ನಟಿ ಶ್ರೀಲೀಲಾ ಅವರು ಈಗ ಪ್ಯಾನ್ ಇಂಡಿಯಾ ಸ್ಟಾರ್ ರೀತಿಯಲ್ಲಿ ಬೆಳೆಯುತ್ತಿದ್ದಾರೆ. ಕನ್ನಡದ ಸಿನಿಮಾ ಮೂಲಕ ಇವರು ನಾಯಕಿಯಾಗಿ ಹೆಸರು ಮಾಡಿ, ಒಳ್ಳೆಯ ಲಾಂಚ್ ಪಡೆದು, ಈಗ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಇವರಿಗೆ ಭಾರಿ ಬೇಡಿಕೆ ಇದೆ. ಒಂದರ ನಂತರ ಒಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಇವರಿಗೆ ಹೆಚ್ಚಿನ ಅವಕಾಶಗಳು ಕೂಡ ಸಿಗುತ್ತಲೇ ಇದೆ. ಶ್ರೀಲೀಲಾ ಅವರು ಒಬ್ಬ ನಟಿಯಾಗಿ, ಒಳ್ಳೆಯ ಡ್ಯಾನ್ಸರ್ ಆಗಿ ಎಲ್ಲರಿಗೂ ಪರಿಚಯ ಇದ್ದಾರೆ, ಆದರೆ ಇವರು ಇಬ್ಬರು ಮಕ್ಕಳನ್ನು ದತ್ತು ಪಡೆದುಕೊಂಡು ಅವರನ್ನು ಸಾಕುತ್ತಿರುವ ವಿಷಯ ಅನೇಕರಿಯೇ ಗೊತ್ತಿಲ್ಲ.

ಹೌದು, ನಟಿ ಶ್ರೀಲೀಲಾ ಅವರು ತುಂಬಾ ಚಿಕ್ಕ ವಯಸ್ಸಿನಲ್ಲೇ ಇಂಥದ್ದೊಂದು ಒಳ್ಳೆಯ ಕೆಲಸ ಮಾಡಿದರು. ಇಬ್ಬರು ಮಕ್ಕಳನ್ನು ದತ್ತು ಪಡೆದಾಗ ಶ್ರೀಲೀಲಾ ಅವರಿಗೆ ಕೇವಲ 23 ವರ್ಷ ವಯಸ್ಸು. ಅಷ್ಟು ಚಿಕ್ಕ ವಯಸ್ಸಿನಲ್ಲೇ ಶ್ರೀಲೀಲಾ ಅವರಿಗೆ ಇಂಥದ್ದೊಂದು ಯೋಚನೆ ಬಂದು, ಮಕ್ಕಳನ್ನು ದತ್ತು ಪಡೆದು ಅವರನ್ನು ನೋಡಿಕೊಳ್ಳುತ್ತಿರುವುದು ಸಂತೋಷ ಪಡಬೇಕಾದ ವಿಚಾರ. ಇವರು ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಇವರ ಬೈ ಟು ಲವ್ ಸಿನಿಮಾ ಪ್ರಚಾರಕ್ಕಾಗಿ ಭೇಟಿ ನೀಡಿದಾಗ, ಅಲ್ಲಿ ನೋಡಿದ ಇಬ್ಬರು ಮಕ್ಕಳನ್ನು ಶ್ರೀಲೀಲಾ ಅವರಿಗೆ ದತ್ತು ಪಡೆಯಬೇಕು ಎಂದು ಅನ್ನಿಸಿತಂತೆ.
ಇದಕ್ಕೆ ಮುಖ್ಯ ಕಾರಣ ಶ್ರೀಲೀಲಾ ಅವರು ಬೈ ಟು ಲವ್ ಸಿನಿಮಾದಲ್ಲಿ ನಿರ್ವಹಿಸಿದ ಪಾತ್ರ. ಬೈ ಟು ಲವ್ ಸಿನಿಮಾದ ಹೀರೋ ಧನವೀರ್ ಅವರು, ಈ ಸಿನಿಮಾದಲ್ಲಿ ಶ್ರೀಲೀಲಾ ಅವರು ಒಂದು ಮಗುವಿನ ತಾಯಿಯಾಗಿ ನಟಿಸಿದ್ದಾರೆ. ಆಗಿನಿಂದ ಇವರಲ್ಲಿ ಮಾತೃ ಮಮತೆ ಶುರುವಾಗಿದೆ. ಹಾಗಾಗಿ ಸಿನಿಮಾ ಪ್ರೊಮೋಷನ್ ಗಾಗಿ ಮಾತೃವಿಕಾಸ ಕೇಂದ್ರಕ್ಕೆ ಹೋದಾಗ, ಅಲ್ಲಿನ ಮಕ್ಕಳನ್ನು ನೋಡಿ ಶ್ರೀಲೀಲಾ ಅವರಿಗೆ ದತ್ತು ಪಡೆದುಕೊಳ್ಳಬೇಕು ಅನ್ನಿಸಿತಂತೆ. ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ಶ್ರೀಲೀಲಾ ಅವರೇ ತೆಗೆದುಕೊಂಡಿದ್ದಾರೆ, ಅವರು ಓದು ಬರಹ, ವಿದ್ಯಾಭ್ಯಾಸ, ಆರೋಗ್ಯ ಇದೆಲ್ಲದರ ಖರ್ಚನ್ನು ಶ್ರೀಲೀಲಾ ಅವರೇ ನೋಡಿಕೊಳ್ಳುತ್ತಿದ್ದಾರೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!

ಮುಂದೆಯು ಸಹ ಆ ಮಕ್ಕಳ ಸಂಪೂರ್ಣ ಜವಾಬ್ದಾರಿ ಶ್ರೀಲೀಲಾ ಅವರದ್ದೇ ಆಗಿರಲಿದೆ. ಈ ಒಂದು ಕೆಲಸಕ್ಕೆ ಶ್ರೀಲೀಲಾ ಅವರನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಏಕೆಂದರೆ ಇಷ್ಟು ಚಿಕ್ಕ ವಯಸ್ಸಿಗೆ ಇಂಥ ಯೋಚನೆಗಳು, ಇಂಥ ಒಳ್ಳೆಯ ಕೆಲಸಗಳನ್ನು ಮಾಡಬೇಕೆನ್ನುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ, ಎಲ್ಲರಿಗೂ ಬರುವುದಿಲ್ಲ. ಹಾಗಾಗಿ ಶ್ರೀಲೀಲಾ ಅವರನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಇನ್ನು ಶ್ರೀಲೀಲಾ ಅವರ ಕೆರಿಯರ್ ಬಗ್ಗೆ ಹೇಳುವುದಾದರೆ ಒಂದಾದ ಮೇಲೆ ಒಂದು ಸೂಪರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಅವರ ಪುಷ್ಪ2 ಸಿನಿಮಾದ ಐಟಂ ಸಾಂಗ್ ನಲ್ಲಿ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಈ ಹಾಡಿಗೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಶ್ರೀಲೀಲಾ ಅವರ ಡ್ಯಾನ್ಸ್ ನೋಡಿ ಎಲ್ಲರೂ ಮೆಚ್ಚಿದ್ದು, ಇವರ ಡ್ಯಾನ್ಸ್ ಗೆ ಸರಿಸಾಟಿ ಮತ್ತೊಂದಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಶ್ರೀಲೀಲಾ ಅವರು ತೆಲುಗು ಸ್ಟಾರ್ ಹೀರೋಗಳ ಜೊತೆಗೆ ತೆರೆ ಹಂಚಿಕೊಳ್ಳುತ್ತಿರುವುದು ಸಹ ಒಳ್ಳೆಯ ವಿಷಯ. ಇವರ ಅಭಿನಯ ಮತ್ತು ಡ್ಯಾನ್ಸ್ ಈ ಎರಡಕ್ಕೂ ಸಹ ಭಾರಿ ಜನಪ್ರಿಯತೆ ಸಿಕ್ಕಿದೆ. ಆದರೆ ಇವರು ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಎನ್ನುವುದೇ ಬೇಸರದ ವಿಚಾರ. ಒಟ್ಟಿನಲ್ಲಿ ಕನ್ನಡದ ಹುಡುಗಿ, ಬೇರೆ ಭಾಷೆಗಳಲ್ಲಿ ಸದ್ದು ಮಾಡುವುದರ ಜೊತೆಗೆ, ಒಳ್ಳೆಯ ಕೆಲಸಗಳನ್ನು ಕೂಡ ಮಾಡುತ್ತಿದ್ದಾರೆ ಎನ್ನುವುದನ್ನು ನಾವೆಲ್ಲರು ಮೆಚ್ಚಿಕೊಂಡು, ಶ್ರೀಲೀಲಾ ಅವರಿಗೆ ಪ್ರೋತ್ಸಾಹ ಕೊಡಲೇಬೇಕು.