ನಟ ಸೃಜನ್ ಲೋಕೇಶ್ ಅವರು ಕನ್ನಡ ಕಿರುತೆರೆಯಲ್ಲಿ ಟಾಕಿಂಗ್ ಸ್ಟಾರ್ ಎಂದೇ ಹೆಸರು ಮಾಡಿರುವವರು. ಸಿನಿಮಾಗಿಂತ ಹೆಚ್ಚಾಗಿ ಇವರಿಗೆ ಕಿರುತೆರೆಯಲ್ಲಿ ಬೇಡಿಕೆ ಜಾಸ್ತಿ. ಮಜಾ ಟಾಕೀಸ್, ಮಜಾ ವೀಕೆಂಡ್ ಹೀಗೆ ಸೂಪರ್ ಹಿಟ್ ಕಾಮಿಡಿ ಶೋಗಳನ್ನು ಸೃಜನ್ ಲೋಕೇಶ್ ಅವರು ಕಿರುತೆರೆಗೆ ನೀಡಿದ್ದಾರೆ. 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಮಜಾ ಟಾಕೀಸ್ ಶೋ ಪ್ರಸಾರ ಆಗುತ್ತಿದೆ ಅನ್ನೋ ವಿಷಯ ನಮಗೆಲ್ಲ ಗೊತ್ತೇ ಇದೆ. ಹಾಗೆಯೇ ಸೃಜನ್ ಲೋಕೇಶ್ ಅವರು ತಮ್ಮ ಲೋಕೇಶ್ ಪ್ರೊಡಕ್ಷನ್ಸ್ ಮೂಲಕ ಧಾರಾವಾಹಿಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಅವುಗಳು ಸಹ ಒಳ್ಳೆಯ ಹೆಸರು ಮಾಡಿದೆ. ಇದೆಲ್ಲದರ ಜೊತೆಗೆ ಸೃಜನ್ ಲೋಕೇಶ್ ಅವರ ಇಡೀ ಫ್ಯಾಮಿಲಿ ಈಗ ಕನ್ನಡ ಕಿರುತೆರೆಯಲ್ಲಿ ದೊಡ್ಡ ಇತಿಹಾಸ ಒಂದನ್ನು ಬರೆದಿದ್ದಾರೆ..
ಸೃಜನ್ ಲೋಕೇಶ್ ಅವರ ಫ್ಯಾಮಿಲಿ ಸೃಷ್ಟಿಸಿರುವ ಇತಿಹಾಸ ಏನು ಎಂದು ನೋಡುವುದಾದರೆ, ನಮಗೆಲ್ಲ ಗೊತ್ತಿರುವ ಹಾಗೆ ಸೃಜನ್ ಲೋಕೇಶ್ ಅವರು, ಕನ್ನಡದ ಹಿರಿಯ ನಿರ್ಮಾಪಕ ಸುಬ್ಬಯ್ಯ ನಾಯ್ಡು ಅವರ ಮೊಮ್ಮಗ. ಸುಬ್ಬಯ್ಯ ನಾಯ್ಡು ಅವರು ಕನ್ನಡ ಚಿತ್ರರಂಗದಕ್ಕೆ ದೊಡ್ಡ ಕೊಡುಗೆಯನ್ನೇ ಕೊಟ್ಟಿದ್ದಾರೆ. ಡಾ. ರಾಜ್ ಕುಮಾರ್ ಅವರಿಗೆ ಬಹಳಷ್ಟು ಅವಕಾಶಗಳನ್ನು ಕೊಟ್ಟಿದೆ ಇವರ ಸಂಸ್ಥೆ. ಡಾ. ರಾಜ್ ಕುಮಾರ್ ಅವರು ಸಹ ಸುಬ್ಬಯ್ಯ ನಾಯ್ಡು ಅವರಿಗೆ ಬಹಳ ಗೌರವ ಕೊಡುತ್ತಿದ್ದರು. ಇನ್ನು ಸುಬ್ಬಯ್ಯ ನಾಯ್ಡು ಅವರ ಮಗ ಲೋಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಗುರುತಿಸಿಕೊಂಡವರು. ಅದೆಷ್ಟು ಸಿನಿಮಾಗಳಲ್ಲಿ ನಾಯಕನಾಗಿ ಮತ್ತು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಹೆಸರು ಮಾಡಿದ ಕಲಾವಿದ. ಇವರ ಅಭಿನಯ ಅದ್ಭುತ. ಲೋಕೇಶ್ ಅವರ ಭೂತಯ್ಯನ ಮಗ ಅಯ್ಯು ಸಿನಿಮಾವನ್ನು ಇವತ್ತಿಗೂ ಯಾರು ಕೂಡ ಮರೆಯುವ ಹಾಗಿಲ್ಲ.

ಇನ್ನು ಇವರ ಗೆಂಡೆತಿಮ್ಮ ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತು ಎಂದರೆ, ಇವರಿಗೆ ಗೆಂಡೆತಿಮ್ಮ ಲೋಕೇಶ್ ಎಂದೇ ಹೆಸರು ಕೂಡ ಬಂದಿತು. ಲೋಕೇಶ್ ಅವರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿದ್ದು, ಕನ್ನಡದ ಎಲ್ಲ ದಿಗ್ಗಜರೊಡನೆ ಸಿನಿಮಾ ಮಾಡಿರುವವರು. ಇವರು ರಂಗಭೂಮಿಯಲ್ಲಿ ಮತ್ತು ಸಿನಿಮಾದಲ್ಲಿ ಹೆಸರು ಮಾಡಿದ್ದ ಗಿರಿಜಾ ಲೋಕೇಶ್ ಅವರೊಡನೆ ಮದುವೆಯಾದರು. ಗಿರಿಜಾ ಲೋಕೇಶ್ ಅವರು ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ, ಈಗಲೂ ಕಿರುತೆರೆಯಲ್ಲಿ ಸಕ್ರಿಯವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು ಪೂಜಾ ಲೋಕೇಶ್ ಮತ್ತು ಸೃಜನ್ ಲೋಕೇಶ್. ಇವರೂ ಸಹ ಚಿತ್ರರಂಗದಲ್ಲಿ ಸಕ್ರಿಯವಾಗಿರುವವರು. ಪೂಜಾ ಲೋಕೇಶ್ ಅವರು 90ರ ದಶಕದಲ್ಲಿ ನಾಯಕಿಯಾಗಿ ಪರಿಚಯ ಆದವರು, ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಇವರು ಚಿತ್ರರಂಗದಿಂದ ದೂರವೇ ಉಳಿದರು.
ಪೂಜಾ ಲೋಕೇಶ್ ಅವರು ತೆರೆಯ ಹಿಂದೆ ಕೂಡ ಕೆಲಸ ಮಾಡಿದ್ದಾರೆ. ಸೃಜನ್ ಲೋಕೇಶ್ ಅವರ ಪ್ರೊಡಕ್ಷನ್ ಕೆಲಸಗಳಲ್ಲಿ ಪೂಜಾ ಅವರು ಸಹ ಕೈಜೋಡಿಸುತ್ತಿದ್ದರು. ಇನ್ನು ಸೃಜನ್ ಲೋಕೇಶ್ ಅವರು ಮೊದಲಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ಆದರೆ ಸಿನಿಮಾದಲ್ಲಿ ಹೀರೋ ಆಗಿ ಇವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ಬಳಿಕ ನಿರೂಪಣೆಗೆ ಬಂದರು, ಒಂದಷ್ಟು ಶೋಗಳನ್ನು ಕೂಡ ನಿರೂಪಣೆ ಮಾಡಿದರು. ತಮ್ಮದೇ ಪ್ರೊಡಕ್ಷನ್ ಹೌಸ್ ಶುರು ಮಾಡಿ, ಹಲವು ಶೋಗಳನ್ನು ನಿರ್ಮಾಣ ಮಾಡಿದರು. ಇನ್ನು ಸೃಜನ್ ಲೋಕೇಶ್ ಅವರು ಈಗ ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ಒಂದು ಹೊಸ ಜವಾಬ್ದಾರಿಯನ್ನು ಸಹ ತೆಗೆದುಕೊಂಡಿದ್ದಾರೆ. ಸೃಜನ್ ಲೋಕೇಶ್ ಅವರು ಜಿ.ಎಸ್.ಟಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸೃಜನ್ ಲೋಕೇಶ್ ಅವರು ನಿರ್ದೇಶನ ಮಾಡಿರುವ ಮೊದಲ ಸಿನಿಮಾ ಇದು.

ಈ ಸಿನಿಮಾ ಇಂದಲೇ ಒಂದು ಹೊಸ ಇತಿಹಾಸ ಸೃಷ್ಟಿಯಾಗಿದೆ. ಅದೇನು ಎಂದರೆ, ಒಂದೇ ಕುಟುಂಬದ ಮೂರು ತಲೆಮಾರಿನವರು ಒಂದೇ ಸಿನಿಮಾದಲ್ಲಿ ನಟಿಸಿದ್ದಾರೆ. ಜಿ.ಎಸ್.ಟಿ ಸಿನಿಮಾದಲ್ಲಿ ಸೃಜನ್ ಲೋಕೇಶ್ ಅವರ ತಾಯಿ ಗಿರಿಜಾ ಲೋಕೇಶ್ ಅವರು, ಸೃಜನ್ ಲೋಕೇಶ್ ಮತ್ತು ಅವರ ಮಗ ಸುಕೃತ್ ಸಹ ನಟಿಸಿದ್ದಾರೆ. ಸುಕೃತ್ ಅವರು ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ, ಇದೇ ಮೊದಲ ಬಾರಿ ಬೆಳ್ಳಿ ಪರದೆಗೆ ಎಂಟ್ರಿ ಕೊಟ್ಟಿದ್ದಾರೆ ಸೃಜನ್ ಅವರ ಮಗ ಸುಕೃತ್. ಈ ಸಿನಿಮಾದಲ್ಲಿ ಗಿರಿಜಾ ಲೋಕೇಶ್ ಅವರು ಮತ್ತು ಸುಕೃತ್ ಇಬ್ಬರು ಸಹ ದೆವ್ವದ ಪಾತ್ರಗಳಲ್ಲಿ ನಟಿಸಿದ್ದಾರಂತೆ. ಸಿನಿಮಾ ಪ್ರೊಮೋಷನ್ ಗಾಗಿ ಇಡೀ ತಂಡ ಮಜಾ ಟಾಕೀಸ್ ಶೋಗೆ ಬಂದಿದ್ದರು. ಆಗ ಮಗನ ಬಗ್ಗೆ ಸೃಜನ್ ಲೋಕೇಶ್ ಸಂತೋಷದಿಂದ ಮಾತನಾಡಿದ್ದಾರೆ. ಸುಕೃತ್ ಅಷ್ಟು ಚೆನ್ನಾಗಿ ಆಕ್ಟ್ ಮಾಡ್ತಾನೆ ಅಂದುಕೊಂಡಿರಲಿಲ್ಲ ಎಂದಿದ್ದಾರೆ ಸೃಜನ್.
ಹಾಗೆಯೇ ಒಂದೇ ದಿನದಲ್ಲಿ ಡಬ್ಬಿಂಗ್ ಕೂಡ ಮುಗಿಸಿದ್ದಾನಂತೆ ಸುಕೃತ್. ಆಕ್ಸಿಡೆಂಟ್ ದ್ರುಶ್ಯಗಳಲ್ಲಿ ಸಹ ಬಹಳ ಚೆನ್ನಾಗಿ ಅಭಿನಯಿಸಿದ್ದಾನಂತೆ. ಆ ಮಾತನ್ನ ಕೇಳಿದ ಗಿರಿಜಾ ಲೋಕೇಶ್ ಅವರು, ಎಷ್ಟೇ ಆದ್ರು ಯಾರ ಮೊಮ್ಮಗ, ಯಾರ ಮರಿ ಮೊಮ್ಮಗ ಎಂದು ತಮಾಷೆ ಮಾಡಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಇನ್ನು ಜಿ.ಎಸ್.ಟಿ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ಸಹ ಸಿಕ್ಕಿದೆ. ಹಾಗೆಯೇ ಸೃಜನ್ ಲೋಕೇಶ್ ಅವರು ಮಜಾ ಟಾಕೀಸ್ ನಲ್ಲಿ ಹೇಳಿರುವುದು ಏನು ಎಂದರೆ, ಇಡೀ ಕನ್ನಡ ಕಿರುತೆರೆ ಇತಿಹಾಸದಲ್ಲೇ ಒಂದು ಕುಟುಂಬದ 3 ತಲೆಮಾರು ಜೊತೆಯಾಗಿ ನಟಿಸಿದ್ದು ಇಲ್ಲ ಎಂದು. ಅದು ನಿಜ ಕೂಡ ಹೌದು. ಸುಬ್ಬಯ್ಯ ನಾಯ್ಡು ಅವರ ಕುಟುಂಬ ಈ ವಿಷಯದಲ್ಲಿ ಕನ್ನಡದಲ್ಲಿ ಹೊಸ ಇತಿಹಾಸವನ್ನೇ ಬರೆದಿದೆ.
ಸೃಜನ್ ಲೋಕೇಶ್ ಅವರು ದೊಡ್ಡ ಕನಸು ಒಂದನ್ನು ಕಟ್ಟಿಕೊಂಡು ಜಿ.ಎಸ್.ಟಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಒಳ್ಳೆಯ ಫ್ಯಾಮಿಲಿ ಎಂಟರ್ಟೈನರ್ ಆಗಿರಲಿದೆ. ಹಾಗಾಗಿ ಸಿನಿಮಾ ಮೇಲೆ ಜನರ ನಿರೀಕ್ಷೆ ಕೂಡ ಜಾಸ್ತಿ ಇದ್ದು, ಸೃಜನ್ ಲೋಕೇಶ್ ಅವರು ಈ ಹೊಸ ಪ್ರಯತ್ನದಲ್ಲಿ ಗೆಲ್ಲುತ್ತಾರಾ ಎಂದು ಕಾದು ನೋಡಬೇಕಿದೆ. ಆದರೆ ಕಿರುತೆರೆ ವೀಕ್ಷಕರು ಬಹಳ ಇಷ್ಟಪಡುವ ಮಜಾ ಟಾಕೀಸ್ ಕಾರ್ಯಕ್ರಮ ಫಿನಾಲೆ ತಲುಪಿ, ಬಹಳ ಬೇಗ ಮುಗಿದಿರುವುದು ಮಾತ್ರ ವೀಕ್ಷಕರಲ್ಲಿ ಇರುವ ಬೇಸರ ಆಗಿದೆ.



