ಸ್ಯಾಂಡಲ್ ವುಡ್ ನ ಸಿಂಡ್ರೆಲಾ, ಸ್ಯಾಂಡಲ್ ವುಡ್ ನ ಪ್ರಿನ್ಸೆಸ್ ಎಂದು ಕರೆಸಿಕೊಂಡವರು ರಾಧಿಕಾ ಪಂಡಿತ್. ಇವರು ಇಂದು ಚಿತ್ರರಂಗದಲ್ಲಿ ಆಕ್ಟಿವ್ ಆಗಿಲ್ಲ. ನಟನೆ ಇಂದ ದೂರ ಉಳಿದು ಮಕ್ಕಳು ಹಾಗೂ ಸಂಸಾರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಹೆಚ್ಚಾಗಿ ಮಕ್ಕಳ ಪಾಲನೆ ಪೋಷಣೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ರಾಧಿಕಾ ಪಂಡಿತ್ ಅವರು ಸಿನಿಮಾದಲ್ಲಿ ನಟಿಸಿ, 5 ವರ್ಷಗಳ ಮೇಲಾಗಿದೆ. ಆದರೆ ಇವತ್ತಿಗೂ ಕೂಡ ಅಭಿಮಾನಿಗಳಿಗೆ ಇವರ ಮೇಲೆ ಇರುವ ಕ್ರೇಜ್ ಸ್ವಲ್ಪವೂ ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿ ಈ ವರ್ಷದ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ. ಅಭಿಮಾನಿಗಳು ರಾಧಿಕಾ ಪಂಡಿತ್ ಅವರ ಮನೆ ಹತ್ತಿರ ಹೋಗಿ, ಅವರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಫ್ಯಾನ್ಸ್ ಜೊತೆಗೆ ಪೋಸ್ ನೀಡಿದ್ದಾರೆ ರಾಧಿಕಾ ಪಂಡಿತ್.
ರಾಧಿಕಾ ಪಂಡಿತ್ ಅವರ ಬಗ್ಗೆ ನಾವು ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರಿಗೆ ಪ್ಯಾಷನ್ ಇದ್ದ ಕಾರಣ, ನಟನೆಯಲ್ಲಿ ತಮ್ಮ ಕೆರಿಯರ್ ಅನ್ನು ಮುಂದುವರೆಸಿಕೊಂಡು ಹೋಗಬೇಕು ಎನ್ನುವ ಕಾರಣಕ್ಕೆ ಮೊದಲಿಗೆ ನಟನೆಯಲ್ಲಿ ವೃತ್ತಿ ಶುರು ಮಾಡಿದರು. ಒಂದೆರಡು ಧಾರವಾಹಿಯಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ ರಾಧಿಕಾ ಪಂಡಿತ್ ಅವರು ನಂತರ ನಾಯಕಿಯಾಗಿಯೂ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿದರು. ಇವರು ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮೊದಲ ಸಿನಿಮಾ ಮೊಗ್ಗಿನ ಮನಸ್ಸು. ಈ ಸಿನಿಮಾ ಎಷ್ಟು ದೊಡ್ಡ ಮಟ್ಟಕ್ಕೆ ಸುದ್ದಿ ಆಯಿತು ಎಂದು ನಮಗೆಲ್ಲಾ ಗೊತ್ತೇ ಇದೆ. ಮೊದಲ ಸಿನಿಮಾದಲ್ಲೇ ರಾಧಿಕಾ ಪಂಡಿತ್ ಅವರ ಅಭಿನಯ ಎಲ್ಲರಿಗೂ ತುಂಬಾ ಇಷ್ಟವಾಗಿತ್ತು. ಅವಾರ್ಡ್ ಗಳನ್ನು ಕೂಡ ಪಡೆದರು.

ಇಲ್ಲಿಂದ ರಾಧಿಕಾ ಪಂಡಿತ್ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. ಇವರ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಲಿಸ್ಟ್ ಗೆ ಸೇರಿಕೊಂಡಿವೆ. ಸ್ಯಾಂಡಲ್ ವುಡ್ ನ ಸ್ಟಾರ್ ಹೀರೋಗಳು, ಹೊಸ ನಾಯಕರು ಎಲ್ಲರ ಜೊತೆಗೂ ಸಿನಿಮಾದಲ್ಲಿ ನಟಿಸಿರುವ ಹೆಗ್ಗಳಿಕೆ ಇವರದ್ದು. ಹಲವು ಅವಾರ್ಡ್ ಗಳನ್ನು ಗೆದ್ದಿರುವ ರಾಧಿಕಾ ಅವರು, ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಗಾಸಿಪ್ ಗಳಿಗೆ ಗುರಿಯಾಗದ ನಟಿ ಸಹ ಆಗಿದ್ದಾರೆ. ಯಾರೊಂದಿಗೂ ಜಗಳ ಮಾಡಿಕೊಂಡಿಲ್ಲ, ಯಾವ ತಂಟೆ ತಕರಾರುಗಳನ್ನು ಕೂಡ ಮಾಡಿಕೊಂಡಿಲ್ಲ. ಒಳ್ಳೆಯ ನಟನೆ ಜೊತೆಗೆ ಒಳ್ಳೆಯ ನಡತೆಯನ್ನು ಕೂಡ ಹೊಂದಿರುವ ಅಪರೂಪದ ನಟಿ ರಾಧಿಕಾ ಪಂಡಿತ್. ಇನ್ನು ಅಭಿಮಾನಿಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇವರು ಎಲ್ಲರ ಫೇವರೆಟ್ ನಟಿ.
ರಾಧಿಕಾ ಪಂಡಿತ್ ಅವರು ಯಶ್ ಅವರೊಡನೆ ಮದುವೆಯಾದರು. ಇವರಿಬ್ಬರು ಸೀರಿಯಲ್ ದಿನಗಳಲ್ಲಿ ಪರಿಚಯವಾಗಿ, ಸ್ನೇಹ ಶುರುವಾಗಿ, ಪ್ರೀತಿಸುವುದಕ್ಕೆ ಶುರು ಮಾಡಿದ್ದ ಜೋಡಿ. ಆದರೆ ತಮ್ಮ ಪ್ರೀತಿಯ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿರಲಿಲ್ಲ. ಎಲ್ಲಿಯು ವಿವಾದಕ್ಕೆ ಸಿಲುಕಿಕೊಳ್ಳಲಿಲ್ಲ. ಇಬ್ಬರು ಚಿತ್ರರಂಗದಲ್ಲಿ ಜೊತೆಯಾಗಿ ಬೆಳೆದರು. ಬಳಿಕ ಎಂಗೇಜ್ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟರು. ನಂತರ ಮದುವೆ ಮಾಡಿಕೊಂಡರು. ಮದುವೆ ನಂತರ ರಾಧಿಕಾ ಅವರು ಸಿನಿಮಾ ಇಂದ ದೂರ ಉಳಿದಿದ್ದಾರೆ. ಇವರು ಕೊನೆಯದಾಗಿ ನಟಿಸಿದ ಸಿನಿಮಾ 2019ರಲ್ಲಿ ತೆರೆಕಂಡ ಆದಿ ಲಕ್ಷ್ಮಿ ಪುರಾಣ. ಬಳಿಕ ಮಗಳು ಜನಿಸಿದ ಕಾರಣ ರಾಧಿಕಾ ನಟನೆ ಇಂದ ಕೊಂಚ ಬ್ರೇಕ್ ಪಡೆದರು.

5 ವರ್ಷಗಳಿಂದ ರಾಧಿಕಾ ಅವರು ಸಿನಿಮಾಗಳಲ್ಲಿ ನಟಿಸಿಲ್ಲ. ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫುಲ್ ಟೈಮ್ ಗೃಹಿಣಿ ಆಗಿದ್ದಾರೆ. ಯಶ್ ಅವರನ್ನು ನೋಡಿಕೊಳ್ಳುವುದು ಇಬ್ಬರು ಮುದ್ದಾದ ಮಕ್ಕಳನ್ನು ನೋಡಿಕೊಳ್ಳುವುದು ಇದರಲ್ಲೇ ರಾಧಿಕಾ ಪಂಡಿತ್ ಅವರ ಸಮಯ ಪೂರ್ತಿ ಕಳೆದು ಹೋಗುತ್ತಿದೆ. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ ಕಲಿಸುತ್ತಾ, ಗಂಡನಿಗೆ ಸಪೋರ್ಟ್ ಮಾಡುತ್ತಾ ಇದ್ದಾರೆ ರಾಧಿಕಾ. ಇವರು ಮತ್ತೆ ತೆರೆಮೇಲೆ ಬರಬೇಕು, ನಾಯಕಿಯಾಗಿ ನಟಿಸಬೇಕು, ಒಳ್ಳೆಯ ಕನ್ನಡ ಸಿನಿಮಾಗಳನ್ನು ಜನರಿಗೆ ನೀಡಬೇಕು ಎನ್ನುವುದು ಅಭಿಮಾನಿಗಳ ಆಸೆ ಆಗಿದೆ. ರಾಧಿಕಾ ಅವರು ಮತ್ತೆ ಯಾವಾಗ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.
ಇನ್ನು ರಾಧಿಕಾ ಅವರ ಬಗ್ಗೆ ಅಭಿಮಾನಿಗಳಿಗೆ ಇರುವ ಪ್ರೀತಿ ಮತ್ತು ಕ್ರೇಜ್ ಯಾವತ್ತಿಗೂ ಕಡಿಮೆ ಆಗಿಲ್ಲ. ಅದಕ್ಕೆ ಸಾಕ್ಷಿ ಈ ವರ್ಷವೂ ಅವರ ಅಭಿಮಾನಿಗಳು ಮನೆಗೆ ಹೋಗಿ ಬರ್ತ್ ಡೇ ಸೆಲೆಬ್ರೇಟ್ ಮಾಡಿರುವುದು. ಹೌದು, ನಿನ್ನೆ ರಾಧಿಕಾ ಪಂಡಿತ್ ಅವರ ಹುಟ್ಟುಹಬ್ಬ ಇತ್ತು. ಈ ವರ್ಷ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ರಾಧಿಕಾ ಪಂಡಿತ್. ಅಭಿಮಾನಿಗಳ ಜೊತೆಗೆ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ಬ್ಲೂ ಬಣ್ಣದ ಡ್ರೆಸ್ ಧರಿಸಿ, ಸರಳವಾಗಿ ಹುಟ್ಟುಹಬ್ಬದಂದು ಅಭಿಮಾನಿಗಳ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ರಾಧಿಕಾ ಪಂಡಿತ್ ಅವರು ವರ್ಷಗಳು ಕಳೆಯುತ್ತಾ ಯಂಗ್ ಆಗುತ್ತಾ ಹೋಗುತ್ತಿದ್ದಾರೆ ಎಂದರೂ ತಪ್ಪಲ್ಲ. ಅಭಿಮಾನಿಗಳ ಪಾಲಿಗೆ ಇವರು ಯಾವಾಗಲೂ ಸಿಂಡ್ರೆಲಾ ಆಗಿದ್ದಾರೆ..
ಇನ್ನು ನಿನ್ನೆ ರಾಧಿಕಾ ಅವರ ಹುಟ್ಟುಹಬ್ಬವನ್ನು ಯಶ್ ಅವರು ಜೋರಾಗಿ ಆಚರಿಸಿದ್ದಾರೆ. ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರ ಜೊತೆಗೆ ಕೇಕ್ ಕಟ್ ಸೆಲೆಬ್ರೇಟ್ ಮಾಡಿದ್ದು, ಫೋಟೋಗಳು ಹಾಗೂ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್ ಹಾಗೂ ರಾಧಿಕಾ ಅವರ ಜೋಡಿ ಒಂದು ರೀತಿ ಎಲ್ಲಾ ವಿಚಾರದಲ್ಲೂ ಎಲ್ಲರಿಗೂ ಮಾದರಿ ಆಗಿದ್ದಾರೆ. ಗಂಡ ಹೆಂಡತಿ ಅಂದರೆ ಹೇಗಿರಬೇಕು ಎನ್ನುವುದನ್ನ ಇವರನ್ನ ನೋಡಿ ಕಳಿತುಕೊಳ್ಳಬೇಕು ಎನ್ನುವ ಹಾಗಿದೆ ಇವರಿಬ್ಬರ ಜೋಡಿ. ಯಶ್ ಅವರು ರಾಧಿಕಾ ಪಂಡಿತ್ ಅವರನ್ನು ಅಷ್ಟು ಪ್ರೀತಿಯಿಂದ ಕೇರ್ ಇಂದ ನೋಡಿಕೊಳ್ಳುವುದನ್ನು ನೋಡಿದರೆ, ಪ್ರೀತಿ ಮಾಡೋರಿಗೆ ಸ್ಪೂರ್ತಿ ಸಿಗುತ್ತದೆ. ಇವರಿಬ್ಬರ ಜೋಡಿ ಯಾವಾಗಲೂ ಹೀಗೆ ಇರಲಿ..



