ಜೀ ಕನ್ನಡ ವಾಹಿನಿಯ ‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಮನೆ ಮಾತಾಗಿದ್ದ ನಟಿ ಶಿಲ್ಪ ಅಯ್ಯರ್ ಸದ್ಯ, ಹೊಸದೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಶಿಲ್ಪ ಅಯ್ಯರ್ ಹಾಗೂ ಉದ್ಯಮಿ ಸಚಿನ್ ಮಾರ್ಚ್ 13ರಂದು ಅದ್ದೂರಿಯಾಗಿ ಮದುವೆಯಾಗಿದ್ದರು. ಇದೀಗ ಮದುವೆಯಾಗಿ 6 ತಿಂಗಳು ತುಂಬಿರುವ ಖುಷಿಗೆ ಶಿಲ್ಪ ರಕ್ತದಿಂದ ತನ್ನ ಗಂಡನ ಚಿತ್ರ ಬಿಡಿಸಿ ಪ್ರೇಮ್ ಹಾಕಿಸಿದ್ದಾರೆ. ಈ ರಕ್ತಚಿತ್ರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.


ಮದುವೆಯಾಗಿ 6 ತಿಂಗಳು ಕಳೆದಿರುವ ಸಂಭ್ರಮಕ್ಕೆ ಸೀರಿಯಲ್ ನಟಿ ಶಿಲ್ಪ ಪತಿಗೆ ಸ್ಪೆಷಲ್ ಗಿಫ್ಟ್ ನೀಡಲು ಎದುರು ನೋಡುತ್ತಿದ್ದರು. ಕೊನೆಗೆ ರಕ್ತದಿಂದ ಗಂಡನ ಚಿತ್ರ ಬಿಡಿಸಿ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ ಶಿಲ್ಪ ಸಂಜೀವ್ ಸಂಗಮ್ ಎನ್ನುವ ಆರ್ಟಿಸ್ಟ್ನ ಭೇಟಿ ಮಾಡಿ ತಮ್ಮ ರಕ್ತವನ್ನು ದಾನ ಮಾಡುವ ರೀತಿಯಲ್ಲಿ ಸಿರಿಂಜ್ ಫಿಲ್ ಮಾಡಿ ಕೊಟ್ಟಿದ್ದಾರೆ.
ಈ ರಕ್ತವನ್ನು ಬಳಸಿ ಸಂಗಮ್ ಎಂಬುವರು ಶಿಲ್ಪಾ ಪತಿ ಸೂಟ್ ಹಾಕಿರುವ ಫೋಟೋವನ್ನು ಬಿಡಿಸಿ ಫ್ರೇಮ್ ಹಾಕಿಕೊಟ್ಟಿದ್ದಾರೆ. ಹೀಗೆ ಮಾಡಿಸಲು ಶಿಲ್ಪ ಸುಮಾರು 6,000 -10,000 ರೂಪಾಯಿ ಖರ್ಚು ಮಾಡಿದ್ದಾರೆ. ಶಿಲ್ಪಾ ಬೆಳೆದಿದ್ದೆಲ್ಲಾ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ. ಪಕ್ಕಾ ಸಿಟಿ ಹುಡುಗಿ. ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ. ಕಾಂ ವಿದ್ಯಾಭ್ಯಾಸ ಮುಗಿಸಿದ ವಿದ್ವಾನ್ ಮಾರುತಿ ಪ್ರಸಾದ್ ಬಳಿ ಕರ್ನಾಟಕ ಸಂಗೀತವನ್ನು ಕಲಿತಿದ್ದಾರೆ.



