ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಮುಖ್ಯವಾಗಿ ಕಾಣುವಂತಹದ್ದು ಮುಟ್ಟಿನ ಸಮಸ್ಯೆ. ಅಂದರೆ ಋತು ಸಮಸ್ಯೆ ಎಂದು ಕರೆಯುತ್ತೇವೆ. ಈ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಸೊಂಟ ನೋವು, ಕೈಕಾಲು ಸಿಡಿಯುವುದು, ತಲೆನೋವು, ವಾಂತಿವಾಗಲಿಕ್ಕೆ, ಮೂಡ್ಸ್ ಸ್ವಿಂಗ್, ಮಾನಸಿಕವಾಗಿ ಹಿಂಸೆ ಪಡುವಂತಹದ್ದು ಈ ಋತು ಸಂದರ್ಭದಲ್ಲಿ ಕಾಣಿಸುತ್ತದೆ. ಇವುಗಳಿಗೆ ಪರಿಹಾರಗಳೇನು. ಇದರ ಮೂಲವೇನೆಂದರೆ ಹೆಣ್ಣು ಮಕ್ಕಳು ಮಾಡುವಂತಹ ತಪ್ಪುಗಳು, ಇತ್ತೀಚಿನ ಹೆಣ್ಣು ಮಕ್ಕಳು ವೃತ್ತಿ ಜೀವನ ಶೈಲಿ, ಆಹಾರ ಕ್ರಮ ಪ್ರತಿಯೊಂದರಲ್ಲೂ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೇವೆ. ಎಲ್ಲೋ ಒಂದು ಕಡೆ ಹೆಣ್ಣು ಮಕ್ಕಳ ದೈಹಿಕ ,ಮಾನಸಿಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದಾಗಿರಬಹುದು.
ಇದಕ್ಕೆ ಕಾರಣ ಅತಿಯಾದ ಸ್ಟ್ರೆಸ್ ಲೈಫ್, ಮನೆಯಲ್ಲೂ ,ಹೊರಗಡೆ ದುಡಿಯುವಂತಹ ಆಹಾರಗಳಲ್ಲಿ ಅಪೌಷ್ಟಿಕತೆ, ದುಷ್ಟಗಳಿಗೆ ಬಲಿಯಾಗಿರುವಂತಹದ್ದು, ಜಂಕ್ ಫುಡ್ ಗಳು ಉಷ್ಣದಾಯಕ ಫುಡ್ ಸೇವನೆಯಿಂದ ಇವುಗಳಿಂದ ಆಗಿರಬಹುದು. ನೀರನ್ನು ಕಮ್ಮಿ ಸೇವನೆ ಮಾಡುವುದರಿಂದ, ವ್ಯಾಯಾಮ ಸಹಿತ ಜೀವನದಿಂದಾಗಿ ಇಂತಹ ಎಲ್ಲಾ ಸಂದರ್ಭಗಳಲ್ಲಿ ಪಿತ್ತ ಮತ್ತು ಉಷ್ಣ ಎರಡು ಕೂಡ ಹೆಚ್ಚಾಗಿ ಕಾಣುತ್ತಾ ಹೋಗುತ್ತದೆ. ಇದು ಮುಟ್ಟಿನ ಸಮಯದಲ್ಲಿ ಒಂದು ಪಟ್ಟು ಹೆಚ್ಚು ತೊಂದರೆ ಕೊಡಲು ಸಹಾಯ ಮಾಡುತ್ತಾ ಹೋಗುತ್ತದೆ.
ಯಾಕೆಂದರೆ ದೇಹ ಮತ್ತು ಶಕ್ತಿಯನ್ನು ಕಡಿಮೆಯಾಗುತ್ತದೆ. ಇದರಿಂದ ಸಮಸ್ಯೆಗಳು ಹೆಚ್ಚಾಗುವುದರಿಂದ ಹೆಣ್ಣು ಮಕ್ಕಳಿಗೆ ಹೆಚ್ಚಿನ ಹಿಂಸೆಗಳು ಕಾಣಿಸುತ್ತಾ ಹೋಗುತ್ತದೆ.ಈ ಋತು ಸಮಸ್ಯೆ ಸಂದರ್ಭದಲ್ಲಿ ದೇಹ ಶುದ್ದಿಯನ್ನು ಮಾಡಿಕೊಳ್ಳಬೇಕು. ಹೊಟ್ಟೆಯಲ್ಲಿನ ಕಲ್ಮಶಗಳನ್ನು ಹೊರ ಹಾಕುವುದರಿಂದ ದೋಷಗಳು ನಿವಾರಣೆ ಆಗುತ್ತದೆ. ಯಾವುದೇ ಹೆಚ್ಚಿನ ತೊಂದರೆಗಳು ಕಂಡುಬರುವುದಿಲ್ಲ. ಇಂತಹ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಹೊಟ್ಟೆಯನ್ನು ಶುದ್ಧೀಕರಿಸುವುದರಲ್ಲಿ ಸಹಾಯಕವಾಗುತ್ತದೆ.
ಹೊರಗಿನ ತಿಂಡಿ ತಿನಿಸುಗಳನ್ನು ಹೆಚ್ಚಾಗಿ ನಿಲ್ಲಿಸಬೇಕು. ಹೆಚ್ಚಿನ ನೀರಿನ ಸೇವನೆ ಮಾಡುವುದು ಒಳ್ಳೆಯದು. ಹೆಚ್ಚು ಎಳನೀರನ್ನು ಸೇವಿಸುವುದು ಒಳ್ಳೆಯದು. ಮಜ್ಜಿಗೆ ಸೇವನೆ ಮಾಡಿ, ಹಣ್ಣಿನ ರಸ ಮಾಡೋದು ಒಳ್ಳೇದು. ಗೋಧಿ, ಚಪಾತಿ ,ಬೇಕರಿ ತಿನಿಸುಗಳನ್ನು ನಿಲ್ಲಿಸಿ ಸಮಯಕ್ಕೆ ಸರಿಯಾದ ಆಹಾರ ಪದ್ಧತಿಗಳನ್ನು ಎಂಟು ದಿನಗಳ ಮುಂಚೆ ಮಾಡಬೇಕು. ಋತು ಸಂಧರ್ಭದಲ್ಲಿ ಮೂರು ದಿನಗಳ ಕಾಲ ಆಹಾರದಲ್ಲಿ ಸಂಪೂರ್ಣ ಬದಲಾವಣೆ ಇರಲಿ, ಮೂರು ದಿನಗಳು ಸಂಪೂರ್ಣ ಕಾರ್ಯ ನಿಲ್ಲಿಸಿ ಹಾಲು ಮತ್ತು ಮಜ್ಜಿಗೆಯನ್ನು ಸೇವಿಸುವುದು ಒಳ್ಳೆಯದು.
ತಂಪು ಪಾನೀಯಗಳನ್ನು ಮಜ್ಜಿಗೆ, ಪಾನಿಯ ,ಜೀರಿಗೆ ರಸ ಈ ರೀತಿಯ ಪಾನಿಯಗಳನ್ನು ಸೇವನೆ ಮಾಡುವುದರಿಂದ ,ನಂತರ ವಿಶ್ರಾಂತಿ ತೆಗೆದುಕೊಳ್ಳುವುದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಯಾವುದೇ ಸಮಸ್ಯೆಗಳು ಕಂಡುಬರುವುದಿಲ್ಲ ಈ ಬದಲಾವಣೆಗಳನ್ನು ಆ ಸಂದರ್ಭಗಳಲ್ಲಿ ಅಲ್ಲದೆ ಜೀವನದಲ್ಲಿ ಅಳವಡಿಸಿಕೊಂಡರೆ, ನಿಮ್ಮ ಸಮಸ್ಯೆಗಳು ಯಾವ ರೀತಿಯ ತೊಂದರೆಗಳು ಕಂಡುಬರುವುದಿಲ್ಲ.