ಬಿಗ್ ಬಾಸ್ ಶೋ ಮುಗಿದ ಮೇಲೆ ಸ್ಪರ್ಧಿಗಳು ಹೊಸ ಪ್ರಾಜೆಕ್ಟ್ ಗಳಲ್ಲಿ ಇನ್ನಷ್ಟು ವಿಷಯಗಳಲ್ಲಿ ಬಿಡುವಿಲ್ಲದೇ ತೊಡಗಿಕೊಳ್ಳುತ್ತಾರೆ. ಎಲ್ಲಾ ಸ್ಫರ್ಧಿಗಳು ಸಹ ಈಗ ಇಂಟರ್ವ್ಯೂ ಕಾರ್ಯಕ್ರಮಗಳು ಎಂದು ಬ್ಯುಸಿ ಇದ್ದು, ಬಿಗ್ ಬಾಸ್ ಗೆ ಬಂದಿದ್ದ ಸ್ಪರ್ಧಿಗಳಲ್ಲಿ ಕೆಲವರು ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಶುರುವಾಗುವ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಆಯ್ಕೆಯಾಗಿದ್ದಾರೆ. ಈ ಶೋ ಒಂದು ರೀತಿಯಲ್ಲಿ ಸಿಕ್ಕಾಪಟ್ಟೆ ಎಂಟರ್ಟೈನ್ಮೆಂಟ್ ಕೊಡುತ್ತಿದೆ. ಹುಡುಗರದ್ದು ಒಂದು ತಂಡ , ಹುಡುಗಿಯರದ್ದು ಇನ್ನೊಂದು ತಂಡ, ಇವರಿಬ್ಬರ ನಡುವೆ ನಡೆಯುವ ಜಿದ್ದಾಜಿದ್ದಿ ಈ ಶೋ ಆಗಿದ್ದು, ಜನರಿಗೆ ಒಳ್ಳೆಯ ಮನರಂಜನೆ ಸಿಗುವುದರಲ್ಲಿ ಎರಡನೇ ಮಾತಿಲ್ಲ. ಈ ಶೋಗೆ ಭವ್ಯ ಗೌಡ ಅವರು ಸಹ ಬರಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಭವ್ಯ ಅವರ ಹೊಸ ಶೋ ಇಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ?
ಬಿಗ್ ಬಾಸ್ ಶೋ ಮುಗಿಯುತ್ತಿದ್ದ ಹಾಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ಶೋಗಳು ಶುರುವಾಗಿದೆ. ಒಂದು ಮಜಾ ಟಾಕೀಸ್ ಮತ್ತೊಂದು ಬಾಯ್ಸ್ ವರ್ಸಸ್ ಗರ್ಲ್ಸ್. ಹೊಸ ತಂಡದ ಜೊತೆಗೆ ಫ್ರೆಶ್ ಆಗಿ ಮಜಾ ಟಾಕೀಸ್ ಶೋ ಶುರುವಾಗಿದೆ. ಇನ್ನು ಬಾಯ್ಸ್ ವರ್ಸಸ್ ಗರ್ಲ್ಸ್ ಹೊಸ ಕಾನ್ಸೆಪ್ಟ್ ಆಗಿದೆ. ಈ ಶೋ ಅನ್ನು ಅನುಪಮಾ ಗೌಡ ಅವರು ನಿರೂಪಣೆ ಮಾಡುತ್ತಿದ್ದು, ಶೋಗೆ ಸ್ಪೆಷಲ್ ಗೆಸ್ಟ್ ಗಳಾಗಿ ಹಿರಿಯ ನಟಿಯರಾದ ಶ್ರುತಿ ಅವರು ಮತ್ತು ತಾರಾ ಅವರು ಬಂದಿದ್ದಾರೆ. ಹುಡುಗರ ತಂಡಕ್ಕೆ ತಾರಾ ಅವರು ಜೊತೆಯಾಗಿದ್ದು, ಹುಡುಗಿಯರ ತಂಡಕ್ಕೆ ಶ್ರುತಿ ಅವರು ಇದ್ದಾರೆ. ಇನ್ನು ಕಳೆದ ವರ್ಷದ ಬಿಗ್ ಬಾಸ್ ಶೋ ಮೆಚ್ಚಿನ ಸ್ಪರ್ಧಿ ವಿನಯ್ ಗೌಡ ಅವರು ಹುಡುಗರ ತಂಡದ ಕ್ಯಾಪ್ಟನ್ ಆಗಿದ್ದು, ಹುಡುಗಿಯರ ತಂಡಕ್ಕೆ ಶುಭಾ ಪೂಂಜಾ ಕ್ಯಾಪ್ಟನ್ ಆಗಿದ್ದಾರೆ. ಮೊದಲ ವಾರದ ಸಂಚಿಕೆ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದೆ.

ಹೌದು, ಶನಿವಾರ ಮತ್ತು ಭಾನುವಾರ ಪ್ರಸಾರವಾದ ಮೊದಲ ವಾರದ ಸಂಚಿಕೆಗಳು ಜನರಿಗೆ ಬಹಳ ಇಷ್ಟವಾಗಿದೆ. ಈ ಶೋ ನಲ್ಲಿ ಬಿಗ್ ಬಾಸ್ ಶೋ ಗೆದ್ದ ಹನುಮಂತ, ಎರಡನೇ ರನ್ನರ್ ಅಪ್ ಆದ ರಜತ್, ಹನುಮಂತನ ದೋಸ್ತ ಧನರಾಜ್ ಇವರು ಇದ್ದು, ಹುಡುಗಿಯರ ಪೈಕಿ ನಟಿ ಐಶ್ವರ್ಯ ಸಿಂಧೋಗಿ, ಶೋಭಾ ಶೆಟ್ಟಿ ಇವರು ಸಹ ಶೋನಲ್ಲಿ ಇದ್ದಾರೆ. ಬಿಗ್ ಬಾಸ್ ಸ್ಪರ್ಧಿಗಳು ಇರುವುದು ಶೋಗೆ ಹೊಸ ಕಳೆ ತಂದುಕೊಟ್ಟಿದೆ ಎಂದು ಹೇಳಿದರೆ ತಪ್ಪಲ್ಲ. ಇದೇ ಶೋಗೆ ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವರೆಗು ತಲುಪಿ 5ನೇ ರನ್ನರ್ ಅಪ್ ಆಗಿ ಎಲಿಮಿನೇಟ್ ಆದ ಭವ್ಯ ಗೌಡ ಅವರು ಸಹ ಬರಬೇಕಿತ್ತು, ಅವರು ಸಹ ಆಯ್ಕೆ ಆಗಿದ್ದರು. ಆದರೆ ಭವ್ಯ ಗೌಡ ಈ ಶೋ ಇಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಏನು ಎಂದು ತಿಳಿಯುವ ಕುತೂಹಲ ಅವರ ಅಭಿಮಾನಿಗಳಲ್ಲಿ ಶುರುವಾಗಿದೆ..
ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಬಗ್ಗೆ ಎಲ್ಲರಿಗೂ ಮೊದಲು ಗೊತ್ತಾಗಿದ್ದು ಬಿಗ್ ಬಾ ಶೋ ಇಂದಲೇ, ಬಿಗ್ ಬಾಸ್ ಮನೆಗೆ ಹೋಗಿ ಈ ಒಂದು ಶೋ ಬರುತ್ತಿದೆ ಇಂದು ರಿವೀಲ್ ಮಾಡಿದರು ಅನುಪಮಾ. ಎಲ್ಲಾ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ಗಳನ್ನು ಆಡಿಸಿ, ಆಗ ಮನೆಯಲ್ಲಿದ್ದವರ ಪೈಕಿ ಮೂವರು ಸ್ಪರ್ಧಿಗಳು ಈ ಶೋಗೆ ಸ್ಪರ್ಧಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಸ್ವಾಗತಿಸಿದರು. ಅದರಲ್ಲಿ ಹನುಮಂತ, ರಜತ್ ಹಾಗೂ ಭವ್ಯ ಗೌಡ ಆಯ್ಕೆಯಾಗಿದ್ದರು. ಈ ಮೂವರಿಗೂ ಹೂವಿನ ಹಾರವನ್ನ ಹಾಕಿ ಸನ್ಮಾನ ಸಹ ಮಾಡಲಾಗಿತ್ತು. ಬಿಗ್ ಬಾಸ್ ನಂತರ ಭವ್ಯ ಗೌಡ ಅವರು ಈ ಶೋ ಮೂಲಕ ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿತ್ತು. ಭವ್ಯ ಗೌಡ ಅವರು ಶೋಗೆ ಬರೋಕೆ ಒಪ್ಪಿದ್ದಾರೆ, ಶೂಟಿಂಗ್ ಗೆ ಬರುತ್ತಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಎಲ್ಲವೂ ಬದಲಾಗಿದೆ. ಭವ್ಯ ಗೌಡ ಅವರು ಈ ಶೋ ಇಂದ ಹೊರಗೆ ಇದ್ದು, ಶೋ ಗೆ ಬರುವುದಿಲ್ಲ ಎಂದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಭವ್ಯ ಗೌಡ ಅವರು ಯಾಕೆ ಈ ಶೋಗೆ ಬರಲಿಲ್ಲ ಎನ್ನುವ ಪ್ರಶ್ನೆ ಶುರುವಾಗಿದೆ. ಭವ್ಯ ಅವರಿಗೆ ಇದೊಂದು ಒಳ್ಳೆಯ ಅವಕಾಶ ಆಗಿತ್ತು, ಆದರೆ ಇವರು ಹೊರಗಡೆ ಬಂದಿದ್ದು ಯಾಕೆ ಎಂದು ತಿಳಿದುಬಂದಿಲ್ಲ. ಬೇರೆ ಯಾವುದಾದರೂ ಒಂದು ಪ್ರಾಜೆಕ್ಟ್ ಒಪ್ಪಿಕೊಂಡಿದ್ದಾರಾ? ಬೇರೆ ಶೋಗೆ ಬರುತ್ತಾರಾ? ಸಿನಿಮಾಗೆ ಬರುತ್ತಾರಾ? ಸೀರಿಯಲ್ ಗೆ ಬರುತ್ತಾರಾ? ಈ ವಿಷಯದ ಬಗ್ಗೆ ಇನ್ನೂ ಸಹ ಭವ್ಯ ಅವರು ಏನು ಸಹ ಹೇಳಿಲ್ಲ. ಆದರೆ ಅಭಿಮಾನಿಗಳಿಗೆ ಮಾತ್ರ ಭವ್ಯ ಅವರು ಶೋಗೆ ಬರದೇ ಇರುವುದು ಬೇಸರ ತಂದಿದೆ..ಆದರೆ ಈ ಶೋನಲ್ಲಿ ಈಗ ಭವ್ಯ ಅವರನ್ನು ಬಿಟ್ಟು ಚೈತ್ರಾ ಕುಂದಾಪುರ ಅವರನ್ನು ಕರೆಸಲಾಗಿದೆ. ಚೈತ್ರಾ ಅವರು ಮಾತು ಜಾಸ್ತಿ ಅನ್ನೋದರ ಜೊತೆಗೆ, ಒಳ್ಳೆಯ ಮನರಂಜನೆ ಸಹ ಕೊಡುತ್ತಾರೆ. ಇವರು ಹಾಗೂ ರಜತ್ ಅವರ ಕಾಂಬಿನೇಷನ್ ಸಹ ಜನರಿಗೆ ಬಹಳ ಇಷ್ಟವಾಗಿತ್ತು.
ಹಾಗಾಗಿ ಈ ಬಾರಿ ಚೈತ್ರಾ ಕುಂದಾಪುರ ಅವರು ಶೋಗೆ ಮೊದಲ ಬಾರಿ ಬಂದಿದ್ದು, ರಜತ್ ಹಾಗೂ ಚೈತ್ರಾ ಅವರ ಕಾಂಬಿನೇಶನ್ ಮತ್ತೊಮ್ಮೆ ಜನರಿಗೆ ಫುಲ್ ಮಜಾ ಕೊಡುವುದು ಖಂಡಿತ. ಇನ್ನು ಈ ಶೋನಲ್ಲಿ ಕೋಳಿ ರಮ್ಯಾ, ಶೋಭಾ ಶೆಟ್ಟಿ, ನಿವೇದಿತಾ ಗೌಡ, ರಾಮಾಚಾರಿ ಧಾರಾವಾಹಿಯ ವೈಶಾಖ, ಕರೀಮಣಿ ಧಾರಾವಾಹಿಯ ಸಾಹಿತ್ಯ, ಪ್ರಿಯಾ ಸವದತ್ತಿ ಸೇರಿದಂತೆ ಸೂಪರ್ ಹುಡುಗಿಯರು ತಂಡದಲ್ಲಿ ಇದ್ದಾರೆ. ಈ ತಂಡಕ್ಕೆ ಶುಭಾ ಪೂಂಜಾ ಅವರು ಕ್ಯಾಪ್ಟನ್ ಆಗಿದ್ದಾರೆ. ಇನ್ನು ಹುಡುಗರ ತಂಡದಲ್ಲಿ ಸ್ನೇಹಿತ್, ಪ್ರಶಾಂತ್, ಧನರಾಜ್, ಹನುಮಂತ, ರಜತ್ ಇವರೆಲ್ಲರು ಸಹ ಇದ್ದು, ವಿನಯ್ ಗೌಡ ಈ ತಂಡದ ಕ್ಯಾಪ್ಟನ್ ಆಗಿದ್ದಾರೆ. ಇನ್ನು ವಿಶೇಷವಾಗಿ ಸೂರಜ್ ಹಾಗೂ ಲ್ಯಾಗ್ ಮಂಜು ಸಹ ಇದ್ದಾರೆ. ಇವರೆಲ್ಲರೂ ಸಹ ಕಾಮಿಡಿ ಮಾಡೋದರಲ್ಲಿ ಎತ್ತಿದ ಕೈ..

ಒಟ್ಟಿನಲ್ಲಿ ಸೆಲೆಬ್ರಿಟಿಗಳ ದಂಡು, ಅನುಪಮಾ ಅವರ ನಿರೂಪಣೆ, ಶ್ರುತಿ ಅವರು ಮತ್ತು ತಾರಾ ಅವರ ಮನರಂಜನೆ ಇದೆಲ್ಲವು ಸಹ ಈ ಶೋಗೆ ಫುಲ್ ಮಜಾ ತರಲಿದೆ. ಮುಂದಿನ ವಾರಗಳಲ್ಲಿ ಈ ಶೋ ಇನ್ನು ಹೆಚ್ಚು ಮನರಂಜನೆ ಕೊಡುವುದು ಗ್ಯಾರೆಂಟಿ. ಯಾವ ಥರ ಮುಂದಿನ ದಿನಗಳಲ್ಲಿ ಟಾಸ್ಕ್ ಗಳು ಹೇಗಿರುತ್ತದೆ, ಇವರ ನಡುವೆ ಕಾಂಪಿಟೇಶನ್ ಹೇಗಿರುತ್ತದೆ ಇದೆಲ್ಲವನ್ನು ನೋಡುವುದಕ್ಕೆ ಕಾಯುತ್ತಿದ್ದಾರೆ. ಆದರೆ ಭವ್ಯ ಅವರು ಈ ಶೋಗೆ ಬಂದಿದ್ದರೆ ಅವರ ಫ್ಯಾನ್ಸ್ ಗೆ ಸಂತೋಷ ಆಗುತ್ತಿತ್ತು. ಆದರೆ ಭವ್ಯ ಅವರು ಆದಷ್ಟು ಬೇಗ ಹೊಸ ಶೋಗಳ ಮೂಲಕ ಬರಲಿ ಎಂದು ಅವರ ಫ್ಯಾನ್ಸ್ ಆಶಯ ಪಟ್ಟಿದ್ದಾರೆ. ಹಾಗೆಯೇ ಈ ಶೋಗೆ ಯಾಕೆ ಬರಲಿಲ್ಲ ಎಂದು ಭವ್ಯ ಅವರು ಸ್ಪಷ್ಟನೆ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ.



