ತನಿಷಾ ಕುಪ್ಪಂಡ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿ ಆಗಮಿಸಿದ್ದರು, ಬಿಗ್ ಬಾಸ್ ನಿಂದಾಗಿ ಹೆಸರು ಮತ್ತು ಕೀರ್ತಿ ಎರಡು ಕೂಡ ಇವರಿಗೆ ಸಿಕ್ಕಿತು. ಬಿಗ್ ಬಾಸ್ ನಿಂದ ಹೊರ ಬಂದ ಮೇಲೆ ಕುಪ್ಪಂಡಾಸ್ ಜ್ಯುವೆಲರಿ ತೆರೆಯುವ ಮೂಲಕ ಆ ಕೆಲಸದಲ್ಲಿ ಬಿಜಿಯಾದರು.ಆನಂತರ ನಟನೆಯ ಜೊತೆಗೆ ಇದೀಗ ಸಿನಿಮಾ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿ ಆಗಿಯೂ ಕೂಡ ಗುರುತಿಸಿಕೊಂಡಿದ್ದಾರೆ. ಹೇಗೆ ತಮ್ಮ ವೃತ್ತಿ ಬದುಕನ್ನು ನಟನೆಯಿಂದ ನಿರ್ಮಾಣದತ್ತ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತನಿಷ ನಿರ್ಮಾಣ ಮಾಡುತ್ತಿರುವ ಸಿನಿಮಾದ ಹೆಸರು ಕೋಣ. ಸಿನಿಮಾದ ನಾಯಕ ನಟ ಕೋಮಲ್ ಕುಮಾರ್.

ತನಿಷಾ ಕೊಪ್ಪಂಡ ನಿರ್ಮಾಣದ ಮೊದಲ ಚಿತ್ರ ಕೋಣ. ಇದೆ ಅಕ್ಟೋಬರ್ ತಿಂಗಳು 31 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ತನಿಷಾ ಕೊಪ್ಪಂಡ ನಟಿಯಿಂದ ನಿರ್ಮಾಪಕಿಯಾಗಿ ಬಡ್ತಿ ಪಡೆದುಕೊಂಡು ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.
ಈ ಸಿನಿಮಾದಲ್ಲಿ ನಾನು ಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಕೋಮಲ್ ರವರು ನಾರಾಯಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದು ಅವರ ಹೆಂಡತಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ನೀವು ಇಷ್ಟು ದಿನ ನನ್ನನ್ನು ನೋಡಿರದ ಪಾತ್ರದಲ್ಲಿ ನಾನು ಕಾಣಿಸಿಕೊಂಡಿದ್ದೇನೆ. ತನುಷ ಹೀಗೂ ನಟಿಸುತ್ತಾರ ಎಂಬ ಅಚ್ಚರಿ ನಿಮಗೆ ಉಂಟಾಗುತ್ತದೆ. ಈ ಚಿತ್ರಕ್ಕೆ ನನ್ನ ಜೊತೆಗೆ ರವಿಕಿರಣ್ ಮತ್ತು ಕಾರ್ತಿಕ್ ಎಂಬ ಇಬ್ಬರು ನಿರ್ಮಾಪಕರು ಕೂಡ ಇದ್ದಾರೆ.
ಇದೀಗ ಸಿನಿಮಾವನ್ನು ಬಿಡುಗಡೆ ಮಾಡುವ ಸಮಯ. ಕೋಣ ಎಂಬ ಪದ ನನಗೆ ಹೆಚ್ಚಾಗಿ ಕನೆಕ್ಟ್ ಆಗಿದೆ ಏಕೆಂದರೆ ನಾನು ಚಿಕ್ಕವಳಾಗಿದ್ದಾಗ ಶಾಲೆಯಲ್ಲಿ ನನ್ನನ್ನು ಕೋಣ ಎಂದು ಕರೆಯುತ್ತಿದ್ದರು ಆಗ ನನಗೆ ಕೋಪ ಬರುತ್ತಿತ್ತು. ಆದರೆ ಇದೀಗ ಕೋಣ ಸಿನಿಮಾ ನಿರ್ಮಾಣ ಮಾಡುತ್ತಿರುವುದು ನನಗೆ ಖುಷಿ ತಂದಿದೆ.
ಇದೊಂದು ನೈಜ ಕಥೆಯನ್ನು ಆದರಿಸಿದ ಚಿತ್ರವಾಗಿದ್ದು ಅದ್ಭುತವಾಗಿ ಮೂಡಿ ಬಂದಿದೆ. ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಹರಿಕೃಷ್ಣರವರು ಈ ಸಿನಿಮಾದ ನಿರ್ದೇಶಕರು. ಈ ಚಿತ್ರದಲ್ಲಿ ನಾನು ಸೇರಿದಂತೆ ಕೋಮಲ್, ಶಿಶಿರ್ ಶಾಸ್ತ್ರಿ, ಕೀರ್ತಿರಾಜ್, ರಿತ್ವಿ ಜಗದೀಶ್, ರಾಘು ರಾಮನಕೊಪ್ಪ, ಎಂ ಕೆ ಮಠ, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ಅನಂತ್, ಗೋಲ್ಡ್ ಸುರೇಶ್, ಸುಶ್ಮಿತಾ, ಜಗ್ಗಪ್ಪ, ಮಂಜು ಪಾವಗಡ, ನಮ್ರತಾ ಗೌಡ, ಕುರಿ ಸುನಿಲ್, ವಿನಯ್ ಗೌಡ, ಏಕೆ ಬಹು ತಾರಾ ಬಳಗವೇ ಈ ಸಿನಿಮಾದಲ್ಲಿದೆ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾವನ್ನು ಅಕ್ಟೋಬರ್ 31ರಂದು ಚಿತ್ರಮಂದಿರದಲ್ಲಿ ನೋಡಿ ಪ್ರೋತ್ಸಾಹಿಸಿ ಆಶೀರ್ವದಿಸಿ ಎಂದು ಕೇಳಿಕೊಳ್ಳುತ್ತಾ ತಮ್ಮ ಅದೃಷ್ಟ ಪರೀಕ್ಷೆಗೆ ತನಿಷಾ ಕುಪ್ಪಂಡ ಮುಂದಾಗಿದ್ದಾರೆ.



