ಸೌತ್ ಇಂಡಿಯಾದ ಬ್ಯೂಟಿ ಕೀರ್ತಿ ಸುರೇಶ್ ಕಳೆದ ಕೆಲವು ದಿನಗಳಿಂದ ಮದುವೆ ವಿಷಯಕ್ಕೆ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದರು. ಇದು ನಿಜ ಎಂದು ಹಲವರು ನಂಬಿದ್ದರು ಸಹ, ಕೆಲವರಿಗೆ ಇದೊಂದು ಗಾಸಿಪ್ ಇರಬಹುದು ಅಷ್ಟೇ ಎಂದು ಕೂಡ ಅನ್ನಿಸಿತ್ತು. ಇಷ್ಟು ದಿವಸ ಕೀರ್ತಿ ಸುರೇಶ್ ಅವರ ಕಡೆಯಿಂದ ಮದುವೆ ವಿಷಯದ ಬಗ್ಗೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ, ಆಂಟೋನಿ ಅವರ ಜೊತೆಗೆ ಈ ಡಿಸೆಂಬರ್ ನಲ್ಲಿ ಕೀರ್ತಿ ಮದುವೆ ನಡೆಯಲಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದ್ದ ಬೆನ್ನಲ್ಲೇ ಇದೀಗ ಕೀರ್ತಿ ಸುರೇಶ್ ಅವರು ಈ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಪೋಸ್ಟ್ ಮಾಡುವ ಮೂಲಕ, ತಮ್ಮ ಬಾಯ್ ಫ್ರೆಂಡ್ ಆಂಟೋನಿ ಅವರೇ ಎಂದು ಖಚಿತಪಡಿಸಿದ್ದಾರೆ.

ನಟಿ ಕೀರ್ತಿ ಸುರೇಶ್ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಬಹಳ ಜನಪ್ರಿಯತೆ ಪಡೆದಿದ್ದ ನಟಿ ಮೇನಕಾ ಹಾಗೂ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ಮಾಪಕ ಸುರೇಶ್ ಅವರ ಮಗಳು. ತಮಿಳು ಚಿತ್ರರಂಗದ ಮೂಲಕ ನಟನೆ ಶುರು ಮಾಡಿದ ಕೀರ್ತಿ ಸುರೇಶ್ ಅವರು ತೆಲುಗು, ಮಲಯಾಳಂ ಭಾಷೆಗಳಲ್ಲಿ ಕೂಡ ನಟಿಸಿ ಹೆಸರು ಮಾಡಿದ್ದಾರೆ. 50 ಮತ್ತು 60ರ ದಶಕದಲ್ಲಿ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸಿ ದೊಡ್ಡದಾಗಿ ಹೆಸರು ಮಾಡಿದ್ದ ಮೂಲತಃ ತೆಲುಗು ಚಿತ್ರರಂಗದವರಾದ ನಟಿ ಸಾವಿತ್ರಿ ಅವರ ಜೀವನ ಚರಿತ್ರೆಯಲ್ಲಿ ಕೀರ್ತಿ ಸುರೇಶ್ ಅವರು ಸಾವಿತ್ರಿ ಅವರ ಪಾತ್ರದಲ್ಲಿ ನಟಿಸಿದ್ದರು.
ಈ ಸಿನಿಮಾದಲ್ಲಿನ ಅದ್ಭುತ ಅಭಿನಯಕ್ಕೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿತು. ಹೀಗೆ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ, ಕಮರ್ಷಿಯಲ್ ಸಿನಿಮಾಗಳಲ್ಲಿ ಎಲ್ಲಾ ಥರದ ಸಿನಿಮಾಗಳಲ್ಲಿ ಸಹ ನಟಿಸಿ, ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಂಡು, ಚಿತ್ರರಂಗದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದಾರೆ ನಟಿ ಕೀರ್ತಿ ಸುರೇಶ್. ಬೇಬಿ ಜಾನ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುವುವಕ್ಕೆ ಸಜ್ಜಾಗಿದ್ದಾರೆ, ಇದು ತಮಿಳಿನ ನಟ ವಿಜಯ್ ಅವರು ಅಭಿನಯಿಸಿದ್ದ ತೆರಿ ಸಿನಿಮಾದ ಹಿಂದಿ ರಿಮೇಕ್ ಆಗಿದೆ. ವರುಣ್ ಧವನ್ ಹಾಗೂ ಕೀರ್ತಿ ಸುರೇಶ್ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಕೆರಿಯರ್ ನಲ್ಲಿ ಪೀಕ್ ನಲ್ಲಿರುವ ಕೀರ್ತಿ ಸುರೇಶ್ ಅವರು ಮದುವೆ ಆಗುವುದಕ್ಕೆ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಹೌದು, ಕೀರ್ತಿ ಸುರೇಶ್ ಅವರು ಡಿಸೆಂಬರ್ ತಿಂಗಳಿನಲ್ಲಿ ಮದುವೆ ಆಗುತ್ತಾರೆ ಎನ್ನುವ ಗಾಸಿಪ್ ಎಲ್ಲೆಡೆ ಕೇಳಿ ಬಂದಿತ್ತು, ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದ್ದು, ಕೀರ್ತಿ ಸುರೇಶ್ ಅವರು ಮದುವೆ ಆಗುತ್ತಿರುವುದು ನಿಜ, ಅವರ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಅವರೊಡನೆ ಕೀರ್ತಿ ಮದುವೆ ಆಗಲಿದ್ದಾರೆ. ಇವರಿಬ್ಬರದ್ದು 15 ವರ್ಷಗಳ ರಿಲೇಶನ್ಷಿಪ್ ಇಂದು ಕೀರ್ತಿ ಸುರೇಶ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹೇಳಿಕೊಂಡಿದ್ದಾರೆ..
ಆಂಟೋನಿ ಅವರ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆಂಟೋನಿ ಅವರು ಸಿನಿಮಾ ಫೀಲ್ಡ್ ನವರಲ್ಲ, ಕೊಚ್ಚಿ ಮೂಲದವರಾದ ದುಬೈ ನಲ್ಲಿರುವ ಬ್ಯುಸಿನೆಸ್ ಮ್ಯಾನ್ ಆಗಿದ್ದು ಕೊಚ್ಚಿಯಲ್ಲಿ ಅನೇಕ ರೆಸಾರ್ಟ್ ಗಳನ್ನು ಹೊಂದಿದ್ದಾರೆ ಎನ್ನಲಾಗಿದೆ. ಕೀರ್ತಿ ಸುರೇಶ್ ಇವರನ್ನು 15 ವರ್ಷಗಳಿಂದ ಪ್ರೀತಿಸುತ್ತಿದ್ದು, ಆಂಟೋನಿ ಅವರೊಡನೆ ಡಿಸೆಂಬರ್ 12ರಂದು ಗೋವಾದಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಲವ್ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಕೀರ್ತಿ ಸುರೇಶ್ ಅವರು ಮದುವೆ ಬಗ್ಗೆ ಸಹ ಮಾಹಿತಿ ನೀಡಬೇಕಿದೆ.



