ಜೀಕನ್ನಡ ವಾಹಿನಿಯ ನಂಬರ್1 ಧಾರಾವಾಹಿಯಾಗಿರುವುದು ಲಕ್ಷ್ಮಿನಿವಾಸ ಧಾರಾವಾಹಿ. ಪ್ರತಿ ದಿನವೂ 1 ಗಂಟೆಯ ಮಹಾಸಂಚಿಕೆ ಎಪಿಸೋಡ್ಸ್ ಗಳನ್ನು ಕೊಡುತ್ತಾ, ಟಿಆರ್ಪಿ ರೇಸ್ ನಲ್ಲಿ ಮುಂಚೂಣಿಯಲ್ಲಿರುವ ಧಾರಾವಾಹಿ ಇದು. ಈ ಧಾರಾವಾಹಿ ಸಂಚಿಕೆಗಳನ್ನ ನೋಡಿದರೆ, ಹಬ್ಬದ ಹಾಗೆ ಕಾಣಿಸುತ್ತದೆ, ಯಾಕೆಂದರೆ ಅಷ್ಟು ಜನ ಕಲಾವಿದರು ಯಾವಾಗಲು ಇರುತ್ತಾರೆ. ಪಕ್ಕಾ ಫ್ಯಾಮಿಲಿ ಸ್ಟೋರಿ ಆಗಿರೋ ಲಕ್ಷ್ಮಿನಿವಾಸ ಸೋಮವಾರದಿಂದ ಶುಕ್ರವಾರದ ವರೆಗು ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೂ ಪ್ರಸಾರವಾಗುತ್ತದೆ. ಈ ಧಾರಾವಾಹಿಯ ಪ್ರೊಡ್ಯುಸರ್ ನಿರ್ಮಲಾ ಅವರು ಇತ್ತೀಚಿನ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ತಿಳಿಸಿದ್ದಾರೆ..

ಲಕ್ಷ್ಮಿನಿವಾಸ ಧಾರಾವಾಹಿಯಲ್ಲಿ ಕರ್ಪೂರದ ಗೊಂಬೆ ಖ್ಯಾತಿಯ ನಟಿ ಶ್ವೇತಾ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಲಕ್ಷ್ಮೀ ಪಾತ್ರ ಇವರದ್ದು, ಇನ್ನು ಇವರ ಗಂಡನ ಪಾತ್ರದಲ್ಲಿ ನಟ ಅಶೋಕ್ ಜಂಬೆ ಇದ್ದಾರೆ. ಮಕ್ಕಳ ಜವಾಬ್ದಾರಿಯ ಜೊತೆಗೆ ತಮ್ಮದೇ ಸ್ವಂತ ಮನೆ ಕಟ್ಟಿಸಬೇಕು ಅನ್ನೋ ಆಸೆ ಇರುವ ದಂಪತಿಗಳು ಇವರು. ಇನ್ನು ನಟಿ ದಿಶಾ ಮದನ್, ಧನಂಜಯ್, ದೀಪಕ್, ಚಂದನ ಅನಂತಕೃಷ್ಣ, ಹಿರಿಯನಟಿ ಎಂ.ಎನ್. ಲಕ್ಷ್ಮೀದೇವಿ ಅವರು ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಧಾರಾವಾಹಿ. ನಿರ್ಮಾಪಕರು ಹೇಳುವ ಹಾಗೆ 60 ಜನ ಕಲಾವಿದರು ಈ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ.
ಕನ್ನಡ ಕಿರುತೆರೆ ಮತ್ತು ಬೇರೆ ಭಾಷೆಯ ಕಿರುತೆರೆ ಧಾರಾವಾಹಿಗಳು ಇದೆಲ್ಲವೂ ಈಗ ಬಹಳ ಮುಂದುವರೆದಿದೆ, ಒಂದು ಸಿನಿಮಾ ರೇಂಜ್ ಗೆ ಧಾರಾವಾಹಿಗಳು ತಯಾರಾಗುತ್ತಿದೆ. ಸಿನಿಮಾ ಥರದ ಅನುಭವವನ್ನೇ ಜನರಿಗೆ ಕೊಡಬೇಕು ಅನ್ನೋ ಉದ್ದೇಶ ಹೊಂದಿವೆ ಕಿರುತೆರೆ ವಾಹಿನಿಗಳು. ಈ ಕಾರಣಕ್ಕೆ ಬಹಳ ಎಫರ್ಟ್ಸ್ ಹಾಕಿ ಧಾರಾವಾಹಿಯ ಚಿತ್ರೀಕರಣ ಮಾಡಲಾಗುತ್ತದೆ. ವಿಷುವಲ್ ಕ್ವಾಲಿಟಿ ಕೂಡ ಅಷ್ಟೇ ಅದ್ಭುತವಾಗಿ ಕಾಣುತ್ತದೆ. ಕಲಾವಿದರು ಸಹ ಸುಂದರವಾಗಿ ಕಾಣುತ್ತಾರೆ. ಹೀಗೆ ಒಂದು ಧಾರಾವಾಹಿ ಎಲ್ಲಾ ವಿಚಾರದಲ್ಲೂ ಯಾವುದೇ ಸಿನಿಮಾಗೆ ಕಡಿಮೆ ಇಲ್ಲ ಎನ್ನುವ ಹಾಗೆಯೇ ತಯಾರಾಗುತ್ತಿದೆ. ಇದೀಗ ಲಕ್ಷ್ಮೀ ನಿವಾಸ ಬಗ್ಗೆ ಕೆಲವು ಸೀಕ್ರೆಟ್ಸ್ ಇಲ್ಲಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಧಾರಾವಾಹಿಗಳು ಇಷ್ಟು ಚೆನ್ನಾಗಿ ಮೂಡಿಬರುತ್ತಿರುವಾಗ ಇದರ ಬಜೆಟ್ ಎಷ್ಟು ಎನ್ನುವ ಪ್ರಶ್ನೆ ಸಹ ಬಂದೆ ಬರುತ್ತದೆ. ಅದಕ್ಕೆ ಲಕ್ಷ್ಮಿನಿವಾಸ ಧಾರಾವಾಹಿಯ ನಿರ್ಮಾಪಕಿ ನಿರ್ಮಲಾ ಅವರು ಉತ್ತರ ನೀಡಿದ್ದಾರೆ. ಅವರು ಹೇಳುವ ಹಾಗೆ ಲಕ್ಷ್ಮಿನಿವಾಸ ಧಾರಾವಾಹಿಯ ಬಜೆಟ್ 10 ಕೋಟಿ ರೂಪಾಯಿಗಳು, ಮೊದಲ 10 ದಿವಸದ ಎಪಿಸೋಡ್ ಶೂಟಿಂಗ್ ಅನ್ನು 100 ದಿನಗಳ ಕಾಲ ಮಾಡಿದ್ದಾರಂತೆ. ಕೆಲವೊಮ್ಮೆ ಒಂದು ದಿನಕ್ಕೆ ಒಂದೇ ಒಂದು ದೃಶ್ಯ ಚಿತ್ರೀಕರಣ ಆಗುವ ಸಂದರ್ಭಗಳು ಕೂಡ ಇರುತ್ತದೆಯಂತೆ. 60 ಕಲಾವಿದರು, 200 ತಂತ್ರಜ್ಞರ ತಂಡ ಇದ್ದು, ಐದಾರು ಲೋಕೇಶನ್ ಗಳಲ್ಲಿ ಬೇರೆ ಬೇರೆ ಡೈರೆಕ್ಟರ್ ಗಳು ಒಂದೇ ಬಾರಿ ಶೂಟಿಂಗ್ ಮಾಡುತ್ತಾರಂತೆ.

ಒಂದು ದಿನಕ್ಕೆ 1 ಗಂಟೆಯ ಸಂಚಿಕೆ ಬರುವಷ್ಟು ಕಂಟೆಂಟ್ ಕೊಡಲೇಬೇಕು, ಬಹಳ ಮುತುವರ್ಜಿ ವಹಿಸಿ ಎಲ್ಲಾ ಕೆಲಸಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ಬಜೆಟ್ 10 ಕೋಟಿ ಎಂದು ಕೇಳಿದರೆ ಎಂಥವರಿಗೂ ಆಶ್ಚರ್ಯ ಅನ್ನಿಸದೇ ಇರದು. ಸಿನಿಮಾಗಳು ಸಹ ಇದೇ ಬಜೆಟ್ ನಲ್ಲಿ ತಯಾರಾಗುತ್ತದೆ. ಕೆಲವು ಸಿನಿಮಾಗಳು ಇದಕ್ಕಿಂತ ಕಡಿಮೆ ಬಜೆಟ್ ನಲ್ಲಿ ತಯಾರಾಗುತ್ತದೆ. ಹಾಗಿರುವಾಗ ಧಾರವಾಹಿಗಳು ಈ ಮಟ್ಟಿಗೆ ಗುಣಮಟ್ಟ ಕೊಟ್ಟು, ಅದರ ಜೊತೆಗೆ ಒಳ್ಳೆಯ ಕಥೆ ಮನರಂಜನೆ ಎಲ್ಲವನ್ನು ಕೊಡುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಇದೇ ಕಾರಣಕ್ಕೆ ಏನೋ ಜನರು ಕೂಡ ಧಾರಾವಾಹಿಗಳ ಜೊತೆಗೆ ಬಹಳ ಕನೆಕ್ಟ್ ಆಗಿರುತ್ತಾರೆ. ತಮ್ಮದೇ ಕಥೆ ಎಂದು ಭಾವಿಸುತ್ತಾರೆ.



