ಕಳೆದ ತಿಂಗಳಿನಿಂದ ಸೋಷಿಯಲ್ ಮೀಡಿಯಾ ತುಂಬಾ ಹರಿದಾಡುತ್ತಿರುವ ಸುದ್ದಿ ಎಂದರೆ ಅದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಕೇಸ್ ವಿಚಾರ. ಇವರು ಬಹಳ ಟ್ಯಾಲೆಂಟ್ ಇರುವ ಕಲಾವಿದ, ಈಗಾಗಲೇ ಸಾಕಷ್ಟು ಅವಕಾಶಗಳನ್ನು ಸಹ ಗಳಿಸಿಕೊಂಡು, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಡೆನೂರು ಮನು ಅವರ ಬಗ್ಗೆ ಅವರೊಡನೆ ಶೋನಲ್ಲಿ ಕೆಲಸ ಮಾಡಿದ್ದ ನಟಿಯೇ ದೂರು ಕೊಟ್ಟು, ಇಷ್ಟು ದಿನಗಳ ಕಾಲ ಜೈಲಿನಲ್ಲಿದ್ದರು. ಈಗ ಇವರಿಗೆ ಜಾಮೀನು ಸಿಕ್ಕಿದೆ. 4 ದಿನಗಳ ಕಾಲ ವಿಚಾರಣೆ ನಡೆಸಿ, ಬಳಿಕ ಜೈಲು ಸೇರಿದ್ದರು ಮನು. ಆ ವೇಳೆ ಮಡೆನೂರು ಮನು ಬಗ್ಗೆ ಸಾಕಷ್ಟು ವಿಚಾರಗಳು ಚರ್ಚೆಗೆ ಒಳಗಾಗಿ, ಇವರ ಬಗ್ಗೆ ಜನರು ಕೆಟ್ಟದಾಗಿ ಮಾತನಾಡುವುದಕ್ಕೆ ಶುರು ಮಾಡಿದ್ದರು. ಈಗಲೂ ಆ ಬಗ್ಗೆ ಸರಿಯಾದ ಸ್ಪಷ್ಟನೆ ಅಂತು ಸಿಕ್ಕಿಲ್ಲ. ಮಡೆನೂರು ಮನು ಈಗ ಹೊರಗಡೆ ಬಂದಿದ್ದಾರೆ.

ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಆಗಿ ಹೊರಹೊಮ್ಮಿದವರು ಮಡೆನೂರು ಮನು. ಇವರೊಡನೆ ಅದೇ ಶೋನಲ್ಲಿ ಕೆಲಸ ಮಾಡಿದ್ದ ನಟಿ ಮಡೆನೂರು ಮನು ಅವರ ಮೇಲೆ ಗಂಭೀರ ಆರೋಪ ಮಾಡಿದ್ದರು. ಅತ್ಯಾಚಾರ, ಗರ್ಭಪಾತ, ಬ್ಲ್ಯಾಕ್ ಮೇಲ್ ಈ ಎಲ್ಲಾ ಆರೋಪಗಳನ್ನು ಮಡೆನೂರು ಮನು ವಿರುದ್ಧ ಮಾಡಿ, ಪೊಲೀಸರ ಬಳಿ ದೂರು ಕೊಟ್ಟಿದ್ದರು. ಮೊದಲಿಗೆ ದೂರು ಕೊಟ್ಟು ನಂತರ ಈಕೆ, ಅದು ತಮ್ಮಿಬ್ಬರ ನಡುವಿನ ಪರ್ಸನಲ್ ವಿಷಯ, ಹಾಗೆ ಇದ್ದಿದ್ದರೆ ಸರಿ ಇರುತ್ತಿತ್ತು ಎಂದು ಹೇಳಿದ್ದು ಕೂಡ ಇದೆ. ಆದರೆ ಈಗ ಪೊಲೀಸರ ವರೆಗು ತಲುಪಿ, ಎಲ್ಲವೂ ದೊಡ್ಡದಾದಮೇಲೆ, ಇನ್ನೇನು ಉಳಿದಿರಲಿಲ್ಲ. ಎಲ್ಲರಿಗೂ ಎಲ್ಲಾ ವಿಷಯಗಳು ಬಹಿರಂಗವಾಗಿ ತಿಳಿದಿದೆ. ಜೊತೆಗೆ ಎಲ್ಲರೂ ಸಹ ಈ ವಿಚಾರದ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಮಾಡುತ್ತಿದ್ದಾರೆ..
ಸೋಷಿಯಲ್ ಮೀಡಿಯಾದಲ್ಲಿ ವಿಪರೀತ ಚರ್ಚೆಯಾದ ವಿಚಾರಗಳಲ್ಲಿ ಇದು ಒಂದು ಎಂದು ಹೇಳಿದರೂ ಸಹ ತಪ್ಪಲ್ಲ. ಅರೆಸ್ಟ್ ಆಗಿದ್ದರ ಜೊತೆಗೆ ಮತ್ತೊಂದು ವಿಷಯ ಕೂಡ ಬಹಳ ವೈರಲ್ ಆಯಿತು. ಮಡೆನೂರು ಮನು ವಿರುದ್ಧ ಪೊಲೀಸರ ಬಳಿ ದೂರು ನೀಡಿರುವ ನಟಿ ಮಡೆನೂರು ಮನು ಮಾತನಾಡಿರುವ ಆಡಿಯೋ ಎಂದು ಒಂದು ಪೋಸ್ಟ್ ಶೇರ್ ಮಾಡಿದರು, ಅದರಲ್ಲಿ ಈತ ಕನ್ನಡದ ದಿಗ್ಗಜ ಕಲಾವಿದರ ಬಗ್ಗೆ ಮಾತನಾಡಿದ್ದು, ಆ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಯಿತು. ಕನ್ನಡದ ಹಿರಿಯ ನಟರ ಬಗ್ಗೆ ಇಷ್ಟು ಕೆಟ್ಟದಾಗಿ ಮಾತನಾಡಿದ್ದಾರೆ ಮಡೆನೂರು ಮನು ಎಂದು ನೆಟ್ಟಿಗರು ಈತನನ್ನು ತರಾಟೆಗೆ ತೆಗೆದುಕೊಂಡರು. ಆದರೆ ಇದು ನಿಜಕ್ಕೂ ಆತನೇ ಮಾತನಾಡಿರುವ ವಿಡಿಯೋನ ಎನ್ನುವ ಬಗ್ಗೆ ಕ್ಲಾರಿಟಿ ಕೂಡ ಇರಲಿಲ್ಲ. ಇನ್ನು ಆ ಆಡಿಯೋದಲ್ಲಿ ಮನು ಹೇಳಿದ್ದ ಮಾತುಗಳು ಏನು ಎಂದರೆ..

ನಟಿ ಶೇರ್ ಮಾಡಿರುವ ಆಡಿಯೋದಲ್ಲಿ ಶಿವಣ್ಣ, ಡಿಬಾಸ್ ಮತ್ತು ಧ್ರುವ ಸರ್ಜಾ ಅವರು, ಈ ಮೂವರ ಬಗ್ಗೆ ಸಹ ಮಡೆನೂರು ಮನು ಕೆಟ್ಟದಾಗಿ ಮಾತನಾಡಿದ್ದರು, “ಶಿವಣ್ಣ ಇನ್ನು 6 ವರ್ಷ ಮಾತ್ರ ಇರ್ತಾರೆ, ಆಮೇಲೆ ಸ*ತ್ತು ಹೋಗ್ತಾರೆ. ಧ್ರುವ ಸರ್ಜಾ ಅಬ್ಬಬ್ಬಾ ಅಂದ್ರೆ ಇನ್ನೊಂದು 8 ವರ್ಷ, ದರ್ಶನ್ ಸರ್ ಕ್ರೇಜ್ ಇನ್ನೊಂದು 6 ವರ್ಷ ಇರುತ್ತೇನೋ ಅಶ್ಟೇಜ್ ಆಮೇಲೆ ಎಲ್ಲಾನೂ ಕಡಿಮೆ ಆಗಿಬಿಡುತ್ತೆ. ಅವರ ಸಿನಿಮಾಗಳು ಓಡೋದಿಲ್ಲ. ಕನ್ನಡದ ಈ ಮೂರು ಸ್ಟಾರ್ ಹೀರೋಗಳಿಗೆ ಕಾಂಪಿಟೇಶನ್ ಕೊಡೋದಕ್ಕೆ ನಾನೇ ಇರೋದು. ನಾನು ಗಂಡುಗಲಿ..” ಎಂದು ಆಡಿಯೋದಲ್ಲಿ ಹೇಳಲಾಗಿತ್ತು. ಈ ಆಡಿಯೋ ಶೇರ್ ಮಾಡಿರುವ ನಟಿ, ಮಡೆನೂರು ಮನು ಫೋಟೋ ಹಾಕಿ, ದುರಹಂಕಾರ ಎಂದು ಕ್ಯಾಪ್ಶನ್ ಸಹ ಬರೆದಿದ್ದರು, ಸೋಷಿಯಲ್ ಮೀಡಿಯಾದಲ್ಲಿ ಈ ಆಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಆಯಿತು.
ಈ ಆಡಿಯೋ ವೈರಲ್ ಆಗುತ್ತಿದ್ದ ಹಾಗೆಯೇ ನೆಟ್ಟಿಗರು ವಿಭಿನ್ನ ರೀತಿಗಳಲ್ಲಿ ಪ್ರತಿಕ್ರಿಯೆ ಕೊಟ್ಟರು. ಕೆಲವರು ಇನ್ನು ಬೆಳೆಯಬೇಕಿದ್ದ ಹುಡುಗ, ಕನ್ನಡದ ಲೆಜೆಂಡ್ ಗಳ ಬಗ್ಗೆ ಹೀಗೆಲ್ಲಾ ಮಾತನಾಡೋದಾ ಎಂದು ಕೆಲವರು ಪ್ರತಿಕ್ರಿಯೆ ಕೊಟ್ಟರೆ, ಇನ್ನು ಕೆಲವರು ಇದೆಲ್ಲಾ ಬೇಕೆಂದೇ ಮಾಡುತ್ತಿರುವ ಕೆಲಸ, ಮಡೆನೂರು ಮನು ಹೆಸರು ಹಾಳು ಮಾಡುವುದಕ್ಕಾಗಿ ಮಾಡುತ್ತಿರುವ ಕೆಲಸ ಇದು. ಅವನು ಹೀಗೆಲ್ಲಾ ಮಾತನಾಡಿರೋದಿಲ್ಲ. ಬೇಕೆಂದೇ ಯಾರೋ ಮಡೆನೂರು ಮನು ಧ್ವನಿಯಲ್ಲಿ ಮಿಮಿಕ್ರಿ ಮಾಡಿದ್ದಾರೆ, ಹೆಸರು ಹಾಳು ಮಾಡೋದಕ್ಕೆ ಮಾಡುತ್ತಿರುವ ಪ್ಲಾನ್ ಇದು. ಇದನ್ನೆಲ್ಲ ನೆಟ್ಟಿಗರು ನಂಬಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದೇನೇ ಇದ್ದರೂ, ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆಗಿ, ಒಳ್ಳೆಯ ಹೆಸರು ಪಡೆದಿದ್ದ ಹುಡುಗ ಈ ಸ್ಥಿತಿಗೆ ತಲುಪಿದ್ದು ಶಾಕ್ ಆಗುವಂಥ ವಿಚಾರವೇ ಸರಿ..

ಶೋನಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದ ನಟಿ ಈ ರೀತಿ ಆರೋಪ ಮಾಡಿದ್ದರೆ, ಇನ್ನೊಂದು ಕಡೆ, ಮಡೆನೂರು ಮನು ಅವರ ಪತ್ನಿ ಬೇರೆ ರೀತಿಯಲ್ಲೇ ಮಾತನಾಡಿದ್ದರು. ತಮ್ಮ ಗಂಡ ತುಂಬಾ ಒಳ್ಳೆಯವರು, ಬೇಕೆಂದೇ ಈ ರೀತಿ ಮಾಡಿ, ತಮ್ಮ ಗಂಡನನ್ನು ಸಿಕ್ಕಿಸಲಾಗಿದೆ ಎಂದು ಹೇಳಿದ್ದರು.. ಮಡೆನೂರು ಮನು ಈಗ ಜೈ*ಲಿನಿಂದ ಹೊರಬಂದಿದ್ದಾರೆ. ಜಾಮೀನು ಸಿಕ್ಕಿ ಹೊರಬಂದಿದ್ದು, ಮಾಧ್ಯಮದವರು ಇವರಿಗೆ ಪ್ರಶ್ನೆ ಕೇಳಿರುವುದು ವೈರಲ್ ಆದ ಆಡಿಯೋ ಬಗ್ಗೆ. ಶಿವಣ್ಣ, ಧ್ರುವ ಸರ್ಜಾ ಮತ್ತು ಡಿಬಾಸ್ ಬಗ್ಗೆ ಹಾಗೆಲ್ಲಾ ಮಾತನಾಡಿರೋದು ನಿಜವೇ ಎಂದು ಕೇಳಿದ್ದಾರೆ. ಅದಕ್ಕೆ ಮಡೆನೂರು ಮನು ಉತ್ತರ ಕೊಟ್ಟಿದ್ದು, ತಾವು ಶಿವಣ್ಣ ಅವರ ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. “ನನ್ನ ಜೊತೆ ಇರೋರನ್ನ ಯಾರನ್ನಾದರೂ ಕೇಳಿ.. ಆಮೇಲೆ ಶಿವಣ್ಣ ಅವರ ಬಗ್ಗೆ ನಾವು ಮಾತಾಡೋಕೆ ಅರ್ಹತೆನೆ ಇಲ್ಲ, ಅವರ ಕಾಲ ಧೂಳಿಗೂ ನಾವು ಸಮ ಇಲ್ಲ.. ಚೆನ್ನರಾಯಪಟ್ಟಣದ ಅಮ್ಮ ಆಶ್ರಮದಲ್ಲಿ ಕೇಳಿ ನನ್ನ ಬಗ್ಗೆ. ನಾಗಣ್ಣ, ಜಯಂತ್ ಅವರನ್ನ ಕೇಳಿ ವರ್ಷ ವರ್ಷ ಶಿವಣ್ಣ ಅವರ ಬರ್ತ್ ಡೇ ಗೆ ನಾವು ಏನ್ ಮಾಡ್ತೀವಿ ಅಂತ..



