ರೆಬೆಲ್ ಸ್ಟಾರ್ ಅಂಬರೀಶ್ ಅವರ ಕುಟುಂಬ ಮತ್ತು ದರ್ಶನ್ ಅವರ ಕುಟುಂಬದ ನಡುವೆ ಎಷ್ಟು ಆತ್ಮೀಯತೆ ಇದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಅಂಬರೀಶ್ ಅವರ ಕುಟುಂಬಕ್ಕೆ ದರ್ಶನ್ ಅವರು ದೊಡ್ಡ ಮಗನ ಹಾಗೆಯೇ ಇದ್ದವರು. ಅದರಲ್ಲೂ ಅಂಬರೀಶ್ ಅವರು ಹೋದ ನಂತರ, ಸುಮಲತಾ ಅವರ ಬೆಂಬಲಕ್ಕೆ ನಿಂತವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ದರ್ಶನ್ ಅವರು ಕರೆಯುತ್ತಿದ್ದರು. ಅಷ್ಟು ಚೆನ್ನಾಗಿದ್ದ ಇವರ ಬಾಂಧವ್ಯಕ್ಕೆ ಏನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ದರ್ಶನ್ ಅವರು ಸುಮಲತಾ ಅವರನ್ನು ಹಾಗೂ ಇನ್ನೆಲ್ಲರನ್ನು ಇನ್ಸ್ಟಾಗ್ರಾಮ್ ಇಂದ ಅನ್ ಫಾಲೋ ಮಾಡಿದ್ದಾರೆ. ಇದೀಗ ಈ ವಿಷಯದ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ.
ನಿನ್ನೆಯಷ್ಟೇ ಸುಮಲತಾ ಅವರು ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದರು. ಅದರಲ್ಲಿ, “And the Oscar Award for the Best Acting goes to.. tho who twist the truth, hurt people without remorse, shift the blame, and somehow still see themselves as the hero.” ಎಂದು ಬರೆದಿತ್ತು. ಈ ಪೋಸ್ಟ್ ಅನ್ನು ದರ್ಶನ್ ಅವರಿಗಾಗಿಯೇ ಹಾಕಿದ್ದಾರಾ ಎನ್ನುವ ಪ್ರಶ್ನೆಯೊಂದು ಕೇಳಿಬಂದಿದೆ. ಇದರ ಬೆನ್ನಲ್ಲೇ ದರ್ಶನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ತಾವು ಫಾಲೋ ಮಾಡುತ್ತಿದ್ದ ಎಲ್ಲರನ್ನು ಅನ್ ಫಾಲೋ ಮಾಡಿರುವುದು ಇನ್ನಷ್ಟು ಚರ್ಚೆಗಳಿಗೆ ಕಾರಣವಾಗಿದೆ. ದರ್ಶನ್ ಅವರು ಫಾಲೋ ಮಾಡುತ್ತಿದ್ದದ್ದೇ 6 ಜನರನ್ನು, ಮಗ ವಿನಿಷ್, ಸುಮಲತಾ ಅಂಬರೀಶ್, ಅಭಿಶೇಕ್ ಅಂಬರೀಶ್, ಅವಿವಾ ಬಿದಪ ಹಾಗೂ ಇನ್ನಿಬ್ಬರನ್ನು ಫಾಲೋ ಮಾಡುತ್ತಿದ್ದರು. ಆದರೆ ಈಗ ಎಲ್ಲರನ್ನು ಅನ್ ಫಾಲೋ ಮಾಡಿದ್ದಾರೆ. ಇದು ಅನುಮಾನ ಹುಟ್ಟಿಸುವಂತಿದೆ.
ನಟ ದರ್ಶನ್ ಅವರು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಒಂದು ವಿಡಿಯೋ ಮಾಡಿದಾಗ, ತಮ್ಮ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದರು. ನಟಿ ರಕ್ಷಿತಾ ಅವರಿಗೆ, ನಟ ಧನವೀರ್, ನಟಿ ರಚಿತಾ ರಾಮ್ ಸೇರಿದಂತೆ ಅಭಿಮಾನಿಗಳಿಗೆ ಎಲ್ಲರಿಗೂ ಧನ್ಯವಾದ ತಿಳಿಸಿದರು. ಆದರೆ ಸುಮಲತಾ ಅವರ ಬಗ್ಗೆ ಒಂದು ಮಾತನ್ನು ಸಹ ಅವರು ಹೇಳಲಿಲ್ಲ. ಅದಾದ ಕೆಲವು ದಿನಗಳಲ್ಲಿ ಈ ರೀತಿ ನಡೆದಿದೆ. ದರ್ಶನ್ ಅವರು 10 ತಿಂಗಳ ಹಿಂದೆ, ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಜೈ*ಲಿಗೆ ಹೋದರು. ಏಳೆಂಟು ತಿಂಗಳ ಕಾಲ ಆ ಕಷ್ಟದಲ್ಲೇ ಇರಬೇಕಾಯಿತು. ಆ ವೇಳೆ ಸುಮಲತಾ ಅವರಾಗಲಿ, ಅಭಿಷೇಕ್ ಅಂಬರೀಶ್ ಆಗಲಿ ದರ್ಶನ್ ಅವರನ್ನು ಭೇಟಿ ಮಾಡಲಿಲ್ಲ. ಇನ್ನು ಸುಮಲತಾ ಅವರು ನೀಡಿದ ಹೇಳಿಕೆ ಕೂಡ ಬೇರೆ ರೀತಿಯಲ್ಲೇ ಇತ್ತು. ಇನ್ಸ್ಟಾಗ್ರಾಮ್ ನಲ್ಲಿ ಸುದೀರ್ಘ ಬರಹ ಹಂಚಿಕೊಂಡಿದ್ದರು.

ಅದರಲ್ಲಿ ರೇಣುಕಾಸ್ವಾಮಿ ಪರವಾಗಿ ಮಾತನಾಡಿದ ಹಾಗೆಯೇ ಬರಹ ಇತ್ತೆ ವಿನಹ ದರ್ಶನ್ ಅವರ ಸಪೋರ್ಟ್ ಆಗಿ ಇರುವಂತೆ ಇರಲಿಲ್ಲ. ಹಾಗೆಯೇ ಸುಮಲತಾ ಅವರು ದರ್ಶನ್ ಅವರು ಆ 10 ತಿಂಗಳ ವೇಳೆ ಭೇಟಿ ಮಾಡಿಲ್ಲ, ಇತ್ತ ದರ್ಶನ್ ಅವರ ಫ್ಯಾಮಿಲಿಗೆ ಕೂಡ ಧೈರ್ಯ ತುಂಬಲಿಲ್ಲ. ದರ್ಶನ್ ಅವರ ಪತ್ನಿಗೆ ಧೈರ್ಯ ತುಂಬಿದ್ದು ಕಾಣಲಿಲ್ಲ. ಈ ಎಲ್ಲಾ ಕಾರಣಗಳಿಗೆ ದರ್ಶನ್ ಅವರು ಸುಮಲತಾ ಅವರನ್ನು ಅನ್ ಫಾಲೋ ಮಾಡಿರಬಹುದು ಎನ್ನುವ ಅನುಮಾನ ಶುರುವಾಗಿದೆ. ಹಾಗೆಯೇ ಸುಮಲತಾ ಅವರು ಹಾಕಿದ್ದ ಆ ಇನ್ಸ್ಟಾಗ್ರಾಮ್ ಸ್ಟೋರಿ ದರ್ಶನ್ ಅವರಿಗಾಗಿಯೇ ಹಾಕಿದ್ದ ಎನ್ನುವ ಪ್ರಶ್ನೆ ಕೂಡ ಶುರುವಾಗಿದೆ. ಈ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಜೋರಾಗುತ್ತಿದ ಹಾಗೆಯೇ ಖುದ್ದು ಸುಮಲತಾ ಅವರೆ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
“ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಚಿಸುತ್ತೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು. ನಿಜಕ್ಕೂ, ದರ್ಶನ್ ಅವರು ಇನ್ಸ್ಟಾಗ್ರಾಂ ಮತ್ತು ಟ್ವಿಟರ್ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.
ತಾಯಿ-ಮಗನ ಸ೦ಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ..” ಎಂದು ಸುಮಲತಾ ಅವರು ಪೋಸ್ಟ್ ಮಾಡಿದ್ದು, ಈ ವಿಚಾರಕ್ಕೆ ಒಂದು ಕ್ಲಾರಿಟಿ ಕೊಟ್ಟ ಹಾಗಿದೆ. ದರ್ಶನ್ ಹಾಗು ತಮ್ಮ ನಡುವೆ ಯಾವುದೇ ಸಮಸ್ಯೆ ಇಲ್ಲ ಎಂದು ಸುಮಲತಾ ಅವರು ಹೇಳಿದ್ದರೂ ಸಹ, ಕೋಲ್ಡ್ ವಾರ್ ನಡೆಯುತ್ತಿರಬಹುದು ಎಂದು ಅನ್ನಿಸಿರುವುದಂತೂ ನಿಜ. ಏಕೆಂದರೆ ದರ್ಶನ್ ಅವರು ಹೊರಗಡೆ ಬಂದ ನಂತರ ಇವರಿಬ್ಬರೂ ಎಲ್ಲಿಯೂ ಜೊತೆಯಾಗಿ ಕಾಣಿಸಿಕೊಂಡಿಲ್ಲ. ಇದೆಲ್ಲವೂ ಅನುಮಾನ ಸೃಷ್ಟಿ ಮಾಡಿದೆ.
ಸುಮಲತಾ ಅವರೇನೋ ಈ ವಿಚಾರಕ್ಕೆ ಸ್ಪಷ್ಟನೆ ಕೊಟ್ಟು, ವದಂತಿಗಳನ್ನು ತಳ್ಳಿ ಹಾಕಿದ್ದಾರೆ. ಆದರೆ ಇತ್ತ ದರ್ಶನ್ ಅವರು ಈ ಬಗ್ಗೆ ಏನು ತಿಳಿಸಿಲ್ಲ. ಇಂದಿನಿಂದ ದರ್ಶನ್ ಅವರು ಡೆವಿಲ್ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಆಶೀರ್ವಾದ ಪಡೆದು ದರ್ಶನ್ ಅವರು ಶೂಟಿಂಗ್ ಶುರು ಮಾಡಿದ್ದು, 15ನೇ ತಾರೀಕಿನ ವರೆಗು ಮೈಸೂರಿನಲ್ಲೇ ಶೂಟಿಂಗ್ ನಡೆಯುತ್ತದೆ ಎಂದು ಮಾಹಿತಿ ಸಿಕ್ಕಿದೆ. ದರ್ಶನ್ ಅವರು ಈಗ ಬ್ಯಾಕ್ ಟು ವರ್ಕ್ ಮೋಡ್ ನಲ್ಲಿದ್ದು, ಇದೇ ವರ್ಷ ಅವರ ಡೆವಿಲ್ ಸಿನಿಮಾ ತೆರೆಕಾಣುತ್ತಾ ಎನ್ನುವುದನ್ನ ಕಾದು ನೋಡಬೇಕಿದೆ. ಇನ್ನು ಸುಮಲತಾ ಅವರ ವಿಚಾರಕ್ಕೆ ದರ್ಶನ್ ಅವರು ಏನಾದರೂ ಸ್ಪಷ್ಟನೆ ಕೊಡುತ್ತಾರಾ ದಿಢೀರ್ ಎಂದು ಈ ರೀತಿ ಮಾಡಿದ್ದು ಯಾಕೆ ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.