ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರು ಹಲವು ವರ್ಷಗಳಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಶ್ರೇಷ್ಠ ಪ್ರತಿಭೆಗಳಲ್ಲಿ ಒಬ್ಬರು. ಇವರ ಬಗ್ಗೆ ಎಷ್ಟು ಹೇಳಿದರೂ ಕೂಡ ಕಡಿಮೆಯೇ. ಕನ್ನಡದ ಖ್ಯಾತ ಹಿರಿಯನಟ ಶಕ್ತಿ ಪ್ರಸಾದ್ ಅವರ ಮಗ ಅರ್ಜುನ್ ಸರ್ಜಾ ಅವರು ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, ಮುಂದಿನ ದಿನಗಳಲ್ಲಿ ಹೀರೋ ಸಹ ಆದರು. ಆದರೆ ಇವರಿಗೆ ಕನ್ನಡಕ್ಕಿಂತ ಹೊರ ಭಾಷೆಯಲ್ಲಿ ಹೆಚ್ಚು ಹೆಸರು ಸಿಕ್ಕಿತು. ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಸಹ ಸಿನಿಮಾಗಳನ್ನು ಮಾಡುತ್ತಾರೆ ಅರ್ಜುನ್ ಸರ್ಜಾ ಅವರು. ಇದೀಗ ಇವರ ಮನೆಸ್ಲ್ಲಿ ಮತ್ತೊಮ್ಮೆ ಮದುವೆ ಸಂಭ್ರಮ ಶುರುವಾಗಲಿದೆ. ಈ ಬಗ್ಗೆ ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..
ನಟನಾಗಿ ಎಲ್ಲಾ ಭಾಷೆಗಳಲ್ಲಿ ಸಕ್ರಿಯವಾಗಿದ್ದ ಅರ್ಜುನ್ ಸರ್ಜಾ ಅವರು ಮದುವೆ ಆಗಿದ್ದು ಅಪ್ಪಟ ಕನ್ನಡತಿಯ ಜೊತೆಗೆ. ಕನ್ನಡದ ಹಿರಿಯನಟ ರಾಜೇಶ್ ಅವರ ಮಗಳು ಆಶಾರಾಣಿ ಅವರ ಜೊತೆಗೆ ಮದುವೆಯಾದರು. ಇವರ ನಿಜವಾದ ಹೆಸರು ನಿವೇದಿತಾ ಆಗಿತ್ತು. ಇವರು ಮದುವೆಗಿಂತ ಶಿವ ರಾಜ್ ಕುಮಾರ್ ಅವರ ಜೊತೆಗೆ ರಥಸಪ್ತಮಿ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದರು. ರಥಸಪ್ತಮಿ ಸೂಪರ್ ಹಿಟ್ ಆಗಿತ್ತು, ಬಳಿಕ ಕನ್ನಡದಲ್ಲಿ ಹಾಗೂ ತಮಿಳಿನಲ್ಲಿ ಒಂದೆರಡು ಸಿನಿಮಾಗಳಲ್ಲಿ ಅಭಿನಯಿಸಿದ, ನಂತರ ನಿವೇದಿತಾ ಅವರ ಮದುವೆಯಾಗಿ, ಚಿತ್ರರಂಗದಿಂದ ದೂರವಾಗಿ, ಮನೆ ಸಂಸಾರದ ಕಡೆಗೆ ಹೆಚ್ಚು ಗಮನ ಕೊಟ್ಟರು. ಈ ಜೋಡಿಗೆ ಇಬ್ಬರು ಮುದ್ದಾದ ಹೆಣ್ಣುಮಕ್ಕಳಿದ್ದಾರೆ. ಅವರಿಬ್ಬರು ಈಗ ಒಂದು ಹಂತಕ್ಕೆ ತಲುಪಿದ್ದಾರೆ.

ಅವರನ್ನು ನೋಡಿಕೊಳ್ಳುವುದರಲ್ಲಿಯೇ ಹೆಚ್ಚು ಸಮಯ ಕಳೆದು ಹೋಗುತ್ತಿದ್ದ ಕಾರಣ, ನಿವೇದಿತಾ ಅವರು ಮತ್ತೆ ಸಿನಿಮಾಗೆ ಬರಲೇ ಇಲ್ಲ. ಅರ್ಜುನ್ ಸರ್ಜಾ ಹಾಗೂ ನಿವೇದಿತಾ ಜೋಡಿ ಸಾರ್ವಜನಿಕವಾಗಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು ಕೂಡ ತುಂಬಾ ಕಡಿಮೆ. ಈ ಜೋಡಿ ಬಹಳ ಪ್ರೈವೇಟ್ ಆಗಿ, ತಮ್ಮ ಜೀವನವನ್ನು ಸುಂದರವಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ದೊಡ್ಡ ಮಗಳ ಹೆಸರು ಐಶ್ವರ್ಯ, ಎರಡನೇ ಮಗಳ ಹೆಸರು ಅಂಜನಾ. ಐಶ್ವರ್ಯ ಅವರನ್ನು ಅರ್ಜುನ್ ಸರ್ಜಾ ಅವರೆ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಮಗಳು ನಾಯಕಿಯಾದ ಪ್ರೇಮಬರಹ ಸಿನಿಮಾಗೆ, ಅರ್ಜುನ್ ಸರ್ಜಾ ಅವರೇ ಆಕ್ಷನ್ ಕಟ್ ಹೇಳಿದರು. ಈಗ ಮಗಳಿಗಾಗಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ.
ಐಶ್ವರ್ಯ ಅರ್ಜುನ್ ನಾಯಕಿಯಾಗಿ, ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಅವರು ನಾಯಕನಾಗಿ, ಅರ್ಜುನ್ ಸರ್ಜಾ ಅವರು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಹೆಸರು ಸೀತಾಪಯಣ. ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಆಗಿ, ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟವಾಗಿದೆ. ಐಶ್ವರ್ಯ ಅವರ ಮದುವೆ ಸಹ ಇತ್ತೀಚೆಗೆ ನಡೆಯಿತು. ಐಶ್ವರ್ಯ ಅವರು ತಮಿಳು ನಟ ಉಮಾಪತಿ ಅವರೊಡನೆ ಮದುವೆಯಾದರು. ಸರ್ಜಾ ಅವರ ಫ್ಯಾಮಿಲಿ ಹೆಣ್ಣುಮಗಳ ಮದುವೆ ಅದ್ಧೂರಿಯಾಗಿ ನಡೆದಿತ್ತು. ಇದೀಗ ಇವರ ಕುಟುಂಬದಲ್ಲಿ ಮತ್ತೊಂದು ಮದುವೆ ನಡೆಯುವುದಕ್ಕೆ ಸಜ್ಜಾಗಿದೆ. ಅದು ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಅವರ ಮದುವೆ ಆಗಿದೆ. ಸರ್ಜಾ ಫ್ಯಾಮಿಲಿಯ ಸಂಭ್ರಮ ಈಗ ಡಬಲ್ ಆಗಿದೆ..
ಹೌದು, ಅರ್ಜುನ್ ಸರ್ಜಾ ಅವರ ಎರಡನೇ ಮಗಳು ಅಂಜನಾ ಅವರು ತಮ್ಮ ಬಾಯ್ ಫ್ರೆಂಡ್ ಯಾರು ಎಂದು ರಿವೀಲ್ ಮಾಡಿದ್ದಾರೆ. ಬಾಯ್ ಫ್ರೆಂಡ್ ಫೋಟೋ ಶೇರ್ ಮಾಡಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅಂಜನಾ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿದೆ. ಇವರು ಪ್ರೀತಿ ಮಾಡಿರುವುದು ವಿದೇಶಿ ಹುಡುಗನ ಜೊತೆಗೆ. 13 ವರ್ಷಗಳಿಂದ ಅವರನ್ನು ಅಂಜನಾ ಅವರು ಪ್ರೀತಿಸುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಇತ್ತೀಚೆಗೆ ಈ ವಿಚಾರವನ್ನು ತಂದೆ ತಾಯಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಮಕ್ಕಳ ಪ್ರೀತಿಯನ್ನು ಒಪ್ಪಿಕೊಂಡಿದ್ದು, ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದೀಗ ಅಂಜನಾ ಅವರು ತಮ್ಮ ಭಾವಿ ಪತಿಯ ಫೋಟೋ ಶೇರ್ ಮಾಡಿ ಸಂತೋಷದ ಸುದ್ದಿಯನ್ನು ಇನ್ಸ್ಟಾಗ್ರಾಮ್ ಮೂಲಕ ಶೇರ್ ಮಾಡಿದ್ದಾರೆ..
ಅಂಜನಾ ಅವರು ತಮ್ಮ ಬಾಯ್ ಫ್ರೆಂಡ್ ಜೊತೆಗೆ ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಕೆಲವು ರೊಮ್ಯಾಂಟಿಕ್ ಫೋಟೋಗಳು ಅದರಲಿದ್ದು, ಅವುಗಳನ್ನು ಅಂಜನಾ ಅವರು ಶೇರ್ ಮಾಡಿಕೊಂಡಿದ್ದಾರೆ. ಹಾಗೆಯೇ ವಿಶೇಷ ಫೋಟೋ ಶೂಟ್ ಫೋಟೋಗಳಲ್ಲಿ ಅಂಜನಾ ಅವರ ಕುಟುಂಬ ಸಹ ಇದೆ. ಅರ್ಜುನ್ ಸರ್ಜಾ ಅವರು ಮತ್ತು ಅವರ ಪತ್ನಿ, ಐಶ್ವರ್ಯ ಮತ್ತು ಅವರ ಪತಿ ಹಾಗೂ ಹುಡುಗನ ಕುಟುಂಬ ಎಲ್ಲರೂ ಸೇರಿ ಫೋಟೋಗೆ ಪೋಸ್ ನೀಡಿದ್ದಾರೆ. ಈ ಫೋಟೋಸ್ ನೋಡಿದರೆ ಬಹುಶಃ ಅಂಜನಾ ಅವರು ಬಾಯ್ ಫ್ರೆಂಡ್ ಜೊತೆಗೆ ಎಂಗೇಜ್ ಆಗಿದ್ದು, ಶೀಘ್ರದಲ್ಲೇ ಮದುವೆ ಸಹ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸರ್ಜಾ ಫ್ಯಾಮಿಲಿಯಲ್ಲಿ ಮತ್ತೊಂದು ಕಲರ್ ಫುಲ್ ಮದುವೆ ನಡೆಯಲಿದ್ದು, ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.