ಬಿಗ್ ಬಾಸ್ ಸೀಸನ್ ಒಂಬತ್ತು ಇನ್ನೇನು ಕೊನೆಯ ಹಂತ ತಲುಪುತ್ತಿದೆ. ಈ ಬಾರಿಯ ಬಿಗ್ ಬಾಸ್ ಗೆಲುವಿನ ಕಿರೀಟವನ್ನು ಯಾರು ತೊಟ್ಟುಕೊಳ್ಳುತ್ತಾರೆ ಎನ್ನುವುದು ಬಹಳ ಕುತೂಹಲಕಾರಿಯಾಗಿದೆ. ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಜನರು ವೋಟ್ ಮಾಡುವುದರ ಮೂಲಕ ಪ್ರತಿವಾರ ಸೇವ್ ಮಾಡುತ್ತಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಗೆದ್ದ ಸ್ಪರ್ಧಿಗೆ ನಗದು ಬಹುಮಾನ ಸಿಗುತ್ತದೆ ಆದರೆ ಬಿಗ್ ಬಾಸ್ ಮನೆಯಲ್ಲಿ ಎಷ್ಟು ದಿನ ಇದ್ದಾರೆ ಎನ್ನುವ ಆಧಾರದ ಮೇಲೆ ಇತರ ಸ್ಪರ್ಧಿಗಳಿಗೂ ಕೂಡ ಸಂಭಾವನೆ ನೀಡಲಾಗುತ್ತದೆ.

ಬಿಗ್ ಬಾಸ್ ಮನೆಯ ಹೊರಗಡೆ ಅಂದರೆ ಹೊರ ಪ್ರಪಂಚದಲ್ಲಿ ಸ್ಪರ್ಧಿಗಳಾಗಿದ್ದವರು ಎಷ್ಟು ಫೇಮಸ್ ಇದ್ದಾರೆ ಎನ್ನುವ ಆಧಾರದ ಮೇಲೆ ಅವರ ಸಂಭಾವನೆ ನಿರ್ಧಾರವಾಗುತ್ತದೆ. ಮೊದಲನೆಯದಾಗಿ ಅನುಪಮಾ ಗೌಡ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಆಗಿರುವ ಪುಟ್ಟಗೌರಿ ಮದುವೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಪ್ರಿಯತೆಯನ್ನು ಪಡೆದಿದ್ದ ಕಾವ್ಯಶ್ರೀ ಗೌಡ ಅವರು ಈ ಬಾರಿಯ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು.
ಬಿಗ್ ಬಾಸ್ ಕನ್ನಡ ಸೀಸನ್ 9ರ 9ನೇ ವಾರದಂದು ಕಾವ್ಯಶ್ರೀ ಗೌಡ ಅವರು ಮನೆಯಿಂದ ಹೊರ ಬಂದಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಕಾವ್ಯಶ್ರೀ ಗೌಡ ಅವರು ಪಡೆದುಕೊಂಡಿರುವ ಒಟ್ಟಾರೆ ಸಂಭಾವನೆ ಎಷ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. 9ನೇ ವಾರದಂದು ಬಿಗ್ ಬಾಸ್ ಮನೆಯಿಂದ ಹೊರ ಹೋಗಿರುವ ಕಾವ್ಯಶ್ರೀ ಗೌಡ ಅವರು ವಾರಕ್ಕೆ ಮೂರು ಲಕ್ಷ ರೂಪಾಯಿ ಅಂತೆ ಒಟ್ಟಾರೆಯಾಗಿ 9 ವಾರಗಳಿಗೆ 27 ಲಕ್ಷ ಸಂಭಾವನೆಯನ್ನು ಎಲಿಮಿನೇಷನ್ ಆಗಿ ಸಂಪಾದಿಸಿದ್ದಾರೆ. ನಿಜಕ್ಕೂ ಕೂಡ ಇದೊಂದು ದೊಡ್ಡ ಮೊತ್ತವೇ ಸರಿ ಎಂದು ಹೇಳಬಹುದಾಗಿದೆ.