ನಮ್ಮ ದೇಶದ ಸೆನ್ಸೇಷನಲ್ ಮಹಿಳಾ ಕ್ರಿಕೆಟರ್ ಗಳ ಪೈಕಿ ಸ್ಮೃತಿ ಮಾಂಧನ ಸಹ ಒಬ್ಬರು. ಇವರು ನೋಡೋದಕ್ಕೆ ಎಷ್ಟು ಕ್ಯೂಟ್ ಆಗಿದ್ದಾರೋ ಅಷ್ಟೇ ಅದ್ಭುತವಾದ ಆಟಗಾರ್ತಿ ಸಹ ಹೌದು. ಟೀಮ್ ಇಂಡಿಯಾಗೆ ಇವರು ಉತ್ತಮವಾದ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಸ್ಮೃತಿ ಅವರು ನಮ್ಮ ಆರ್ಸಿಬಿ ಮಹಿಳಾ ತಂಡದ ಕ್ಯಾಪ್ಟನ್ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಇನ್ನು ಟೀಮ್ ಇಂಡಿಯಾ ಮಹಿಳಾ ತಂಡದ ವೈಸ್ ಕ್ಯಾಪ್ಟನ್ ಇವರು. ಸ್ಮೃತಿ ಅವರು ಈಗ ಮತ್ತೊಂದು ಹೊಸ ಲೀಗ್ ನಲ್ಲಿ ಕ್ಯಾಪ್ಟನ್ ಆಗಿದ್ದಾರೆ. ಮಹಾರಾಷ್ಟ್ರದ ಮಹಿಳಾ ಪ್ರೀಮಿಯರ್ ಲೀಗ್ ನ ರತ್ನಗಿರಿ ಜೆಟ್ಸ್ ತಂಡದ ನಾಯಕಿ ಆಗಿದ್ದಾರೆ ಸ್ಮೃತಿ. ಈ ಲೀಗ್ ಈಗಾಗಲೇ ಶುರುವಾಗಿದ್ದು, ಪಂದ್ಯದ ಅಭ್ಯಾಸದ ವೇಳೆ ಸಣ್ಣ ಸಂದರ್ಶನದಲ್ಲಿ ಸ್ಮೃತಿ ಅವರು ಭಾಗಿಯಾಗಿದ್ದಾರೆ. ಅದರಲ್ಲಿ ತಮಗೆ ಕನ್ನಡದ ಈ ಹಾಡು ಇಷ್ಟ ಎಂದು ಹೇಳಿರುವುದು ಕನ್ನಡ ಫ್ಯಾನ್ಸ್ ಗೆ ಬಹಳ ಖುಷಿಯಾಗಿದೆ. ಅದರಲ್ಲೂ ಯಶ್ ಅವರ ಫ್ಯಾನ್ಸ್ ಅಂತೂ ಸೆಲೆಬ್ರೇಟ್ ಮಾಡುತ್ತಿದ್ದಾರೆ.

ಸ್ಮೃತಿ ಮಾಂಧನ ಅವರು 1 ದಶಕದಿಂದ ಟೀಮ್ ಇಂಡಿಯಗಾಗಿ ಆಡುತ್ತಿದ್ದಾರೆ. ಇವರು ತಮ್ಮ ಲುಕ್ಸ್ ವಿಚಾರದಿಂದ ಕೂಡ ಅಭಿಮಾನಿಗಳಿಗೆ ಬಹಳ ಇಷ್ಟ ಆಗುತ್ತಾರೆ. ಜೊತೆಗೆ ಅಷ್ಟೇ ಅದ್ಭುತವಾದ ಕ್ರಿಕೆಟರ್ ಕೂಡ ಹೌದು. ಸ್ಮೃತಿ ಅವರು ಇದುವರೆಗೂ 11 ಸೆಂಚುರಿ ಗಳನ್ನು ಭಾರಿಸಿದ್ದಾರೆ. ಹಾಗೆಯೇ, ಓಡಿಐ ಪಂದ್ಯಗಳಲ್ಲಿ ಅತಿಹೆಚ್ಚು ಸೆಂಚುರಿ ಭಾರಿಸಿರುವ ಮೂರನೇ ಮಹಿಳಾ ಆಟಗಾರ್ತಿ ಆಗಿದ್ದಾರೆ ಸ್ಮೃತಿ. ಹೀಗೆ ಇವರ ಹೆಸರಿನಲ್ಲಿ ಅನೇಕ ದಾಖಲೆಗಳು ಇದೆ. ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಮಹಿಳಾ ಆಟಗಾರರ ಪೈಕಿ ಸ್ಮೃತಿ ಅವರು ಸಹ ಒಬ್ಬರು. ಸ್ಮೃತಿ ಅವರಿಗೆ ಭಾರತದಲ್ಲಿ ದೊಡ್ಡ ಫ್ಯಾನ್ ಬೇಸ್ ಇರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಎಷ್ಟೋ ಹುಡುಗರ ಕ್ರಶ್ ಇವರು. ಅಂತಾರಾಷ್ಟ್ರೀಯ ಲೀಗ್ ಆಗಿರುವ ಬಿಬಿಎಲ್ ನಲ್ಲಿ ಕೂಡ ಸ್ಮೃತಿ ಆಡಿದ್ದಾರೆ.
ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಸ್ಕೃತಿ ಅವರಿಗೆ ಹೆಚ್ಚು ಯಶಸ್ಸು ತಂದುಕೊಟ್ಟಿದ್ದು WPL-ವುಮನ್ಸ್ ಪ್ರೀಮಿಯರ್ ಲೀಗ್. ಮಹಿಳಾ ಪ್ರೀಮಿಯರ್ ಲೀಗ್. ಐಪಿಎಲ್ ರೀತಿಯಲ್ಲೇ ಮಹಿಳಾ ಕ್ರಿಕೆಟರ್ ಗಳಿಗಾಗಿ ಶುರುವಾದ ವಿಶೇಷವಾದ ಲೀಗ್ ಇದು. ಈಗಾಗಲೇ WPL 3 ಸೀಸನ್ ಗಳು ಮುಗಿದಿದೆ. ಈ ಲೀಗ್ ನಲ್ಲಿ ಆರ್ಸಿಬಿ, ಮುಂಬೈ ಇಂಡಿಯನ್ಸ್, ಗುಜರಾತ್ ಜೈನ್ಟ್ಸ್, ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್, ಈ 5 ತಂಡಗಳಿವೆ. ಇವುಗಳ ಪೈಕಿ ಸ್ಮೃತಿ ಅವರನ್ನು ನಮ್ಮ ಆರ್ಸಿಬಿ ತಂಡ ಖರೀದಿ ಮಾಡಿದ್ದು, ಇವರು ಆರ್ಸಿಬಿ ತಂಡಕ್ಕೆ ಕ್ಯಾಪ್ಟನ್ ಆಗಿದ್ದಾರೆ. ಮೊದಲ ಸೀಸನ್ ನಲ್ಲಿ ಆರ್ಸಿಬಿ ತಂಡ ಅಂದುಕೊಂಡ ಹಾಗೆ ಪ್ರದರ್ಶನ ನೀಡಲಿಲ್ಲ, ಆದರೆ ಎರಡನೇ ಸೀಸನ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡಿ, WPL ಕಪ್ ಗೆದ್ದು, ಆರ್ಸಿಬಿ ತಂಡಕ್ಕೆ ಹೆಮ್ಮೆ ತಂದರು. ಈ ಗೆಲುವಿಗೆ ಸ್ಮೃತಿ ಅವರ ಕ್ಯಾಪ್ಟನ್ಸಿ ಮುಖ್ಯ ಕಾರಣ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಅಷ್ಟು ಎಫರ್ಟ್ಸ್ ಹಾಕಿದ್ದರು.

ಆರ್ಸಿಬಿ ಇಡೀ ಮಹಿಳಾ ತಂಡ ಅಷ್ಟು ಸ್ಟ್ರಾಂಗ್ ಆಗಿತ್ತು ಎಂದು ಹೇಳಬಹುದು. ಆರ್ಸಿಬಿ ತಂಡದ ಬಳಿ ಒಂದೇ ಒಂದು ಕಪ್ ಕೂಡ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದ ಮಾತಿಗೆ ಫುಲ್ ಸ್ಟಾಪ್ ಇಟ್ಟಿದ್ದು ಸ್ಮೃತಿ ಮಾಂಧನ ಹಾಗೂ ಇಡೀ ಆರ್ಸಿಬಿ ತಂಡದ ಆಟಗಾರ್ತಿಯರು. ಆರ್ಸಿಬಿ ತಂಡಕ್ಕೆ ಮೊದಲ ಟ್ರೋಫಿ ತಂದುಕೊಟ್ಟಿದ್ದು ಇವರೇ ಎಂದು ಹೇಳುವುದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಆ ಒಂದು ವಿಚಾರದಲ್ಲಿ ಆರ್ಸಿಬಿ ಫ್ಯಾನ್ಸ್ ಯಾವಾಗಲೂ ಸ್ಮೃತಿ ಅವರಿಗೆ ಋಣಿಯಾಗಿ ಇರಲಿದ್ದಾರೆ. ಇನ್ನು ಸ್ಮೃತಿ ಅವರ ವಿಷಯದಲ್ಲಿ ಆರ್ಸಿಬಿ ಫ್ಯಾನ್ಸ್ ಗಳಿಗೆ ಕೂಡ ಅಷ್ಟೇ ಪ್ರೀತಿ ಮತ್ತು ಬೆಂಬಲ ಇದೆ. ಎಲ್ಲರ ಕ್ರಶ್ ಸ್ಮೃತಿ ಅವರು. ಮೂರನೇ ಸೀಸನ್ ನಲ್ಲಿ ಕಪ್ ಗೆಲ್ಲದೇ ಹೋದರೂ, ಮುಂದಿನ ಸೀಸನ್ ನಲ್ಲಿ ನಮ್ಮ ತಂಡ ಮತ್ತೊಂದು ಕಪ್ ಗೆಲ್ಲಲಿ ಎನ್ನುವುದೇ ಅಭಿಮಾನಿಗಳ ಆಸೆ ಆಗಿದೆ. ಆರ್ಸಿಬಿ ತಂಡದ ಜೊತೆಗಿದ್ದಾರೆ ಅಂದ್ರೆ ಕನ್ನಡ ಸ್ವಲ್ಪ ಆದರು ಗೊತ್ತಿರಲೇಬೇಕು ಅಲ್ವಾ..

ಹೌದು, ಸ್ಮೃತಿ ಅವರಿಗೂ ಅದೇ ರೀತಿ. WPL ವೇಳೆ ಹಲವು ಸಾರಿ ಕನ್ನಡ ಪದಗಳನ್ನು ಹೇಳಿರುವುದನ್ನು ಕೇಳಿದ್ದೇವೆ, ಸ್ಮೃತಿ ಅವರು ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಇನ್ನು ಅವರಿಗೆ ಕನ್ನಡ ಹಾಡು ಇಷ್ಟ ಎನ್ನುವುದು ಇತ್ತೀಚೆಗೆ ಅವರು ನೀಡಿರುವ ರಾಪಿಡ್ ಫೈರ್ ಸಂದರ್ಶನದ ಮೂಲಕ ಗೊತ್ತಾಗಿದೆ. ಹೌದು, ಮಹಾರಾಷ್ಟ್ರ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಕ್ಕಾಗಿ ಅಭ್ಯಾಸ ಮಾಡುವಾಗ, ಸ್ಮೃತಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಮಹಾರಾಷ್ಟ್ರದವರೇ ಆಗಿ, ಸ್ಮೃತಿ ಅವರಿಗೆ ವಡಾ ಪಾವ್ ಇಷ್ಟಾನ ಅಥವಾ ಮಿಸಲ್ ಪಾವ್ ಇಷ್ಟಾನ ಎಂದು ಕೇಳಿದ್ದಕ್ಕೆ ವಡಾ ತಿಂದು ಬೆಳೆದಿದ್ದೇನೆ, ಮಿಸಲ್ ಪಾವ್ ಕೂಡ ಇಷ್ಟ, ಆದರೆ ವಡಾ ಪಾವ್ ಹೆಚ್ಚು ಇಷ್ಟ ಎಂದು ಹೇಳಿದ್ದಾರೆ ಸ್ಮೃತಿ. ಇನ್ನು ಓಡಿಐ ಅಥವಾ ಟೆಸ್ಟ್ ಕ್ರಿಕೆಟ್ ಯಾವ ಫಾರ್ಮೇಟ್ ಇಷ್ಟ ಎಂದು ಕೇಳಿದ್ದಕ್ಕೆ ಟೆಸ್ಟ್ ಕ್ರಿಕೆಟ್ ಇಷ್ಟ ಎಂದು ಹೇಳಿದ್ದಾರೆ..
ಇದೇ ವೇಳೆ ಇನ್ನೊಂದು ಆಸಕ್ತಿಕರ ಪ್ರಶ್ನೆಯನ್ನು ಸ್ಮೃತಿ ಅವರಿಗೆ ಕೇಳಲಾಯಿತು. ಅದೇನು ಎಂದರೆ, ಕ್ರೀಸ್ ಇಂದ ಫೀಲ್ಡ್ ಗೆ ಬ್ಯಾಟಿಂಗ್ ಮಾಡಲು ಎಂಟ್ರಿ ಕೊಡುವಾಗ, ಡಿಜೆಗಳು ಒಂದೊಂದು ಹಾಡುಗಳನ್ನ ಪ್ಲೇ ಮಾಡ್ತಾರೆ, ನಿಮ್ಮ ಎಂಟ್ರಿಗೆ ಯಾವ ಹಾಡು ಇದ್ದರೆ ನಿಮಗೆ ಇಷ್ಟ ಆಗುತ್ತದೆ ಹೇಳಿ, ಮುಂದಿನ ಪಂದ್ಯದಿಂದ ಅದೇ ಹಾಡನ್ನ ಪ್ಲೇ ಮಾಡ್ತೀವಿ ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಸ್ಮೃತಿ ಅವರು, “ಕೆಜಿಎಫ್ ಕನ್ನಡ ಸಿನಿಮಾದ ತೂಫಾನ್ ಹಾಡು ನನಗೆ ಇಷ್ಟ. ನಾನು ತುಂಬಾ ಸಾಫ್ಟ್, ಆದರೆ ಆ ಹಾಡು ನನಗೆ ಸೂಟ್ ಆಗುತ್ತದೆ ಅನ್ನಿಸುತ್ತದೆ. ಈ ಹಾಡನ್ನ ಇತ್ತೀಚೆಗೆ ನಾನು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೂಡ ಹಾಕಿದ್ದೆ, ಒಳ್ಳೇ ಎನರ್ಜಿ ಕೊಡುವ ಹಾಡು. ಮರಾಠಿ ಹಾಡು ಕೂಡ ಇಷ್ಟ. ಒಂದು ಕನ್ನಡ ಹಾಡು, ಒಂದು ಮರಾಠಿ ಎರಡು ಇಷ್ಟ..” ಎಂದಿದ್ದಾರೆ ಸ್ಮೃತಿ. ಈ ಉತ್ತರ ಕೇಳಿ ರಾಕಿ ಭಾಯ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.
ಸ್ಮೃತಿ ಅವರು ಆರ್ಸಿಬಿ ತಂಡದಲ್ಲಿ ಇರುವಾಗ ಕನ್ನಡ ಹಾಡು ಇಷ್ಟ ಆಗದೇ ಇದ್ದರೆ ಹೇಗೆ ಗುರು ಅಂತಾರೆ ಆರ್ಸಿಬಿ ಫ್ಯಾನ್ಸ್. ಇನ್ನು ಯಶ್ ಅವರ ಫ್ಯಾನ್ಸ್ ಈ ಒಂದು ವಿಡಿಯೋ ಕ್ಲಿಪ್ ಅನ್ನು ವೈರಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಈ ಒಂದು ಉತ್ತರದ ಮೂಲಕ ಮತ್ತೊಮ್ಮೆ ಕನ್ನಡಿಗರ ಹೃದಯ ಗೆದ್ದಿದ್ದಾರೆ ಆರ್ಸಿಬಿ ಕ್ಯಾಪ್ಟನ್ ಸ್ಮೃತಿ ಮಾಂಧನ. ಕನ್ನಡದ ಮೇಲಿನ ಪ್ರೀತಿ ಸದಾ ಹೀಗೆ ಇರಲಿ.. ಆರ್ಸಿಬಿ ತಂಡಕ್ಕೆ ಹೆಚ್ಚು ಕಪ್ ಗಳನ್ನು ಗೆದ್ದು ತರಲಿ..



