ಕನ್ನಡದ ನಟಿ ರಾಗಿಣಿ ದ್ವಿವೇದಿ ಸದ್ಯ, ವಿವಾದಗಳಿಂದ ಮುಕ್ತಿ ಪಡೆದು ನಟನೆಗೆ ಮರಳಿದ್ದಾರೆ. ಹಲವು ಸಿನಿಮಾಗಳು ರಾಗಿಣಿ ಕೈಯಲ್ಲಿವೆ. ಸೊಶಿಯಲ್ ಮೀಡಿಯಾದಲ್ಲೂ ಸದಾ ಆ್ಯಕ್ಟಿವ್ ಆಗಿರುವ ರಾಗಿಣಿ ಸದ್ಯ ಅಭಿಮಾನಿಗಳ ಒತ್ತಾಸೆಯ ಮೇರೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸ್ವಿಮ್ಮಿಂಗ್ ಫೋಲ್ ನಲ್ಲಿರುವ ತಮ್ಮ ಬೋಲ್ಡ್ ಫೋಟೋಗಳನ್ನಿ ಅವರು ಹಂಚಿಕೊಂಡಿದ್ದು, ತುಪ್ಪದ ಹುಡುಗಿಯ ಹಸಿಬಿಸಿ ಲುಕ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.


ರಾಗಿಣಿ ದ್ವಿವೇದಿಗೆ ದೊಡ್ಡ ಅಭಿಮಾನಿ ಬಳಗವಿದೆ. ಅವರನ್ನು 6.7 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಫ್ಯಾನ್ಸ್ಗೋಸ್ಕರ ತುಪ್ಪದ ಬೆಡಗಿ ಹಲವು ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಈಗ ಅವರು ಹೊಸ ಫೋಟೋ ಮೂಲಕ ಗಮನ ಸೆಳೆದಿದ್ದಾರೆ. ಕನ್ನಡ ಸೇರಿದಂತೆ ಹಲವು ಸಿನಿಮಾರಂಗದಲ್ಲಿ ನಟಿಸುತ್ತಿರುವ ರಾಗಿಣಿ ಅವರ ಹಾಟ್&ಬೋಲ್ಡ್ ಫೋಟೋ ಕಂಡು ನೆಟ್ಟಿಗರು ಕರಗಿ ನೀರಾಗಿದ್ದಾರೆ.
ತುಂಡುಡುಗೆ ತೊಟ್ಟು ಸಕ್ಕತ್ ಬೋಲ್ಡ್ ಆಗಿ ರಾಗಿಣಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇದನ್ನು ಕಂಡಿರುವ ನೆಟ್ಟಿಗರಲ್ಲಿ ಒಬ್ಬ, ‘ರಾಗಿಣಿ ಅವರೆ ನಿಮ್ಮ ಬೋಲ್ಡ್ ಲುಕ್ ಕಂಡು ಸ್ವಿಮ್ಮಿಂಗ್ ಫೂಲ್ ನೀರು ಬಿಸಿಯಾಗಿದೆ ಎಂದರೆ, ಮತ್ತೊಬ್ಬ ‘ನಿಮ್ಮ ಸೌಂದರ್ಯಕ್ಕೆ ನಾನು ಕರಗಿ ನೀರಾದೆ’ ಎಂದೆಲ್ಲ ಬರೆದುಕೊಂಡಿದ್ದಾರೆ. ಸದ್ಯ, ರಾಗಿಣಿ ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಕೆಲವು ಮಹಿಳಾ ಪ್ರದಾನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.



