ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಲಕ್ಷ್ಮೀ ಬಾರಮ್ಮ ಕೂಡ ಕೂಡ ಒಂದು. ಮೊದಲಿಗೆ ಲಕ್ಷ್ಮೀ ಬಾರಮ್ಮ ಮತ್ತು ಭಾಗ್ಯಲಕ್ಷ್ಮೀ ಎರಡೂ ಕೂಡ ಒಂದೇ ಕಥೆ ಆಗಿತ್ತು. ಭಾಗ್ಯಳ ಮುದ್ದಿನ ತಂಗಿಯೇ ಲಕ್ಷ್ಮೀ. ಲಕ್ಷ್ಮಿಗೊಬ್ಬ ಶ್ರೀರಾಮನನ್ನು ಹುಡುಕುವ ಕಥೆ ಎಂದೇ ಭಾಗ್ಯಲಕ್ಷ್ಮೀ ಧಾರವಾಹಿ ಶುರುವಾಗಿದ್ದು. ಆದರೆ ಕೆಲವೇ ದಿನಗಳಲ್ಲಿ ಈ ಧಾರಾವಾಹಿಗೆ ಅದ್ಭುತವಾಗಿ ಜನರ ಪ್ರೀತಿ ಸಿಕ್ಕ ನಂತರ, ಅಕ್ಕ ತಂಗಿಯರ ಕಥೆಯನ್ನು ಎರಡು ಕಥೆಗಳಾಗಿ ವಿಂಗಡಿಸಲಾಯಿತು. ಒಟ್ಟಿನಲ್ಲಿ ಈಗ ಈ ಎರಡು ಧಾರಾವಾಹಿಗಳಿಗೆ ಜನರು ಪ್ರೀತಿ ಕೊಡುತ್ತಿದ್ದಾರೆ. ಎರಡು ಕಥೆಗಳು ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸುತ್ತಿರುವ ಭೂಮಿಕಾ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.

ಇವರು ಬಣ್ಣದ ಲೋಕಕ್ಕೆ ಹೊಸಬರಲ್ಲ. ಚಿಕ್ಕವರಿದ್ದಾಗಲೇ ಡ್ಯಾನ್ಸ್ ಶೋಗಳ ಮೂಲಕ ಗುರುತಿಸಿಕೊಂಡವರು. ಭೂಮಿಕಾ ರಮೇಶ್ ಅವರು ಇಂದು ಲಕ್ಷ್ಮೀ ಬಾರಮ್ಮ ಧಾರಾವಾಹಿಯ ನಾಯಕಿ ಲಕ್ಷ್ಮೀ ಪಾತ್ರದಲ್ಲಿ ಹಾಗೂ ಮತ್ತೊಂದು ತೆಲುಗು ಧಾರಾವಾಹಿಯಲ್ಲಿ ಎರಡು ಕೂಡ ಹೆಸರು ಮಾಡಿದ್ದಾರೆ. ಎರಡು ಪಾತ್ರಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುತ್ತಿದ್ದಾರೆ. ಇವರು ಉತ್ತಮವಾದ ಡ್ಯಾನ್ಸರ್ ಆಗಿರುವ ಕಾರಣ ನಟನೆ ಇವರಿಗೆ ಕಷ್ಟವೇನು ಅಲ್ಲ ಎಂದು ನಾವು ಅಂದುಕೊಂಡಿರಬಹುದು, ಆದರೆ ಎಲ್ಲ ಕ್ಷೇತ್ರದಲ್ಲಿ ಅದರದ್ದೇ ಆದ ಕಷ್ಟಗಳು ಇರುತ್ತದೆ ಅನ್ನೋದಂತೂ ನಿಜ. ಭೂಮಿಕಾ ರಮೇಶ್ ಇನ್ನು ಕೂಡ ತುಂಬಾ ಚಿಕ್ಕವರು. ಇವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡಿದ್ದು, ಅನೇಕ ವಿಚಾರಗಳನ್ನು ಶೇರ್ ಮಾಡಿದ್ದಾರೆ.

ತಮಗೆ ಬಾಯ್ ಫ್ರೆಂಡ್ ಯಾಕಿಲ್ಲ ಅನ್ನೋದನ್ನ ಕೂಡ ತಿಳಿಸಿದ್ದಾರೆ. ಭೂಮಿಕಾ ಅವರ ಬಳಿ ಸ್ವಂತ ಫೋನ್ ಕೂಡ ಇಲ್ಲವಂತೆ, ಹೌದು ಇದು ಖುದ್ದು ಭೂಮಿಕಾ ಅವರೇ ಹೇಳಿರುವ ಮಾತು. ಅವರ ಅಮ್ಮನ ಫೋನ್ ಭೂಮಿಕಾ ಅವರ ಬಳಿ ಇರುತ್ತದೆಯಂತೆ, ಅದು ಸಮಯ ಇದ್ದಾಗ ಮಾತ್ರ. ಇಲ್ಲದಿದ್ದರೆ ಅದು ಕೂಡ ಇರುವುದಿಲ್ಲವಂತೆ. ತಮ್ಮ ಬಳಿ ಫೋನ್ ಕೂಡ ಇಲ್ಲ, ಬಾಯ್ ಫ್ರೆಂಡ್ ಕೂಡ ಇಲ್ಲ ಎನ್ನುತ್ತಾರೆ ಭೂಮಿಕಾ. ಅದಕ್ಕಿಂತ ಹೆಚ್ಚಾಗಿ ಇದೆಲ್ಲದಕ್ಕೂ ಸಮಯ ಕೂಡ ಇಲ್ಲ ಎಂದಿದ್ದಾರೆ. ಪ್ರೀತಿ ಮಾಡೋರಿಗೆ ಒಂದು ನಿರೀಕ್ಷೆ ಇರುತ್ತದೆ, ಹೆಚ್ಚು ಸಮಯ ಕೊಡಬೇಕು ಯಾವಾಗಲೂ ಫೋನ್ ನಲ್ಲಿ ಮಾತಾಡುತ್ತಾ ಇರಬೇಕು ಎಂದು, ನನ್ನಿಂದ ಅದ್ಯಾವುದು ಆಗೋದಿಲ್ಲ, ನನ್ನ ಬಳಿ ಅಷ್ಟು ಸಮಯ ಇಲ್ಲ ಎಂದು ಹೇಳುತ್ತಾರೆ.

ಚಿಕ್ಕವರಾಗಿದ್ದಾಗಿನಿಂದ ಸ್ಕೂಲ್, ಡ್ಯಾನ್ಸ್ ಕ್ಲಾಸ್, ಜಿಮ್ನಾಸ್ಟಿಕ್ ಕ್ಲಾಸ್ ಗಳಲ್ಲಿ ಬ್ಯುಸಿ ಇದ್ದು, ಮರುದಿನ ಬೆಳಗ್ಗೆ ಮತ್ತೆ ಎದ್ದು ಸ್ಕೂಲ್ ಗೆ ಹೋಗಬೇಕು. ಭೂಮಿಕಾ ಅವರ ದಿನಚರಿ ಈ ರೀತಿ ಇತ್ತು. ಇನ್ನು ಕಾಲೇಜು ಹಂತಕ್ಕೆ ಬಂದ ಬಳಿಕ, ಲಿಟ್ಲ್ ಮಿಸ್ ಮೊನಾಲಿಸಾ ಅನ್ನೋ ಸ್ಪರ್ಧೆಯಲ್ಲಿ ಗೆದ್ದಿದ್ದಕ್ಕೆ ಭೂಮಿಕಾ ಅವರನ್ನು ಓರಿಸಾಗೆ ಟ್ರೇನಿಂಗ್ ಗೆ ಕಳಿಸಲಾಗಿತ್ತಂತೆ. ಆ ವೇಳೆಯಲ್ಲೆಲ್ಲಾ ಬ್ಯುಸಿ ಇದ್ದರು, ನಂತರ ಧಾರಾವಾಹಿ ಶುರುವಾಯಿತು. ಈ ರೀತಿ ಬ್ಯುಸಿ ಆಗೇ ಇರುವುದರಿಂದ, ಲವ್ ಬಾಯ್ ಫ್ರೆಂಡ್ ಇದ್ಯಾವುದಕ್ಕೂ ಸಮಯವೇ ಸಿಗಲಿಲ್ಲ ಎನ್ನುತ್ತಾರೆ. ಇನ್ನು ತಮಗೆ ಸಿಗುವ ಹುಡುಗ ಹೇಗಿರಬೇಕು ಎಂದು ಕೇಳಿದರೆ, ಅದಕ್ಕೆ ಕೆಲವು ನಿರೀಕ್ಷೆಗಳು ಇದೆ ಎನ್ನುತ್ತಾರೆ ಭೂಮಿಕಾ ರಮೇಶ್. ಅವರ ಹುಡುಗ ಹೇಗಿರಬೇಕು ಎಂದು ಅವರು ಹೇಳೋದು ಹೀಗೆ..
ಭೂಮಿಕಾ ಅವರು ಟ್ರಡಿಷನಲ್ ಹುಡುಗಿ ಆಗಿರುವುದರಿಂದ ಹುಡುಗ ಕೂಡ ಅದೇ ರೀತಿ ಇರಿಬೇಕಂತೆ. ಹುಡುಗನಿಗೆ ಫ್ಯಾಮಿಲಿ ತನ್ನ ಮೊದಲ ಆದ್ಯತೆ ಆಗಿರಬೇಕಂತೆ, ಒಂದು ದಿವಸ ಭೂಮಿಕಾ ಮತ್ತು ಆತನ ತಾಯಿಯ ನಡುವೆ ಆಯ್ಕೆ ಎಂದು ಬಂದಾಗ ಆತ ತನ್ನ ತಾಯಿಯ ಹೆಸರನ್ನು ಹೇಳುವ ಮಟ್ಟಕ್ಕೆ ಮೆಚ್ಯುರಿಟಿ ಇರಬೇಕು, ಫ್ಯಾಮಿಲಿ ಮುಖ್ಯ ಆಗಿರಬೇಕು ಎನ್ನುತ್ತಾರೆ ಭೂಮಿಕಾ. ನಾನು ಅವನಿಗೆ ಮುಖ್ಯ ಎಂದರೆ, ಹುಟ್ಟಿದ್ದಾಗಿನಿಂದ ಜೊತೆಯಲ್ಲಿರೋ ತಾಯಿಯನ್ನೇ ನನಗೋಸ್ಕರ ಬಿಟ್ಟುಕೊಡೋನು ಮುಂದೆ ನನ್ನನ್ನು ಇನ್ನೊಬರಿಗೋಸ್ಕರ ಬಿಟ್ಟುಕೊಡೋದಿಲ್ಲ ಅನ್ನೋ ನಂಬಿಕೆ ಎಲ್ಲಿಂದ ಬರುತ್ತದೆ ಎನ್ನುತ್ತಾರೆ. ನಿಜಕ್ಕೂ ಭೂಮಿಕಾ ಅವರಂಥ ಹುಡುಗಿಯರು ಸಿಗೋದು ತುಂಬಾ ಅಪರೂಪ. ಇವರಿಗೆ ಒಳ್ಳೇ ಹುಡುಗ ಸಿಗಲಿ.



