ಬಿಗ್ ಬಾಸ್ ಸ್ಪರ್ಧಿಗಳು ಮನೆಯಲ್ಲಿ 22 ದಿನಗಳನ್ನು ಕಳೆದಿದ್ದಾರೆ. ಇಷ್ಟು ದಿನಗಳಲ್ಲಿ ಸಾಕಷ್ಟು ಬದಲಾಗಿದೆ.
ಲಾಯರ್ ಜಗದೀಶ್, ಸಹಸ್ಪರ್ಧಿ ಹಂಸಗೆ ಅವಾಚ್ಯ ಶಬ್ಧ ಬಳಸಿದ್ದಕ್ಕೆ ಹಾಗೂ ಅವರನ್ನು ತಳ್ಳಿದ್ದಕ್ಕೆ ರಂಜಿತ್, ಇಬ್ಬರೂ ಕಳೆದ ವಾರ ಮನೆಯಿಂದ ಹೊರ ಬಂದಿದ್ದರು. ಮನೆಯಲ್ಲಿ ಅಂತಹ ಕೆಟ್ಟ ಪದ ಬಳಸಬಾರದು ಎಂದು ಕಳೆದ ವಾರ ಸುದೀಪ್ ಕೂಡಾ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದರು.
22ನೇ ದಿನ ರಾಂಬೋ 2 ಚಿತ್ರದ ಏ ಹುಡ್ಗಿ ಯಾಕಿಂಗ್ ಆಡ್ತಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸ್ಪರ್ಧಿಗಳು ದಿನ ಆರಂಭಿಸುತ್ತಾರೆ. ತಿಂಡಿ ಮುಗಿಸಿ ಹಂಸ, ಚೈತ್ರಾ ಕುಂದಾಪುರ, ಮಾನಸ ಮೂವರೂ ಮಾತು ಆರಂಭಿಸುತ್ತಾರೆ. ಸುರೇಶ್ ನಿನ್ನ ಎಂಥ ಸ್ಟೇಟ್ಮೆಂಟ್ ಕೊಟ್ರು, ತ್ರಿವಿಕ್ರಮ್, ರಂಜಿತ್, ಹಂಸದು ಲವ್ ಸ್ಟೋರಿ ಅಂದ್ರು, ನಮ್ಮ ಮನೆಯಲ್ಲಿ ಇದನ್ನೆಲ್ಲಾ ನೋಡಿದ್ರೆ ಏನು ಅನ್ಕೊತಾರೆ? ತ್ರಿವಿಕ್ರಮ್ ಹಾಗೂ ರಂಜಿತ್ ಯಾರ ಬಗ್ಗೆಯೂ ನೆಗೆಟಿವ್ ಆಗಿ ಮಾತನಾಡೊಲ್ಲ, ಆದ್ದರಿಂದಲೇ ನಾನು ಅವರ ಜೊತೆ ಮಾತನಾಡುವುದು, ಅದರೆ ಸುರೇಶ್ ಆ ರೀತಿ ಅಲ್ಲ, ಅವರು ಬಾಯಿ ಬಿಟ್ಟರೆ ಬರೀ ನೆಗೆಟಿವ್ ಮಾತನಾಡ್ತಾರೆ ಎಂದು ಹಂಸ ಹೇಳುತ್ತಾರೆ.

ಹಂಸ ಮಾತಿಗೆ ಪ್ರತಿಕ್ರಿಯಿಸುವ ಚೈತ್ರಾ ಕುಂದಾಪುರ, ನೀವು ಸ್ವರ್ಗಕ್ಕೆ ಬಂದ ಮೇಲೆ ವಿಕ್ರಮ್ ಜೊತೆ ಕ್ಲೋಸ್ ಆಗಿದ್ದೀರ ಎಂದು ಸುರೇಶ್ ಹೇಳಿದ್ರು ಎನ್ನುತ್ತಾರೆ, ಹಾಗಿದ್ರೆ ನಿನ್ನದೂ ಲವ್ ಸ್ಟೋರಿ ಶುರು ಮಾಡ್ತಾರೆ ಅಂತ ಹಂಸ ಹೇಳಿದಾಗ ಕೋಪಗೊಳ್ಳುವ ಚೈತ್ರಾ, ಮೆ* ತಗೊಂಡು ಹೊಡಿತಿನಿ, ಹೊರಗೆ ಹೋಗೋದಾದ್ರೂ ತೊಂದರೆ ಇಲ್ಲ, ಹೊಡೆದೇ ಹೋಗ್ತೀನಿ, ನನ್ನ ಸುದ್ದಿಗೆ ಯಾರಾದರೂ ಬಂದ್ರೆ ಸುಮ್ಮನಿರೊಲ್ಲ, ನನ್ನ ಕ್ಯಾರೆಕ್ಟರ್ ವಿಚಾರಕ್ಕೆ ಕಳಂಕ ಹಚ್ಚೋಕೆ ನಾನು ಬಿಡೊಲ್ಲ, ನನಗೆ ಮದುವೆ ಫಿಕ್ಸ್ ಆಗಿದೆ, ಯಾರೊಂದಿಗೂ ಸಂಬಂಧ ಕಟ್ಟಬೇಡಿ ಅಂದ ಮೊದಲೇ ಹೇಳಿದ್ದೀನಿ ಅಂತ ಚೈತ್ರಾ ಕುಂದಾಪುರ, ಸುರೇಶ್ ವಿರುದ್ಧ ಗರಂ ಆಗುತ್ತಾರೆ.



