ಭಾರತದಲ್ಲಿ ಈಗ ಸಿನಿಮಾಗಳಿಗಿಂತ್ ಸೀರಿಯಲ್ ಕ್ರೇಜ್ ಜಾಸ್ತಿ ಇದೆ. ಮನೆಯಲ್ಲಿ ಕೂತು ಮನರಂಜನೆಗೋಸ್ಕರ ಸೀರಿಯಲ್ ನೋಡೋರ ಸಂಖ್ಯೆ ಹೆಚ್ಚು. ಸೀರಿಯಲ್ ಅಂದ್ರೆ ಹೆಣ್ಣುಮಕ್ಕಳು ಮಾತ್ರ ನೋಡ್ತಾರೆ ಅನ್ನೋ ಒಂದು ಕಾಲ ಇತ್ತು. ಆದರೆ ಈಗ ಆ ರೀತಿ ಅಲ್ಲ, ಸೀರಿಯಲ್ ಅಂದ್ರೆ ಮಕ್ಕಳು, ಗಂಡಸರು ಎಲ್ಲರೂ ಕೂತು ನೋಡ್ತಾರೆ. ಅಷ್ಟರ ಮಟ್ಟಿಗೆ ಸೀರಿಯಲ್ ಗಳಿಗೆ ಜನಪ್ರಿಯತೆ ಬಂದಿದೆ. ಎಲ್ಲಾ ಭಾಷೆಗಳಲ್ಲಿ ಸಹ ಕಿರುತೆರೆ ಕಾರ್ಯಕ್ರಮಗಳು ಸಿನಿಮಾಗಳದ್ದೇ ಮೇಲುಗೈ. ಎಲ್ಲರ ಮನೆಯಲ್ಲೂ ಇಂಥ ಕಾರ್ಯಕ್ರಮಗಳನ್ನು ಶೋಗಳನ್ನು ನೋಡಿಯೇ ನೋಡುತ್ತಾರೆ. ಹಾಗಾಗಿ ಸೀರಿಯಲ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಹೊರತು ಕಡಿಮೆ ಅಂತೂ ಆಗುತ್ತಿಲ್ಲ. ಇಂದು ಈ ಸೀರಿಯಲ್ ದುನಿಯದ ಮತ್ತೊಂದು ಪ್ರಮುಖ ವಿಷಯ ತಿಳಿಯೋಣ..
ಮನರಂಜನೆ ಎಂದು ಬಂದರೆ ಜನರು ಇಷ್ಟಪಡುವ ಪ್ರಮ್ಹಖ ಅಂಶಗಳು ಸೀರಿಯಲ್ ಮತ್ತು ಸಿನಿಮಾ. ಸಿನಿಮಾ ಕಲಾವಿದರ ಅಭಿಮಾನಿಗಳು, ಸಿನಿಮಾ ಅಂದರ್ ಅದೊಂದು ರೀತಿ ವಿಶಿಷ್ಟವಾದ ಕ್ರೇಜ್. ಬೆಳ್ಳಿಪರದೆ ಮೇಲೆ ಕಲಾವಿದರನ್ನು ನೋಡಿ ವಾವ್ ಅಂದುಕೊಳ್ಳುತ್ತೇವೆ. ಅವರುಗಳು ನಮಗೆ ದೊಡ್ಡ ಸ್ಟಾರ್ ಗಳು ಅನ್ನಿಸುತ್ತಾರೆ. ಅವರನ್ನು ನೋಡಿ ಒಂದು ಆಟೋಗ್ರಾಫ್ ಪಡೆಯಬೇಕು, ಫೋಟೋಗ್ರಾಫ್ ಪಡೆಯಬೇಕು, ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬೇಕು ಎಂದುಕೊಳ್ಳುತ್ತೇವೆ. ಸಿನಿಮಾ ಕಲಾವಿದರನ್ನು ದೇವರಂತೆ ಪೂಜಿಸುವ ಜನರು, ಅಭಿಮಾನಿಗಳು ಇದ್ದಾರೆ. ಸಿನಿಮಾ ಕಲಾವಿದರು ಅಂದ್ರೆ ಅವರಿಗೆ ಇರುವ ಕ್ರೇಜ್ ಬೇರೆ ರೀತಿಯೇ ಇರುತ್ತದೆ. ಅದೊಂದು ಅತ್ಯಂತ ದೊಡ್ಡ ಮಧ್ಯಮ. ಕಿರುತೆರೆ ಎಂದು ಬಂದಾಗ ಇದು ಸ್ವಲ್ಪ ಕಡಿಮೆ.

ಹೌದು, ಕಿರುತೆರೆ ಬ್ಯುಸಿನೆಸ್ ಸ್ಕೇಲ್ ನಲ್ಲಿ ಚಿಕ್ಕದು ಎಂದು ಅನ್ನಿಸಿದರೂ, ಈಗ ಕಿರುತೆರೆಗೆ ಇರುವ ಮಾರ್ಕೆಟ್ ಏನು ಕಡಿಮೆ ಇಲ್ಲ. ಕನ್ನಡ ಹಾಗೂ ಇನ್ನಿತರ ಭಾಷೆಯ ಎಲ್ಲಾ ವಾಹಿನಿಗಳು ಸಹ ಧಾರಾವಾಹಿಗಳನ್ನು ಅತ್ಯುನ್ನತ ಗುಣಮಟ್ಟದ ಜೊತೆಗೆ ನೀಡುತ್ತಿದ್ದಾರೆ. ಯಾವುದೇ ಸಿನಿಮಾ ಸೀನ್ ಗಳಿಗೆ ಕಡಿಮೆ ಇಲ್ಲ ಎನ್ನುವ ಹಾಗೆ ಇರುತ್ತದೆ ಧಾರಾವಾಹಿಗಳ ದೃಶ್ಯ ಹಾಗೂ ಅದರ ಕ್ವಾಲಿಟಿ. ಕಿರುತೆರೆಯಲ್ಲಿ ಮೊದಲಿನ ಹಾಗೆ ಕಥೆಗಳು ಸಹ ಈಗಿಲ್ಲ. ಈಗ ಎಲ್ಲವೂ ಬದಲಾಗಿದೆ. ಜನರಿಗೆ ಥ್ರಿಲ್ ಕೊಡುವಂಥ, ಜನರನ್ನು ಹಿಡಿದಿಟ್ಟುಕೊಳ್ಳುವಂಥ ಕಥೆಗಳು ಈಗ ಬರುತ್ತಲಿದೆ. ಜನರು ಸಹ ಕಿರುತೆರೆ ಧಾರಾವಾಹಿ ಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಧಾರಾವಾಹಿಗಳ ಪಾಪ್ಯುಲಾರಿಟಿ ಇಂದ ಕಿರುತೆರೆ ಕಲಾವಿದರಿಗೆ ಹೆಚ್ಚಿನ ಬೇಡಿಕೆ ಶುರುವಾಗಿದೆ ಎಂದು ಹೇಳಿದರು ತಪ್ಪಲ್ಲ..
ಧಾರಾವಾಹಿಗಳು ಟಿವಿಯಲ್ಲಿ ಪ್ರಸಾರವಾಗಿ, ಪ್ರತಿದಿನ ನಾವು ಟಿವಿ ನೋಡುವ ಕಾರಣ, ಕಿರುತೆರೆ ಕಲಾವಿದರು ಎಂದರೆ ಅವರು ನಮ್ಮ ಮನೆಯ ಸದಸ್ಯರು ಎಂದೇ ಎಲ್ಲರೂ ಭಾವಿಸುತ್ತಾರೆ. ಧಾರಾವಾಹಿ ಸ್ಟೋರಿಗಳನ್ನು ಕಂಡು, ಇದು ನಮ್ಮ ಮನೆ ಕಥೆ ಥರಾನೇ ಇದೆಯಲ್ಲ ಎಂದುಕೊಳ್ಳುವುದು ಸಹ ಇದೆ. ಹೀಗೆ ಜನರು ಧಾರಾವಾಹಿ ಕಥೆಗಳ ಜೊತೆಗೆ ಹೆಚ್ಚು ಕನೆಕ್ಟ್ ಆಗಿ, ಅದರ ಜೊತೆಗೆ ಸಾಗುತ್ತಾರೆ. ಈಗ ಸೋಶಿಯಲ್ ಮೀಡಿಯಾ ಇರುವ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಜನರ ಅಭಿಪ್ರಾಯ ನೋಡಿ, ಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಷ ಧಾರಾವಾಹಿ ತಯಾರಕರಿಗೆ ಇದೆ. ಇನ್ನು ಕಿರುತೆರೆ ಕಲಾವಿದರಿಗೆ ಇರುವ ಜನಪ್ರಿಯತೆ ಬಗ್ಗೆ ಹೇಳೋ ಹಾಗೆ ಇಲ್ಲ.. ಎಲ್ಲರನ್ನು ಜನರು ಅಷ್ಟು ಪ್ರೀತಿಸುತ್ತಾರೆ. ತಮ್ಮ ಮನೆ ಮಕ್ಕಳು ಅಂದುಕೊಳ್ಳುತ್ತಾರೆ.

ಒಳ್ಳೆ ಪಾತ್ರಗಳಲ್ಲಿ ನಟಿಸಿದ ಕಲಾವಿದರನ್ನು ತಮ್ಮ ಮಗ, ಮಗಳು, ಅಕ್ಕ ತಂಗಿ ಎಂದುಕೊಳ್ಳುವುದು ಹೌದು. ಕಿರುತೆರೆ ಮಾಧ್ಯಮಕ್ಕೆ ಈಗಿರುವ ಬೇಡಿಕೆ ಇಂದ ಸಿನಿಮಾ ತಾರೆಯರು ಸಹ ಕಿರುತೆರೆಗೆ ಬರುತ್ತಿದ್ದಾರೆ. ಕನ್ನಡದಲ್ಲಿ ನೋಡಿದರೆ ಹಿರಿಯ ನಟಿಯರಾದ ಉಮಾಶ್ರೀ, ಸುಧಾರಾಣಿ, ವಿನಯ ಪ್ರಸಾದ್, ವನಿತಾ ವಾಸು ಇವರೆಲ್ಲರೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ಇನ್ನು ಸಿನಿಮಾಗಳಲ್ಲಿ ನಟಿಸಿ ಅಲ್ಲಿ ಹೆಚ್ಚು ಯಶಸ್ಸು ಸಿಗದೇ, ಅವಕಾಶ ಸಿಗದೇ ಇರುವ ಯುವ ನಟಿಯರು ನಟರು ಸಹ ಧಾರಾವಾಹಿಗಳಲ್ಲಿ ನಟಿಸಿ, ಜನರಿಗೆ ಹತ್ತಿರವಾಗಿದ್ದಾರೆ. ಕಿರುತೆರೆ ಈಗ ಸಂಭಾವನೆ ವಿಷಯದಲ್ಲಿ ಸಹ ಕಡಿಮೆ ಇಲ್ಲ ಕಿರುತೆರೆ ಕಲಾವಿದರಿಗೆ ಉತ್ತಮವಾದ ಸಂಭಾವನೆ ಸಿಗುತ್ತಿದೆ. ಅದರಲ್ಲೂ ಮಹಿಳಾ ಕಲಾವಿದರಿಗೆ ಇಲ್ಲಿ ಹೆಚ್ಚು ಸಂಭಾವನೆ. ಹೀರೋಗಳಿಗೆ ಸ್ವಲ್ಪ ಮಟ್ಟಿಗೆ ಸಂಭಾವನೆ ಕಡಿಮೆ ಎಂದು ಹೇಳಲಾಗುತ್ತದೆ.
ಇನ್ನು ಸೀರಿಯಲ್ ದುನಿಯಾ ಹಾಗು ಇಲ್ಲಿನ ಕಥೆಗಳಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ ಹೆಚ್ಚು, ಕಥೆಗಳು ಅವರ ಪಾತ್ರಗಳ ಸುತ್ತಲೇ ಹೆಣೆದಿರಲಾಗುತ್ತದೆ. ಹಾಗಾಗಿ ಮಹಿಳೆಯರಿಗೆ ಸಂಭಾವನೆ ಕೂಡ ಜಾಸ್ತಿ ಇರುತ್ತದೆ. ಕಿರುತೆರೆ ಲೋಕದಲ್ಲಿ ಕಲಾವಿದರಿಗೆ ಅವರ ಪಾತ್ರಕ್ಕೆ ಇರುವ ಪ್ರಾಮುಖ್ಯತೆಯ ಮೇಲೆ ಸಂಭಾವನೆ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಒಳ್ಳೆ ಪಾತ್ರಗಳಲ್ಲಿ, ಒಳ್ಳೇ ರೇಟಿಂಗ್ ಇರುವ ಧಾರಾವಾಹಿಯಲ್ಲಿ ನಟಿಸುವವರಿಗೆ ಸಂಭಾವನೆ ಕೂಡ ಹೆಚ್ಚು. ಕಿರುತೆರೆ ಇತಿಹಾಸದಲ್ಲಿ ಒಬ್ಬ ಕಲಾವಿದೆ ಮಾತ್ರ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದು, ಒಂದು ದಿನಕ್ಕೆ 1 ಲಕ್ಷ ಸಂಭಾವನೆ ಇವರದ್ದು, ಇನ್ನು ಈ ನಟಿ ಯಾರು ಎಂದರೆ ತಮಿಳು ಕಿರುತೆರೆಯಲ್ಲಿ ಹೆಸರುವಾಸಿ ಆಗಿರುವ, ಬಹಳ ಫೇಮಸ್ ಆಗಿರುವ ಸೌಮ್ಯ ಅವರು. ಕಿರುತೆರೆಯಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಸೌಮ್ಯ ಅವರೇ ಎಂದು ಮಾಹಿತಿ ಸಿಕ್ಕಿದೆ.

ನಾಯಕಿಯರಿಗೆ ಈ ಮಟ್ಟಕ್ಕೆ ಸಂಭಾವನೆ ಸಿಗುತ್ತದೆ. ಆದರೆ ಧಾರಾವಾಹಿಯ ನಾಯಕರಿಗೆ ಇಷ್ಟು ಸಂಭಾವನೆ ಸಿಗೋದಿಲ್ಲ. ಆದರೆ ನಟನೆಗೆ ಧಾರಾವಾಹಿ ಅನ್ನೋದು ಉತ್ತಮ ಪ್ಲಾಟ್ ಫಾರ್ಮ್. ಈಗ ಧಾರಾವಾಹಿಗಳಿಗೆ ಬೇಡಿಕೆ ಜಾಸ್ತಿ ಇರುವುದರಿಂದ ನಟನೆ ಬಗ್ಗೆ ಆಸಕ್ತಿ ಇರುವ ಕಲಾವಿದರಿಗೆ ಅವಕಾಶ ಹೆಚ್ಚಾಗುತ್ತಿದೆ. ಹೆಚ್ಚು ಕಲಾವಿದರು ನಟನೆಯ ಲೋಕಕ್ಕೆ ಪರಿಚಯ ಆಗುತ್ತಿದ್ದಾರೆ. ಆದರೆ ಎಲ್ಲರಿಗೂ ಇಷ್ಟೇ ಹೆಸರು, ಕೀರ್ತಿ ಸಿಗುತ್ತದೆ ಎಂದು ಹೇಳೋಕೆ ಆಗೋದಿಲ್ಲ. ಅಭಿನಯ ಪಾತ್ರ, ಇದೆಲ್ಲದರ ಜೊತೆಗೆ ಅದೃಷ್ಟ ಸಹ ಜೊತೆಗಿದ್ದರೆ, ಅಂಥ ಕಲಾವಿದರು ಕಿರುತೆರೆಯಲ್ಲಿ ಸ್ಟಾರ್ ಗಳಾಗಿ ಹೆಸರು ಮಾಡುವುದರಲ್ಲಿ ಯಾವುದೇ ಸಂಶಯವಂತು ಇಲ್ಲ.



