ಪ್ರಸ್ತುತ ಜಗತ್ತು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದೆ. ಜಂಕ್ ವುಡ್, ಒತ್ತಡದ ಜೀವನ, ಆರೋಗ್ಯದ ಬಗ್ಗೆ ಅಸಡ್ಡೆ ಈ ಎಲ್ಲ ಕಾರಣಗಳಿಂದ ದೇಹದಲ್ಲಿ ಬದಲಾವಣೆಗಳಾಗುವುದು ಸಹಜ. ಇಂದಿನ ತಲೆಮಾರಿನ ಪ್ರಮುಖ ಸಮಸ್ಯೆಗಳಲ್ಲಿ ಒಂದು ಎಂದರೆ ಅದು ಅಸಹಜ ಬಿಳಿ ಕೂದಲಿನ ಸಮಸ್ಯೆ. ಇದರಿಂದ ಪಾರಾಗಲು ಎಷ್ಟೋ ಜನ ರಾಸಾಯನಿಕ ವಸ್ತುಗಳನ್ನು ಬಳಸುತ್ತಾರೆ. ಆದರೆ ಇದರಿಂದಾಗಿ ದೇಹವು ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಬಿಳಿ ಕೂದಲಿನ ಸಮಸ್ಯೆಗಳಿಂದ ಪಾರಾಗುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ. ಅಂತಹವರಿಗೆ ಕೆಲವು ಟಿಪ್ಸ್ ಗಳು ಇಲ್ಲಿವೆ ನೋಡಿ.
ತೆಂಗಿನ ಎಣ್ಟೆಯು ನೂರಾರು ವರ್ಷಗಳಿಂದ ಬಳಕೆಯಲ್ಲಿದ್ದು, ಇದನ್ನು ಪ್ರಮುಖವಾಗಿ ಕೂದಲಿನ ಆರೈಕೆಗಾಗಿ ಬಳಸುತ್ತಿದ್ದಾರೆ. ಈ ತೆಂಗಿನ ಎಣ್ಣೆಯ ಬಳಕೆಯಿಂದ ಕೂದಲಿಗೆ ಹೊಳಪು ಬರುತ್ತದೆ ಮತ್ತು ಕೂದಲು ಬಲಿಷ್ಠವಾಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ. ಆದರೆ ಇತ್ತೀಚೆಗೆ ಯುವ ಜನರನ್ನೂ ಕಾಡುತ್ತಿರುವ ಬಿಳಿ ಕೂದಲಿನ ಸಮಸ್ಯೆ ತಡೆಯಲು ತೆಂಗಿನ ಎಣ್ಣೆಯ ಜೊತೆಗೆ ನಿಂಬೆರಸ ಬೆರೆಸಿ ಕೂದಲಿಗೆ ಹಚ್ಚಿದರೆ ಈ ಸಮಸ್ಯೆ ಶಾಶ್ವತವಾಗಿ ದೂರವಾಗುತ್ತದೆ.

ನಿಂಬೆ ಹಣ್ಣಿನ ರಸವನ್ನು ಹಲವಾರ ಔಷಧ ಕ್ರಮದಲ್ಲಿ ಯಥೇಚ್ಛವಾಗಿ ಬಳಸಲಾಗುತ್ತದೆ. ಹಾಗೆಯೇ ಕೂದಲಿನ ಸಮಸ್ಯೆಗೂ ಬಳಸುತ್ತಾರೆ. ಇದರಲ್ಲಿ ಶಿಲೀಂಧ್ರ ನಾಶಕ ಗುಣಗಳಿದೆ. ಈ ಕಾರಣದಿಂದ ನಿಂಬೆ ರಸವನ್ನು ತೆಂಗಿನ ಎಣ್ಣೆಯ ಜೊತೆ ಸೇರಿಸಿ ಬೆರೆಸಿದರೆ ತಲೆ ಹೊಟ್ಟು ಶಮನವಾಗಿ ಕೂದಲಿನ ಬೆಳವಣಿಗೆಗೆ ಸಹಾಯಕವಾಗುತ್ತದೆ ಜೊತೆಗೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುವುದನ್ನು ಇದು ತಡೆಯುತ್ತದೆ.
ಇನ್ನು ಚಿಕ್ಕ ವಯಸ್ಸಿನಲ್ಲಿ ಕೂದಲು ಬಿಳಿಯಾಗಲು ಒತ್ತಡದ ಜೀವನ, ಕಳಪೆ ಆಹಾರ ಕ್ರಮ ಜೊತೆಗೆ ಬಹು ಮುಖ್ಯವಾಗಿ ದೇಹದಲ್ಲಿ ಮೆಲನಿನ್ ಉತ್ಪಾದನೆ ಕಡಿಮೆಯಾಗುವುದರಿಂದ ಆಗುತ್ತದೆ. ಇದಕ್ಕೆ ನಿಂಬೆ ಹಣ್ಣಿನ ಜೊತೆಗೆ ತೆಂಗಿನ ಎಣ್ಣೆ ಬೆರೆಸಿ ಕೂದಲಿನ ಬುಡ ಮತ್ತು ಕೂದಲಿಗೆ ಹಚ್ಚ ಬೇಕು. ಹೀಗೆ ಮಾಡುವುದರಿಂದ ಕೂದಲು ಶಾಶ್ವತವಾಗಿ ಕಪ್ಪಾಗಿರುತ್ತದೆ ಎಂದು ಕೆಲ ತಜ್ಞ ವೈದ್ಯರು ಅಭಿಪ್ರಾಯ ಪಡುತ್ತಾರೆ.



