ನಟ ರಿಷಬ್ ಶೆಟ್ಟಿ ಅವರು ನಿನ್ನೆಯಷ್ಟೇ ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ರಿಷಬ್, ಛತ್ರಪತಿ ಮಹಾರಾಜ್ ಶಿವಾಜಿ ಅವರ ಪಾತ್ರದಲ್ಲಿ ಅವರ ಜೀವನ ಚರಿತ್ರೆಯಲ್ಲಿ ನಟಿಸುತ್ತಿದ್ದು, ಸಂದೀಪ್ ಅವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ, ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಲಾಯಿತು. ಆದರೆ ಹೊಸ ಸಿನಿಮಾ ಅನೌನ್ಸ್ ಆಗ್ತಿದ್ದ ಹಾಗೆ, ಇದೀಗ ರಿಷಬ್ ಅವರ ವಿರುದ್ಧ ಟೀಕೆಗಳು ಶುರುವಾಗಿದ್ದು, ಅವರನ್ನು ಬಾಯ್ಕಾಟ್ ಮಾಡಬೇಕು ಎನ್ನುವ ಹಂತಕ್ಕೆ ಇಷ್ಯು ಆಗಿದೆ. ಬಾಯ್ಕಾಟ್ ರಿಷಬ್ ಶೆಟ್ಟಿ ಎನ್ನುವ ಹ್ಯಾಶ್ ಟ್ಯಾಗ್ ವೈರಲ್ ಆಗುತ್ತಿದೆ.
ಅಷ್ಟಕ್ಕೂ ಈ ರೀತಿ ಆಗ್ತಿರೋದ್ಯಾಕೆ ಎಂದು ನೋಡುವುದಾದರೆ, ರಿಷಬ್ ಶೆಟ್ಟಿ ಅವರು ಅಭಿನಯಿಸಲಿರುವುದು ಛತ್ರಪತಿ ಮಹಾರಾಜ್ ಶಿವಾಜಿ ಅವರ ಪಾತ್ರದಲ್ಲಿ, ಈ ನಿರ್ಧಾರದಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ರಿಷಬ್. ಹಲವರು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಅವರ ವಿರುದ್ಧ ಗುಡುಗುತ್ತಿದ್ದಾರೆ, ಇನ್ನು ಕೆಲವರು ರಿಷಬ್ ಅವರ ಪರವಾಗಿಯೂ ಮಾತನಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ನಟನ ವಿರುದ್ಧ ಪರ ವಿರುದ್ಧದ ಬ್ಯಾಟಿಂಗ್ ಜೋರಾಗಿ ನಡೆಯುತ್ತಲೇ ಇದೆ. ಜನರು ಹೇಳುತ್ತಿರುವುದು ಏನು ಎಂದರೆ, ಕನ್ನಡಿಗರನ್ನು ದಾಳಿ ಮಾಡಿದ ಶಿವಾಜಿ ಮಹಾರಾಜ್ ಪಾತ್ರದಲ್ಲಿ ರಿಷಬ್ ನಟಿಸಬೇಕಾ ಎನ್ನುವುದಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಪಾತ್ರ ಅವರಿಗೆ ಬೇಕಿರಲಿಲ್ಲ, ರಿಷಬ್ ಕನ್ನಡ ವಿರೋಧಿ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಅವರ ವಿರುದ್ಧ ದಾಳಿ ನಡೆಯುತ್ತಿದೆ. ಬಾಯ್ಕಾಟ್ ರಿಷಬ್ ಶೆಟ್ಟಿ ಎನ್ನುವ ಹ್ಯಾಶ್ ಟ್ಯಾಗ್ ಅನ್ನು ಸಹ ಶುರು ಮಾಡಲಾಗಿದ್ದು, ಇದೀಗ ಈ ಹ್ಯಾಶ್ ಟ್ಯಾಗ್ ವೈರಲ್ ಆಗಿದೆ. ಹೆಚ್ಚು ಹೆಚ್ಚು ಜನರು ರಿಷಬ್ ಶೆಟ್ಟಿ ಅವರನ್ನು ಕನ್ನಡ ಚಿತ್ರರಂಗದಿಂದ ಬಾಯ್ಕಾಟ್ ಮಾಡಬೇಕು ಎಂದು ತುದಿಗಾಲಲ್ಲಿ ನಿಂತಿದ್ದಾರೆ. ಅನೌನ್ಸ್ಮೆಂಟ್ ಆದ ಒಂದೇ ದಿನಕ್ಕೆ ರಿಷಬ್ ಅವರ ಹೊಸ ಸಿನಿಮಾಗೆ ಈ ರೀತಿ ನೆಗಟಿವ್ ಪ್ರಚಾರ ಆಗುತ್ತಲಿದೆ. ಈ ಬಗ್ಗೆ ಚಿತ್ರತಂಡ ಇನ್ನು ಸಹ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ..

ಹಾಗೆಯೇ ರಿಷಬ್ ಶೆಟ್ಟಿ ಅವರು ಸಹ ಏನನ್ನು ಮಾತನಾಡಿಲ್ಲ, ಈ ಚರ್ಚೆ, ಪರ ವಿರೋಧದ ಡಿಬೆಟ್ ಗಳಂತೂ ಜೋರಾಗಿಯೇ ನಡೆಯುತ್ತಿದೆ. ರಿಷಬ್ ಶೆಟ್ಟಿ ಅವರ ಬಗ್ಗೆ ಈ ರೀತಿಯ ವಿರೋಧ ವ್ಯಕ್ತ ಆಗುತ್ತಿರುವುದು ಇದೇ ಮೊದಲು. ಕನ್ನಡದಲ್ಲಿ ಕಾಂತಾರ ಸಿನಿಮಾ ಮಾಡಿ, ಇಡೀ ಭಾರತ ಚಿತ್ರರಂಗ ಕರ್ನಾಟಕದ ಕಡೆಗೆ ತಿರುಗಿ ನೋಡುವ ಹಾಗೆ ಮಾಡಿದವರು ರಿಷಬ್. ಈ ಸಿನಿಮಾಗಾಗಿ ರಿಷಬ್ ಶೆಟ್ಟಿ ಅವರು ನ್ಯಾಷನಲ್ ಅವಾರ್ಡ್ ಸಹ ಪಡೆದರು. ಕಾಂತಾರದಂಥ ಸಿನಿಮಾ ಮಾಡಿದ ಬಳಿಕ, ಕಾಂತಾರ ಪ್ರೀಕ್ವೆಲ್ ನಲ್ಲಿ ರಿಷಬ್ ಅವರು ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಚಿತ್ರೀಕರಣ ನಡೆಯುತ್ತಿದೆ.
ಇದರ ಜೊತೆಗೆ ತೆಲುಗಿನ ಹನುಮಾನ್ ಸಿನಿಮಾದಲ್ಲಿ ರಿಷಬ್ ಅವರು ಹನುಮಂತನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಈಗಾಗಲೇ ಅನೌನ್ಸ್ ಆಗಿದೆ. ಅದರ ಜೊತೆಗೆ ಮತ್ತೊಂದು ಸಿನಿಮಾ ನಿನ್ನೆ ಅಷ್ಟೇ ಅನೌನ್ಸ್ ಆಗಿದ್ದು, ಈ ರೀತಿಯ ಪ್ರತಿಕ್ರಿಯೆಗಳು ಕೇಳಿಬರುತ್ತಿದೆ. ರಿಷಬ್ ಶೆಟ್ಟಿ ಅವರು ಜನರ ಈ ಕೋಪ, ಚರ್ಚೆ ಇದೆಲ್ಲವನ್ನು ನೋಡಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ? ಈ ಪ್ರಾಜೆಕ್ಟ್ ಇಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ಏನಾದರೂ ಮಾಡುತ್ತಾರಾ? ಇದೆಲ್ಲವನ್ನು ಮುಂದಿನ ದಿನಗಳಲ್ಲಿ ನೋಡಬೇಕಿದೆ. ಸಧ್ಯಕ್ಕೆ ಎಲ್ಲರೂ ಕೂಡ ರಿಷಬ್ ಶೆಟ್ಟಿ ಅವರ ಪ್ರತಿಕ್ರಿಯೆ ಹೇಗಿರುತ್ತದೆ ಎನ್ನುವುದಕ್ಕೆ ಕಾಯುತ್ತಿದ್ದಾರೆ..



