ಬಣ್ಣದ ಲೋಕ ಅನ್ನೋದು ಯಾವಾಗ ಯಾರನ್ನ ಕೈಬೀಸಿ ಕರೆಯುತ್ತದೆ ಎಂದು ಹೇಳೋಕೆ ಆಗಲ್ಲ. ಕೆಲವರಿಗೆ ಈ ಪ್ರಪಂಚ ಅದೃಷ್ಟ, ಯಶಸ್ಸು, ಕೀರ್ತಿ, ಜನಪ್ರಿಯತೆ ಎಲ್ಲವನ್ನು ಕೊಡುತ್ತದೆ. ಇನ್ನು ಕೆಲವರಿಗೆ ವಿರುದ್ಧವಾಗಿ ನಡೆಯುತ್ತದೆ. ಈ ಬಣ್ಣದ ಪ್ರಪಂಚಕ್ಕೆ ಬರುವವರೆಲ್ಲರು ಸ್ಟಾರ್ ಆಗಬೇಕು ಎನ್ನುವ ಹಂಬಲದಿಂದಲೇ ಬಂದವರಲ್ಲ, ಕೆಲವರಿಗೆ ಅಚಾನಕ್ ಅವಕಾಶ ಸಿಗುತ್ತದೆ, ಕೆಲವರಿಗೆ ಅದೃಷ್ಟದಿಂದ ಸಿಗುತ್ತದೆ, ಕೆಲವರು ಸಕಲ ತಯಾರಿಗಳನ್ನು ನಡೆಸಿ ಬಣ್ಣದ ಲೋಕಕ್ಕೆ ಪ್ರವೇಶ ಮಾಡುತ್ತಾರೆ. ಹೀಗಿರುವಾಗ, ಬಣ್ಣದ ಲೋಕ ಅನ್ನೋದು ಎಲ್ಲರಿಗೂ ಒಂದೇ ಥರ ಇರೋದಿಲ್ಲ ಅನ್ನೋದನ್ನಂತೂ ನಾವು ಅರ್ಥ ಮಾಡಿಕೊಳ್ಳಬಹುದು.

ಇಂದು ನಾವು ಈ ಬಣ್ಣದ ಲೋಕದಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡು ಹೆಸರು ಮಾಡಿ, ಈಗ ಉನ್ನತ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿರುವ ಹೆಚ್. ಎಸ್. ಕೀರ್ತಿ ಅವರ ಬಗ್ಗೆ ತಿಳಿಸಲಿದ್ದೇವೆ. ಬಹುಶಃ ಇವರ ಹೆಸರು ಕೇಳಿದರೆ ನಿಮಗೆ ಇಬರು ಯಾರು ಎಂದು ಗೊತ್ತಾಗದೇ ಹೋಗಬಹುದು. ಚಂದನವನದಲ್ಲಿ 90ರ ದಶಕದಲ್ಲಿ, ಗುರುತಿಸಿಕೊಂಡ ಖ್ಯಾತ ಬಾಲನಟಿ. ಶಿವಣ್ಣ ಅವರು, ಮಾಲಾಶ್ರೀ ಅವರು ಅಭಿನಯಿಸಿದ ಗಂಗಾ ಯಮುನಾ ಸಿನಿಮಾದಲ್ಲಿ ಶಿವಣ್ಣ ಅವರ ಮಗಳ ಪಾತ್ರದಲ್ಲಿ ಅಭಿನಯಿಸಿದ್ದ ಪುಟ್ಟ ಮಗು ಇವರೇ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಗಂಗಾ ಯಮುನಾ ಮಾತ್ರವಲ್ಲದೇ, ಕರ್ಪೂರದ ಗೊಂಬೆ, ಉಪೇಂದ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ ಕೀರ್ತನಾ. ಬಣ್ಣದ ಲೋಕದಲ್ಲಿ ಹಲವು ಅವಕಾಶ ಸಿಗುತ್ತಿದ್ದರು ಸಹ, ಕೀರ್ತನಾ ಅವರಿಗೆ ಸಿವಿಲ್ ಸರ್ವಿಸ್ ಪರೀಕ್ಷೆ ಪಾಸ್ ಮಾಡಿ, ರಾಜ್ಯದ ಜನತೆಗೆ ಸೇವೆ ಸಲ್ಲಿಸಬೇಕು ಎಂದು ಆಸೆ ಇತ್ತು. ಹಾಗಾಗಿ ಚಿತ್ರರಂಗದಿಂದ ನಟನೆ ಇಂದ ದೂರವೇ ಉಳಿದ ಕೀರ್ತಿ ಅವರು, ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟು, ಮೊದಲಿಗೆ ಕೆಎಎಸ್ ಪರೀಕ್ಷೆಯನ್ನು ಕ್ಲಿಯರ್ ಮಾಡಿ, 2 ವರ್ಷಗಳ ಕಾಲ ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಬಳಿಕ ಇವರಿಗೆ ಯುಪಿಎಸ್ಸಿ ಪರೀಕ್ಷೆ ಕ್ಲಿಯರ್ ಮಾಡಬೇಕು ಎಂದು ಛಲ ತೊಟ್ಟರು.

ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಗಾಗಿ ತಯಾರಿ ನಡೆಸಿದರು, 5 ಅಟೆಂಪ್ಟ್ ಗಳಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಕ್ಲಿಯರ್ ಮಾಡಲು ಆಗಲಿಲ್ಲ. 6ನೇ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು, AIR 167 ರಾಂಕ್ ಪಡೆದರು ಕೀರ್ತಿ. ಪ್ರಸ್ತುತ ಇವರು ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಟನೆ ಇಂದ ದೂರ ಉಳಿದಿರಬಹುದು. ಆದರೆ ಬದುಕಿನಲ್ಲಿ ದೊಡ್ಡ ಹಂತಕ್ಕೆ ಬೆಳೆದು ನಿಂತಿದ್ದಾರೆ. ಕೀರ್ತನಾ ಅವರನ್ನು ಕಂಡರೆ ತುಂಬಾ ಹೆಮ್ಮೆ ಆಗುತ್ತದೆ. ಬದುಕಿನಲ್ಲಿ ಒಂದು ಗುರಿ ಎಂದು ಇದ್ದಾಗ, ಅದನ್ನು ಸಾಧಿಸುವ ವರೆಗು ತಾಳ್ಮೆ ಕಳೆದುಕೊಳ್ಳದೆ, ಒಳ್ಳೇ ಮನಸ್ಸಿನಿಂದ ಕಠಿಣ ಪರಿಶ್ರಮದಿಂದ ಗುರಿಯ ಕಡೆಗೆ ಕೆಲಸ ಮಾಡಿದರೆ, ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ..
ಕೀರ್ತನಾ ಅವರು ನಟನೆಯಲ್ಲೇ ಮುಂದುವರೆದಿದ್ದರೆ, ನಟನೆಯಲ್ಲಿ ಹೆಚ್ಚು ಯಶಸ್ವಿ ಆಗಿರುತ್ತಿದ್ದರು ಎನ್ನುವುದಲ್ಲಿ ಸಂಶಯವಿಲ್ಲ. ಆದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಈಗಿನ ಪೀಳಿಗೆಯವರಿಗೆ ಮಾದರಿ ಆಗಿದ್ದಾರೆ ಕೀರ್ತನಾ. ಇವರ ಸಾಧನೆಯನ್ನು ಹೆಣ್ಣುಮಕ್ಕಳು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು. ತಮ್ಮನ್ನು ತಾವು ಒಳ್ಳೆಯ ಸ್ಥಾನಕ್ಕೆ ಕರೆದುಕೊಂಡು ಹೋಗುವುದಕ್ಕೆ, ತಾವೇ ಶ್ರಮ ಪಡಬೇಕು. ಜಾಣತನ, ಒಳ್ಳೇತನ, ಒಳ್ಳೇ ಮನಸ್ಸು, ದೃಢ ನಿರ್ಧಾರ ಇದ್ದರೆ ಯಾರು ಏನನ್ನು ಬೇಕಾದರೂ ಸಾಧಿಸಬಹುದು. ಕೀರ್ತಿ ಅವರನ್ನು ನೋಡಿ ಈ ವಿಷಯವನ್ನ ಮನದಟ್ಟು ಮಾಡಿಕೊಳ್ಳಬಹುದು.



