇಳೆ ಮತ್ತೆ ಮಾತಮಾಡುವುದಕ್ಕೆ ಶುರು ಮಾಡಿದ್ದರಂತೆ. ಹೀಗೆ ಏನೇ ನಡೆದರು ಇಬ್ಬರು ಲೈಫ್ ನಲ್ಲಿ ದೂರ ಆಗಲಿಲ್ಲ. ಟಚ್ ನಲ್ಲಿದ್ದರು, ಮನೆಯಲ್ಲಿ ಬೇರೆ ಹುಡುಗನನ್ನು ಹುಡುವುದಕ್ಕೆ ಶುರು ಮಾಡಿದಾಗ, ರಂಜನಿ ಅವರಿಗೆ ಸಾಗರ್ ಅವರನ್ನ ಬಿಟ್ಟು ಬೇರೆಯವರ ಬಗ್ಗೆ ಯೋಚನೆ ಮಾಡುವುದಕ್ಕೆ ಆಗುತ್ತಿರಲಿಲ್ಲವಂತೆ. ಆಗಿನಿಂದ ಇಬ್ಬರು ಪರಸ್ಪರ ಮಾತನಾಡಿಕೊಂಡು, ತಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂದು ಅರ್ಥ ಮಾಡಿಕೊಂಡು, ಡೇಟ್ ಮಾಡುವುದಕ್ಕೆ ಶುರು ಮಾಡಿದರಂತೆ. ಹೆಚ್ಚಿನ ಸಮಯವನ್ನು ಜೊತೆಯಾಗಿ ಕಳೆದ ನಂತರ ರಂಜನಿ ಮತ್ತು ಸಾಗರ್ ಮದುವೆ ಆಗುವುದಕ್ಕೆ ನಿರ್ಧಾರ ಮಾಡಿದ್ದಾರೆ. ಇವರಿಬ್ಬರ ವಿಚಾರ ಮನೆಯವರಿಗೆ ಕೂಡ ಗೊತ್ತಿತ್ತಂತೆ. ಅಂತೂ ಇಂತೂ ರಂಜನಿ ಅವರು ಸಹ ಗುಡ್ ನ್ಯೂಸ್ ನೀಡಿದ್ದಾರೆ, ಶೀಘ್ರದಲ್ಲೇ ಮದುವೆ ಆಗಲಿದ್ದಾರೆ.
ಸಾಗರ್ ಅವರ ಜೊತೆಗಿರುವ ಫೋಟೋವನ್ನು ಇತ್ತೀಚೆಗೆ ಶೇರ್ ಮಾಡಿದ್ದರು. ಸಧ್ಯಕ್ಕೆ ರಂಜನಿ ಅವರು ತಾವು ನಿರ್ದೇಶನ ಮಾಡಿರುವ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾದ ಕಾನ್ಸೆಪ್ಟ್ ಚೆನ್ನಾಗಿದ್ದು, ಜನರಿಗೆ ಇಷ್ಟ ಆಗುತ್ತದೆ ಎನ್ನುವ ಭರವಸೆ ಹೊಂದಿದ್ದಾರೆ. ರಂಜನಿ ಅವರ ಮುಂದಿನ ಜೀವನಕ್ಕೆ ಒಳ್ಳೆಯದಾಗಲಿ ಎಂದು ನಾವು ಕೂಡ ವಿಶ್ ಮಾಡೋಣ..



