‘ಪ್ರೀತಿ ಕುರುಡು’ ಎಂಬುದನ್ನು ಒಪ್ಪಬಹುದು. ಆದರೆ ತನ್ನ ಮೊಬೈಲನ್ನೇ ಕಳ್ಳನನ್ನು ಪ್ರೀತಿಸುವಷ್ಟರ ಮಟ್ಟಿಗೆ ಪ್ರೀತಿ ಕುರುಡು ಎಂದರೆ ನೀವು ಒಪ್ಪುತ್ತೀರಾ? ಅಥವಾ ನಂಬುತ್ತೀರಾ?. ಯಾವುದೇ ವಸ್ತುವನ್ನು ಕಳ್ಳ ಕದ್ದೊಯ್ದರೆ ಪೊಲೀಸ್ ಕೇಸ್ ಕೊಡುತ್ತಾರೆ. ಆದರೆ ನಿಮ್ಮ ನಂಬಿಕೆಗೂ ಮಿಗಿಲಾಗಿ ಇಲ್ಲೊಬ್ಬ ಮಹಿಳೆ ಮೊಬೈಲ್ ಕದ್ದ ಕಳ್ಳನನ್ನೇ ಪ್ರೀತಿಸಿದ್ದಾಳೆ.
ಬ್ರೆಜಿಲ್ ದೇಶದ ಇಮ್ಯಾನುಯೆಲಾ ಎಂಬ ಯುವತಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಕಳ್ಳನೊಬ್ಬ ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಯುವತಿ ಅತಂತ್ರಳಾಗಿದ್ದಾಳೆ. ಆದರೆ ಮೊಬೈಲ್ ಕದ್ದ ಕಳ್ಳನ ಮನಸ್ಸು ಯುವತಿಯನ್ನು ನೋಡಿ ಬದಲಾಗಿದೆ. ಮೊಬೈಲ್ ಸ್ಕ್ರೀನ್ ಮೇಲಿದ್ದ ಯುವತಿಯ ಅಂದದ ಫೋಟೋ ನೋಡಿದ ಕಳ್ಳ ಪ್ರೀತಿಗೆ ಜಾರಿ. ತನ್ನ ತಪ್ಪಿನ ಅರಿವಾಗಿ ಪಶ್ಚಾತ್ತಾಪ ಪಟ್ಟು ಆಕೆಯ ಬಳಿ ಬಂದಿದ್ದಾನೆ.
ಈ ಬಗ್ಗೆ ಮಾದ್ಯಮದೊಂದಿಗೆ ಮಾತು ಹಂಚಿಕೊಂಡ ಕಳ್ಳ, ‘ನನ್ನ ಬದುಕಿನಲ್ಲಿ ಮಹಿಳೆಯಿಲ್ಲದೆ ನಾನು ಅತ್ಯಂತ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೆ. ಕದ್ದ ಫೋನಿನಲ್ಲಿ ಆಕೆಯ ಸುಂದರ ಫೋಟೊಗಳನ್ನು ಕಂಡ ನಂತರ, ಆಕೆಯ ಮೇಲೆ ಮನಸಾಯಿತು. ಇಷ್ಟು ಸುಂದರ ಯವತಿಯನ್ನು ನಾನೆಂದೂ ನೋಡಿಲ್ಲ. ಬಳಿಕ ಫೋನ್ ಕದ್ದ ಬಗ್ಗೆ ನನಗೆ ಪಶ್ಚಾತ್ತಾಪವಾಯಿತು. ಈಗ ಇಬ್ಬರು ಪ್ರೀತಿಯಲ್ಲಿ ಒಂದಾಗಿದ್ದೇವೆ’ ಎಂದು ಖುಷಿ ವ್ಯಕ್ತಪಡಿಸಿದ್ದಾನೆ.



