ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದ ನಿವೇದಿತಾ ಗೌಡ ಇಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗೋರಲ್ಲಿ ಒಬ್ಬರು. ಇವರು ಒಂದು ವಿಡಿಯೋ ಪೋಸ್ಟ್ ಮಾಡಿದರೆ, ಸಾವಿರಾರು ನೆಗಟಿವ್ ಕಾಮೆಂಟ್ಸ್, ಕೆಟ್ಟ ಕಾಮೆಂಟ್ಸ್ ಗಳು ಬರುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ನಿವೇದಿತಾ ಗೌಡ ತಲೆಕೆಡಿಸಿಕೊಳ್ಳುವುದೇ ಇಲ್ಲ. ಯಾವುದೇ ಕಾರಣಕ್ಕೆ ವಿಡಿಯೋ ಪೋಸ್ಟ್ ಮಾಡೋದನ್ನ ಬಿಡದ ನಿವೇದಿತಾ, ಇನ್ಸ್ಟಾಗ್ರಾಮ್ ನಲ್ಲಿ ದಿನಕ್ಕೊಂದು ರೀಲ್ಸ್ ಹಾಕುತ್ತಲೇ ಇರುತ್ತಾರೆ. ಇವರಿಗೆ ಬರುವ ನೆಗಟಿವ್ ಕಾಮೆಂಟ್ಸ್ ಗಳನ್ನು ಓದಿದರೆ ಎಂಥವರಿಗು ಯಪ್ಪಾ ಇದೆಲ್ಲಾ ಬೇಕಾ ಎಂದು ಅನ್ನಿಸದೆ ಇರದು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳೋದಿಲ್ಲ ನಿವೇದಿತಾ. ಇದೀಗ ತಾವು ನೀಡಿರುವ ಹೇಳಿಕೆಯ ಕಾರಣಕ್ಕೆ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗುವ ಕನಸಿತ್ತು ಎಂದಿದ್ದಾರೆ ನಿವೇದಿತಾ ಗೌಡ.
ಈ ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾದಾಗಿನಿಂದ ಜನರು ಎಲ್ಲರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಕಾಮೆಂಟ್ಸ್ ಬರೆಯುವುದು ಕೂಡ ಜಾಸ್ತಿಯೇ ಆಗಿದೆ. ಅದು ಸೆಲೆಬ್ರಿಟಿಯೇ ಆಗಿರಲಿ, ಅಥವಾ ಕಿರುತೆರೆಯಲ್ಲಿ ಗುರುತಿಸಿಕೊಂಡವರೆ ಆಗಿರಲಿ, ಅವರ ಬಗ್ಗೆ ಪಾಸಿಟಿವ್ ಗಿಂತ ನೆಗಟಿವ್ ಕಾಮೆಂಟ್ ಗಳು ಬರುವುದೇ ಜಾಸ್ತಿ. ಕೆಲವರು ಇದರ ಬಗ್ಗೆ ತಲೆಕೆಡಿಸಿಕೊಂಡು ಕೂತರೆ, ಇನ್ನು ಕೆಲವರು ತಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡುತ್ತಾರೆ. ಅದೇ ವರ್ಗಕ್ಕೆ ಸೇರಿದವರು, ಇದುವರೆಗೂ ಎಷ್ಟೇ ನೆಗಟಿವ್ ಕಾಮೆಂಟ್ಸ್ ಗಳು ಬಂದಿದ್ದರು ಸಹ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ, ನಿವೇದಿತಾ ಗೌಡ ಕೆಲವು ಸಾರಿ ಈ ರೀತಿ ಬರುವ ಕಾಮೆಂಟ್ಸ್ ಗಳಿಗೆ ರಿಪ್ಲೈ ಮಾಡುತ್ತಾರೆ. ನೆಗಟಿವ್ ಕಾಮೆಂಟ್ಸ್ ಹಾಕೋರಿಗೆ ಉತ್ತರ ಕೊಡುತ್ತಾರೆ. ಕೆಲವು ದಿನಗಳ ಹಿಂದೆ ಇದು ನಡೆದಿತ್ತು.

ನಿವೇದಿತಾ ಗೌಡ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಕಾಣಿಸಿಕೊಂಡಿದ್ದರು. ಈ ಶೋ ಇಂದ ಇವರಿಗೆ ಮತ್ತೆ ಲೈಮ್ ಲೈಟ್ ಸಿಕ್ಕಿತ್ತು. ಚಂದನ್ ಶೆಟ್ಟಿ ಅವರಿಂದ ವಿಚ್ಛೇದನ ಪಡೆದ ನಂತರ ನಿವೇದಿತಾ ಗೌಡ ಕಾಣಿಸಿಕೊಂಡ ಮೊದಲ ಶೋ ಇದು. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ನಿವೇದಿತಾ ಗೌಡ ತಮ್ಮ ತಂದೆಯ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ನಿವೇದಿತಾ ಅವರ ಲೈಫ್ ನಲ್ಲಿ ಅಪ್ಪನ ಸಪೋರ್ಟ್ ತುಂಬಾ ಇದೆ. ಆ ವಿಷಯದ ಬಗ್ಗೆ ಅವರು ಶೋನಲ್ಲಿ ಮಾತನಾಡಿ, ತಂದೆಯನ್ನು ನೆನೆದು ಕಣ್ಣೀರು ಹಾಕಿದ್ದರು. ಜೀವನದಲ್ಲಿ ಅನಿರೀಕ್ಷಿತವಾದ ಅಂದುಕೊಳ್ಳದ ಘಟನೆಗಳು ನಡೆದು, ನಿವೇದಿತಾ ಅವರು ಕುಗ್ಗಿದಾಗ, ಅವರ ತಂದೆ ಜೊತೆಯಲ್ಲಿ ನಿಂತು ಸಪೋರ್ಟ್ ಮಾಡಿದರಂತೆ. ಅಪ್ಪನ ಸಪೋರ್ಟ್ ಇಲ್ಲದೇ ಹೋಗಿದ್ದರೆ, ನಾನು ಸ್ಟ್ರಾಂಗ್ ಆಗಿ ನಿಂತಿರೋದಕ್ಕೆ ಸಾಧ್ಯ ಆಗಿದೆ ಎಂದು ನಿವೇದಿತಾ ಗೌಗೌಡ ಹೇಳಿದರು.
ನಿವೇದಿತಾ ಅಪ್ಪನ ಬಗ್ಗೆ ಹೇಳಿದ ಮಾತುಗಳನ್ನ ಕೇಳಿ, ಇತರ ಸ್ಪರ್ಧಿಗಳು ಸಹ ಭಾವುಕರಾಗಿದ್ದರು. ಈ ಎಪಿಸೋಡ್ ಬಂದ ಒಂದೆರಡೇ ದಿನಕ್ಕೆ ನಿವೇದಿತಾ ಗೌಡ ತಮ್ಮ ತಂದೆಯವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದರು, ಹೀಗೆ ಒಳ್ಳೆಯ ಕಾರಣಕ್ಕೆ ಮತ್ತು ಟ್ರೋಲ್ ಗಳಿಂದ ಎರಡು ರೀತಿಯಲ್ಲೂ ನಿವೇದಿತಾ ಗೌಡ ಸುದ್ದಿಯಾಗುತ್ತಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋ ಮುಗಿದಿದೆ, ಈಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ವೀಕೆಂಡ್ ಇಂದ ಹೊಸ ಶೋ ಶುರುವಾಗಲಿದೆ. ಅದು ಕ್ವಾಟ್ಲೆ ಕಿಚನ್. ಅಡುಗೆ ಬರುವ ಮತ್ತು ಅಡುಗೆ ಬರದ ಸೆಲೆಬ್ರಿಟಿಗಳನ್ನು ಜೊತೆಯಾಗಿ ಸೇರಿಸಿ, ಶುರುವಾಗಲಿರುವ ಶೋ ಇದು. ಅನುಪಮಾ ಗೌಡ ಮತ್ತು ಕುರಿ ಪ್ರತಾಪ್ ಈ ಶೋ ನಿರೂಪಣೆ ಮಾಡಲಿದ್ದಾರೆ. ಇನ್ನು ನಟಿ ಶ್ರುತಿ ಅವರು ಈ ಶೋಗೆ ಜಡ್ಜ್ ಆಗಿದ್ದಾರೆ.

ಈ ಶನಿವಾರದಿಂದ ಹೊಸ ಅಡುಗೆ ಶೋ ಶುರುವಾಗಲಿದೆ. ನಿವೇದಿತಾ ಗೌಡ ಈ ಶೋನಲ್ಲಿ ಸ್ಪರ್ಧಿಯಾಗಿ ಬರಲಿದ್ದಾರೆ. ಪ್ರೊಮೋಗಳಲ್ಲಿ ಕೂಡ ನಿವೇದಿತಾ ಗೌಡ ಕಾಣಿಸಿಕೊಂಡಿದ್ದು, ಇವರ ಫ್ಯಾನ್ಸ್ ಕಾಯುತ್ತಿದ್ದಾರೆ. ಇದೆಲ್ಲದರ ಜೊತೆಗೆ ಈಗ ನಿವೇದಿತಾ ಗೌಡ ನೀಡಿರುವ ಹಳೆಯ ಹೇಳಿಕೆ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದೇನು ಎಂದರೆ ಕ್ರಿಶ್ಚಿಯನ್ ಹುಡುಗನ ಜೊತೆಗೆ ಮದುವೆಯಾಗಬೇಕು ಎಂದುಕೊಂಡಿದ್ದರಂತೆ ನಿವೇದಿತಾ ಗೌಡ. ಅದು ಯಾಕೆ ಎಂದರೆ, ಕ್ರಿಶ್ಚಿಯನ್ ಮದುವೆಗಳಲ್ಲಿ ಮಾತ್ರ ಮದುವೆಗೆ ಗೌನ್ ಧರಿಸುವ ಅವಕಾಶ ಇದೆ, ನಿವೇದಿತಾ ಗೆ ಗೌನ್ ಅಂದ್ರೆ ತುಂಬಾ ಇಷ್ಟ. ಹಾಗಾಗಿ ಒಳ್ಳೆಯ ಗೌನ್ ಹಾಕೋಬೇಕು ಅನ್ನೋ ಆಸೆ ಇಂದ, ನಿವೇದಿತಾ ಗೌಡ ಈ ಕ್ರಿಶ್ಚಿಯನ್ ಹುಡುಗನ ಜೊತೆಗೆ ಮದುವೆ ಆಗಬೇಕು ಎಂದು ಬಯಸಿದ್ದರಂತೆ.
ಆದರೆ ತಮ್ಮ ಮದುವೆ ನಡೆದಾಗ, ರಿಸೆಪ್ಶನ್ ನಲ್ಲಿ ಗೌನ್ ಧರಿಸಿದ್ದರು. ಅದನ್ನು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದರು, ಆದರೆ ರಿಸೆಪ್ಶನ್ ದಿವಸ ಮಾತ್ರ ಧರಿಸಿದ್ದು, ಇನ್ಯಾವಾಗಲೂ ಹಾಕಿಲ್ಲ ಎಂದಿದ್ದಾರೆ ನಿವೇದಿತಾ ಗೌಡ. ಈ ವಿಡಿಯೋ ವೈರಲ್ ಆಗಿದ್ದು, ಇಂಥ ಕಾರಣಕ್ಕೆ ಕ್ರಿಶ್ಚಿಯನ್ ಹುಡುಗನನ್ನ ಮದುವೆಯಾಗೋ ಆಸೇನಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಇದೆಲ್ಲವೂ ಒಂದು ಕಡೆಯಾದರೆ, ಸಾಮಾನ್ಯವಾಗಿ ಮೈಸೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಹುಡುಗಿ ನಿವೇದಿತಾ ಗೌಡ ಇಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು, ಸಿನಿಮಾದಲ್ಲಿ ನಟಿಸುತ್ತಿರುವುದನ್ನು ಮೆಚ್ಚಲೇಬೇಕು. ನಿವೇದಿತಾ ಗೌಡ ತಕ್ಕಮಟ್ಟಿಗೆ ಫೇಮಸ್ ಆದರೂ ಸಹ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿದ್ದು, ಎಲ್ಲರ ಬಾಯಲ್ಲಿ ಅವರ ಹೆಸರು ಬರೋದಕ್ಕೆ ಶುರುವಾಗಿದ್ದು ಚಂದನ್ ಶೆಟ್ಟಿ ಅವರೊಡನೆ ಮದುವೆಯಾದ ಬಳಿಕ.

ಇವರಿಬ್ಬರು ಬಿಗ್ ಬಾಸ್ ನಲ್ಲಿ ಪರಿಚಿತರಾಗಿ, ಫ್ರೆಂಡ್ಶಿಪ್ ಶುರುವಾಗಿ, ಲವ್ ಆಗಿ, ಕೊನೆಗೆ ಮದುವೆಯಾದರು. ಮದುವೆ ನಂತರ ಚೆನ್ನಾಗಿಯೇ ಇದ್ದ ಜೋಡಿಗೆ ಇದ್ದಕ್ಕಿದ್ದಂತೆ ಏನಾಯ್ತು ಗೊತ್ತಿಲ್ಲ, ಕಳೆದ ವರ್ಷ ಇಬ್ಬರೂ ಜೊತೆಯಾಗೆ ಕೋರ್ಟ್ ಗೆ ಬಂದು ವಿಚ್ಛೇದನ ಪಡೆದರು. ಇಬ್ಬರು ದೂರವಾದ ನಂತರ ನಿವೇದಿತಾ ಗಡ ಮೊದಲಿಗಿಂತಲು ಹೆಚ್ಚು ಟ್ರೋಲ್ ಆಗುತ್ತಿದ್ದಾರೆ. ಇವರು ಏನೇ ಪೋಸ್ಟ್ ಮಾಡಿದರು ನೆಗಟಿವ್ ಕಾಮೆಂಟ್ ಗಳು ಬರುತ್ತಲೇ ಇರುತ್ತವೆ. ಆದರೆ ನಿವೇದಿತಾ ಮಾತ್ರ ತಮ್ಮ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು ಸಿನಿಮಾದಲ್ಲಿ ಸಹ ನಿವೇದಿತಾ ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಹೆಸರು ಮುದ್ದು ರಾಕ್ಷಸಿ. ಈ ಸಿನಿಮಾದಲ್ಲಿ ಚಂದನ್ ಶೆಟ್ಟಿ ಅವರೇ ನಾಯಕ ಆಗಿದ್ದು, ವಿಚ್ಛೇದನ ಪಡೆದ ನಂತರ ಸಹ ಇವರಿಬ್ಬರು ಜೊತೆಯಾಗಿ ನಟಿಸುತ್ತಿದ್ದಾರೆ. ಸಿನಿಮಾ ಇನ್ನು ಚಿತ್ರೀಕರಣ ಹಂತದಲ್ಲಿದ್ದು, ಯಾವಾಗ ಬಿಡುಗಡೆ ಆಗುತ್ತದೆ ಎಂದು ಕಾದು ನೋಡಬೇಕಿದೆ.



