ಬಿಗ್ ಬಾಸ್ ಮನೆ ಅನ್ನೋದು ಸ್ಪರ್ಧಿಗಳಿಗೆ ಹೊರಗಡೆ ಒಳ್ಳೆಯ ಪಾಪ್ಯುಲಾರಿಟಿ ತಂದುಕೊಡುವ ಜಾಗ ಎಂದು ಹೇಳಿದರೆ ತಪ್ಪಲ್ಲ. ಈ ಮನೆಗೆ ಹೋಗೋ ಸ್ಪರ್ಧಿಗಳಿಗೆ ಆಟೊಮ್ಯಾಟಿಕ್ ಆಗಿ ಅಭಿಮಾನಿಗಳು ಹೆಚ್ಚಾಗುತ್ತಾರೆ. ಇರೋದು ಕೆಲವೇ ದಿನ ಆದರೂ, ಹೆಚ್ಚು ದಿನ ಆದರೂ, ಅಭಿಮಾನಿಗಳು ಹೆಚ್ಚಾಗೋದರಲ್ಲಿ ಸಂಶಯವಿಲ್ಲ. ಈ ಬಾರಿ ಅಂತು ಬಹುತೇಕ ಎಕ್ಕಾ ಸ್ಪರ್ಧಿಗಳಿಗೆ ಜನಪ್ರಿಯತೆ, ಜನರ ಪ್ರೀತಿ ಎಲ್ಲವೂ ಸಿಕ್ಕಿದೆ. ಹೀಗೆ ಬಿಗ್ ಬಾಸ್ ಮನೆಗೆ ಬಂದ ಸ್ಪರ್ಧಿಗಳ ಪೈಕಿ ಭವ್ಯ ಗೌಡ ಸಹ ಒಬ್ಬರು. ಇವರು ಫಿನಾಲೆವರೆಗು ತಲುಪು, 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡು ಎಲಿಮಿನೇಟ್ ಆದರು. ಇದೀಗ ಭವ್ಯ ಗೌಡ ಅವರಿಗೆ ಅಭಿಮಾನಿಗಳಿಂದ ಹೆಚ್ಚು ಪ್ರೀತಿ ಸಿಕ್ಕಿದೆ. ಇದೀಗ ಇವರು ಅಭಿಮಾನಿಗಳ ಆಸೆಯಂತೆ ಕರ್ಣ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಫಿನಾಲೆ ವರೆಗು ಬಂದ ಸ್ಪರ್ಧಿಗಳಲ್ಲಿ ಒಬ್ಬರು ಭವ್ಯ ಗೌಡ. ಗೀತಾ ಧಾರಾವಾಹಿ ಮೂಲಕ ಇವರಿಗೆ ಸಿಕ್ಕಾಪಟ್ಟೆ ಪಾಪ್ಯುಲಾರಿಟಿ ಇತ್ತು. ಸೋಶಿಯಲ್ ಮೀಡಿಯಾದಲ್ಲಿ ಸಹ ಭವ್ಯ ಅವರಿಗೆ ಫಾಲೋವರ್ಸ್ ಹಾಗೂ ಫ್ಯಾನ್ಸ್ ಇದ್ದರು. ಈ ಧಾರಾವಾಹಿ ಮುಗಿದ ಬಳಿಕ ಭವ್ಯ ಗೌಡ ಅವರು ಕಾಣಿಸಿಕೊಂಡಿದ್ದು ಬಿಗ್ ಬಾಸ್ ಶೋ ನಲ್ಲಿ. ಮೊದಲ ದಿನ ಗೊಂಬೆಯ ಹಾಗೆ ಬಂದ ಭವ್ಯ ಗೌಡ, ಫಿನಾಲೆ ವರೆಗು ಬರುತ್ತಾರೆ ಎಂದು ಹೆಚ್ಚು ನಿರೀಕ್ಷೆ ಮಾಡಿರಲಿಲ್ಲ. ಆದರೆ ಭವ್ಯ ಗೌಡ ಫಿನಾಲೆ ವರೆಗು ತಲುಪಿದರು. ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು, ತ್ರಿವಿಕ್ರಂ ಅವರ ಜೊತೆಗಿನ ಫ್ರೆಂಡ್ಶಿಪ್ ಇಂದ ಎಂದು ಹೇಳಿದರು ತಪ್ಪಲ್ಲ. ಭವ್ಯ ತ್ರಿವಿಕ್ರಂ ಫ್ರೆಂಡ್ಶಿಪ್ ಜನರಿಗೆ ಸಿಕ್ಕಾಪಟ್ಟೆ ಇಷ್ಟವಾಯಿತು. ಇವರಿಬ್ಬರು ಬಹಳ ಕ್ಲೋಸ್ ಆಗಿರುತ್ತಿದ್ದರು.

ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಭವ್ಯ ಗೌಡ ಅವರು ಬಿಗ್ ಬಾಸ್ ಜರ್ನಿಯಲ್ಲಿ ಕೆಲವು ಜನರ ಜೊತೆಗೆ ಬಹಳ ಜಗಳ ಆಡಿದ್ದು ಇದೆ. ಮಂಜಣ್ಣ ಅವರ ಜೊತೆಗೆ, ಚೈತ್ರಾ ಅವರ ಜೊತೆಗೆ, ಗೌತಮಿ ಅವರ ಜೊತೆಗೆ ಇವರೆಲ್ಲರ ಜೊತೆಗೆ ಜಗಳದ ಕಾರಣಕ್ಕೆ. ಆದರೆ ಇವರು ಟಾಸ್ಕ್ ಗಳಲ್ಲೂ ಸಹ ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದ ಕಾರಣ ಹೊರಗಿನ ಅಭಿಮಾನಿಗಳಿಗೆ ಇಷ್ಟವಾಗಿದ್ದರು. ಬಿಗ್ ಬಾಸ್ ಮನೆಯ ಒಳಗೆ ಅತಿ ಹೆಚ್ಚು ಕಣ್ಣೀರು ಹಾಕಿದ ಸ್ಪರ್ಧಿ ಭವ್ಯ ಎಂದು ಹೇಳಿದರು ಸಹ ತಪ್ಪಲ್ಲ. ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ಏನನ್ನಾದರೂ ಹೇಳಿದರು ಸಹ, ಕಣ್ಣೀರು ಹಾಕುತ್ತಿದ್ದರು. ಇದರಿಂದ ಕೆಲವರಿಗೆ ಕಿರಿಕಿರಿ ಉಂಟಾಗಿದ್ದು ಇದೆ. ಒಟ್ಟಿನಲ್ಲಿ ಭವ್ಯ ಗೌಡ ಫಿನಾಲೆ ವರೆಗು ತಲುಪಿದರು, 6ನೇ ಸ್ಥಾನಕ್ಕೆ ಎಲಿಮಿನೇಟ್ ಆಗಿ ಹೊರಬಂದರು.
ಭವ್ಯ ಗೌಡ ಬಿಗ್ ಬಾಸ್ ಮನೆಯ ಒಳಗೆ ಇದ್ದಿದ್ದು 118 ದಿನಗಳ ಕಾಲ. ಹೌದು, ಇದು ಬಹಳ ಕಷ್ಟವೇ, ಇಷ್ಟು ದಿವಸಗಳ ಕಾಲ ಬಿಗ್ ಬಾಸ್ ಮನೆಯ ಒಳಗಿರುವುದು ಸುಲಭ ಅಲ್ಲ. ಇನ್ನು ಭವ್ಯ ಗೌಡ ಇಷ್ಟು ದಿವಸಗಳ ಕಾಲ ಇದ್ದಿದ್ದು, ನಿಜಕ್ಕೂ ಮೆಚ್ಚುಗೆ ಸೂಚಿಸುವ ವಿಷಯ. ಇನ್ನು ಭವ್ಯ ಅವರಿಗೆ ಹೊರಗಡೆ ದೊಡ್ಡ ಅಭಿಮಾನಿ ಬಳಗ ಸಹ ಇದೆ. ಇನ್ಸ್ಟಾಗ್ರಾಮ್ ನಲ್ಲಿ ಸಖತ್ ಆಕ್ಟಿವ್ ಆಗಿರುವ ಭವ್ಯ ಗೌಡ ಅನೇಕ ವಿಚಾರಗಳನ್ನು ಫ್ಯಾನ್ಸ್ ಜೊತೆಗೆ ಶೇರ್ ಮಾಡಿಕೊಳ್ಳುತ್ತಾರೆ. ಹೊಸ ಫೋಟೋಶೂಟ್ ಮತ್ತು ರೀಲ್ಸ್ ಗಳನ್ನು ಮಾಡಿ, ಜನರಿಗೆ ಬಹಳ ಇಷ್ಟ ಆಗ್ತಾರೆ. ಇದೀಗ ಇವರು ತಮ್ಮ ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್ ನೀಡಿರುವ ವಿಷಯ ಗೊತ್ತೇ ಇದೆ. ಬಿಗ್ ಬಾಸ್ ನಂತರ ಭವ್ಯ ಗೌಡ ಯಾವ ಪ್ರಾಜೆಕ್ಟ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಕುತೂಹಲ ಇತ್ತು.

ಬಿಗ್ ಬಾಸ್ ಮುಗಿಯುತ್ತಿದ್ದ ಹಾಗೆ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಭವ್ಯ ಬರುತ್ತಾರೆ ಎನ್ನಲಾಗಿತ್ತು, ಆದರೆ ಈ ಶೋ ಇಂದ ಹೊರಗೆ ಉಳಿದರು ಭವ್ಯ. ವೈಯಕ್ತಿಕ ಕಾರಣಗಳಿಂದ ಶೋ ಗೆ ಹೋಗಲು ಆಗಲಿಲ್ಲ ಎಂದು ತಿಳಿಸಿದ್ದರು. ಆದರೆ ಈಗ ಭವ್ಯ ಅವರು ಜೀಕನ್ನಡ ವಾಹಿನಿಯ ಕರ್ಣ ಧಾರಾವಾಹಿ ಮೂಲಕ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಕಿರಣ್ ರಾಜ್ ನಾಯಕ ಆಗಿರುವ ಈ ಧಾರಾವಾಹಿ ಜೂನ್ 16ರಿಂದ ಅಂದರೆ ಮುಂದಿನ ಸೋಮವಾರದಿಂದ ಆರಂಭವಾಗುತ್ತಿದ್ದು, ಭವ್ಯ ಗೌಡ ಡಾ. ನಿಧಿ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಕುರಿತು ಸಂದರ್ಶನ ಒಂದರಲ್ಲಿ ಮಾತನಾಡಿರುವ ಭವ್ಯ ಜೀಕನ್ನಡ ವಾಹಿನಿಯಲ್ಲಿ ಇದು ನನ್ನ ಮೊದಲ ಪ್ರಾಜೆಕ್ಟ್ ಬಹಳ ಸಂತೋಷವಿದೆ ಎಂದು ಹೇಳಿದ್ದಾರೆ. ಹಾಗೆಯೇ ಈ ಧಾರಾವಾಹಿಗಾಗಿ ಕರೆ ಬಂದಾಗ ನಂಬುವುದಕ್ಕೆ ಸಾಧ್ಯ ಆಗಿರಲಿಲ್ಲ ಎಂದು ಕೂಡ ಹೇಳಿದ್ದಾರೆ.
ಹೌದು, ಭವ್ಯ ಗೌಡ ಅವರು ನಟನೆ ಇಂದ ಒಂದು ಬ್ರೇಕ್ ತೆಗೆದುಕೊಳ್ಳಬೇಕು, ಇನ್ನಷ್ಟು ಸಮಯ ಫ್ಯಾಮಿಲಿ ಜೊತೆಗೆ ಕಳೆಯಬೇಕು ಎಂದುಕೊಂಡಿದ್ದರಂತೆ. ಆದರೆ ಕರ್ಣ ಪ್ರೊಮೋ ನೋಡಿ, ಅದರ ಕಾಮೆಂಟ್ಸ್ ನಲ್ಲಿ ಎಲ್ಲಾ ಫ್ಯಾನ್ಸ್ ಭವ್ಯ ಅವರನ್ನ ಹೀರೋಯಿನ್ ಆಗಿ ಆಯ್ಕೆ ಮಾಡಿ ಎಂದು ಮ್ಯಾನಿಫೆಸ್ಟ್ ಮಾಡಿದ್ದು ನೋಡಿ ಖುಷಿಯಾಗಿತ್ತು, ಅದಾಗಿ ನಾಲ್ಕೈದು ದಿನಗಳ ನಂತರ ನನಗೆ ಕರೆ ಬಂದಿದ್ದು ಎಂದು, ಆಗ ನನಗೆ ಶಾಕ್ ಆಗಿತ್ತು, ಇನ್ನು ಹೀರೋಯಿನ್ ಸೆಲೆಕ್ಟ್ ಆಗಿಲ್ವಾ ಅಂತ ಕೇಳಿದ್ದೆ, ಇಲ್ಲ ಬನ್ನಿ ಸ್ವಲ್ಪ ಮಾತಾಡಬೇಕು ಅಂತ ಅಂದಿದ್ರು, ನಾನು ಹೋದೆ ಮಾತಾಡಿ, ಟೆಸ್ಟ್ ಶೂಟ್ ಎಲ್ಲಾ ಮಾಡಿ ಸೆಲೆಕ್ಟ್ ಆದಮೇಲೆ ಖುಷಿ ಆಯ್ತು. ಆಗಲೂ ಒಂದು ಸಣ್ಣ ಡೌಟ್ ಇತ್ತು, ಇನ್ನು ಎರಡು ತಿಂಗಳು ಫ್ಯಾಮಿಲಿ ಜೊತೆ ಟೈಮ್ ಸ್ಪೆನ್ಡ್ ಮಾಡಬೇಕು ಅಂತ. ಆದರೆ ಒಳ್ಳೇ ಅವಕಾಶ ಸಿಕ್ಕಾಗ ಬಿಡಬಾರದು ಅಂತ ಒಪ್ಪಿಕೊಂಡೇ ಎಂದಿದ್ದಾರೆ ಭವ್ಯ.

ಇನ್ನು ಯಾವುದಾದರೂ ಸನ್ನಿವೇಶದಲ್ಲಿ ಬೇಜಾರಾಗಿದ್ಯಾ ಎಂದು ಕೇಳಿದ್ದಕ್ಕೆ, ಕೆರಿಯರ್ ಶುರುವಿನಲ್ಲಿ ಆಗಿತ್ತು ಎಂದಿದ್ದಾರೆ, ಕೆರಿಯರ್ ಶುರುವಿನಲ್ಲಿ, ಒಂದು ಸೀನ್ ನಲ್ಲಿ 8 ರಿಂದ 9 ಲೈನ್ಸ್ ಹೇಳಬೇಕಿತ್ತು, ಅದಕ್ಕೆ ಟ್ರಾಲಿ ಶಾಟ್ ಇಟ್ಟಿದ್ದರು, ಅದು ಸುತ್ತ ಟರ್ನ್ ಆಗುತ್ತದೆ, ನಾನು ತಿರುಗಿ ತಿರುಗಿ ಆ ಲೈನ್ಸ್ ಹೇಳಬೇಕಿತ್ತು, ಆದರೆ ನನಗೆ ಅದು ಬರಲೇ ಇಲ್ಲ ಎಷ್ಟೇ ಪ್ರಯತ್ನ ಪಟ್ಟರೂ ಬರಲಿಲ್ಲ, ಅವತ್ತು ಪ್ಯಾಕಪ್ ಮಾಡಿ, ನಾಳೆ ಬೆಳಗ್ಗೆ ಮೊದಲ ಶಾಟ್ ಇದೇ ಇರುತ್ತದೆ ಬೆಳಗ್ಗೆ ನೀನು ಮಾಡಬೇಕು ಅಂದಿದ್ದರು.. ಅವತ್ತು ಸಂಜೆ ನನಗೆ, ನನ್ನಿಂದ ಇದನ್ನ ಮಾಡೋಕೆ ಆಗಲಿಲ್ಲ ಎಂದು ತುಂಬಾ ಗಿಲ್ಟ್ ಆಗಿಬಿಡ್ತು. ಮರುದಿನ ಬೆಳಗ್ಗೆ ಸೆಟ್ ಗೆ ಹೋದ ಕೂಡಲೇ ಶಾಟ್ ಮುಗಿಸಿದೆ, ಆಗ ನಿರ್ದೇಶಕರು ಗುಡ್ ಚೆನ್ನಾಗಿ ಬಂದಿದೆ, ಇದೇ ರೀತಿಯಲ್ಲೇ ನೀನು ಕಲಿಯೋದು ಅಂದಿದ್ರು.. ಎಂದು ಅಂದಿನ ಸನ್ನಿವೇಶವನ್ನ ನೆನಪು ಮಾಡಿಕೊಂಡಿದ್ದಾರೆ ಭವ್ಯ.



