ನಟ ಯಶ್ ಅವರು ಒಂದು ಕಾಲದಲ್ಲಿ ಸಾಮಾನ್ಯ ಹುಡುಗನಾಗಿ ಬೆಂಗಳೂರಿಗೆ ಬಂದವರು. ಆದರೆ ಯಶ್ ಅವರಿಗೆ ಬದುಕಿನಲ್ಲಿ ಏನಾದರೂ ಸಾಧಿಸಲೇಬೇಕು ಅನ್ನೋ ಛಲ, ಧೈರ್ಯ ಕೂಡ ಇತ್ತು. ಬೆಂಗಳೂರಿಗೆ ಬಂದು ಇಲ್ಲಿ ನಾನೊಬ್ಬ ಹೀರೋ ಆಗೇ ಆಗ್ತೀನಿ, ಗಾಂಧಿನಗರದಲ್ಲಿ ನನ್ನ ಕಟೌಟ್ ಬಿದ್ದೇ ಬೀಳುತ್ತೆ ಅನ್ನೋ ದೃಢ ನಿರ್ಧಾರ ಹೊಂದಿದ್ದರು. ಅದರಂತೆಯೇ ಮುಂದೆ ಹೆಜ್ಜೆ ಇಟ್ಟರು. ಧಾರಾವಾಹಿಗಳ ಮೂಲಕ ನಟನೆ ಶುರು ಮಾಡಿ, ಸಿಕ್ಕ ಒಂದೊಂದೇ ಅವಕಾಶಗಳನ್ನು ಉಪಯೋಗಿಸಿಕೊಂಡು. ಒಂದೊಂದೇ ಗೆಲುವುಗಳನ್ನು ಪಡೆಯುತ್ತಾ, ಮುಂದೆ ಕೆಜಿಎಫ್ ಅಂಥ ದೊಡ್ಡ ಸಿನಿಮಾ ಮಾಡಿದರು. ಕೆಜಿಎಫ್ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಎಷ್ಟು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತು ಎಂದು ನಮಗೆಲ್ಲಾ ಗೊತ್ತೇ ಇದೆ.
ಇನ್ನು ಕೆಜಿಎಫ್2 ಸಿನಿಮಾ ಅದಕ್ಕಿಂತ ದೊಡ್ಡ ಹೆಸರು ಮಾಡಿತು.
ಕೆಜಿಎಫ್2 ನಂತರ ಯಶ್ ಅವರು ಇಡೀ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ, ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಭಾರತಾದ್ಯಂತ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನು ಟಾಕ್ಸಿಕ್ ಸಿನಿಮಾದ ಟೀಸರ್ ಸಹ ಬಿಡುಗಡೆಯಾಗಿ, ಜನರಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿತು. ಇನ್ನು ಟಾಕ್ಸಿಕ್ ಸಿನಿಮಾ ಈ ವರ್ಷ ಬಿಡುಗಡೆ ಆಗುವುದಿಲ್ಲ. ಮುಂದಿನ ವರ್ಷ, 2026ರ ಮಾರ್ಚ್ 19ರಂದು ಯಶ್ ಅವರ ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ, ಮುಂದಿನ ವರ್ಷ ಯಶ್ ಅವರ ರಾಮಾಯಣ ಸಿನಿಮಾ ಕೂಡ ಬಿಡುಗಡೆ ಆಗಲಿದೆ. ಅಭಿಮಾನಿಗಳಿಗೆ ಇದಕ್ಕಿಂತ ಏನು ಸಂತೋಷ ಬೇಕು ಹೇಳಿ..

ಯಶ್ ಅವರು ನಡೆದುಬಂದ ಹಾದಿ ಸುಲಭದ್ದಲ್ಲ, ಒಂದು ಕಾಲದಲ್ಲಿ ಯಶ್ ಅವರು, ಗಾಂಧಿನಗರದಲ್ಲಿ ತನ್ಮ ಕಟೌಟ್ ಇರಬೇಕು ಎಂದು ಪಣ ತೊಟ್ಟಿದ್ದರು, ಆದರೆ ಇತ್ತೀಚೆಗೆ ಕರ್ನಾಟಕದ ಗಡಿಯನ್ನು ದಾಟಿ ಯಶ್ ಅವರ ಕಟೌಟ್ ಮುಂಬೈನಲ್ಲಿ ನಿಂತಿತ್ತು. ಈ ಕಟೌಟ್ ನ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ, ಈ ಕಟೌಟ್ ಹೊರಬಂದಿರುವುದಕ್ಕೆ ಕಾರಣ ಏನಿರಬಹುದು ಎಂದು ಅಭಿಮಾನಿಗಳ ನಡುವೆ ಚರ್ಚೆ ಆಗಿತ್ತು. ಆದರೆ ಆ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇನ್ನು ಟಾಕ್ಸಿಕ್ ಸಿನಿಮಾ ಬಗ್ಗೆ ಹೇಳುವುದಾದರೆ ಮುಂಬೈನಲ್ಲಿ ಒಂದಷ್ಟು ದಿವಸಗಳ ಕಾಲ, ಬೆಂಗಳೂರಿನಲ್ಲಿ ಒಂದಷ್ಟು ದಿವಸಗಳ ಕಾಲ ಟಾಕ್ಸಿಕ್ ಸಿನಿಮಾ ಚಿತ್ರೀಕರಣ ನಡೆದಿದೆ. ನಟಿ ನಯನತಾರ ಸೇರಿದಂತೆ ಬಿಗ್ ಸ್ಟಾರ್ ಗಳು ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಕೂಡ ಮಾಹಿತಿ ಸಿಕ್ಕಿದೆ.

ಅಷ್ಟೇ ಅಲ್ಲದೆ, ಟಾಕ್ಸಿಕ್ ಸಿನಿಮಾ ಗ್ಲೋಬಲ್ ಲವೆಲ್ ನಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಇಂಗ್ಲಿಷ್ ಮತ್ತು ಕನ್ನಡ ಎರಡು ಭಾಷೆಯಲ್ಲಿ ಚಿತ್ರೀಕರಣ ಆಗುತ್ತಿರುವ ಸಿನಿಮಾ ಆಗಿದೆ ಟಾಕ್ಸಿಕ್. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ನೀಡಿರುವ ಮಾಹಿತಿಯ ಅನುಸಾರ, ಈ ಸಿನಿಮಾವನ್ನು ಗ್ಲೋಬಲ್ ಆಡಿಯನ್ಸ್ ಗಾಗಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಿನಿಮಾದ ಕ್ವಾಲಿಟಿ ಹೇಗಿದೆ ಅನ್ನೋದು ಸಿನಿಮಾದ ಒಂದು ಟೀಸರ್ ನೋಡಿಯೇ ಗೊತ್ತಾಗಿದೆ. ಕೆಜಿಎಫ್ ಚಾಪ್ಟರ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೂಲಕ ಯಶ್ ಅವರು ಕನ್ನಡ ಚಿತ್ರರಂಗವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಟಾಕ್ಸಿಕ್ ಮೂಲಕ ಗ್ಲೋಬಲ್ ಲೆವೆಲ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ..
ಯಶ್ ಅವರನ್ನು ಕಂಡರೆ ನಮ್ಮೆಲ್ಲರಿಗೂ ಬಹಳ ಹೆಮ್ಮೆ ಇದೆ. ಯಶ್ ಅವರು ಈಗ ಟಾಕ್ಸಿಕ್ ಸಿನಿಮಾ ಶೂಟಿಂಗ್ ಇಂದ ಒಂದು ಬ್ರೇಕ್ ಪಡೆದು, ರಾಮಾಯಣ ಶೂಟಿಂಗ್ ನಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಯಶ್ ಅವರು ನಟನೆ ಮಾತ್ರ ಮಾಡುತ್ತಿಲ್ಲ, ರಾಮಾಯಣ ಸಿನಿಮಾದ ನಿರ್ಮಾಪಕರಲ್ಲಿ ಇವರು ಸಹ ಒಬ್ಬರು. ಇದು ಯಶ್ ಅವರ ಕೆರಿಯರ್ ಗೆ ದೊಡ್ಡ ಪ್ಲಸ್ ಆಗಿದೆ. ಯಶ್ ಅವರು ಈ ಮೊದಲೇ ಹೇಳಿದ್ದ ಹಾಗೆ, ರಾಮಾಯಣದಲ್ಲಿ ರಾವಣ ಪಾತ್ರ ಬಹಳ ಚಾಲೆಂಜಿಂಗ್ ಎಂದು ಹೇಳಿದ್ದರು. ಇದೀಗ ಇವರು ರಾವಣ ಪಾತ್ರದಲ್ಲಿ ನಟಿಸುವುದಕ್ಕೆ ಶುರು ಮಾಡಲಿದ್ದಾರೆ. ರಾಮಾಯಣ ಸಿನಿಮಾದ ಶೂಟಿಂಗ್ ನಲ್ಲಿ ಶೀಘ್ರದಲ್ಲೇ ಪಾಲ್ಗೊಳ್ಳಲಿದ್ದಾರೆ.
ಇದಕ್ಕಿಂತ ಮೊದಲು ಯಶ್ ಅವರು ಉಜ್ಜಯಿನಿಯಲ್ಲಿ ಇರುವ ಮಹಾಕಾಳೇಶ್ವರ ದೇವಸ್ಥಾನದಲ್ಲಿ ವಿಶೇಷವಾದ ಅಭಿಷೇಕ ಮಾಡಿಸಿ, ದೇವರ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಷ್ಟೇ ಅಲ್ಲದೇ, ಮಾಧ್ಯಮದವರ ಜೊತೆಗೆ ಸಹ ಮಾತನಾಡಿ, ನಾನು ಶಿವನ ಪರಮಭಕ್ತ, ನಮ್ಮ ಮನೆಯದೇವರು ಕೂಡ ಶಿವ, ಹಾಗಾಗಿ ಇಲ್ಲಿ ಬಂದು ಪೂಜೆಯಲ್ಲಿ ಪಾಲ್ಗೊಂಡಿದ್ದು ಬಹಳ ಸಂತೋಷವಾಗಿದೆ ಎಂದು ಹೇಳಿದ್ದಾರೆ. ಯಶ್ ಅವರ ಈ ಮಾತುಗಳು ಸಹ ಜನರಿಗೆ ಬಹಳ ಇಷ್ಟವಾಗಿದ್ದು ವೈರಲ್ ಆಗಿದೆ. ಈಗಾಗಲೇ ರಾಮಾಯಣ ಶೂಟಿಂಗ್ ನಲ್ಲಿ ರಣಬೀರ್ ಕಪೂರ್ ಅವರು ಮತ್ತು ಸಾಯಿಪಲ್ಲವಿ ಅವರು ಪಾಲ್ಗೊಂಡಿರುವ ವಿಚಾರ ಗೊತ್ತೇ ಇದೆ. ಈಗ ಯಶ್ ಅವರ ಪೋರ್ಶನ್ ಶೂಟಿಂಗ್ ಸಹ ಶುರುವಾಗಲಿದೆ..
ಇನ್ನು ರಾಮಾಯಣ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣಲಿದೆ ಎಂದು ಗೊತ್ತೇ ಇದೆ. ಮುಂದಿನ ವರ್ಷ 2026ರ ದೀಪಾವಳಿ ಹಬ್ಬಕ್ಕೆ ಮೊದಲ ಭಾಗ ಬಿಡುಗಡೆ ಆಗಲಿದ್ದು, 2027ರ ದೀಪಾವಳಿ ಹಬ್ಬಕ್ಕೆ ಎರಡನೇ ಭಾಗ ಬಿಡುಗಡೆ ಆಗಲಿದೆ. ಯಶ್ ಅವರ ಅಭಿಮಾನಿಗಳು ಕೆಜಿಎಫ್2 ನಂತರ ಇಷ್ಟು ವರ್ಷಗಳ ಕಾಲ ಕಾದಿದ್ದಕ್ಕೂ ಸಾರ್ಥಕ ಆಗಿದೆ. ಮುಂದಿನ ವರ್ಷ ಇವರ ಎರಡು ಸಿನಿಮಾಗಳು ತೆರೆ ಕಾಣಲಿದ್ದು, 2027ರಲ್ಲಿ ಇನ್ನೊಂದು ಸಿನಿಮಾ ತೆರೆಕಾಣಲಿದೆ. ರಾವಣನ ಅವತಾರದಲ್ಲಿ ಯಶ್ ಅವರನ್ನು ನೋಡೋದಕ್ಕೆ ಅಭಿಮಾನಿಗಳು ಸಹ ಕಾಯುತ್ತಿದ್ದಾರೆ.