ನಾವು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ನೋಡುವ ವಿಡಿಯೋಗಳು ನಮ್ಮನ್ನು ದಂಗಾಗಿಸುತ್ತದೆ. ರಸ್ತೆ ಅಪಘಾತದಲ್ಲಿ ಕೊನೆಯ ಕ್ಷಣದಲ್ಲಿ ಪಾರಾಗುವ ಯುವಕ, ಮಹಡಿಯಿಂದ ಬಿದ್ದು ಎಳೆಯಂತರದಲ್ಲಿ ಸಾವಿನಿಂದ ಪಾರಾಗುವ ಯುವತಿ ಹೀಗೆ ಸಾವಿರಾರು ವಿಡಿಯೋಗಳನ್ನು ಕಂಡಿರುತ್ತವೆ. ಈ ರೀತಿ ಪಾರಾಗುವುದಕ್ಕೆ ಅದೃಷ್ಟ ಎನ್ನಬಹುದು. ಸದ್ಯ, ವೈರಲ್ ಆಗುತ್ತಿರುವ ವಿಡಿಯೋ ಕೂಡ ಅದೃಷ್ಟವನ್ನೇ ಪ್ರತಿಪಾದಿಸುವಂತಿದೆ!
ಈ ಘಟನೆ ನಡೆದಿರುವುದು ಫ್ಲೋರಿಡಾದ ಎವರ್ ಗ್ಲೇಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ. ಈ ಪಾರ್ಕಿನಲ್ಲಿ ದೋಣಿಯ ಮೂಲಕ ಒಬ್ಬ ಯವಕ ಮತ್ತು ನಾವಿಕ ಮೀನು ಹಿಡಿಯಲು ಹೊರಟಿದ್ದರು. ಈ ವೇಳೆ ಯುವಕ ನೀರಿಗೆ ಕೈ ಹಾಕಿದ್ದಾನೆ ಆಗ ಏಕಾಏಕಿ ದಾಳಿ ಮಾಡಿದ ಶಾರ್ಕ್ ಒಂದು ಯುವಕ ಕೈಹಿಡಿದು ಎಳೆದು ನೀರಿಗೆ ಹಾಕಿದೆ. ಅದೃಷ್ಟಕ್ಕೆ ನೀರಿಗೆ ಬಿದ್ದ ಯುವಕ ಶಾರ್ಕ್ ಬಾಯಿಯಿಂದ ತಪ್ಪಿಸಿಕೊಂಡು ಮತ್ತೆ ದೋಣಿ ಏರಿದ್ದಾನೆ. ಸ್ವಲ್ಪ ತಡವಾಗಿದ್ದರೂ ಕೂಡ ಆ ಯುವಕ ನಿಶ್ಚಿತವಾಗಿ ಶಾರ್ಕ್ ಆಹಾರವಾಗಿ ಬಿಡುತ್ತಿದ್ದ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ಯುವಕನ ಅದೃಷ್ಟದಿಂದ ಕೊನೆಯ ಕ್ಷಣದಲ್ಲಿ ಆತ ಶಾರ್ಕ್ ದಾಳಿಯಿಂದ ತಪ್ಪಿಕೊಂಡಿರಬಹುದು. ಆದರೆ ಈ ರೀತಿ ಅಪರಿಚಿತ ಸ್ಥಳಕ್ಕೆ ಭೇಟಿ ನೀಡಿದಾಗ ಅಥವಾ ಪ್ರವಾಸಕ್ಕೆ ತೆರಳಿದಾಗ ಜಾಗರೂಕತೆ ವಹಿಸುವುದು ಒಳ್ಳೆಯದು. ಏಕೆಂದರೆ ಅದೃಷ್ಟ ಎನ್ನುವುದು ಯಾವಾಗಲೂ ಕೈ ಹಿಡಿಯುವುದಿಲ್ಲ. ಒಂದು ವೇಳೆ ಅದೃಷ್ಟ ಕೈ ಕೊಟ್ಟರೆ ಸಾವಿನ ಬಾಗಿಲು ತೆರೆದಂತೆಯೆ…!