ಕನ್ನಡದ ಅತ್ಯುತ್ತಮ ನಿರೂಪಕಿಯರ ಪೈಕಿ ಯಾವಾಗಲು ಅಗ್ರಸ್ಥಾನದಲ್ಲಿರುವವರು ಅನುಶ್ರೀ. ಸಿನಿಮಾ, ರಿಯಾಲಿಟಿ ಶೋ ಯಾವುದೇ ಕಾರ್ಯಕ್ರಮಗಳಿದ್ದರೂ ಅನುಶ್ರೀ ಇರಲೇ ಬೇಕು. ಅಷ್ಟರ ಮಟ್ಟಿಗೆ ಅನುಶ್ರೀ ಕರುನಾಡಿನಾದ್ಯಂತ ಒಬ್ಬ ಉತ್ತಮ ಆ್ಯಂಕರ್ ಆಗಿ ಫೇಮಸ್. ಕರ್ನಾಟಕದ ತುಂಬಾ ಇಷ್ಟೊಂದು ನೇಮ್&ಫೇಮ್ ಇರುವ ಮಂಗಳೂರಿನ ಸುಂದರಿಯ ಬಾಲ್ಯದ ಫೋಟೋ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ಈ ಫೋಟೋ ಹೊಸ ವಾದವೊಂದಕ್ಕೆ ನಾಂದಿ ಹಾಡಿದೆ.

ಇತ್ತೀಚೆಗಷ್ಟೇ, ಖಾಸಗಿ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ನಿರೂಪಕ ಜಯಪ್ರಕಾಶ್ ಶೆಟ್ಟಿ ಉಪ್ಪಳ ಅವರು ತಮ್ಮ ಪೇಸ್ ಬುಕ್ ಖಾತೆಯಲ್ಲಿ ಅನುಶ್ರೀ ಬಾಲ್ಯದ ಫೋಟೋ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರೆಲ್ಲ ಯದ್ವಾತದ್ವಾ ಕಮೆಂಟ್ ಹಾಕಲು ಆರಂಭಿಸಿದ್ದಾರೆ. ಕೆಲವರು ಅನುಶ್ರೀ ಅವರನ್ನು ಹಾಡಿ ಹೊಗಳಿದ್ದರೆ, ಇನ್ನೂ ಕೆಲವರು ‘ಈಕೆ 50 ರೂಪಾಯಿ ಆ್ಯಂಕರಿಂಗ್ ಮಾಡು ಅಂದ್ರೆ 500 ರೂಪಾಯಿದು ಆ್ಯಂಕರಿಂಗ್ ಮಾಡ್ತಾಳೆ.ಆರಂಭದಲ್ಲಿ ಚನ್ನಾಗಿತ್ತು ಆದ್ರೆ ಈಗ ಈಕೆಯ ಆ್ಯಂಕರಿಂಗ್ ಅಸಹ್ಯ ಹುಟ್ಟಿಸ್ತಾ ಇದೆ’ ಎಂದಿದ್ದಾರೆ.
ಜೊತೆಗೆ ‘ಟಿವಿ ಕಾರ್ಯಕ್ರಮದಲ್ಲಿ ಜಡ್ಜ್ ಗಳನ್ನ ಪ್ರತಿ ಎಪಿಸೋಡಿನಲ್ಲೂ ಸುಮ್ಮನೆ ಹೊಗಳುವುದು ಸರಿಯಲ್ಲ. ಅವರೇನು ಬಿಟ್ಟಿಯಾಗಿ ಸೇವೆ ಮಾಡೋಲ್ಲ, ಎಲ್ಲರೂ ದುಡ್ಡಿಗಾಗಿ ದುಡಿಯುವವರೆ. ಅಷ್ಟೊಂದು ಹೊಗಳಿಕೆ ಅನಗತ್ಯ ಎಂದು ಕಮೆಂಟ್ ಮೂಲಕ ಕುಟುಕಿದ್ದಾರೆ. ಇನ್ನೊಬ್ಬ ನೆಟ್ಟಿಗ ‘ಮೊದ್ಲು ಅನುಶ್ರಿ ಹೂ ತರ ಇದ್ಳು, ಈಗ ಹೆಗ್ಣದ್ ತರ ಆಗಿದಾಳೆ’ ಎಂದು ಕಾಮೆಂಟ್ ಹಾಕಿದ್ದಾನೆ.
ಇನ್ನೂ ಕೆಲ ನೆಟ್ಟಿಗರು ‘ಅನುಶ್ರೀ ಶ್ರಮ,ಶ್ರದ್ಧೆ ಸ್ವಾಭಿಮಾನದಿಂದ ಬೆಳೆದು ನಿಂತ ಅಪ್ಪಟ ಕನ್ನಡದ ಪ್ರತಿಭೆ” ಎಂದು ಶ್ಲಾಘಿಸಿದ್ದಾರೆ. ಯಾರು ಏನು ಹೇಳಿದರೂ ಕೂಡ ಯಾವುದೇ ಕಾರ್ಯಕ್ರಮವನ್ನು ಅದ್ಭುತವಾಗಿ ನಡೆಸುವ ಕಲೆ ಅವರಲ್ಲಿದೆ. ಸದ್ಯ, ಆ್ಯಂಕರಿಂಗ್ ಜೊತೆಗೆ ‘ಅನುಶ್ರೀ ಆ್ಯಂಕರ್’ ಅನ್ನುವ ಯೂಟ್ಯೂಬ್ ಚಾನೆಲ್ ಮೂಲಕವೂ ಕೂಡ ಅನುಶ್ರೀ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ.



