ನಟ ಧರ್ಮ ಕೀರ್ತಿ ರಾಜ್ ಅವರು ಹೆಸರಿಗೆ ತಕ್ಕ ಹಾಗೆ ಬಿಗ್ ಬಾಸ್ ಮನೆಯೊಳಗೆ ಇದ್ದ ವ್ಯಕ್ತಿ. ಅತ್ಯಂತ ಒಳ್ಳೆಯ ಸ್ವಭಾವದ ಹುಡುಗ ಎಂದು ಹೇಳಿದರು ತಪ್ಪಲ್ಲ. ಇವರ ಒಳ್ಳೆತನ ಎಷ್ಟರ ಮಟ್ಟಿಗೆ ಇತ್ತು ಎಂದರೆ, ಬಿಗ್ ಬಾಸ್ ಮನೆಯೊಳಗೆ ಇವರು ಯಾವುದೇ ಥರದ ವಿವಾದಗಳಲ್ಲಿ ಕೂಡ ಸಿಕ್ಕಿ ಹಾಕಿಕೊಳ್ಳಲಿಲ್ಲ. ಯಾವುದೇ ತೊಂದರೆಯನ್ನು ಮಾಡಿಕೊಳ್ಳಲಿಲ್ಲ. ಆದರೆ ಬಹಳ ಬೇಗ ದೊಡ್ಡ ಮನೆಯ ಪಯಣ ಮುಗಿಸಿ ಹೊರಗಡೆ ಬಂದುಬಿಟ್ಟರು ಧರ್ಮ. ಇದು ಅವರ ಅಭಿಮಾನಿಗಳಿಗೆ ಬೇಸರ ತಂದಿದ್ದಂತು ಸತ್ಯ. ಆದರೆ ಈಗ ಧರ್ಮ ಅವರು ಬಿಗ್ ಬಾಸ್ ಇಂದ ಹೊರಬಂದು ಹೆಣ್ಣುಮಕ್ಕಳ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.

ಧರ್ಮ ಅಂಥ ಒಳ್ಳೆಯ ಮನುಷ್ಯ, ಭೂಮಿ ತೂಕದ ವ್ಯಕ್ತಿತ್ವ ಅಂತ ಹೆಸರು ಮಾಡಿರೋರು. ಬಿಗ್ ಬಾಸ್ ಮನೆಯೊಳಗೆ ಅಂಥ ಒಳ್ಳೆಯ ಗುಣದಿಂದ ಇದ್ದವರು, ಅಂಥ ಧರ್ಮ ಅವರು ದಾಸರಹಳ್ಳಿಯಲ್ಲಿ ಅಷ್ಟೊಂದು ಹೆಣ್ಣುಮಕ್ಕಳ ಜೊತೆಗೆ ಕಾಣಿಸಿಕೊಳ್ಳೋದಾ? ಇದು ಹೇಗೆ ಸಾಧ್ಯ? ಅಷ್ಟೊಂದು ಹೆಣ್ಣುಮಕ್ಕಳು ಬರೋದಾದ್ರು ಯಾಕೆ? ಈ ಎಲ್ಲಾ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಬೇರೆಯದೇ ಉತ್ತರವಿದೆ. ದಾಸರಹಳ್ಳಿಯಲ್ಲಿ ಧರ್ಮ ಅವರು ಕಾಣಿಸಿಕೊಳ್ಳುತ್ತಿರೋದು ನಿಜ. ಆದರೆ ಇದು ಸಿನಿಮಾ ಪ್ರಚಾರಕ್ಕಾಗಿ ಆಗಿದೆ. ಹೌದು, ಧರ್ಮ ಅವರು ಒಂದು ಸಿನಿಮಾದಲ್ಲಿ ನಟಿಸಿದ್ದಾರೆ..
ಈ ಸಿನಿಮಾದ ಹೆಸರು ದಾಸರಹಳ್ಳಿ, ಬಿಗ್ ಬಾಸ್ ಮನೆಗೆ ಧರ್ಮ ಅವರು ಹೋಗುವುದಕ್ಕಿಂತ ಮೊದಲೇ ದಾಸರಹಳ್ಳಿ ಸಿನಿಮಾದ ಚಿತ್ರೀಕರಣ ಮುಗಿದಿತ್ತು, ಈಗ ಈ ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಧರ್ಮ ಅವರು ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೊಂದು ಸಾಮಾಜಿಕ ಕಳಕಳಿ ಇರುವ ಸಿನಿಮಾ ಆಗಿದೆ. ಕುಡಿತದಿಂದ ಒಂದು ಇಡೀ ಕುಟುಂಬ ಹೇಗೆ ಹಾಳಾಗುತ್ತದೆ ಎನ್ನುವುದನ್ನು ತೋರಿಸಿಕೊಡುವ ಸಿನಿಮಾ ಇದಾಗಿದ್ದು, ಮನೆಯ ಗಂಡಸರು ಕುಡಿಯೋದನ್ನ ಬಿಡಬೇಕು, ಬಿಡೋದಕ್ಕೆ ಹಳ್ಳಿಗೆ ಹೋಗಿ ಅಲ್ಲಿನ ಸಂಸಾರಗಳನ್ನು ನೋಡಬೇಕು ಎಂದು ಈ ಸಿನಿಮಾ ಮೂಲಕ ತಿಳಿಸಲಾಗಿದೆ.
ಹಳ್ಳಿಗಳ ಕಡೆ ಗಂಡಸರ ಕುಡಿತದ ಚಟದಿಂದ ಮನೆಯಲ್ಲಿರೋ ಹೆಂಡತಿ, ಮಕ್ಕಳು ಇವರೆಲ್ಲರೂ ಎಷ್ಟು ತೊಂದರೆ ಅನುಭವಿಸುತ್ತಾರೆ. ಇದರಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು, ಕುಡಿತ ಬಿಡುವುದರಿಂದ ಏನೆಲ್ಲಾ ಒಳಿತು ಉಂಟಾಗುತ್ತದೆ, ಇದೆಲ್ಲವನ್ನು ದಾಸರಹಳ್ಳಿ ಸಿನಿಮಾ ಮೂಲಕ ತೋರಿಸಿಕೊಡಲಾಗಿದ್ದು, ಸಿನಿಮಾದಲ್ಲಿ ಹಿರಿಯ ಕಲಾವಿದರು ನಟಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಧರ್ಮ ಕೀರ್ತಿ ರಾಜ್ ಅವರು ಸಿನಿಮಾ ಪ್ರೊಮೋಷನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಹೆಣ್ಣುಮಕ್ಕಳು ಅವರೊಡನೆ ಪ್ರೊಮೋಷನ್ ನಲ್ಲಿ ಇರಲಿದ್ದಾರೆ..

ಈ ಕಾರಣಕ್ಕೆ ಧರ್ಮ ಅವರು ಹೆಣ್ಣುಮಕ್ಕಳ ಜೊತೆಗೆ ಕಾಣಿಸಿಕೊಳ್ಳಲಿದ್ದು, ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆ ಶುರುವಗಿದೆ. ಬಿಗ್ ಬಾಸ್ ಇಂದ ಧರ್ಮ ಅವರಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿರುವುದರಿಂದ ಸಿನಿಮಾ ಕೂಡ ಉತ್ತಮವಾಗಿ ಸಾಗುತ್ತದೆ ಎಂದು ಹೇಳಲಾಗುತ್ತಿದೆ. ಧರ್ಮ ಅವರು ಮೊದಲಿಗೆ ನಟಿಸಿದ್ದು ದರ್ಶನ್ ಅವರ ನವಗ್ರಹ ಸಿನಿಮಾದಲ್ಲಿ, ಇದರಲ್ಲಿ ಕ್ಯಾಡ್ಬೆರಿಸ್ ಎಂದೇ ಖ್ಯಾತಿ ಪಡೆದಿದ್ದರು, ನಂತರ ಕೆಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು ಸಹ, ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಸಿಕ್ಕಿರಲಿಲ್ಲ. ದಾಸರಹಳ್ಳಿ ಸಿನಿಮಾ ಮೂಲಕ ಧರ್ಮ ಅವರಿಗೆ ಉತ್ತಮವಾದ ಯಶಸ್ಸು ಸಿಗುತ್ತಾ ಎಂದು ಕಾದು ನೋಡಬೇಕಿದೆ.