ಹಣ್ಣುಗಳು ನಿಜವಾಗಿಯೂ ಶ್ರೇಷ್ಠವೇ. ನಮ್ಮ ನಮ್ಮ ಮನೆಯ ಬಳಿ ಬೆಳೆಸಿದ್ದರೆ ಮಾತ್ರ ಶ್ರೇಷ್ಠ. ಆದರೆ ದೇಹಕ್ಕೆ ಎಷ್ಟು ಹಣ್ಣುಗಳನ್ನು ತೆಗೆದುಕೊಳ್ಳಬೇಕು, ನಮ್ಮ ದೇಹ ಒಂದೇ ಒಂದು ಹಣ್ಣನ್ನು ಜೀರ್ಣ ಮಾಡುವ ಶಕ್ತಿ ಮತ್ತು ವಚನ ಮಾಡುವ ಶಕ್ತಿ ಇದೆ. ದಿನದ ಯಾವ ಹೊತ್ತಿನಲ್ಲಿ ಹಣ್ಣನ್ನು ತೆಗೆದುಕೊಂಡರೆ ಒಳ್ಳೆಯದು. ಬೆಳಗಿನ ಕಾಲ ಆರರಿಂದ ಹತ್ತು, ಸಂಜೆ ಆರರಿಂದ ಹತ್ತು ,ಇದು ಕಸಜ ಕಾಲ, ಎರಡರಿಂದ ಆರು ಇದು ಪಿತ್ತಜಕಾಲ. ಈ ಸಮಯಗಳಲೆಲ್ಲ ತೆಗೆದುಕೊಂಡರೆ ಸುಲಭವಾಗಿ ಜೀರ್ಣವಾಗುತ್ತದೆ.
ಹಾಗಾಗಿ ಪಿತ್ತದ ಸಮಯದಲ್ಲಿ ಹಣ್ಣುಗಳು ಕೋಲ್ಡ್ ಆಗಿದ್ದನ್ನು ಸೇವಿಸುವುದರಿಂದ ಶ್ವಾಸಕೋಶದ ತೊಂದರೆಗಳು ಬರುತ್ತದೆ. ಹಾಗಾಗಿ ಬೆಳಗ್ಗೆ ಎದ್ದು ಹಣ್ಣುಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಬೇರೆ ಬೇರೆ ಹಣ್ಣುಗಳನ್ನು ಮಿಕ್ಸ್ ಮಾಡಿ ತಿನ್ನುವುದರಿಂದ ಜೀರ್ಣವಾಗುವುದಿಲ್ಲ. ಜೀರ್ಣಕ್ರಿಯೆ ತಡವಾಗಿರುತ್ತದೆ. ಒಂದು ಹಣ್ಣು ಒಂದು ದಿನ ಎಂದು ಯೋಚಿಸಬೇಕು. ಯಾಕೆಂದರೆ, ಎಲ್ಲವನ್ನು ಮಿಕ್ಸ್ ಮಾಡಿ ತಿನ್ನುವುದು ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದಲ್ಲ. ಹಿತಮಿತದಲ್ಲಿ ಎಂದಿಗೂ ತಿನ್ನುವುದು ಒಳ್ಳೆಯದು.
ಇದರಿಂದ ಜ್ಯೂಸ್, ಕಸ್ಟರ್ಡ್ ವಿಷಾಸ್ಪದವಾಗಿ ಕನ್ವರ್ಟ್ ಆಗುತ್ತದೆ. ಅಂದರೆ ಜೀರ್ಣವಾಗದೆ ಅಮವಾಗುತ್ತದೆ. ಅಂದರೆ ಅಜೀರ್ಣವಾಗುವಂತಹ ಅವಸ್ಥೆ ಅಂತ ಹೇಳಬಹುದು. ಮಾಂಸಖಂಡಗಳು,ದುಷ್ಟಿ ಯಾಗಿರುವ ಸನ್ನಿವೇಶವನ್ನು ಕಾಣುತ್ತೇವೆ. ಎಲ್ಲದಕ್ಕೂ ಈ ಅಗ್ನಿಮೂಲ ಕಾರಣ ಶಾಂತ ಅಗ್ನಿ ಅಂದರೆ ಅಗ್ನಿ ಶಾಂತವಾಗಿದ್ದರೆ ಮರಣವೇ ಸಂಭವಿಸುತ್ತದೆ. ಎಷ್ಟೇ ಪೋಷಕತೆ ಇದೆ ಎಂದು ತಿಂದರೆ ನಿಮ್ಮ ಜಠರ ಯಾವತ್ತು ಕೂಡ ಎನಿಸಿದಷ್ಟು ಫಲವನ್ನು ಕೊಡುವುದಿಲ್ಲ.
ಹಣ್ಣುಗಳನ್ನು ತಾಜಾ ರೀತಿಯಲ್ಲಿ ತೆಗೆದುಕೊಳ್ಳಬೇಕು. ಆಯುರ್ವೇದದಲ್ಲಿ ಪಕ್ವವಾದ ಆಹಾರವನ್ನು ಸೇವಿಸಿ ಅನ್ನುವುದಕ್ಕೆ ಇರುತ್ತದೆ ಹಾಗಾಗಿ ಇಂತಹ ಹಣ್ಣುಗಳನ್ನು ಸೀಸನ್ ನಲ್ಲಿ ಹಣ್ಣುಗಳನ್ನು ಮಿತವಾಗಿ ಬಳಸಿದರೆ ಮಾತ್ರ ನಮಗೆ ಆರೋಗ್ಯಕರ ಕೊಡುತ್ತದೆ. ಎಲ್ಲೋ ಬೆಳೆದ ಫುಡ್ ಕಾಸ್ಟ್ಲಿ ಫುಡ್ ಗಳು ಇಂತಹ ತೊಂದರೆಗಳನ್ನು ಹೆಚ್ಚಿಸುತ್ತದೆ. ಇಂತಹ ತೊಂದರೆಗಳು ಆಗಬಾರದೆಂದರೆ ನಮ್ಮಲ್ಲಿ ಬೆಳೆದ ಹಣ್ಣುಗಳನ್ನು ಸೇವಿಸಬೇಕು. ಡ್ರೈ ಫ್ರೂಟ್ಸ್ ಗಳನ್ನು ಹೆಚ್ಚಾಗಿ ತಿನ್ನಬಾರದು, ಇವುಗಳು ಪಿತ್ತಕಾರವಾಗಿರುತ್ತದೆ. ಇವುಗಳಲ್ಲಿ ನೀರು ನೆನೆಸಿಟ್ಟು ತಿನ್ನಬೇಕು. ಅದು ಆರೋಗ್ಯಕ್ಕೆ ಒಳ್ಳೆಯದು. ನಾವು ಯಾವುದು ಉತ್ತಮವಾದ ಹಿತ ಅಂತ ಅನಿಸುತ್ತದೆ ಅದನ್ನು ಮಿತವಾಗಿ ಬಳಸಬೇಕು.



