ಕೆಲವೊಬ್ಬರು ತಮ್ಮ ಕನಸಿನ ಮನೆಯನ್ನು ಅರಮನೆಯಂತೆ ಕಟ್ಟಿಕೊಳ್ಳಬೇಕು ಎಂದೆಲ್ಲ ಕನಸು ಕಾಣುತ್ತಾರೆ. ಆದರೆ ಇಲ್ಲೊಂದು ಶೌಚಾಲಯವೇ ದೊಡ್ಡ ಅರಮನೆಯಂತಿದೆ, ಇದರ ಶ್ರೀಮಂತಿಕೆ ನೋಡಿದರೆ ಇದನ್ನು ಶೌಚಾಲಯ ಅಂತ ಯಾರೂ ಕೂಡ ನಂಬಲ್ಲ. ಆದರೆ ಇದು ಶೌಚಾಲಯ. ಇಂತಹದ್ದೊಂದು ಅದ್ದೂರಿ ಶೌಚಾಲಯ ಎಲ್ಲಿದೆ ಗೊತ್ತಾ? ಈ ವೈರಲ್ ವಿಡಿಯೋ ನೋಡಿ.

https://www.instagram.com/reel/Cvq02D5NrN8/?utm_source=ig_web_copy_link&igshid=MzRlODBiNWFlZA==
ಇದು ಥಾಯ್ಲೆಂಡ್ನಲ್ಲಿ ಇರುವ ಶೌಚಾಲಯದ ದೃಶ್ಯ. ಕ್ರಿಶನ್ಗೀಸಾಕಿಯ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ‘‘ನಾನು ವಾಶ್ರೂಂ ಬಗ್ಗೆ ವಿಡಿಯೋ ಮಾಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ಇದನ್ನು ಕಂಡ ಮೇಲೆ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ’’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಥಾಯ್ಲೆಂಡ್ನ ಸಾಂಪ್ರದಾಯಿಕ ಅರಮನೆ ಶೈಲಿಯಲ್ಲಿ ಈ ಶೌಚಾಲಯವನ್ನು ಕಟ್ಟಿಸಲಾಗಿದೆ. ಶೌಚಾಲಯದ ಒಳಗೆ ಮತ್ತು ಹೊರಗೆ ಸ್ವಚ್ಚತೆ ಕಾಪಾಡಲಾಗಿದೆ. ಎಲ್ಲಾ ಕಡೆಯೂ ಬಂಗಾರದ ಬಣ್ಣ ಬಳಿಯಲಾಗಿದೆ. ಒಟ್ಟಿನಲ್ಲಿ ಅರಮನೆಯಂತೆಯೇ ಈ ಶೌಚಾಲಯ ಕಾಣುವುದರೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೂಲ ವಿಸ್ಮಿತರಾಗಿದ್ದಾರೆ.



