ಕಳೆದ ಒಂದು ವಾರದಿಂದ ನಟಿ ರಚಿತಾರಾಮ್ ಸುದ್ದಿಯಲ್ಲಿ ಇದ್ದಾರೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಚಿತ್ರದಲ್ಲಿ ನಟಿಸಿ ಸಿನಿಮಾ ಬಿಡುಗಡೆ ವೇಳೆ ಪ್ರಚಾರಕ್ಕೆ ಹೋಗದೇ ಇದ್ದಿದ್ದು ಈಗ ದೊಡ್ಡ ಸುದ್ದಿಯಾಗುವಂತೆ ಮಾಡಿಕೊಂಡಿದ್ದಾರೆ. ಅಷ್ಟೆ ಅಲ್ಲ ರಚಿತಾ ರಾಮ್ ವಿರುದ್ಧ ದೂರನ್ನೂ ಕೂಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ನೀಡಲಾಗಿದೆ. ಈ ಮಧ್ಯೆ ಒಂದಾದರ ಮೇಲೊಂದರಂತೆ ವಿವಾದದ ಸುಳಿಗೆ ಡಿಂಪಲ್ ಕ್ವೀನ್ ಸಿಕ್ಕಾಕಿಕೊಂಡಿದ್ದಾರೆ.

ಹೌದು, ನಟಿ ರಚಿತಾರಾಮ್ ವಿರುದ್ಧ ಈಗ ಮತ್ತೊಂದು ದೂರು ದಾಖಲಾಗಿದೆ. ಒಂದರ ಮೇಲೊಂದರಂತೆ ಎರಡ್ಮೂರು ದಿನದಲ್ಲಿ ಎರಡು ದೂರುಗಳು ಇವರ ವಿರುದ್ಧ ಮಂಡಳಿಗೆ ಹೋಗಿದೆ. ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕರೊಬ್ಬರು ನಟಿಯ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದೆ ಸಿನಿಮಾಗಾಗಿ ನಟಿಸುತ್ತೇನೆ ಅಂತ ಹೇಳಿ ಅಡ್ವಾನ್ಸ್ ಹಣ ಪಡೆದಿದ್ದರು. ಆದರೆ ಈ ಹಣ ವಾಪಸ್ ಕೊಡದೆ ರಚಿತಾ ರಾಮ್ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕಳೆದ 8 ವರ್ಷಗಳ ಹಿಂದೆ ಉಪೇಂದ್ರ ಮತ್ತು ರಚಿತಾ ನಟನೆಯಲ್ಲಿ ಉಪ್ಪಿ ರುಪ್ಪಿ ಎಂಬ ಸಿನಿಮಾ ಮೂಡಿ ಬರಬೇಕಿತ್ತು. ಈ ಸಿನಿಮಾಗಾಗಿ ಎಲ್ಲವೂ ಸೆಟ್ ಆಗಿತ್ತು. ಈ ವೇಳೆ ನೀಡಿದ್ದ ಅಡ್ವಾನ್ಸ್ ವಾಪಾಸ್ ನೀಡದ ಗುಳಿಕೆನ್ನೆ ಚಲುವೆ ಆಡವಾಡುತ್ತಿದ್ದಾರೆ ಅಂತ ದೂರು ಕೇಳಿ ಬಂದಿದೆ. ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ನಿರ್ಮಾಣದ ಸಿನಿಮಾ ಇದಾಗಿದ್ದು, ಕೆ. ಮಾದೇಶ್ ನಿರ್ದೇಶನದ ಸಿನಿಮಾ ಇದಾಗಿತ್ತು.

ಸುಮಾರು 23 ಲಕ್ಷ ಸಂಭಾವನೆ ಪಡೆದ ಕಮಿಟ್ ಆಗಿದ್ದ ರಚಿತಾ ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರಂತೆ. ಅಷ್ಟೆ ಅಲ್ಲ 2017 ರಲ್ಲಿ ಬ್ಯಾಂಕಾಕ್ ನಲ್ಲಿ ಶೂಟಿಂಗ್ ಪ್ಲಾನ್ ಕೂಡ ಮಾಡಿಕೊಂಡಿತ್ತಂತೆ ಚಿತ್ರತಂಡ. ಬಳಿಕ ಸಿನಿಮಾ ಶೂಟಿಂಗ್ ಗೆ ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್ ಗೆ ಟಿಕೆಟ್ ಬುಕ್ ಮಾಡಿದ್ರಂತೆ ನಿರ್ಮಾಪಕರು. ಆದರೆ ಸಿನಿಮಾ ಶೂಟಿಂಗ್ ಗೆ ರಚಿತಾ ಬಂದಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ ಆಗ ಬರ್ತೀನಿ ಅಂತ ಆಟ ಆಡಿಸಿದ್ದಾರಂತೆ ರಚಿತಾ ರಾಮ್.
15 ದಿನ ಪ್ರತಿ ದಿನ ಟಿಕೆಟ್ ಬುಕ್ ಮಾಡಿ ಸೂಟ್ ರೂಮ್ ಬುಕ್ ಮಾಡಿಕೊಂಡು ಕಾದಿದ್ದರಂತೆ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್. ಬಳಿಕ ಬಂದ ಜಾಗ ಸುಂಕ ವಿಲ್ಲ ಅಂತ ಹೀರೋ ಪಾರ್ಟ್ ಶೂಟ್ ಮಾಡಿಕೊಂಡು ವಾಪಾಸ್ ಆಗಿದೆ ಚಿತ್ರತಂಡ.
ರಚಿತಾ ರಾಮ್ ನಿಂದ ಒಂದೂವರೆ ಕೋಟಿ ಕಳೆದುಕೊಂಡಿದ್ದಾರಂತೆ ನಿರ್ಮಾಪಕಿ. ಒಂದು ದಿನ ಮಾತ್ರ ಸಿನಿಮಾ ಶೂಟಿಂಗ್ ನಡೆದಿದೆ. ಮೈಸೂರಿನಲ್ಲಿ ನಡೆದ ಶೂಟಿಂಗ್ ನಲ್ಲಿ ಮಾತ್ರ ಭಾಗಿಯಾಗಿದ್ದರಂತೆ ರಚಿತಾ ರಾಮ್.

ಸದ್ಯ ರಚಿತಾ ಕಾರಣದಿಂದ ಅರ್ಧಕ್ಕೆ ನಿಂತು ಹೋಗಿದೆ ಈ ಸಿನಿಮಾ. 35 ಪರ್ಸೆಂಟ್ ಕಂಪ್ಲೀಟ್ ಆಗಿ ಈ ಸಿನಿಮಾ ನಿಂತು ಹೋಗಿದ್ದು, ಹಣವು ಇಲ್ಲ ಸಿನಿಮಾನೂ ಕಂಪ್ಲೀಟ್ ಆಗಲಿಲ್ಲ ಅಂತ ಅಳಲು ತೋಡಿಕೊಂಡಿದ್ದಾರೆ ನಿರ್ಮಾಪಕಿ ಎನ್ನಲಾಗಿದೆ. ಅಂದಿನಿಂದಲೂ ಸಂಪರ್ಕಕ್ಕೆ ಸಿಗದೇ ಸತಾಯಿಸುತ್ತಿದ್ದಾರಂತೆ ಈ ನಟಿ. ಸದ್ಯ ಕೊನೆಯ ಮಾರ್ಗ ಎನ್ನುವಂತೆ ಫಿಲ್ಮ್ ಚೇಂಬರ್ ಗೆ ಎರಡು ತಿಂಗಳ ಹಿಂದೆ ದೂರು ನೀಡಿದ್ದಾರೆ ನಿರ್ಮಾಪಕಿ ವಿಜಯಲಕ್ಷ್ಮಿ.
ಸದ್ಯ ಎರಡು ದೂರುಗಳು ಇವರ ವಿರುದ್ಧ ದಾಖಲಾಗಿವೆ. ಅತ್ತ ಸಿನಿಮಾ ಪ್ರಚಾರಕ್ಕೂ ಕೈ ಕೊಟ್ರು. ಇತ್ತ ಸಿನಿಮಾ ಮಾಡ್ತೀನಿ ಅಂತ ಹಣ ಪಡೆದು ಕೈಗೆ ಸಿಗದ ಹಾಗೆ ಓಡಾಡುತ್ತಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಈಗಲಾದ್ರೂ ಹಣ ಹಿಂದಿರುಗಿಸುತ್ತಾರ ರಚಿತಾ ಕಾದು ನೋಡ್ಬೇಕು.



