ಇಂದು ನಾವು ಮಾತಾಡ್ತಾ ಇರೋದು ಕನ್ನಡ ಚಿತ್ರರಂಗದಲ್ಲೂ ತಮ್ಮದೇ ಆದ ರೀತಿಯಲ್ಲಿ ಛಾಪು ಮೂಡಿಸಿ, ಗ್ಲಾಮರ್ ಪಾತ್ರಗಳಿಗೆ ಹೆಚ್ಚು ಹೆಸರುವಾಸಿ ಆಗಿದ್ದ ನಟಿ ನಗ್ಮಾ ಅವರ ಬಗ್ಗೆ. ಇವರ ಸಿನಿಮಾಗಳು ಯಾವ ಮಟ್ಟಿಗೆ ಸೂಪರ್ ಹಿಟ್ ಆಗುತ್ತಿದ್ದವು ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ನಗ್ಮಾ ಅವರು ಮೂಲತಃ ಉತ್ತರ ಭಾರತದವರಾದರು ಇವರಿಗೆ ಒಳ್ಳೆಯ ಹೆಸರು ಮತ್ತು ಜನಪ್ರಿಯತೆ ಸಿಕ್ಕಿದ್ದು, ದಕ್ಷಿಣ ಭಾರತದಲ್ಲಿ.
ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದವರು. 90ರ ದಶಕದಲ್ಲಿ ನಗ್ಮಾ ಅವರ ಗ್ಲಾಮರಸ್ ಬ್ಯೂಟಿಗೆ ಮನಸೋಲದವರಿಲ್ಲ ಎಂದು ಯಾವುದೇ ಸಂದೇಹವಿಲ್ಲದೇ ಹೇಳಬಹುದು. ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ರವಿಮಾಮ, ವಿಷ್ಣುವರ್ಧನ್ ಅವರ ಹೃದಯವಂತ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳಿನಲ್ಲಿ ಪ್ರಭುದೇವ ಅವರೊಡನೆ ನಟಿಸಿದ ಕಾದಲನ್ ಸಿನಿಮಾ ಇಂದಿಗೂ ಎವರ್ ಗ್ರೀನ್ ಆಗಿದೆ.

ಗ್ಲಾಮರ್ ಹಾಗೂ ಒಳ್ಳೆಯ ಪಾತ್ರಗಳು ಎರಡು ಥರದ ಸಿನಿಮಾಗಳನ್ನು ಮಾಡಿಕೊಂಡು ಯಶಸ್ವಿ ಆಗಿರುವ ನಟಿ ನಗ್ಮಾ ಅವರಿಗೆ ಈಗ ವಯಸ್ಸು 49. ಆದರೆ ಇನ್ನೂ ಕೂಡ ಇವರಿಗೆ ಮದುವೆಯಾಗಿಲ್ಲ. ಕೆಲವು ನಟರ ಜೊತೆಗೆ ನಗ್ಮಾ ಅವರ ಹೆಸರು ನಾಲ್ಕು ಬಾರಿ ಕೇಳಿಬಂದಿತ್ತು, ಆದರೆ ಯಾವುದು ಕೂಡ ಮದುವೆವರೆಗೂ ತಲುಪಲಿಲ್ಲ. ನಟಿ ನಗ್ಮಾ ಅವರು ಮೊದಲಿಗೆ ಸೌರಭ್ ಗಂಗೂಲಿ ಅವರೊಡನೆ ಪ್ರೀತಿಯಲ್ಲಿ ಬಿದ್ದಿದ್ದರಂತೆ. ಅದಾಗಲೇ ಅವರಿಗೆ ಮದುವೆಯಾಗಿತ್ತು. ಹಾಗಿದ್ದರೂ ಪ್ರೀತಿಯಲ್ಲಿದ್ದರು.
ಆದರೆ ಸೌರಭ್ ಗಂಗೂಲಿ ಅವರ ಪತ್ನಿಗೆ ಈ ವಿಷಯ ಗೊತ್ತಾಗಿ ಇಬ್ಬರ ಸಂಬಂಧ ಮುರಿದುಬಿತ್ತು. ಸೌರಭ್ ಅವರಿಗೆ ನಗ್ಮಾ ಅವರನ್ನು ಮದುವೆಯಾಗಬೇಕು ಎಂದು ಆಸೆ ಇತ್ತಂತೆ. ಇದಾದ ಬಳಿಕ ತಮಿಳು ನಟ ಶರತ್ ಕುಮಾರ್ ಅವರೊಡನೆ ಪ್ರೀತಿಯಲ್ಲಿದ್ದರಂತೆ ನಟಿ ನಗ್ಮಾ. ಶರತ್ ಕುಮಾರ್ ಅವರಿಗೂ ಕೂಡ ಮದುವೆಯಾಗಿತ್ತು, ಈ ಕಾರಣಕ್ಕೆ ಇವರಿಬ್ಬರ ಪ್ರೀತಿ ಮದುವೆವರೆಗೂ ಹೋಗಲಿಲ್ಲ. ಅಷ್ಟೇ ಅಲ್ಲದೇ ನಟ ರವಿ ಕಿಶನ್ ಅವರೊಡನೆ ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದು ಕೂಡ ಹೇಳಲಾಗಿತ್ತು.
ಆದರೆ ಇವರಿಬ್ಬರ ನಡುವೆ ಬ್ರೇಕಪ್ ಆಯಿತು. ಬಳಿಕ ಭೋಜಪುರಿ ನಟ ಮನೋಜ್ ತಿವಾರಿ ಅವರೊಡನೆ ಲವ್ ನಲ್ಲಿದ್ದರು ಸಹ, ಹೆಚ್ಚು ದಿವಸ ಮುಂದುವರೆಯಲಿಲ್ಲ. ಈಗ ನಗ್ಮಾ ಅವರು ಬಾಲಿವುಡ್ ನಟರೊಬ್ಬರ ಜೊತೆಗೆ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೆ ಇವರಿಬ್ಬರ ಮದುವೆ ನಡೆಯಲಿದೆ ಎನ್ನುವ ಸುದ್ದಿಯೊಂದು ಕೇಳಿಬಂದಿದೆ. ಆದರೆ ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎನ್ನುವುದು ತಿಳಿದು ಬಂದಿಲ್ಲ. ನಗ್ಮಾ ಅವರ ಕಡೆಯಿಂದ ಅಧಿಕೃತ ಮಾಹಿತಿಗಾಗಿ ಕಾಯಬೇಕಿದೆ.



