ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇತ್ತೀಚೆಗೆ ಸ್ನೇಹ ಪಾತ್ರ ಮುಕ್ತಾಯ ಆಗಿದ್ದು, ಇದು ಕಿರುತೆರೆ ವೀಕ್ಷಕರಿಗೆ ತುಂಬಾ ಬೇಸರ ತಂದಿತು. ಸ್ನೇಹ ಪಾತ್ರ ಒಂದು ರೀತಿಯಲ್ಲಿ ಎಲ್ಲರೂ ಮೆಚ್ಚಿಕೊಂಡಿದ್ದ ಮಗಳು ಎಂದರೆ ಹೇಗಿರಬೇಕು ಎಂದು ಮಾದರಿಯಾಗಿದ್ದ ಪಾತ್ರ. ಈ ಪಾತ್ರವನ್ನು ಎಂಡ್ ಮಾಡಿದ್ದು, ವೀಕ್ಷಕರಿಗೆ ಶಾಕ್ ಆಗಿತ್ತು, ಆದರೆ ಸ್ನೇಹ ಪಾತ್ರದಲ್ಲಿ ಈಗ ಹೊಸ ನಾಯಕಿ ಬಂದಿದ್ದು ಆಗಿದೆ. ಹೊಸ ಸ್ನೇಹ ಹಲವು ದಿನಗಳಿಂದ ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹೊಸ ಸ್ನೇಹ ಯಾರು? ಇವರ ಬ್ಯಾಗ್ರೌಂಡ್ ಏನು? ಪೂರ್ತಿ ಮಾಹಿತಿ ತಿಳಿಯೋಣ..

ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಹೊಸ ನಾಯಕಿಯ ಪಾತ್ರದ ಹೆಸರು ಕೂಡ ಸ್ನೇಹ, ಹೊಸ ಸ್ನೇಹ ಕೂಡ ಹಳೆ ಸ್ನೇಹಾಳ ರೀತಿಯಲ್ಲೇ ಇದ್ದಾರೆ. ಈ ಪಾತ್ರವನ್ನು ಜನರು ಕೂಡ ನಿಧಾನವಾಗಿ ಒಪ್ಪಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಇನ್ನು ಹೊಸ ಸ್ನೇಹ ಪಾತ್ರಕ್ಕೆ ಬಂದಿರುವ ನಟಿಯ ಬಗ್ಗೆ ಈಗ ಜನರಿಗೆ ಕುತೂಹಲ ಶುರುವಾಗಿದ್ದು, ಇವರ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಹಾಗಿದ್ದಲ್ಲಿ ಹೊಸ ಸ್ನೇಹ ಅವರ ಬಗ್ಗೆ ತಿಳಿಯೋಣ. ಈ ಪಾತ್ರಕ್ಕೆ ಬಂದಿರುವ ಹೊಸ ನಟಿಯ ಹೆಸರು ಅಪೂರ್ವ ನಾಗರಾಜ್. ಇವರು ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನವರು.
ಓದುವುದಕ್ಕಾಗಿ ಬೆಂಗಳೂರಿಗೆ ಬಂದ ಅಪೂರ್ವ ಅವರು, ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪರ್ಫಾರ್ಮಿಂಗ್ ಆರ್ಟ್ಸ್, ಇಂಗ್ಲಿಷ್ ಹಾಗೂ ಸೈಕಾಲಜಿ ಈ ಮೂರು ವಿಷಯಗಳನ್ನು ಓದಿ, ಪದವಿ ಪಡೆದುಕೊಂಡಿದ್ದಾರೆ. ಹಾಗೆಯೇ ಇವರಿಗೆ ಈಗ 25 ವರ್ಷ ವಯಸ್ಸು ಎನ್ನಲಾಗಿದ್ದು, ಇದಷ್ಟೇ ಅಲ್ಲದೇ ಅಪೂರ್ವ ಅವರು ಅದ್ಭುತವಾದ ನೃತ್ಯಗಾರ್ತಿ ಕೂಡ ಹೌದು. ಕೇವಲ 7ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯೋದಕ್ಕೆ ಶುರು ಮಾಡಿದ ಹುಡುಗಿ ಇವರು. 18ನೇ ವಯಸ್ಸಿನಲ್ಲಿ ರಂಗಪ್ರವೇಷ ಮಾಡಿದ್ದಾರೆ. ಹಾಗೆಯೇ ಕೇವಲ 20ನೇ ವಯಸ್ಸಿಗೆ ವಿದ್ವತ್ ಮುಗಿಸಿದ್ದಾರೆ. ಇವರು 10 ವರ್ಷದ ಪುಟ್ಟ ಹುಡುಗಿ ಆಗಿದ್ದಾಗಲೇ ಭಾರತದ ಹಲವೆಡೆ ನೃತ್ಯ ಪ್ರದರ್ಶನ ನೀಡಿದ್ದಾರೆ.

ಇದು ಮಾತ್ರವಲ್ಲ, ತಾಲ್ಲೂಕ್ ಲೆವೆಲ್ ಮತ್ತು ಜ್ಯುನಿಯರ್ ಲೆವೆಲ್ ಈ ಎಲ್ಲಾ ಎಕ್ಸಾಂ ಗಳಲ್ಲಿ ಅತಿಹೆಚ್ಚು ಮಾರ್ಕ್ಸ್ ಪಡೆದು, ಟಾಪರ್ ಆಗಿದ್ದವರು ಅಪೂರ್ವ ನಾಗರಾಜ್. ಅಪೂರ್ವ ಅವರು ನೃತ್ಯಾಭ್ಯಾಸ ಕಲಿತಿರುವುದು ಕಲಾಶ್ರೀ ಗುರು ಕೆ ಬೃಂದಾ ಅವರ ಬಳಿಯಲ್ಲಿ. ನೃತ್ಯವಷ್ಟೇ ಅಲ್ಲದೆ ಈಕೆಗೆ ರಂಗಭೂಮಿಯಲ್ಲಿ ವಿಪರೀತ ಆಸಕ್ತಿ. ನಾಟಕಗಳಲ್ಲಿ ನಟಿಸುವುದು ಮಾತ್ರವಲ್ಲದೇ, ನಾಟಕಗಳನ್ನು ನಿರ್ದೇಶನ ಕೂಡ ಮಾಡುತ್ತಾರೆ. ಈಗಾಗಲೇ ಸಾಕಷ್ಟು ನಾಟಕಗಳಲ್ಲಿ ವಿವಿಧ ಬಗೆಯ ಪಾತ್ರಗಳಿಗೆ ಬಣ್ಣ ಹಚ್ಚಿರುವ ಅಪೂರ್ವ ಅವರು, ಹಲವು ನಾಟಕಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ..
ಇಷ್ಟಕ್ಕೆ ಸೀಮಿತವಾಗಿರದೆ, ತಮ್ಮದೆ ಆದ ಸ್ವಂತ ಕಂಪೆನಿಯೊಂದನ್ನು ಸಹ ಶುರು ಮಾಡಿದ್ದಾರೆ, ಅದರ ಹೆಸರು Clown’s Reverie, ಈ ಕಂಪನಿಯ ಮೂಲಕ ಅಭಿನಯ ಕಲಿಸುತ್ತಾರೆ. ತಮ್ಮ ಕಂಪನಿಯ ಫೌಂಡರ್ ಮತ್ತು ಡೈರೆಕ್ಟರ್ ಇವರು. ಇಷ್ಟು ಚಿಕ್ಕ ವಯಸ್ಸಿಗೆ ಕಲೆಯ ಬಗ್ಗೆ ಇರುವ ಆಸಕ್ತಿ ಇಂದ ಅಪೂರ್ವ ಅವರು ಇಷ್ಟೆಲ್ಲಾ ಸಾಧನೆಗಳನ್ನು ಮಾಡಿರುವುದು ನಿಜಕ್ಕೂ ಅವಿಸ್ಮರಣೀಯ. ಇಂಥ ಪ್ರತಿಭೆಗಳು ಬೆಳೆಯಬೇಕು, ಆಗ ಕನ್ನಡ ಕಿರುತೆರೆ, ಬೆಳ್ಳಿತೆರೆ, ರಂಗಭೂಮಿ ಎಲ್ಲವೂ ಬೆಳೆಯುತ್ತದೆ. ಹೊಸ ಸ್ನೇಹ ಪಾತ್ರಕ್ಕೆ ಶುಭವಾಗಲಿ ಎಂದು ಹಾರೈಸೋಣ..