ಚೈತ್ರ ಕುಂದಾಪುರ ಹಿಂದೆ ದೊಡ್ಡ ಸುದ್ದಿಯಾಗಿದ್ದರು. ತಮಗೆ ಗೊತ್ತಿರುವವರೊಟ್ಟು ಗೂಡಿ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ನಾಯಕರೆಂದು ಬಿಂಬಿಸಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಆರೋಪದ ಮೇಲೆ ಜೈಲುವಾಸವನ್ನೂ ಅನುಭಸಿದ್ದಾರೆ. ಈ ಘಟನೆ ಬಳಿಕ ಬಿಗ್ ಬಾಸ್ ಗೆ ಎಂಟ್ರಿ ಕೊಡೋ ಮೂಲಕ ವಿಭಿನ್ನವಾಗಿಯೇ ತೆರೆ ಮೇಲೆ ಕಾಣಿಸಿದರು. ಇಷ್ಟು ಜನಪ್ರಿಯತೆ ಬಂದಿದ್ದು ಹಿಂದುತ್ವದ ಆಧಾರದಲ್ಲಿ ಭಾಷಣ ಮಾಡ್ತಾ ಇದ್ದ ಚೈತ್ರ ಕುಂದಾಪುರ ಇಡೀ ರಾಜ್ಯದ ಜನತೆಗೆ ಗೊತ್ತಾದರು.
ಸದ್ಯ ಬಿಗ್ ಬಾಸ್ ಮೂಲಕ ಮತ್ತಷ್ಟು ಪ್ರಚಾರ ಈಕೆಗೆ ಸಿಕ್ಕಿದೆ ಅಂದರೆ ತಪ್ಪಾಗಲ್ಲ. ತಮ್ಮದೇ ಮಾತುಗಾರಿಕೆ, ತಮ್ಮದೇ ಆಟ, ಗದ್ದಲ ಹೀಗೆ ಅನೇಕ ವಿಚಾರವಾಗಿ ಈಕೆ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದರು. ಈಗ ಅವರ ಮದುವೆ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಹಲ್ ಚಲ್ ಮಾಡಿದ್ದರು ಚೈತ್ರ. ಅವರು ಅಂದುಕೊಂಡಂತೆಯೇ ಹುಡುಗನ ಕೈ ಹಿಡಿದ ಚೈತ್ರ ಅದ್ಧೂರಿಯಾಗಿಯೇ ಮದುವೆ ಮಾಡಿಕೊಂಡರು.
ಮದುವೆಗೆ ಬಿಗ್ ಬಾಸ್ ಸ್ಪರ್ಧಿಗಳು ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು. ಬಿಗ್ ಬಾಸ್ ಸ್ಪರ್ಧಿ ರಜತ್ ಅಣ್ಣನ ಸ್ಥಾನದಲ್ಲಿ ನಿಂತು ಮದುವೆ ನಡೆಸಿಕೊಟ್ಟರು. ಮದುವೆಯೇನೋ ಅದ್ಧೂರಿಯಾಗಿ ಆಯ್ತು. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಚಾರ ಕೂಡ ಆಯ್ತು. ಆದರೆ ಮದುವೆಯ ಬಳಿಕವೂ ಇವರು ಮತ್ತೆ ಸುದ್ದಿಯಾಗಿದ್ದಾರೆ. ಅವರ ತಂದೆ ಚೈತ್ರ ಕುಂದಾಪುರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹೌದು, ಚೈತ್ರ ಕುಂದಾಪುರ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಸ್ಪಷ್ಟ. ತಂದೆ ಮಗಳ ಗಲಾಟೆ ಈಗ ಬೀದಿಗೆ ಬಿದ್ದು ಬಹಿರಂಗವಾಗಿದೆ. ಮಗಳ ಮದುವೆಗೆ ಆಕೆ ತಂದೆ ಹೋಗಿರಲಿಲ್ಲ. ಹೋಗೋದೇ ಇರೋದಕ್ಕೆ ಅವರೇ ಉತ್ತರನ್ನೂ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರುವ ಚೈತ್ರ ಕುಂದಾಪುರ ತಂದೆ ಬಾಲಕೃಷ್ಣ ನಾಯ್ಕ್, ಅವಳ ಮದುವೆಗೆ ನಾನು ಹೋಗಿಲ್ಲ. ಯಾಕಂದ್ರೆ ಅವರಿಬ್ಬರು ಕಳ್ಳರು. ಕಳ್ಳರು, ಕಳ್ಳರು ಮದುವೆ ಆಗಿದ್ದಾರೆ. ಅದರ ಬಗ್ಗೆ ನಾನು ಏನು ಹೇಳೋದಿದೆ. ಆಕೆ ಮದುವೆಯಾಗಿರುವವನು 12 ವರ್ಷದಿಂದ ನಮ್ಮ ಮನೆಯಲ್ಲೇ ಇದ್ದವನು. ಇಬ್ಬರು ಮದುವೆ ಆಗಿದ್ದಾರೆ ಅಷ್ಟೆ.
ಇವರದ್ದು ಒಳ್ಳೆ ಬುದ್ದಿ ಏನೂ ಇಲ್ಲ. ದರೋಡೆ ಮಾಡೋದು, ದೇಶಕ್ಕೆ ದ್ರೋಹ, ವಂಚನೆ ಮಾಡೋದೇ ಇವರ ಕೆಲಸ ಆಗಿದೆ. ನಮ್ಮ ಕುಟುಂಬದ ಮಾನ, ಮರ್ಯಾದೆಯನ್ನು ತೆಗೆದಿದ್ದಾರೆ. ಅವಳನ್ನ ಕಂಡ್ರೆ ನನಗೆ ಆಗೋದಿಲ್ಲ. ಅವಳು ಎಂದಿಗೂ ಉದ್ಧಾರ ಆಗಲ್ಲ. ಅವರು ಮಾಡೋ ಕೆಟ್ಟ ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ಅವರು ಮೋಸ, ವಂಚನೆಯಲ್ಲಿದ್ದರು. ನಾನು ಸತ್ಯ, ನ್ಯಾಯ, ಧರ್ಮದಲ್ಲಿ ಇರುವವನು. ತಾನೇ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದೇನೆ ಅನ್ನೋ ಸುಳ್ಳು, ಸುಳ್ಳು ಮಾತನಾಡುತ್ತಾರೆ. ಅವಳ ತಾಯಿಯೂ ಅವಳಿಗೆ ಸಪೋರ್ಟ್ ಮಾಡ್ತಿದ್ದಾಳೆ. ಅವಳು ಆಕೆಗೆ ದುಡ್ಡು ತಂದು ಕೊಡ್ತಾಳೆ. ಹಾಗಾಗಿ ಚೈತ್ರ ಹೇಳಿದ ಹಾಗೆ ಕೇಳ್ತಾ ಇದ್ದಾಳೆ ಅಷ್ಟೆ ಎಂದು ಆರೋಪಿಸಿದ್ದಾರೆ. ಯಾರ ಮನೆಯಲ್ಲೂ ಇಂತ ಮಗಳು ಹುಟ್ಟಬಾರದು ಎಂದಿದ್ದಾರೆ.

ಇತ್ತ ತಂದೆ ಯಾವಾಗ ಮಾಧ್ಯಮಗಳ ಮುಂದೆ ಬಂದು ಮಾತನಾಡಿದರೋ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನ ಮಾಡಿದ್ದರು ಚೈತ್ರ ಕುಂದಾಪುರ. ಕುಡುಕ ತಂದೆಯ ಚಿತ್ರ ಹಿಂಸೆ ಅನುಭವಿಸಿದವರಿಗಷ್ಟೇ ಗೊತ್ತು. ಎಂಥ ಮಕ್ಕಳಿಗೂ ಕುಡುಕ ತಂದೆ ಸಿಗಬಾರದು. ಎರಡು ಕ್ವಾಟರ್ ನಾನು ಕೊಟ್ಟರೆ ನನ್ನ ಮಕ್ಕಳು ದೇವರು. ಹೀಗೆನ್ನುವರ ಮಾತಿಗೆ ಬೆಲೆ ಕೊಡುವವರು ಮೂರ್ಖರಾಗ್ತಾರೆ.ಹೆತ್ತ ಮಕ್ಕಳನ್ನ ಸಾಕಲಿಲ್ಲ. ಫೀಸು ಕಟ್ಟಿ ಓದಿಸಲಿಲ್ಲ, ಹೆಣ್ಣು ಮಕ್ಕಳ ಜವಾಬ್ದಾರಿ ಹೊತ್ತು ಮದುವೆಯೂ ಮಾಡಲಿಲ್ಲ. ಕಟ್ಟಿಕೊಂಡ ಹೆಂಡತಿದೆ ಹೊಡೆದು ಚಿತ್ರ ಹಿಂದೆ ಮಾಡಿದ್ದು ಬಿಟ್ರೆ ಬೇರೆ ಏನೂ ಇಲ್ಲಾ. ಎಲ್ಲಾ ಮುಗಿದ ಮೇಲೆ ಅಪವಾದ ಹಾಕೋಕೆ ಮಾತ್ರ ತಂದೆ ಎನ್ನುವ ಹೆಸರು. ವಾವ್ ಎಂದಯ ಬರೆದುಕೊಂಡಿದ್ದರು. ಇತ್ತ ಅವರ ತಾಯಿ ಕೂಡ ಗಂಡನ ಆರೋಪಕ್ಕೆ ಉತ್ತರ ಕೊಡುವ ಕೆಲಸ ಮಾಡಿದ್ರು. ಆಸ್ತಿ ವಿಚಾರವಾಗಿ ಹೀಗೆ ಮಾಡ್ತಾ ಇದ್ದಾರೆ ಅಂತಲೂ ಹಾಗೂ ದೊಡ್ಡ ಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.
ಒಟ್ನಲ್ಲಿ ಚೈತ್ರ ಕುಂದಾಪುರ ಕುಟುಂಬ ಜಗಳ ಬೀದಿಗೆ ಬಿದ್ದಿದೆ. ಹಿಂದೊಮ್ಮೆ ಜೈಲು, ಕೇಸ್ ಅಂತ ಸುದ್ದಿಯಾಗಿದ್ದ ಇವರು ಈಗ ಕುಟುಂಬದ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ.



