ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ಎಲ್ಲರೂ ಮೆಚ್ಚುವ ಜೋಡಿಗಳಲ್ಲಿ ಒಂದು. ಇವರಿಬ್ಬರು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿ ಸಂತೋಷದಿಂದ ಜೀವನ ನಡೆಸುತ್ತಿರುವ ಜೋಡಿ. ಎಲ್ಲಾ ಲವರ್ಸ್ ಗಳಿಗೆ ಇವರಿಬ್ಬರು ಒಂದು ರೀತಿ ಇನ್ಸ್ಪಿರೇಷನ್ ಎಂದು ಹೇಳಿದರೆ ತಪ್ಪಲ್ಲ. ಯಾಕಂದ್ರೆ ಇವರಿಬ್ಬರು ಒಬ್ಬರಿಗೊಬ್ಬರು ಅಷ್ಟು ಸಪೋರ್ಟಿವ್ ಆಗಿರುತ್ತಾರೆ. ಇದ್ದರೆ ಈ ಜೋಡಿ ಥರ ಇರಬೇಕು ಎಂದು ಯುವ ಪ್ರೇಮಿಗಳು ಅಂದುಕೊಂಡಿದ್ದು ಇದೆ. ಆದರೆ ಇದೀಗ ಇವರಿಬ್ಬರ ನಡುವೆ ವಿರಸ ಶುರು ಆಗಿದ್ಯಾ ಅನ್ನೋ ಶಂಕೆ ಶುರುವಾಗಿದ್ದು, ಅದಕ್ಕೆ ಸಾಕ್ಷಿ ಎನ್ನುವಂತೆ ಅನುಷ್ಕಾ ಶರ್ಮ ಹಾಗೂ ವಿರಾಟ್ ಇಬ್ಬರ ವಿಡಿಯೋ ಒಂದು ಎಲ್ಲೆಡೆ ವೈರಲ್ ಆಗಿದ್ದು, ಇದು ಬೆಂಗಳೂರಿನಲ್ಲಿ ಸೆರೆ ಹಿಡಿದಿರುವ ವಿಡಿಯೋ ಆಗಿದೆ. ವಿಡಿಯೋ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ..

ನಮ್ಮ ಆರ್ಸಿಬಿ ಕಿಂಗ್ ವಿರಾಟ್ ಕೊಹ್ಲಿ ಅವರ ಬಗ್ಗೆ ನಮಗೆ ಗೊತ್ತೇ ಇದೆಯಲ್ಲ. ಇವರು ಎಲ್ಲರ ಮೆಚ್ಚಿನ ಹುಡುಗ, ಭಾರತದ ಹೆಮ್ಮೆಯ ಕ್ರಿಕೆಟಿಗ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಪೋರ್ಟ್ಸ್ ಸ್ಟಾರ್. ಇನ್ನು ಅನುಷ್ಕಾ ಶರ್ಮಾ ಸ್ವಂತ ಪರಿಶ್ರಮದಿಂದ ಸಾಧನೆ ಮಾಡಿರುವ ಬಾಲಿವುಡ್ ನಟಿ. ಇವರಿಬ್ಬರು ನಾಲ್ಕೈದು ವರ್ಷಗಳ ಕಾಲ ಪ್ರೀತಿಸಿ, ಅದ್ಧೂರಿಯಾಗಿ ಮದುವೆಯಾದರು. ಈ ಜೋಡಿಗೆ ಈಗ ಇಬ್ಬರು ಮುದ್ದಾದ ಮಕ್ಕಳಿದ್ದಾರೆ, ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಇವರಿಬ್ಬರಲ್ಲಿ ಇರುವ ಅನ್ಯೋನ್ಯತೆ ಪ್ರೀತಿ, ಇದೆಲ್ಲವನ್ನು ನೋಡಿದರೆ, ನಮಗೆ ಸಿಗುವ ಜೋಡಿ ಸಹ ಹೀಗೆ ಇರಬೇಕು ಎಂದು ನಮಗೆ ಅನ್ನಿಸದೇ ಇರೋದಿಲ್ಲ. ಅಷ್ಟು ಮುದ್ದಾದ ಜೋಡಿ ಇವರು. ಆದರೆ ಈಗ ಇವರಿಬ್ಬರ ಬಗ್ಗೆ ಬೇರೆಯದೇ ಸುದ್ದಿ ವೈರಲ್ ಆಗುತ್ತಿದೆ.

ಹೌದು, ವಿರಾಟ್ ಮತ್ತು ಅನುಷ್ಕಾ ನಡುವೆ ಮುನಿಸು ಬಂದಿರುವ ಹಾಗೆ ಕಾಣುತ್ತಿದೆ. ಈ ವಿಚಾರದ ಬಗ್ಗೆಯೇ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅದೇನು ಎಂದರೆ, ಇತ್ತೀಚೆಗೆ ವಿರಾಟ್ ಕೊಹ್ಲಿ ಅವರು ನಟಿ ಹಾಗೂ ಮಾಡೆಲ್ ಆಗಿರುವ ಅವನೀತ್ ಕೌರ್ ಅವರ ಕೆಲವು ಹಾಟ್ ಫೋಟೋಸ್ ಗಳ ಪೋಸ್ಟ್ ಒಂದನ್ನು ಲೈಕ್ ಮಾಡಿದ್ದರು. ಈ ಲೈಕ್ ಆಗಿರೋದು ಬೈ ಮಿಸ್ಟೇಕ್ ಆಗಿನ ಅಥವಾ ವಿರಾಟ್ ಅವರಿಗೆ ನಿಜಕ್ಕೂ ಪೋಸ್ಟ್ ಇಷ್ಟವಾಗಿ ಲೈಕ್ ಮಾಡಿದ್ದಾರಾ? ಇದರ ಬಗ್ಗೆ ಗೊತ್ತಿಲ್ಲ. ಆದರೆ ವಿರಾಟ್ ಅವರು ಆ ಒಂದು ಪೋಸ್ಟ್ ಲೈಕ್ ಮಾಡಿದ ವಿಚಾರ ಸಿಕ್ಕಾಪಟ್ಟೆ ವೈರಲ್ ಅಂತೂ ಆಯಿತು. ವಿರಾಟ್ ಯಾಕೆ ಈ ಪೋಸ್ಟ್ ಲೈಕ್ ಮಾಡಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಯಿತು..ಸ್ವಲ್ಪ ಹೊತ್ತಿಗೆ ವಿರಾಟ್ ಅವರು ಕ್ಲಾರಿಟಿ ಸಹ ಕೊಟ್ಟರು.
ಇನ್ಸ್ಟಾಗ್ರಾಮ್ ಸ್ಟೋರಿ ಅಪ್ಡೇಟ್ ಮಾಡಿದ ಸ್ಟೋರಿಯಲ್ಲಿ, ಇನ್ಸ್ಟಾಗ್ರಾಮ್ ಆಲ್ಗರಿದಂ ಇಂದ ಆ ರೀತಿ ಆಗಿದೆ, ಕ್ಷಮಿಸಿ ಎಂದು ವಿರಾಟ್ ಅವರು ಕೇಳಿಕೊಂಡರು. ಆದರೆ ಈ ವಿಚಾರ ಈಗಾಗಲೇ ವೈರಲ್ ಆಗಿ ಹೋಗಿದೆ. ಇನ್ನು ಇದೇ ಕಾರಣಕ್ಕೆ ವಿರಾಟ್ ಅನುಷ್ಕಾ ನಡುವೆ ಇದೇ ಕಾರಣಕ್ಕೆ ಮುನಿಸು ಶುರುವಾಗಿರಬಹುದು ಎನ್ನುವ ಅನುಮಾನ ಸಹ ಶುರುವಾಗಿದೆ. ಇದಕ್ಕೆ ತಕ್ಕ ಹಾಗೆ ಇವರಿಬ್ಬರ ಒಂದು ವಿಡಿಯೋ ಸಹ ವೈರಲ್ ಆಗಿದ್ದು, ಈ ಘಟನೆ ನಡೆದಿರುವುದು ಬೆಂಗಳೂರಿನ ಎಂ.ಜಿ ರೋಡ್ ನಲ್ಲಿ. ಯಾರೋ ನೆಟ್ಟಿಗರು ವಿಡಿಯೋ ಕ್ಯಾಪ್ಚರ್ ಮಾಡಿದ್ದು, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಡೇಟ್ ಮಾಡಿದ್ದಾರೆ. ಈ ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ..

ಹೌದು, ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರಿಗೂ ಕೂಡ ಬೆಂಗಳೂರು ತುಂಬಾ ಸ್ಪೆಶಲ್. ಎಂ.ಜಿ ರೋಡ್ ನಲ್ಲಿರುವ ರೆಸ್ಟೋರೆಂಟ್ ಒಂದಕ್ಕೆ ಇಬ್ಬರೂ ಜೊತೆಯಾಗಿ ಹೋಗಿದ್ದಾರೆ. ಆದರೆ ಅನುಷ್ಕಾ ಅವರು ಎಂದಿನಂತೆ ಇರಲಿಲ್ಲ, ಕೋಪಗೊಂಡ ಹಾಗೆ ಕಾರ್ ಇಂದ ಇಳಿದು, ವಿರಾಟ್ ಅವರನ್ನು ಅಲ್ಲೇ ಬಿಟ್ಟು ಒಬ್ಬರೇ ಇಳಿದು ಹೊರಟು ಹೋಗಿದ್ದಾರೆ. ಇನ್ನು ವಿರಾಟ್ ಅವರಿಗೆ ಸಹ ಕೋಪ ಬಂದ ಹಾಗೆ ಕಾಣುತ್ತದೆ..ಅವರು ಸಹ ಅನುಷ್ಕಾ ಅವರ ಹಿಂದೆ ಸುಮ್ಮನೆ ಹೊರಟು ಹೋಗಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಆ ವಿಷಯಕ್ಕೆ ಇಷ್ಟು ಕೋಪ ಮಾಡಿಕೊಂಡಿದ್ದಾರಾ ಅನುಷ್ಕಾ ಎನ್ನುವ ಚರ್ಚೆ ನಡೆಯುತ್ತಿದೆ. ಯಾವಾಗಲೂ ಅನುಷ್ಕಾ ಅವರು ವಿರಾಟ್ ಅವರ ಕೈಯನ್ನು ಹಿಡಿದುಕೊಂಡು ಹೋಗುತ್ತಿದ್ದರು.

ಆದರೆ ಈಗ ಅವರನ್ನು ಬಿಟ್ಟು ಒಬ್ಬರೇ ಕೋಪದಲ್ಲಿ ಹೋಗಿರುವುದು ಈ ಎಲ್ಲಾ ಪ್ರಶ್ನೆಗಳಿಗೆ ಕಾರಣ ಆಗಿದೆ. ಆದರೆ ಕೆಲವರು ಹೇಳುವುದು ಏನು ಎಂದರೆ ಅನುಷ್ಕಾ ಅವರು ಅಂಥ ಸಣ್ಣ ವಿಷಯಕ್ಕೆ ಅಷ್ಟೆಲ್ಲಾ ಕೋಪ ಮಾಡಿಕೊಳ್ಳುವುದಿಲ್ಲ ಎಂದು. ಅನುಷ್ಕಾ ಅವರಿಗೆ ವಿರಾಟ್ ಸ್ವಭಾವ ಏನೆಂದು ಗೊತ್ತಿದೆ. ಇದೆಲ್ಲವೂ ಬೈ ಮಿಸ್ಟೇಕ್ ಅಷ್ಟೇ ಎಂದು ಅವರು ಅರ್ಥ ಮಾಡಿಕೊಂಡಿದ್ದಾರೆ. ಗಂಡ ಹೆಂಡತಿ ಅಂದಮೇಲೆ ಸಣ್ಣ ಪುಟ್ಟ ಮನಸ್ತಾಪ ಬಂದೆ ಬರುತ್ತದೆ. ಇದು ಕೂಡ ಅಷ್ಟೇ, ಅದೇ ರೀತಿ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಈ ಜೋಡಿಯನ್ನು ನಗುತ್ತಾ ನೋಡಬೇಕು ಎನ್ನುವುದು ಇವರ ಫ್ಯಾನ್ಸ್ ಆಸೆ. ಮುನಿಸು ಬಿಟ್ಟು ಯಾವಾಗ ಒಂದಾಗುತ್ತಾರೆ ಎಂದು ಕಾದು ನೋಡಬೇಕಿದೆ. ಮುಂದಿನ ಮ್ಯಾಚ್ ಗಳಿಗೋಸ್ಕರ ಇಬ್ಬರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಇವರಿಬ್ಬರು ಯಾವಾಗಲೂ ಚೆನ್ನಾಗಿರಲಿ, ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿ.



