ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಬಳಿಕ ಬಿಗ್ ಬಾಸ್ ಸ್ಪರ್ಧಿಯಾಗಿ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡ ಕಿರಿಕ್ಲೇಡಿ ಸಂಯುಕ್ತಾ ಹೆಗ್ಡೆ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ವೆಕೇಷನ್ ಗಾಗಿ ಮಾಲ್ಡೀವ್ಸ್ಗೆ ಹಾರಿರುವ ಸಂಯುಕ್ತಾ ಬಿಕಿನಿ ತೊಟ್ಟಿರುವ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು, ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದಂತಾಗಿದೆ.

ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಮಾಲ್ಡೀವ್ಸ್ಗೆ ತೆರಳಿ ಬಿಕಿನಿ ಧರಿಸಿ ಎಂಜಾಯ್ ಮಾಡಿದ್ದರು. ಇದೀಗ ಸಂಯುಕ್ತಾ ಹೆಗ್ಡೆ ಸೋನುಗಿಂತ ನಾನೇನು ಕಮ್ಮಿ ಇಲ್ಲ ಎಂಬಂತೆ ತಾವು ಕೂಡ ಬಿಕಿನಿ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಬಿಕಿನಿಯಲ್ಲಿ ಸಂಯುಕ್ತಾ ಸಕ್ಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರು ನಿದ್ದೆಗೆಟ್ಟಿದ್ದಾರೆ.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸಿದ್ದ ಸಂಯುಕ್ತಾ ಹೆಗ್ಡೆಗೆ ಸಿನಿ ರಂಗದಲ್ಲಿ ಹೇಳಿಕೊಳ್ಳುವಂತ ಯಶಸ್ಸು ಸಿಗಲಿಲ್ಲ. ಆದರೆ ವಿವಾದಗಳಿಂದ ಕಿರಿಕ್ ಹುಡುಗಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ, ಸಂಯುಕ್ತಾ ತಮ್ಮ ಬಿಕಿನಿ ಫೋಟೋಗಳಿಂದ ಸೋಶಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ್ದಾರೆ. ಈ ಹಾಟ್&ಬೋಲ್ಡ್ ಫೋಟೋಸ್ ಸಕ್ಕತ್ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಕಂಟಿದೆ.



