ಬಿಗ್ ಬಾಸ್ ಕನ್ನಡ ಶೋ ಅಂದ್ರೆ ಎಲ್ಲರಿಗೂ ವಿಶೇಷ ಆಸಕ್ತಿ. ಈ ಶೋಗೆ ಬರೋ ಸೆಲೆಬ್ರಿಟಿಗಳು ಒಂದೇ ಮನೆಯಲ್ಲಿ ಹೇಗಿರುತ್ತಾರೆ? ಹೊಂದಾಣಿಕೆ ಹೇಗಿರುತ್ತದೆ? ಟಾಸ್ಕ್ ಗಳು ಹೇಗಿರುತ್ತದೆ ಈ ಎಲ್ಲಾ ಕುತೂಹಲ ಜನರಲ್ಲಿ ಇರುತ್ತದೆ. ಅದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಅವರು ಈ ಶೋ ನ ಮೂಲ ಆಕರ್ಷಣೆ ಎಂದರೆ ತಪ್ಪಲ್ಲ. ಬಹಳಷ್ಟು ಜನರು ಬಿಗ್ ಬಾಸ್ ಶೋ ನೋಡೋದೇ ಸುದೀಪ್ ಅವರಿಗೋಸ್ಕರ ಎಂದರೆ ತಪ್ಪಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಹೆಚ್ಚು ಪ್ರಸಿದ್ಧಿ, ಪ್ರತಿ ವಾರ ಈ ಮನೆಯಿಂದ ಒಬ್ಬೊಬ್ಬ ಸ್ಪರ್ಧಿಗಳು ಎಲಿಮಿನೇಟ್ ಆಗಿ ಹೊರಬರುತ್ತಾರೆ.
ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳನ್ನ ಸುಮ್ಮನೆ ಕಳಿಸುವುದಿಲ್ಲ. ಅವರಿಗೆ ವಾರಕ್ಕೆ ಇಷ್ಟು ಎಂದು ಸಂಭಾವನೆ ನಿಗದಿ ಮಾಡಲಾಗಿರುತ್ತದೆ. ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿರುವುದು ತುಕಾಲಿ ಸಂತೋಷ್ ಹೆಂಡತಿ ಮಾನಸ ಸಂತೋಷ್. ಇವರು ಮನೆಯಲ್ಲಿ ಇದ್ದಷ್ಟು ದಿನವೂ ಹೊರಗಿನ ಜನರಿಗೆ ಇವರ ಬುದ್ಧಿ ಇಷ್ಟ ಆಗಿರಲಿಲ್ಲ..ಮಾನಸ ಮೊದಲು ಹೊರಗಡೆ ಬರಬೇಕು ಎನ್ನುವುದು ಹೊರಗಿನ ಜನರ ಅಭಿಪ್ರಾಯ ಆಗಿತ್ತು. ಸಾಕಷ್ಟು ಟ್ರೋಲ್ ಪೇಜ್ ನವರು ಇವರನ್ನು ಸಿಕ್ಕಾಪಟ್ಟೆ ಟ್ರೋಲ್ ಕೂಡ ಮಾಡಿದ್ದರು..

ಕೊನೆಗೂ ಮಾನಸ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದಿದ್ದಾಗಿದೆ. ಕಳೆದ ಸೀಸನ್ ನಲ್ಲಿ ಇವರ ಗಂಡ ತುಕಾಲಿ ಸಂತೋಷ್ ಅವರು ಸ್ಪರ್ಧಿಯಾಗಿ ಬಂದು, ಫಿನಾಲೆವರೆಗು ತಲುಪಿದ್ದರು. ಆಗ ಫ್ಯಾಮಿಲಿ ಬಂದ ವೇಳೆ ಮಾನಸ ಕೂಡ ಬಂದಿದ್ದರು, ಅಂದು ಮಾನಸ ಮಾತನಾಡಿದ ರೀತಿಯನ್ನು ಜನರು ತುಂಬಾ ಇಷ್ಟಪಟ್ಟು, ಮಾನಸ ಮಾಡೋ ಕಾಮಿಡಿಗೆ ಮನಸೋತಿದ್ದರು, ಇವರೇ ಸ್ಪರ್ಧಿಯಾಗಿ ಬರಬೇಕು ಎಂದು ಬಯಸಿದ್ದರು. ಅದರಂತೆ ಮಾನಸ ಬಂದಿದ್ದಾಯಿತು. ಆದರೆ ಹೆಚ್ಚು ದಿವಸ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ.
ಸ್ಪರ್ಧಿಯಾಗಿ ಬಂದ ಬಳಿಕ ಜನರಿಗೆ ಇವರ ವರ್ತನೆ ಇಷ್ಟವಾಗಲಿಲ್ಲ. ಜನರು ಬಯಸಿದಂತೆ ಈಗ ಮಾನಸ ಮನೆಯಿಂದ ಹೊರಬಂದಿದ್ದಾರೆ. ಆದರೆ ಇವರು ಬರಿಗೈಯಲ್ಲಿ ಹೊರಬಂದಿಲ್ಲ, ಮಾನಸ ಅವರಿಗೆ ಒಳ್ಳೆಯ ಮೊತ್ತವೆ ಸಿಕ್ಕಿದೆ. ಬಿಗ್ ಬಾಸ್ ಕಡೆಯಿಂದ ಒಟ್ಟು 1.50 ಲಕ್ಷ ರೂಪಾಯಿ ಗೌರವಾನ್ವಿತ ಧನವಾಗಿ ಕೊಟ್ಟಿದ್ದಾರೆ. ಇದಷ್ಟೇ ಅಲ್ಲದೇ ಇನ್ನು 1 ಲಕ್ಷ ರೂಪಾಯಿ ಸಿಕ್ಕಿದೆ. ಅದು ಒಂದು ಮೊಬೈಲ್ ಸ್ಟೋರ್ ಇಂದ 50 ಸಾವಿರ ರೂಪಾಯಿಯ ಗಿಫ್ಟ್ ವೋಚರ್ ಮಾನಸ ಅವರಿಗೆ ಉಡುಗೊರೆಯಾಗಿ ಸಿಕ್ಕಿದೆ. ಅಷ್ಟೇ ಅಲ್ಲದೇ ಇನ್ನೊಂದು ಗಿಫ್ಟ್ ವೋಚರ್ ಸಿಕ್ಕಿದೆ.
ಎಲಿವೇಟರ್ ಹಾಗೂ ಎಸ್ಕಲೇಟರ್ ತಯಾರಿ ಮಾಡುವ ಒಂದು ಖ್ಯಾತ ಕಂಪನಿ ಇಂದ 50 ಸಾವಿರ ರೂಪಾಯಿಯ ಗಿಫ್ಟ್ ವೋಚರ್ ನೀಡಲಾಗಿದೆ. ಒಟ್ಟು 2.50 ಲಕ್ಷ ರೂಪಾಯಿಯ ಹಣ ಮಾನಸ ಅವರಿಗೆ ಸಿಕ್ಕಿದೆ. ಇಷ್ಟು ಬೇಗ ಮನೆಯಿಂದ ಹೊರಬಂದಿರುವುದು ಮಾನಸ ಅವರಿಗೆ ಕೂಡ ಬೇಸರ ಆಗಿದೆ. ಫಿನಾಲೆ ವರೆಗು ಬಿಗ್ ಬಾಸ್ ಮನೆಯೊಳಗೆ ಇರಬೇಕು ಎಂದು ಮಾನಸ ಬಯಸಿದ್ದರು. ಆದರೆ ಆ ರೀತಿ ಆಗಿಲ್ಲ, ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಮುಂದಿನ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗಿ ಹೊರಬರುತ್ತಾರೆ ಎಂದು ಕಾದು ನೋಡಬೇಕಿದೆ..



