ಡಿಸೆಂಬರ್ 18ರಂದು ಶಿವಣ್ಣ ಅಮೆರಿಕಾಗೆ ಹೋಗಿದ್ದಾರೆ. ಇಂದು ಡಿಸೆಂಬರ್ 24, ಇಂದು ಶಿವಣ್ಣ ಅವರಿಗೆ ಸರ್ಜರಿ ನಡೆಯಲಿದ್ದು, ಎಲ್ಲಾ ಕಡೆ ಅಭಿಮಾನಿಗಳು ದೇವರ ಪೂಜೆ ಮಾಡಿಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಶಿವಣ್ಣ ಅವರು ಅಮೆರಿಕಾದ, ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ, ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅಲ್ಲೇ ಸರ್ಜರಿ ನಡೆಯಲಿದೆ. ಅಭಿಮಾನಿಗಳಲ್ಲಿ ಹಾಗೂ ಕುಟುಂಬದವರಲ್ಲಿ ಶಿವಣ್ಣ ಅವರ ಸರ್ಜರಿ ಉತ್ತಮವಾಗಿ ನಡೆಯಲಿ, ಸಕ್ಸಸ್ ಫುಲ್ ಆಗಲಿ ಶಿವಣ್ಣ ಬೇಗ ಕನ್ನಡ ನಾಡಿಗೆ ಬರಲಿ ಎನ್ನುವ ಆಶಯ. ಏಕೆಂದರೆ ಶಿವಣ್ಣ ಎಲ್ಲರೂ ಪ್ರೀತಿಸುವ ವ್ಯಕ್ತಿ..

ಕನ್ನಡದ ಸೀನಿಯರ್ ನಟರಲ್ಲಿ ಒಬ್ಬರಾಗಿರುವ ಶಿವಣ್ಣ ಎಲ್ಲರ ಜೊತೆಗೂ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಶಿವಣ್ಣ ಅವರನ್ನು ಕಂಡರೆ ಇಂಡಸ್ಟ್ರಿಯಲ್ಲಿ ಎಲ್ಲರಿಗೂ ಪ್ರೀತಿ, ಎಲ್ಲರಿಗೂ ಮಾರ್ಗದರ್ಶನ ಕೊಡೋ ಅಣ್ಣ ಇದ್ದ ಹಾಗೆ ಶಿವಣ್ಣ. ಇನ್ನು ಬೇರೆ ಕಲಾವಿದರು ಸಹ ಶಿವಣ್ಣನನ್ನು ಅಷ್ಟೇ ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಎಲ್ಲರಿಗು ಬೇಕಾದ, ಎಲ್ಲರೂ ಇಷ್ಟಪಡುವ ವ್ಯಕ್ತಿ ಶಿವಣ್ಣ. ಶಿವಣ್ಣ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಇರುವುದರಿಂದ, ಹಲವರ ಬದುಕು ಸಾಗಿಸಲು ಅವರಿಗೆ ಕೆಲಸ ಸಿಕ್ಕಿದೆ ಎಂದರೆ ತಪ್ಪಲ್ಲ. ಬಹಳಷ್ಟು ಜನರ ಬದುಕಿಗೆ ದಾರಿದೀಪವಾಗಿ ನಿಂತಿರುವವರು ಶಿವಣ್ಣ.
ಶಿವಣ್ಣ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಬಂದು 38 ವರ್ಷವಾಗಿದೆ. ಆದರೆ ಇವತ್ತಿಗು ಅವರ ಚಾರ್ಮ್ ಕಡಿಮೆ ಆಗಿಲ್ಲ, 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಇವತ್ತಿಗೂ ಬ್ಯುಸಿ ಇರೋರು ಶಿವಣ್ಣ. ಇವರ ಜೊತೆಗೆ ಸಿನಿಮಾ ಮಾಡೋಕೆ ಎಲ್ಲರೂ ಕಾಯುತ್ತಾರೆ, ಶಿವಣ್ಣ ಸಹ ಅಷ್ಟು ವರ್ಷಗಳಿಂದ ರೆಸ್ಟ್ ಪಡೆಯದೇ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಈಗ ಚಿಕಿತ್ಸೆಗಾಗಿ, ಸರ್ಜರಿಗಾಗಿ ವಿದೇಶಕ್ಕೆ ಹೋಗಿದ್ದಾರೆ, ಬಂದ ನಂತರ ಸಿನಿಮಾ ಕೆಲಸಗಳು ಶುರುವಾಗಲಿದೆ. ಈಗಾಗಲೇ ಶಿವಣ್ಣ ಅವರ ಕೆಲ ಸಿನಿಮಾಗಳು ಅನೌನ್ಸ್ ಆಗಿದ್ದು, ಅವರು ಹುಷಾರಾಗಿ ಬಂದ ಮೇಲೆ, ಎಲ್ಲಾ ಕೆಲಸಗಳು ಮತ್ತೆ ಶುರುವಾಗಲಿದೆ. ಅಭಿಮಾನಿಗಳು ಶಿವಣ್ಣ ಅವರ ಬರುವಿಕೆಗೆ ಕಾಯುತ್ತಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಶಿವಣ್ಣ ಅವರಿಗೆ ಇಂದು ಸರ್ಜರಿ ನಡೆಯಲಿದೆ, ಎಲ್ಲವೂ ಚೆನ್ನಾಗಿ ಆಗುತ್ತದೆ, ನಾನು ಬೇಗ ಹುಷಾರಾಗಿ ಬರ್ತೀನಿ, ಡಾಕ್ಟರ್ ಮೇಲೆ ನಂಬಿಕೆ ಭರವಸೆ ಇದೆ ಎಂದು ಶಿವಣ್ಣ ಹೇಳಿದ್ದರು ಸಹ, ಅಭಿಮಾನಿಗಳಲ್ಲಿ ಸ್ವಲ್ಪ ಆತಂಕ ಇದ್ದೇ ಇದೆ. ಹಾಗಾಗಿ ಶಿವಣ್ಣ ಅವರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಶಿವಣ್ಣ ಅವರ ಹೆಸರಿನಲ್ಲಿ ಇಂದು ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆ ಎಲ್ಲವು ನಡೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಊರುಗಳಲ್ಲಿ ಶಿವಣ್ಣನ ಅಭಿಮಾನಿಗಳು ಪೂಜೆಗಳನ್ನು ಹಮ್ಮಿಕೊಂಡಿದ್ದಾರೆ. ಎಲ್ಲಾ ಅಭಿಮಾನಿಗಳು ಒಟ್ಟಾಗಿ ನಿಂತು ಈ ಕೆಲಸ ಮಾಡುತ್ತಿದ್ದಾರೆ.

ಅಭಿಮಾನಿಗಳು ಅಂದ್ರೆ ಈ ರೀತಿ ಇರಬೇಕು ಎನ್ನುವುದನ್ನು ಶಿವಣ್ಣ ಅವರ ಫ್ಯಾನ್ಸ್ ತೋರಿಸಿಕೊಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಲ್ಲ. ಶಿವಣ್ಣ ಅವರು ಈಗಾಗಲೇ ತಿಳಿಸಿರುವ ಪ್ರಕಾರ, ಇಂದು ಸರ್ಜರಿ ನಡೆಯಲಿದ್ದು, ಒಂದು ತಿಂಗಳ ಕಾಲ ಮಿಯಾಮಿಯಲ್ಲೇ ಶಿವಣ್ಣ ವಿಶ್ರಾಂತಿ ಪಡೆಯಲಿದ್ದಾರೆ, ಜನವರಿ 25ರಂದು ಅಲ್ಲಿಂದ ಫ್ಲೈಟ್ ಇದ್ದು, ಜನವರಿ 26ರಂದು ಗಣರಾಜ್ಯೋತ್ಸವದ ದಿವಸ ಶಿವಣ್ಣ ಬೆಂಗಳೂರಿಗೆ ಬರಲಿದ್ದಾರೆ. ಈ ಒಂದು ತಿಂಗಳ ಅವಧಿ ಬೇಗ ಕಳೆದು ಹೋಗಲಿ, ಶಿವಣ್ಣ ಬೇಗ ಹುಷಾರಾಗಿ ಕರ್ನಾಟಕಕ್ಕೆ ವಾಪಸ್ ಬರಲಿ ಅಂತಿದ್ದಾರೆ ಫ್ಯಾನ್ಸ್. ಇಂದು ಶಿವಣ್ಣ ಅವರ ಸರ್ಜರಿ ಅಪ್ಡೇಟ್ ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.



