ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರವಾಹಿ ಎಷ್ಟರ ಮಟ್ಟಿಗೆ ಜನರಿಗೆ ಮೆಚ್ಚುಗೆಯಾಗಿ ಜನಪ್ರಿಯತೆ ಪಡೆದುಕೊಂಡಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಧಾರಾವಾಹಿಯ ಕಥೆಯನ್ನ ಎಲ್ಲಾ ಜನರು ಕೂಡ ತಮ್ಮ ಪಕ್ಕದ ಮನೆಯಲ್ಲೇ ನಡೆಯುತ್ತಿರುವ ಕಥೆ, ಭಾಗ್ಯ ತಮಗೆ ಗೊತ್ತಿರುವ ಹುಡುಗಿ ಎನ್ನುವಷ್ಟರ ಮಟ್ಟಿಗೆ ಇಷ್ಟಪಟ್ಟು ನೋಡುತ್ತಾರೆ. ಧಾರಾವಾಹಿ ಕೂಡ ದಿನೇ ದಿನೇ ಒಳ್ಳೆಯ ಟ್ವಿಸ್ಟ್ ಜೊತೆಗೆ ಬರುತ್ತಿದೆ.
ಭಾಗ್ಯಳಿಗೆ ಅವಮಾನ ಮಾಡಲು ತಾಂಡವ್ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೊನೆಗೆ ಗೆಲ್ಲೋದು ಭಾಗ್ಯನೆ. ಭಾಗ್ಯ ತನಗೆ ತಕ್ಕ ಹೆಂಡತಿ ಅಲ್ಲ ಎಂದು ಅವಮಾನ ಮಾಡುವುದಕ್ಕೆ ಮನೆಯಲ್ಲಿ ಒಂದು ಪಾರ್ಟಿ ಅರೇಂಜ್ ಮಾಡಿದ ತಾಂಡವ್, ಕೆಲವರಿಗೆ ಈ ತರವೇ ಮಾತನಾಡಿ ಭಾಗ್ಯಗೆ ಅವಮಾನ ಮಾಡಬೇಕು ಎಂದು ಮೊದಲೇ ಪ್ಲಾನ್ ಮಾಡಿರುತ್ತಾನೆ. ಹಾಗೆಯೇ ಭಾಗ್ಯ ಹಾಕಿಕೊಳ್ಳುವುದಕ್ಕೆ ಮಿನಿ ಡ್ರೆಸ್ ತಂದುಕೊಟ್ಟಿರುತ್ತಾನೆ.

ಆದರೆ ಭಾಗ್ಯ ಜಾಣೆ, ತಾಂಡವ್ ತಂದುಕೊಟ್ಟ ಡ್ರೆಸ್ ಹಾಕಿಕೊಳ್ಳದೆ, ಸೀರೆ ಉಟ್ಟುಕೊಂಡು ಬರುತ್ತಾಳೆ. ಇದನ್ನ ನೋಡಿ ತಾಂಡವ್ ಗೆ ಶಾಕ್ ಆಗುತ್ತದೆ. ಹಾಗಿದ್ದರೂ ಬಿಡದೆ, ಭಾಗ್ಯಳಿಗೆ ಇಂಗ್ಲಿಷ್ ಬರೋದಿಲ್ಲ, ಭಾಗ್ಯ ಓದಿಲ್ಲ ಅನ್ನೋದನ್ನ ಇಟ್ಟುಕೊಂಡು ಅವಮಾನ ಮಾಡೋ ಪ್ರಯತ್ನ ನಡೆಯುತ್ತದೆ. ಅದ್ಯಾವುದಕ್ಕೂ ಬಗ್ಗದ ಭಾಗ್ಯ, ಇಂಗ್ಲಿಷ್ ನಲ್ಲಿ ಸುಂದರವಾಗಿ ಮಾತನಾಡಿ, ಎಲ್ಲರೂ ಶಾಕ್ ಆಗುವ ಹಾಗೆ ಮಾಡುತ್ತಾಳೆ. ಧಾರಾವಾಹಿಯಲ್ಲಿ ಕಥೆ ಈ ರೀತಿ ಸಾಗುತ್ತಿದೆ. ಭಾಗ್ಯ ಮಿನಿ ಡ್ರೆಸ್ ಧರಿಸದೆ, ಸೀರೆ ಉಟ್ಟುಕೊಂಡು ಬರುತ್ತಾಳೆ.
ಆದರೆ ಭಾಗ್ಯ ಪಾತ್ರದಲ್ಲಿ ನಟಿಸುತ್ತಿರುವ ಸುಶ್ಮಾ ರಾವ್ ಅವರು ಈ ಮಿನಿ ಡ್ರೆಸ್ ಹಾಕಿ, ರೀಲ್ಸ್ ಮಾಡಿ ಅದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಭಾಗ್ಯಳನ್ನು ಮಿನಿ ಮಾಡರ್ನ್ ಡ್ರೆಸ್ ನಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಏನಿದು ಭಾಗ್ಯಕ್ಕಾ ಹೊಸ ಅವತಾರ ಎಂದು ಕಾಮೆಂಟ್ ಮೂಲಕ ತಮಾಷೆ ಮಾಡುತ್ತಿದ್ದಾರೆ.
ನಟಿ ಸುಶ್ಮಾ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಧಾರಾವಾಹಿಯ ಬಿಟಿಎಸ್ ವಿಡಿಯೋಗಳು, ತಾವು ಪ್ರವಾಸಕ್ಕೆ ಹೋಗುವ ಫೋಟೋಸ್ ಹಾಗೂ ವಿಡಿಯೋಗಳು ಇದೆಲ್ಲವನ್ನು ಶೇರ್ ಮಾಡಿಕೊಳ್ಳುತ್ತಾರೆ. ಭಾಗ್ಯಲಕ್ಷ್ಮಿ ಧಾರಾವಾಹಿ ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿದೆ ಎಂದರೆ ಖಂಡಿತ ತಪ್ಪಲ್ಲ. ಈ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸುಶ್ಮಾ ರಾವ್ ಅವರು ಇದೀಗ ಭಾಗ್ಯಲಕ್ಷ್ಮೀ ಮೂಲಕ ಇನ್ನಷ್ಟು ಹೆಸರು ಪಡೆದಿದ್ದಾರೆ..



